ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಡೆಲ್ಟಾ ಪ್ಲಸ್ ಪ್ರಕರಣಗಳ ಕುರಿತು ಲೋಕಸಭೆಯಲ್ಲಿ ಪ್ರಸ್ತಾಪ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಜುಲೈ 30: ದೇಶದಲ್ಲಿ ಈಚೆಗೆ ಆತಂಕ ಸೃಷ್ಟಿಸಿದ್ದ ಕೊರೊನಾ ಡೆಲ್ಟಾ ಪ್ಲಸ್ ಪ್ರಕರಣದ ಕುರಿತು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಶುಕ್ರವಾರ ಪ್ರಸ್ತಾಪ ಮಾಡಿದೆ.

ದೇಶದಲ್ಲಿ ಸದ್ಯ 70 ಡೆಲ್ಟಾ ಪ್ಲಸ್ ರೂಪಾಂತರ ಪ್ರಕರಣಗಳಿದ್ದು, ಹದಿನಾರು ಜಿಲ್ಲೆಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪತ್ತೆಯಾಗಿವೆ ಎಂದು ತಿಳಿಸಿದೆ. ಜೆನೋಮ್ ಸೀಕ್ವೆನ್ಸಿಂಗ್‌ನಲ್ಲಿ ಇಷ್ಟು ಪ್ರಕರಣಗಳು ಪತ್ತೆಯಾಗಿರುವುದಾಗಿ ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಲೋಕಸಭೆಗೆ ಶುಕ್ರವಾರ ತಿಳಿಸಿದ್ದಾರೆ.

 ಕೊರೊನಾ ರೂಪಾಂತರ ಸೃಷ್ಟಿ; ವೈರಸ್ ಟ್ರ್ಯಾಕಿಂಗ್ ನಿರ್ಣಾಯಕ ಎಂದ ಅಧ್ಯಯನ ಕೊರೊನಾ ರೂಪಾಂತರ ಸೃಷ್ಟಿ; ವೈರಸ್ ಟ್ರ್ಯಾಕಿಂಗ್ ನಿರ್ಣಾಯಕ ಎಂದ ಅಧ್ಯಯನ

ಲೋಕಸಭೆಯಲ್ಲಿ ಈ ಸಂಬಂಧ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಇವರು, ಭಾರತದಲ್ಲಿ 58,240 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಜೆನೋಮಿಕ್ ಕಂಸೋರ್ಟಿಯಂನ್ಲಿ 46,124 ಮಾದರಿಗಳ ವಿಶ್ಲೇಷಣೆ ನಡೆಸಲಾಗಿದೆ. ಜುಲೈ 23ರವರೆಗೂ ಒಟ್ಟು 70 ಡೆಲ್ಟಾ ಪ್ಲಸ್ ಪ್ರಕರಣಗಳು ಕಂಡುಬಂದಿವೆ ಎಂದು ತಿಳಿಸಿದ್ದಾರೆ.

70 Delta Plus Variant Cases Found Across 16 States Govt Tells Lok Sabha

ಕೊರೊನಾ ಎರಡನೇ ಅಲೆಯ ಭೀಕರತೆ ಕಂಡಿದ್ದ ಭಾರತದಲ್ಲಿ ಹೊಸದಾಗಿ ಸೃಷ್ಟಿಯಾಗಿದ್ದ ಡೆಲ್ಟಾ ಪ್ಲಸ್ ಇನ್ನಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿತ್ತು. ಡೆಲ್ಟಾ ರೂಪಾಂತರ AY.1 ಡೆಲ್ಟಾ ಪ್ಲಸ್ ರೂಪಾಂತರಕ್ಕೆ ಕಾರಣವಾಗಿದೆ ಎನ್ನಲಾಗಿತ್ತು.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಡೆಲ್ಟಾ ಪ್ಲಸ್ ಪ್ರಕರಣಗಳು ದಾಖಲಾಗಿದ್ದವು. ಆನಂತರ ಮಧ್ಯಪ್ರದೇಶ, ತಮಿಳುನಾಡು, ಚಂಡೀಗಢ, ಕೇರಳ ಹಾಗೂ ಕರ್ನಾಟಕದಲ್ಲಿ ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿದ್ದವು.

ಆಂಧ್ರಪ್ರದೇಶ, ಪಂಜಾಬ್, ಗುಜರಾತ್ ಹಾಗೂ ತೆಲಂಗಾಣ, ಉತ್ತರ ಪ್ರದೇಶ, ಹರಿಯಾಣ, ಜಮ್ಮು, ರಾಜಸ್ಥಾನ, ಒಡಿಶಾ ಹಾಗೂ ಹಿಮಾಚಲ ಪ್ರದೇಶದಲ್ಲಿಯೂ ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿದ್ದವು.

ಸೋಂಕಿನ ಹರಡುವಿಕೆ ಹಾಗೂ ಗಂಭೀರತೆಯನ್ನು ವಿಶ್ಲೇಷಣೆ ಮಾಡುವ ನಿಟ್ಟಿನಲ್ಲಿ ಸುಮಾರು 4,172 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಸಚಿವ ಮಾಹಿತಿ ನೀಡಿದ್ದಾರೆ.

