ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

73rd Independence Day 2019 : ಜನಸಂಖ್ಯಾ ನಿಯಂತ್ರಣ ನಿಯಮದ ಮುನ್ಸೂಚನೆ ನೀಡಿದ ಮೋದಿ

|
Google Oneindia Kannada News

ನವದೆಹಲಿ, ಆಗಸ್ಟ್ 15: ಬ್ರಿಟಿಷರು ಭಾರತವನ್ನು ಸ್ಥಳೀಯ ಆಳ್ವಿಕೆಗೆ ಹಸ್ತಾಂತರಿಸಿದ ನೆನಪಿಗಾಗಿ ಆಚರಿಸುವ ಸ್ವಾತಂತ್ರ್ಯೋತ್ಸವದ 73ನೇ ಸಂಭ್ರಮಾಚರಣೆ ಗುರುವಾರ ನಡೆಯಲಿದೆ. ಭಾರತದ ಮುಕುಟ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕೇಂದ್ರದ ನಿರ್ಧಾರದ ನಂತರ ನಡೆಯುತ್ತಿರುವ ಮೊದಲ ಸ್ವಾತಂತ್ರ್ಯ ದಿನಾಚರಣೆ ಇದು ಎಂಬ ಕಾರಣಕ್ಕೆ ಮಹತ್ವ ಪಡೆದುಕೊಂಡಿದೆ.

ದೇಶದೆಲ್ಲೆಡೆ 73ನೇ ಸ್ವಾತಂತ್ರ್ಯ ಹಬ್ಬದ ಸಂಭ್ರಮ: ಚಿತ್ರಗಳು

ಜಮ್ಮುವಿನಿಂದ ಹಿಡಿದು ಕನ್ಯಾಕುಮಾರಿವರೆಗೆ ಭಾರತದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಕಮಾದರಿಯ ಸ್ವಾತಂತ್ರ್ಯ ದಿನಾಚರಣೆ ಜರುಗಲಿದೆ. ಎಲ್ಲಾ ಕಡೆಯೂ ತ್ರಿವರ್ಣ ಧ್ವಜ ಹಾರಾಡಲಿದೆ. ಜಮ್ಮು ಕಾಶ್ಮೀರದಲ್ಲಿಯೂ ಸಹ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಇದೇ ಮೊದಲ ಬಾರಿಗೆ ಭಾರಿಗೆ ಭಾರತದ ತ್ರಿವರ್ಣ ಧ್ವಜ ಮಾತ್ರ ಹಾರಿಸಲಿದ್ದಾರೆ.

ಮತ್ತೊಂದು ದಿಟ್ಟ ನಿರ್ಧಾರದ ಮುನ್ಸೂಚನೆ ಕೊಟ್ಟ ಮೋದಿಮತ್ತೊಂದು ದಿಟ್ಟ ನಿರ್ಧಾರದ ಮುನ್ಸೂಚನೆ ಕೊಟ್ಟ ಮೋದಿ

ಇದೇ ವೇಳೆ, ಕರ್ನಾಟಕದಲ್ಲಿಯೂ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರಿನಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ರಾಜ್ಯದ 80 ತಾಲೂಕುಗಳು ಪ್ರವಾಹದಿಂದ ನಲಗಿ ಹೋಗಿರುವ ಹಿನ್ನೆಲೆಯಲ್ಲಿ ಸರಳವಾಗಿ ಸ್ವಾತಂತ್ರ ದಿನಾಚರಣೆ ಆಚರಿಸಲು ಸರಕಾರ ತೀರ್ಮಾನಿಸಿದೆ.

73rd Independence Day 2019 Live Updates In Kannada

ಸೇನೆಗೆ ಬಲ ತುಂಬಲು ಹೊಸ ಹುದ್ದೆ ಸೃಷ್ಟಿಸಿದ ಪ್ರಧಾನಿ ಮೋದಿ ಸೇನೆಗೆ ಬಲ ತುಂಬಲು ಹೊಸ ಹುದ್ದೆ ಸೃಷ್ಟಿಸಿದ ಪ್ರಧಾನಿ ಮೋದಿ

ಇಡೀ ದಿನದ ಕಾರ್ಯಕ್ರಮಗಳ ಮಾಹಿತಿ, ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ ಮಾಡುವ ಭಾ‍ಷಣದ ಸಮಗ್ರ ಮಾಹಿತಿ ಇಲ್ಲಿ ಸಿಗಲಿದೆ.

