ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ನಡುವೆ ಮಾನಸಿಕ ಆರೋಗ್ಯ ವೃದ್ಧಿಗೆ ಯೋಗವೇ ಮದ್ದು: ಮೋದಿ

|
Google Oneindia Kannada News

ನವದೆಹಲಿ, ಜೂನ್ 21: "ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಯೋಗವು ಜನರ ಬದುಕಿಗೆ ಆಶಾಕಿರಣವಾಗಿದೆ," ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತದಲ್ಲಿ 7ನೇ ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆ ದೇಶವನ್ನು ಉದ್ದೇಶಿಸಿ ಮಾಡಿದ್ದಾರೆ.

Recommended Video

Modi ಇಂದು ವಿಶ್ವ ಯೋಗದ ದಿನದಂದು ಹೇಳಿದ್ದೇನು | Oneindia Kannada

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಈ ಬಾರಿ "ಯೋಗ ಫಾರ್ ವೆಲ್ ನೆಸ್" ಎಂಬ ಉದ್ದೇಶವನ್ನು ಹೊಂದಲಾಗಿದೆ. "ಇಡೀ ಜಗತ್ತು ಕೊವಿಡ್-19 ಸೋಂಕಿನಿಂದ ನರಳುತ್ತಿದೆ. ದೇಶದಲ್ಲಿ ಯಾವುದೇ ದೊಡ್ಡ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿಲ್ಲ. ಆದರೆ ಯೋಗ ದಿನದಂದು ಜನರ ಹುಮ್ಮಸ್ಸು, ಉತ್ಸಾಹ ಮತ್ತು ಯೋಗದ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ," ಎಂದು ಮೋದಿ ಹೇಳಿದ್ದಾರೆ.

ಯೋಗ ದಿನಾಚರಣೆಯಂದು ಲಸಿಕಾ ಮೇಳಕ್ಕೆ 7 ಲಕ್ಷ ಗುರಿ ಯೋಗ ದಿನಾಚರಣೆಯಂದು ಲಸಿಕಾ ಮೇಳಕ್ಕೆ 7 ಲಕ್ಷ ಗುರಿ

ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಪ್ರಾಣಾಯಮ ಸೇರಿದಂತೆ ಹಲವು ಯೋಗದಿಂದ ಆರೋಗ್ಯದಲ್ಲಿ ಚೇತರಿಕೆ ಕಂಡುಕೊಂಡಿದ್ದಾರೆ.

7th International Yoga Day: PM Narendra Modi Speech Highlights

"ಯೋಗ, ವ್ಯಾಯಾಮದಿಂದ ನಮಗೆ ಸ್ವಾಸ್ಥ್ಯ ಮತ್ತು ಆರೋಗ್ಯ ಹೆಚ್ಚಾಗಲಿದೆ. ಯೋಗದಿಂದ ಮಕ್ಕಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಕೊರೊನಾವೈರಸ್ ವಿರುದ್ಧ ಮಕ್ಕಳನ್ನು ರಕ್ಷಿಸಲು ಯೋಗದಿಂದ ಸಾಧ್ಯವೆ ಎಂಬ ಬಗ್ಗೆ ಸಂಶೋಧನೆಯನ್ನು ನಡೆಸಲಾಗುತ್ತಿದೆ," ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಋಣಾತ್ಮಕ ಶಕ್ತಿಯಿಂದ ರಕ್ಷಿಸುವ ಸಾಮರ್ಥ್ಯ:

"ಯಾವುದೇ ಅನಾಹುತ ಮತ್ತು ಋಣಾತ್ಮಕ ಶಕ್ತಿಯಿಂದ ಯೋಗವು ನಮ್ಮನ್ನು ರಕ್ಷಿಸುತ್ತದೆ. ಯೋಗದಿಂದ ನಮ್ಮ ಆಂತರಿಕ ಆರೋಗ್ಯ ವೃದ್ಧಿಯಾಗಲಿದೆ. ಸ್ವತಃ ವೈದ್ಯರು ಕೂಡ ಯೋಗವನ್ನು ಆರೋಗ್ಯದ ಅಸ್ತ್ರವಾಗಿಸಿಕೊಂಡಿದ್ದಾರೆ. ಕೊವಿಡ್-19 ರೋಗಿಗಳು ಮತ್ತು ವೈದ್ಯರಿಗೆ ಆರೋಗ್ಯ ಸುಧಾರಿಸಿಕೊಳ್ಳಲು ಯೋಗವು ಸಹಕಾರಿಯಾಗಿದೆ," ಎಂದು ಮೋದಿ ಹೇಳಿದ್ದಾರೆ.

ಮಾನಸಿಕ ಆರೋಗ್ಯದ ಬಗ್ಗೆ ಉಲ್ಲೇಖ:

"ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ದೇಶದಲ್ಲಿ ಇಂದು ದೈಹಿಕ ಆರೋಗ್ಯದ ಬಗ್ಗೆ ಮಾತ್ರ ಚರ್ಚೆ ಆಗುತ್ತಿಲ್ಲ. ಇದರ ಜೊತೆಗ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಹಂತದಲ್ಲಿ ನಮ್ಮ ಆರೋಗ್ಯ, ಉಸಿರಾಟ ಸಂಬಂಧಿತ ಸಮಸ್ಯೆ ಹಾಗೂ ಎಲ್ಲ ರೀತಿ ಯಶಸ್ಸಿಗೆ ಯೋಗವೇ ಮೂಲವಾಗಿದೆ," ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

English summary
7th International Yoga Day: PM Narendra Modi Speech Highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X