ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್ಲೈನಲ್ಲಿ ಸ್ವತಂತ್ರ ಸಂಭ್ರಮ ಹೆಚ್ಚಿಸಿದ ಗೂಗಲ್ ಡೂಡ್ಲ್

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 14: 72ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯಲ್ಲಿ ತೊಡಗಿರುವ ದೇಶದ ಜನತೆಯ ಸಂಭ್ರಮವನ್ನು ಆನ್ ಲೈನ್ ನಲ್ಲಿ ಇನ್ನಷ್ಟು ಹೆಚ್ಚಿಸಲು ಸರ್ಚ್ ಇಂಜಿನ್ ದೈತ್ಯ ಗೂಗಲ್ ಮುಂದಾಗಿದೆ. ವಿಶೇಷ ಸಂದರ್ಭಗಳಲ್ಲಿ ಡೂಡ್ಲ್ ಬಳಸಿ ಸರ್ಚ್ ಇಂಜಿನ್ ಸಂಭ್ರಮವನ್ನು ಕೊಂಡಾಡುತ್ತದೆ. ಈ ಬಾರಿ ಭಾರತದ ಸ್ವತಂತ್ರ ಸಂಭಮವನ್ನು 'ಟ್ರಕ್ ಆರ್ಟ್' ಡೂಡ್ಲ್ ಮೂಲಕ ಆಚರಿಸಲಾಗಿದೆ.

ಭಾರತದ ಸಾರಿಗೆ ಸಂಪರ್ಕ ವ್ಯವಸ್ಥೆಯಲ್ಲಿ ಟ್ರಕ್ ಗಳು ಮಹತ್ವದ ಪಾತ್ರವಹಿಸುತ್ತವೆ. ಟ್ರಕ್ ಗಳ ಮೇಲೆ ಸಾಮಾನ್ಯವಾಗಿ ಕಂಡು ಬರುವ ಚಿತ್ರಕಲೆಯನ್ನು ಬಳಸಿಕೊಂಡು ಈ ಬಾರಿ ಗೂಗಲ್ ಡೂಡಲ್ ರಚಿಸಿ, ಗೂಗಲ್ ಇಂಡಿಯಾ ಮುಖಪುಟದಲ್ಲಿ ಪ್ರದರ್ಶಿಸಲಾಗಿದೆ.

ಹುಟ್ಟುಹಬ್ಬದ ದಿನ ಭಾರತಕ್ಕೆ ಗಿಫ್ಟ್ ಕೊಟ್ಟ ಗೂಗಲ್!ಹುಟ್ಟುಹಬ್ಬದ ದಿನ ಭಾರತಕ್ಕೆ ಗಿಫ್ಟ್ ಕೊಟ್ಟ ಗೂಗಲ್!

ಟ್ರಕ್ ಗಳ ಮೇಲ್ಭಾಗದಲ್ಲಿ ಕಾಣಸಿಗುವಂಥ ಡ್ರಾಯಿಂಗ್ ಬೋರ್ಡ್ ಮಾದರಿಯಲ್ಲಿ ಗೂಗಲ್ ಡೂಡಲ್ ಇದೆ. ದೇಶದ ನಾಲ್ಕು ಲಕ್ಷ ಚದರ ಕಿಲೋಮೀಟರ್ ಚಲಿಸುತ್ತಾ ರಸ್ತೆ ಬದಿಗಳಲ್ಲೇ ಬದುಕು ಸಾಗಿಸುವ ಟ್ರಕ್ ಚಾಲಕರಿಗೆ ಈ ಮೂಲಕ ಗೂಗಲ್ ಡೂಡಲ್ ಗೌರವ ಸಲ್ಲಿಸಿದೆ.

72nd Independence Day 2018: Google Doodle Celebrates With Truck Art

ಈ ಟ್ರಕ್ ಆರ್ಟ್ ನಲ್ಲಿ ಬಳಸಿಕೊಳ್ಳಲಾಗಿದೆ. ಒಂದು ಕಡೆ ಆನೆ ಮತ್ತೊಂದು ಕಡೆ ರಾಷ್ಟ್ರೀಯ ಪ್ರಾಣಿ ಹುಲಿ ಎರಡರ ಮಧ್ಯದಲ್ಲಿ ರಾಷ್ಟ್ರಧ್ವಜವಿದೆ. ರಾಷ್ಟ್ರೀಯ ಪಕ್ಷಿ ನವಿಲು, ಕಮಲದ ಹೂವು , ಮಾವಿನ ಕಾಯಿಯ ಚಿತ್ರಗಳನ್ನ ಟ್ರಕ್ ಆರ್ಟ್ ನಲ್ಲಿ ಬಳಸಿಕೊಳ್ಳಲಾಗಿದೆ. ಈ ಮೂಲಕ ರಾಷ್ಟ್ರಪ್ರಾಣಿ, ಪಕ್ಷಿಗಳ ಮಹತ್ವ ಸಾರಲಿದೆ. ಜೊತೆಗೆ ವಸಂತ ಋತುವಿನ ಆಗಮನ, ಶುಭ ಸೂಚಕ ಭಾವವನ್ನು ಬಿಂಬಿಸುವ ವಿನ್ಯಾಸವನ್ನು ಗೂಗಲ್ ಡೂಡಲ್ ಹೊಂದಿದೆ.

ಆಗಸ್ಟ್ 15; ಭಾರತವಲ್ಲದೆ ಇನ್ನೂ ನಾಲ್ಕು ದೇಶಗಳಿಗೆ ಸ್ವಾತಂತ್ರ್ಯ ದೊರೆತ ದಿನಆಗಸ್ಟ್ 15; ಭಾರತವಲ್ಲದೆ ಇನ್ನೂ ನಾಲ್ಕು ದೇಶಗಳಿಗೆ ಸ್ವಾತಂತ್ರ್ಯ ದೊರೆತ ದಿನ

ಡೂಡ್ಲ್ ಚಿತ್ರ: ಭಾರತ ಸೇರಿದಂತೆ ವಿಶ್ವದ ಅನೇಕ ವಿದ್ಯಮಾನಗಳು, ಐತಿಹಾಸಿಕ ದಿನಗಳು, ಹಬ್ಬ ಹರಿದಿನಗಳು, ಆಚರಣೆಗಳ ಸಂದರ್ಭದಲ್ಲಿ ಗೂಗಲ್ ತನ್ನ ಡೂಡ್ಲ್ ರೇಖಾಚಿತ್ರದ ಮೂಲಕ ಸಾಧಕರನ್ನು ಸ್ಮರಿಸುವ ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಬಂದಿದೆ.

ಗೂಗಲ್ ಲೋಗೋವನ್ನು ಕಲಾತ್ಮಕವಾಗಿ ರೂಪಿಸುವುದಕ್ಕೆ ಡೂಡಲ್ಸ್ ಎನ್ನಲಾಗುತ್ತದೆ. ಪ್ರತಿ ವರ್ಷ ಶಾಲಾ ಮಕ್ಕಳಿಗೆ ಡೂಡ್ಲ್ ರಚನೆ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಆಯ್ಕೆಯಾದ ಡೂಡ್ಲ್ ರಚಿಸಿದ ವಿದ್ಯಾರ್ಥಿ/ನಿಗೆ ನಗದು ಬಹುಮಾನ ಹಾಗೂ ಶಿಷ್ಯವೇತನ ಸಿಗಲಿದೆ.

English summary
72nd Independence Day 2018: Google Doodle Celebrates India Independence Day With 'Truck Art' Doodle. The doodle features a tiger, an elephant and two peacocks reflecting a typical truck art seen on the roads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X