Newest FirstOldest First
9:02 AM, 15 Aug

100 ಲಕ್ಷ ಕಿಲೋಮೀಟರ್ ರಸ್ತೆ ನಿರ್ಮಿಸಬೇಕಿದೆ, 50 ಸಾವಿರ ಸ್ಟಾರ್ಟ್‌ ಅಪ್ ಪ್ರಾರಂಭಿಸಬೇಕಿದೆ ಹಾಗಾಗಿ ಜನರು ಸರ್ಕಾರದೊಂದಿಗೆ ಕೈಜೋಡಿಸಬೇಕಿದೆ-ಮೋದಿ
9:01 AM, 15 Aug

ದೇಶದ ಪ್ರಧಾನಮಂತ್ರಿ ಕೂಡ ದೇಶದ ಒಬ್ಬ ನಾಗರಿಕ, ನಮ್ಮ ದೇಶವನ್ನು ಜನರು ಹಾಗೂ ಸರ್ಕಾರ ಸೇರಿ ಮುನ್ನಡೆಸಬೇಕಿದೆ- ಮೋದಿ
8:59 AM, 15 Aug

ಭೂಮಿತಾಯಿಯ ಆರೋಗ್ಯದ ಬಗ್ಗೆ ಯೋಚನೆ ಮಾಡಿದ್ದೀರಾ?, ಕೆಮಿಕಲ್ ಬಳಕೆ ಮಾಡುವುದನ್ನು ಬಿಡಿ, ಭೂಮಿತಾಯಿಯನ್ನು ಹಾಳು ಮಾಡುವ ಹಕ್ಕು ನಮಗಿಲ್ಲ. ಕೆಮಿಕಲ್ ಬಳಕೆಯನ್ನು ಕಡಿಮೆ ಮಾಡುತ್ತೇವೆ ಎಂದು ನಿರ್ಧಾರ ಮಾಡಿ, ಸಾಧ್ಯವಾದರೆ ಈಗಲೇ ನಿಲ್ಲಿಸಿ ಇದು ರೈತರಿಗೆ ನನ್ನ ಮನವಿ, ರೈತರು ಈ ಮನವಿಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎನ್ನುವ ಭರವಸೆ ನನಗಿದೆ-ಮೋದಿ
8:56 AM, 15 Aug

2022ರ ಒಳಗೆ ನಮ್ಮ ಪರಿವಾರದ ಜೊತೆಗೆ ಭಾರತದ 15 ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತೇವೆ ಎನ್ನುವ ನಿರ್ಧಾರ ಮಾಡಿ. ಅಲ್ಲಿ ರಸ್ತೆಗಳು, ಹೋಟೆಲ್‌ಗಳು ಇಲ್ಲದಿದ್ದರೂ ಕೂಡ ನೀವು ಅಲ್ಲಿಗೆ ಭೇಟಿ ನೀಡಲೇಬೇಕು-ಮೋದಿ
8:53 AM, 15 Aug

ಡಿಜಿಟಲ್ ಪೇಮೆಂಟ್‌ಗೆ ಮಾನ್ಯತೆ ನೀಡಿ,ನಗದನ್ನು ತಿರಸ್ಕರಿಸಿ-ಮೋದಿ
8:50 AM, 15 Aug

ಅಕ್ಟೋಬರ್ 2ರಿಂದ ಪ್ಲಾಸ್ಟಿಕ್ ಮುಕ್ತ ದೇಶ ಮಾಡಲು ಸಹಕರಿಸಿ ಎಂದು ಮೋದಿ ಮನವಿ. ಪ್ರತಿ ಅಂಗಡಿಗಳ ಮುಂದೆ ದಯವಿಟ್ಟು ನಮ್ಮಿಂದ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ನಿರೀಕ್ಷೆ ಮಾಡಬೇಡಿ ಎಂದು ಫಲಕಗಳನ್ನು ಅಳವಡಿಸಿ ಎಂದು ಹೇಳಿದ್ದಾರೆ.
8:47 AM, 15 Aug