ಈ ಹೊಸ ರೂಪಾಂತರ ದೇಶದಲ್ಲಿ ಜೂನ್ 11ರಂದು ಪತ್ತೆಯಾಗಿದ್ದು, ಇದು ಕಳವಳಕಾರಿ ರೂಪಾಂತರ ಎಂದು ಕೇಂದ್ರ ಘೋಷಿಸಿದೆ. ಸೋಂಕಿನ ಸ್ವರೂಪದ ಕುರಿತು ಕೆಲವು ಅಂಶಗಳನ್ನು ಪ್ರಾಥಮಿಕ ಅಧ್ಯಯನದಿಂದ ಕಲೆ ಹಾಕಲಾಗಿದೆ. ಇದರ ಪ್ರಕಾರ, ಬೇರೆ ಕೊರೊನಾ ರೂಪಾಂತರಗಳಿಗೆ ಹೋಲಿಸಿದರೆ ಡೆಲ್ಟಾ ಪ್ಲಸ್ ರೂಪಾಂತರ ಶ್ವಾಸಕೋಶದ ಅಂಗಾಂಶಗಳಿಗೆ ಬೇಗನೇ ವ್ಯಾಪಿಸುವುದಾಗಿ ತಿಳಿದುಬಂದಿದೆ. "ಬೇರೆ ರೂಪಾಂತರಗಳಿಗೆ ಹೋಲಿಸಿದರೆ ಡೆಲ್ಟಾ ಪ್ಲಸ್ ಶ್ವಾಸಕೋಶದ ಮ್ಯೂಕೋಸಲ್ ಲೈನಿಂಗ್ ಮೇಲೆ ಪ್ರಭಾವ ತೋರಲಿದೆ. ಆದರೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದರ ಕುರಿತು ಸ್ಪಷ್ಟನೆ ದೊರೆತಿಲ್ಲ. ಜೊತೆಗೆ ಇದು ಅತಿ ಗಂಭೀರ ಮಟ್ಟಕ್ಕೆ ತಲುಪಬಹುದೇ ಎಂಬುದು ತಿಳಿದುಬಂದಿಲ್ಲ" ಎಂದು ತಜ್ಞರು ತಿಳಿಸಿದ್ದಾರೆ. ಹೆಚ್ಚಿನ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ಡೆಲ್ಟಾ ಪ್ಲಸ್ ರೂಪಾಂತರ ಪ್ರಭಾವದ ಕುರಿತು ಸ್ಪಷ್ಟನೆ ಸಿಗುತ್ತದೆ. ಆದರೆ ಒಂದು ಅಥವಾ ಎರಡು ಡೋಸ್ ಲಸಿಕೆ ಪಡೆದ ಎಲ್ಲರಲ್ಲೂ ಈ ಸೋಂಕಿನ ಪ್ರಮಾಣ ಸೌಮ್ಯವಾಗಿರಲಿದೆ. ನಾವು ಬಹಳ ಸೂಕ್ಷ್ಮವಾಗಿ ಈ ಸೋಂಕಿನ ಹರಡುವಿಕೆಯನ್ನು ಗಮನಿಸಬೇಕು. ಆಗ ಇದರ ಪ್ರಸರಣ ವೇಗದ ಬಗ್ಗೆ ಒಂದು ಸ್ಪಷ್ಟತೆ ಸಿಗುತ್ತದೆ ಎಂದಿದ್ದಾರೆ.

ಈ ನಡುವೆ ಜಗತ್ತಿನಲ್ಲಿ ಈಗಿರುವ ಕೊರೊನಾವೈರಸ್ ರೂಪಾಂತರಗಳ ಜೊತೆಗೆ ಇನ್ನೂ ನಾಲ್ಕು ಹೊಸ ರೂಪಾಂತರ ತಳಿಗಳು ಸೃಷ್ಟಿಯಾಗುವ ಹಾಗೂ ಹರಡುವ ಅಪಾಯವಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

ಡೆಲ್ಟಾ(B.1.617.2) ಕುಟುಂಬದಿಂದ B.1.617.3 ಎಂಬ ರೂಪಾಂತರ, ಕಪ್ಪಾ(B.1.617.1)ದಿಂದ ಮತ್ತೊಂದು ರೂಪಾಂತರಗಳು ಹರಡಲಿದೆ. ಆದರೆ ಈ ಎರಡು ರೂಪಾಂತರಗಳು ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ರೂಪಾಂತರಕ್ಕಿಂತ ಹೆಚ್ಚು ಪರಿಣಾಮಕಾರಿ ಆಗಿರುವುದಿಲ್ಲ ಎಂದಿದ್ದಾರೆ. ಇತರ ಎರಡು ರೂಪಾಂತರಗಳ ಪೈಕಿ ಒಂದು B.1.1.318, ಇದು 14 ರೂಪಾಂತರಗಳನ್ನು ಹೊಂದಿದೆ, ಮತ್ತು ಲ್ಯಾಂಬ್ಡಾ (C.37) ಎಂದು ಗುರುತಿಸಲಾಗಿದೆ. ಭಾರತದಲ್ಲಿ ಈಗಾಗಲೇ B.1.1318 ಮತ್ತು B.1.617.3 ರೂಪಾಂತರ ಪತ್ತೆಯಾಗಿದ್ದು, ಲ್ಯಾಂಬ್ಡಾ ರೂಪಾಂತರ ಇನ್ನೇನು ದೇಶದಲ್ಲಿ ಕಾಣಿಸಿಕೊಳ್ಳುವ ಅಪಾಯವಿದೆ ಎಂದು ಎಚ್ಚರಿಕೆ ನೀಡಲಾಗಿದೆ.

English summary
70 cases of Delta Plus variant of coronavirus were found in genome sequencing, Union science and technology minister Jitendra Singh said on Friday tells to loksabha,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X