ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

24 ಗಂಟೆಯಲ್ಲಿ ಭಾರತದಲ್ಲಿ 78,761 ಹೊಸ ಕೋವಿಡ್ ಪ್ರಕರಣ

|
Google Oneindia Kannada News

ನವದೆಹಲಿ, ಆಗಸ್ಟ್ 30: ಭಾರತದಲ್ಲಿ 24 ಗಂಟೆಯಲ್ಲಿ 78,761 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 35,42,734ಕ್ಕೆ ಏರಿಕೆಯಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಮಾಹಿತಿ ನೀಡಿದೆ. ಶನಿವಾರ ಬೆಳಗ್ಗೆ 8 ಗಂಟೆಯಿಂದ ಭಾನುವಾರ ಬೆಳಗ್ಗೆ 8 ಗಂಟೆಯ ತನಕ ದೇಶದಲ್ಲಿ 78,761 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 948 ಜನರು ಮೃತಪಟ್ಟಿದ್ದಾರೆ.

ಗಮನಿಸಿ: ಟಿಬಿ-ಕೋವಿಡ್ ಪರೀಕ್ಷೆ ಕುರಿತು ಆರೋಗ್ಯ ಸಚಿವಾಲಯದ ಮಹತ್ವದ ಸೂಚನೆ ಗಮನಿಸಿ: ಟಿಬಿ-ಕೋವಿಡ್ ಪರೀಕ್ಷೆ ಕುರಿತು ಆರೋಗ್ಯ ಸಚಿವಾಲಯದ ಮಹತ್ವದ ಸೂಚನೆ

78,761 New COVID Cases In India On August 29

ದೇಶದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 27,13,934. ಇದುವರೆಗೂ ಮೃತಪಟ್ಟವರ ಸಂಖ್ಯೆ 63,498ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಕೋವಿಡ್ ಸೋಂಕಿತರಿಗೆ ಇರುವ ವಿಮೆ ಯೋಜನೆಯ ಮಾಹಿತಿ ಕೋವಿಡ್ ಸೋಂಕಿತರಿಗೆ ಇರುವ ವಿಮೆ ಯೋಜನೆಯ ಮಾಹಿತಿ

ಇದೇ ಮೊದಲ ಬಾರಿಗೆ ಭಾರತದಲ್ಲಿ ಒಂದು ದಿನದಲ್ಲಿ 78,761 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 35,42,734ಕ್ಕೆ ಏರಿಕೆಯಾಗಿದೆ. ಈ ಮೂಲಕ ಭಾರತ ಸೋಂಕಿತರ ಸಂಖ್ಯೆಯಲ್ಲಿ 3ನೇ ಸ್ಥಾನಕ್ಕೆ ತಲುಪಿದೆ.

ಮೊದಲ ಹಂತದ ಪ್ರಯೋಗದಲ್ಲಿ ಕೋವಿಡ್ ಲಸಿಕೆ ಯಶಸ್ವಿ: ಶುಭ ಸುದ್ದಿ ನೀಡಿದ ಮಾಡೆರ್ನಾ ಕಂಪೆನಿಮೊದಲ ಹಂತದ ಪ್ರಯೋಗದಲ್ಲಿ ಕೋವಿಡ್ ಲಸಿಕೆ ಯಶಸ್ವಿ: ಶುಭ ಸುದ್ದಿ ನೀಡಿದ ಮಾಡೆರ್ನಾ ಕಂಪೆನಿ

ಅಮೆರಿಕದಲ್ಲಿ 6,139,078, ಬ್ರೆಜಿಲ್‌ನಲ್ಲಿ 3,846,965, ಭಾರತದಲ್ಲಿ 3,542,733 ಸೋಂಕಿತರು ಇದ್ದಾರೆ. ರಷ್ಯಾ 4ನೇ ಸ್ಥಾನದಲ್ಲಿದ್ದು ಒಟ್ಟು ಸೋಂಕಿತರ ಸಂಖ್ಯೆ 985,346 ಆಗಿದೆ.

ಟಾಪ್ 5 ರಾಜ್ಯಗಳು : ಭಾರತದಲ್ಲಿ ಮಹಾರಾಷ್ಟ್ರದಲ್ಲಿ 7,64,281 ಸೋಂಕಿತರು ಇದ್ದು ರಾಜ್ಯ ಮೊದಲ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ 4,15,590, ಆಂಧ್ರ ಪ್ರದೇಶದಲ್ಲಿ 4,14,164, ಕರ್ನಾಟಕದಲ್ಲಿ 3,27,076 ಮತ್ತು ಉತ್ತರ ಪ್ರದೇಶದಲ್ಲಿ 2,19,457 ಸೋಂಕಿತರು ಇದ್ದಾರೆ.

English summary
India's COVID 19 case tally crosses 35 lakh mark. 78,761 new cases and 948 death reported in the last 24 hours. Total COVID-19 case in the country 35,42,734 said health ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X