ಮೂರು ಸೇನೆಗೆ ಒಂದು ಪ್ರಭಾವಿ ನೇತೃತ್ವ ನೀಡಲು ಸಿಡಿಎಸ್ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ಹುದ್ದೆ ಸೃಜಿಸಲಾಗಿದೆ. ಇದರಿಂದ ಸೇನೆಗೆ ಇನ್ನಷ್ಟು ಬಲ ಸಿಗಲಿದೆ-ಮೋದಿ
Advertisement
8:42 AM, 15 Aug

ಅಪಘಾನಿಸ್ತಾನ ನಾಲ್ಕು ದಿನಗಳ ಬಳಿಕ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಿದೆ ಅವರಿಗೆ ನನ್ನ ಶುಭಾಶಯ-ಮೋದಿ
8:36 AM, 15 Aug

ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕಿದೆ. ಇದರಿಂದ ಜನರಿಗೆ ಕೆಲಸ ಸಿಗುತ್ತದೆ. ನಾವು ಯೋಚನೆ ಮಾಡಬೇಕು, ವಿದೇಶಿಯರು ನಮ್ಮ ದೇಶಕ್ಕೆ ಹೇಗೆ ಬರಬೇಕು,ಹೇಗೆ ಅಭಿವೃದ್ಧಿಗೊಳಿಸಿದರೆ ಅವರನ್ನು ಆಕರ್ಷಿಸಬಹುದು, ಎನ್ನುವುದರ ಬಗ್ಗೆ ಆಲೋಚಿಸಬೇಕಿದೆ- ಮೋದಿ
8:34 AM, 15 Aug

ಪ್ರತಿ ಜಿಲ್ಲೆಯು ರಫ್ತು ಜಿಲ್ಲೆಯಾಗಿ ಮಾರ್ಪಾಡಾಗಬೇಕು, ಎಲ್ಲರಲ್ಲಿಯೂ ಸಾಮರ್ಥ್ಯವಿದೆ ಅದರ ಬಳಕೆಯಾಗಬೇಕು-ಮೋದಿ
8:32 AM, 15 Aug

ಮುಂದಿನ 5 ವರ್ಷದಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆನಾಗರಿಕನ ಕನಸಾಗಿದೆ ನಮ್ಮದಾಗುತ್ತದೆ.ಇದು ಪ್ರತಿಯೊಬ್ಬ ಅತಿ ಸಾಮಾನ್ಯ ಅವಶ್ಯಕತೆಗಳನ್ನು ಪೂರ್ಣಗೊಳಿಸಲು ಅವಕಾಶ ಸೃಷ್ಟಿಯಾಗುತ್ತದೆ.- ಮೋದಿ
8:29 AM, 15 Aug

ಯಾರಿಗೆ ಏನು ಸಿಕ್ಕಿದೆ, ಯಾವಾಗ ಸಿಕ್ಕಿದೆ ಎನ್ನುವುದರ ಜೊತೆಗೆ ನಾವೆಲ್ಲರೂ ಸೇರಿ ದೇಶವನ್ನು ಎಲ್ಲಿಗೆ ಕೊಂಡೊಯ್ಯಬೇಕು, ದೇಶಕ್ಕಾಗಿ ಏನು ಮಾಡಬೇಕು ಎನ್ನುವ ಕನಸನ್ನು ಇಟ್ಟುಕೊಂಡು ಮುನ್ನುಗ್ಗಿ ಇದು ಈ ಸಂದರ್ಭದ ಬೇಡಿಕೆಯಾಗಿದೆ-ಮೋದಿ
Advertisement
8:27 AM, 15 Aug

ಹೈಟೆಕ್ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಗಳನ್ನು ನಿರ್ಮಾಣ ಮಾಡಿದರೂ ಕೂಡ ಜನರ ಪ್ರಶ್ನೆ ಏನಾಗಿರುತ್ತದೆ ಎಂದರೆ ಇದು ಉತ್ತಮ ಕೆಲಸ ಹೌದು ಆದರೆ ಉತ್ತಮ ರಸ್ತೆ ಯಾವಾಗ ನಿರ್ಮಾಣ ಮಾಡುತ್ತೀರಾ, ಎಲ್ಲಿಯವರೆಗೆ ರೈಲು ವಿಸ್ತರಣೆ ಮಾಡಲಾಗುತ್ತದೆ-ಮೋದಿ
8:25 AM, 15 Aug

ಯಾರು ಏನೇ ಹೇಳಿದರೂ ಒಳ್ಳೆಯ ವಸ್ತುಗಳಿಂದಲೇ ಒಳ್ಳೆಯ ರುಚಿ ಸಿಗುತ್ತದೆ, ಆಧುನಿಕ ಮೂಲಭೂತ ಸೌಕರ್ಯಕ್ಕಾಗಿ 100 ಲಕ್ಷ ರೂ ಕೋಟಿ ರೂ ಉಳಿಕೆ ಮಾಡಲಾಗುತ್ತದೆ-ಮೋದಿ
8:22 AM, 15 Aug

ಸರ್ಕಾರವು ನಿಧಾನವಾಗಿ ಜನರ ಜೀವನದಿಂದ ಹೊರ ಬರಬೇಕು, ಜನರಿಗೆ ತಮಗೆ ಬೇಕಾದಂತೆ ಜೀವನ ಮಾಡಲು ಅವಕಾಶ ಮಾಡಿಕೊಡಬೇಕು. ಸರ್ಕಾರದ ಒತ್ತಡ ಇರಬಾರದು ಆದರೆ ಸಮಸ್ಯೆ ಬಂದಾಗ ಒಬ್ಬ ಸ್ನೇಹಿತನ ರೀತಿಯಲ್ಲಿ ಸರ್ಕಾರ ಜನರ ಜೊತೆಗಿರಬೇಕು ಅದು ನನ್ನ ಆಸೆ-ಮೋದಿ
8:19 AM, 15 Aug

ಮಗು ಆರೋಗ್ಯವಾಗಿರದಿದ್ದರೆ ಕುಟುಂಬ ಹಾಗೂ ದೇಶ ಹೇಗೆ ಆರೋಗ್ಯವಾಗಿರಲು ಸಾಧ್ಯ-ಮೋದಿ
8:15 AM, 15 Aug

ಜನಸಂಖ್ಯಾಸ್ಪೋಟ: ಶಿಶುವಿಗೆ ಜನ್ಮ ನೀಡುವ ಮೊದಲು ಯೋಚಿಸಬೇಕು, ಅದರ ಅವಶ್ಯಕತೆ ಪೂರ್ಣ ಮಾಡಲು ಸಾಧ್ಯವೋ ಇಲ್ಲವೋ, ಮಗುವಿಗೆ ಉತ್ತಮ ಶಿಕ್ಷಣವನ್ನು ನೀಡಲು ನಮ್ಮಿಂದ ಸಾಧ್ಯವೇ?
8:07 AM, 15 Aug

ಜಲ್ ಜೀವನ್ ಮಿಷನ್ ಗಾಗಿ 3.5 ಲಕ್ಷ ಕೋಟಿಗೂ ಅಧಿಕ ಅನುದಾನ ಮೀಸಲು-ಮೋದಿ
8:07 AM, 15 Aug

ಬಡವರ ಆತ್ಮಸಮ್ಮಾನ, ಹಕ್ಕುಗಳನ್ನು ನೀಡಲು ಹೋರಾಡೋಣ, ದೇಶದ ಅರ್ಧ ಕುಟುಂಬಗಳಿಗೆ ನೀರಿನ ಸೌಕರ್ಯವಿಲ್ಲ, ಐದಾರು ಕಿಲೋಮೀಟರ್ ಸಾಗುವ ಅನಿವಾರ್ಯತೆ ಇದೆ. ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು, ಜಲ ಜೀವನ ಮಿಷನ್ ಆರಂಭಿಸಲಿದ್ದೇವೆ-ಮೋದಿ
8:02 AM, 15 Aug

ಒಂದು ದೇಶ ಒಂದು ಮೊಬಿಲಿಟಿ ಕಾರ್ಡ್ ಘೋಷಿಸಲಾಗಿದೆ. ಒಂದು ದೇಶ ಒಂದೇ ಬಾರಿಗೆ ಚುನಾವಣೆ ಇದರ ಬಗ್ಗೆ ಚರ್ಚೆಯಾಗಿ ಸಾಕಾರಗೊಳ್ಳಬೇಕಿದೆ-ಮೋದಿ
8:01 AM, 15 Aug

ಈಗ ಈ ದೇಶದ ಜನರು ಹೆಮ್ಮೆಯಿಂದ ಹೇಳಬಹುದಾಗಿದೆ ಒಂದು ದೇಶ ಒಂದು ಸಂವಿಧಾನ, ಸರ್ದಾರ್ ಪಟೇಲರ ಒಂದು ಭಾರತ ಶ್ರೇಷ್ಠ ಭಾರತ ಕನಸು ನನಸುಗೊಳಿಸಿದ್ದೇವೆ-ಮೋದಿ
8:00 AM, 15 Aug

370ನೇ ವಿಧಿ ಕಾಶ್ಮೀರದ ದಿಕ್ಕನ್ನೇ ಬದಲಿಸುವುದಿದ್ದರೆ ಅದನ್ನು ಏಕೆ ಶಾಶ್ವತವಾಗಿರಿಸದೆ ತಾತ್ಕಾಲಿಕ ವಿಶೇಷ ಸ್ಥಾನಮಾನ ಯಾಕೆ ನೀಡಲಾಗಿತ್ತು. ನನಗೆ ದೇಶದ ಹಿತರಕ್ಷಣೆ ಮುಖ್ಯ, ರಾಜಕೀಯ ಹಿತಾಸಕ್ತಿ ಪ್ರಮುಖವಲ್ಲ- ಮೋದಿ
7:58 AM, 15 Aug

ಜಮ್ಮು ಕಾಶ್ಮೀರದ ಜನ ಇನ್ನುಮುಂದೆ ಹಕ್ಕನ್ನು ಭಾರತ ಸರ್ಕಾರದ ಬಳಿ ಕೇಳಬಹುದಾಗಿದೆ-ಮೋದಿ
7:58 AM, 15 Aug

ಭಾರತ ವಿಭಜನೆಯಾಗಿತ್ತು ಆಗ ಯಾರದ್ದೂ ತಪ್ಪಿರಲಿಲ್ಲ, ಪಾಕಿಸ್ತಾನದಿಂದ ಭಾರತಕ್ಕೆ ಬಂದ ಜನರಿಗೆ ಯಾವುದೇ ಹಕ್ಕು ನೀಡಿರಲಿಲ್ಲ.ನಾಗರಿಕ ಅಧಿಕಾರವೂ ಸಿಗಲಿಲ್ಲ, ಅವರ ಬಗ್ಗೆ ಚಿಂತೆ ಮಾಡಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ- ಮೋದಿ
7:56 AM, 15 Aug

ಹಲವು ವರ್ಷಗಳಿಂದ ಭ್ರಷ್ಟಾಚಾರಕ್ಕೆ ಬಲಕೊಡುವ ಕೆಲಸ ಮಾಡುತ್ತಿದ್ದರು, ಅದನ್ನು ಸಂಪೂರ್ಣವಾಗಿ ಹೋಗಲಾಡಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ- ಮೋದಿ
7:54 AM, 15 Aug

ಅನುಚ್ಛೇದ 370 ಹಾಗೂ 35 ಎ ರದ್ದು ಮಾಡಲು ಕಾರಣವಿತ್ತು, 70ವರ್ಷದಲ್ಲಿ ಬಗೆಹರಿಸಲಾಗದ ಸಮಸ್ಯೆಯನ್ನು ಬಗೆ ಹರಿಸಿದ್ದೇವೆ-ಮೋದಿ
7:51 AM, 15 Aug

ಸಮಸ್ಯೆಯನ್ನು ಬೇರಿನಿಂದ ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ, ಮುಸ್ಲಿಂ ಮಹಿಳೆಯರ ಮೇಲೆ ತ್ರಿವಳಿ ತಲಾಖ್ ಎನ್ನುವ ತೂಗುಗತ್ತಿ ಯಾವಾಗಲೂ ಇತ್ತು, ಯಾವಾಗ ತಲಾಖ್ ನೀಡುತ್ತಾರೋ ನಮ್ಮ ಬದುಕು ಯಾವಾಗ ಬೀದಿ ಪಾಲಾಗುತ್ತದೋ ಎನ್ನುವ ಆತಂಕದಲ್ಲಿಯೇ ಮಹಿಳೆಯರು ಜೀವನ ಸಾಗಿಸುತ್ತಿದ್ದರು. ಇದು ಮುಸ್ಲಿಂ ಮಹಿಳೆಯರನ್ನು ಅಸಹಾಯಕರನ್ನಾಗಿಸಿತ್ತು. ಅವರ ಕಷ್ಟವನ್ನು ದೂರ ಮಾಡುವ ಪ್ರಯತ್ನ ಮಾಡಿದ್ದೇವೆ-ಮೋದಿ
7:49 AM, 15 Aug

ಸಮಾಧಾನ, ಸಂಕಲ್ಪ, ಸ್ವಾಭಿಮಾನ, ಸಾಮೃರ್ಥ್ಯವಿದ್ದರೆ ಸಫಲತೆಗೆ ವಿರುದ್ಧವಾಗಿ ಯಾರೂ ಬರಲು ಸಾಧ್ಯವಿಲ್ಲ-ಮೋದಿ
7:46 AM, 15 Aug

ಸರ್ಕಾರ ಬದಲಾಯಿಸುವುದರಿಂದ ದೇಶ ಬದಲಾಗುತ್ತದೆಯೇ ಎನ್ನುವುದು ಜನರ ಮನಸ್ಸಿನಲ್ಲಿರುವ ಗೊಂದಲವಾಗಿತ್ತು. 2019ರಲ್ಲಿ 5 ವರ್ಷದ ಕಠಿಣ ಪರಿಶ್ರಮದ ಬಳಿಕ, ದೇಶದ ಜನರ ನಿರಾಸೆ ಆಸೆಯಾಗಿ ಬದಲಾಗಿದೆ. ಪ್ರತಿ ಕ್ಷಣ ಅವರಿಗೋಸ್ಕರ ಶ್ರಮಿಸಿದ್ದೇವೆ.ನಮ್ಮಿಂದಲೂ ಬದಲಾಯಿಸಲು ಸಾಧ್ಯ.
7:43 AM, 15 Aug

2016-19ರವರೆಗೆ ನಿಮ್ಮ ಸೇವೆ ಮಾಡಲು ಅವಕಾಶ ನೀಡಿದಿರಿ, ಆದಿವಾಸಿಗಳು, ಶೋಷಿತರನ್ನು ಮುನ್ನೆಲೆಗೆ ತರಲು ಶ್ರಮಿಸಿದ್ದೇವೆ. ಅವಶ್ಯಕತೆಗಳನ್ನು ಪೂರೈಸುವ ಅನಿವಾರ್ಯತೆ ಇತ್ತು ಈಗ ನಿಮ್ಮ ಕನಸು, ಆಕಾಂಕ್ಷೆಗಳನ್ನು ಸಾಕಾರಗೊಳಿಸುವ ಸಮಯ ಬಂದಿದೆ-ಮೋದಿ
READ MORE

English summary
Independence Day 2019:The Independence Day in India is celebrated every year on 15th of August.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X