ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬ್ಬಂದಿಗಳಿಗೆ ಮೆಣಸಿನಪುಡಿ ಎರಚಿ ಜೈಲಿನಿಂದ ಪರಾರಿಯಾದ 7 ಕೈದಿಗಳು!

|
Google Oneindia Kannada News

ಇಟಾನಗರ, ಜು.13: ಅರುಣಾಚಲ ಪ್ರದೇಶದ ಜೈಲಿನಿಂದ ಏಳು ಕೈದಿಗಳು ಮೆಣಸಿನಕಾಯಿ ಪುಡಿ, ಕರಿ ಮೆಣಸಿನ ಪುಡಿ, ಉಪ್ಪನ್ನು ಜೈಲಿನ ಕಾವಲುಗಾರರಿಗೆ ಎಸೆದು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಭಾನುವಾರ ರಾಜ್ಯದ ಪೂರ್ವ ಸಿಯಾಂಗ್ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಇನ್ನು ಈ ಕೈದಿಗಳು ತಪ್ಪಿಸುವ ವೇಳೆ ಕನಿಷ್ಠ ಐದು ಮಂದಿ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಸಿಬ್ಬಂದಿಗಳಿಗೆ ಗಾಯಗಳಾಗಿವೆ.

ಮದುವೆಯಾಗಿ 18 ದಿನಕ್ಕೆ ಪತಿಗೆ ಕೈಕೊಟ್ಟ ಪತ್ನಿ; ಪ್ರೇಮಿ ಜೊತೆ ಜೂಟ್!ಮದುವೆಯಾಗಿ 18 ದಿನಕ್ಕೆ ಪತಿಗೆ ಕೈಕೊಟ್ಟ ಪತ್ನಿ; ಪ್ರೇಮಿ ಜೊತೆ ಜೂಟ್!

ಈ ಕೈದಿಗಳು ತಪ್ಪಿಸಿಕೊಳ್ಳಲು ಮುಂಚಿತವಾಗಿಯೇ ತಯಾರಿ ನಡೆಸುತ್ತಿದ್ದರು ಎನ್ನಲಾಗಿದೆ. ಈ ಏಳು ಕೈದಿಗಳನ್ನು ಅಭಿಜಿತ್ ಗೊಗೊಯ್, ತಾರೋ ಹಮಾಮ್, ಕಲೋಮ್ ಅಪಾಂಗ್, ತಾಲೂಮ್ ಪ್ಯಾನಿಂಗ್, ಸುಬಾಶ್ ಮೊಂಡಾಲ್, ರಾಜಾ ತೆಯೆಂಗ್, ಮತ್ತು ಡ್ಯಾನಿ ಗಮ್ಲಿನಾ ಎಂದು ಗುರುತಿಸಲಾಗಿದೆ.

 7 prisoners escape from Arunachal jail by throwing chilli powder at guards

ಭಾನುವಾರ ಸಂಜೆ 6.30 ರ ಸುಮಾರಿಗೆ ಈ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಏಳು ಮಂದಿ ಕೈದಿಗಳು ಒಂದೇ ಸ್ಥಳದಲ್ಲಿ ಇದ್ದರು. ಊಟಕ್ಕೆ ಸೆಲ್‌ ತೆರೆದ ಸಂದರ್ಭದಲ್ಲಿ ಜೈಲಿನಲ್ಲಿದ್ದ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿದೆ.

''ಘಟನೆಯಲ್ಲಿ ಐದು ಮಂದಿ ಜೈಲಿನ ಸಿಬ್ಬಂದಿಗಳಿಗೆ ಗಾಯವಾಗಿದೆ. ಈ ಪೈಕಿ ಓರ್ವನ ತಲೆಗೆ ತೀವ್ರವಾಗಿ ಗಾಯವಾಗಿದೆ. ಸೆಲ್‌ನ ಭಾರವಾದ ಬೀಗದಿಂದ ಹೊಡೆದಿರಬಹುದು. ಸಿಬ್ಬಂದಿಯ ಮೊಬೈಲ್‌ ಫೋನ್‌ ಕೂಡಾ ಕೈದಿಗಳು ಕಸಿದುಕೊಂಡಿದ್ದಾರೆ,'' ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಕಾನೂನು ಮತ್ತು ಸುವ್ಯವಸ್ಥೆ) ಚುಖು ಅಪಾ ಪಿಟಿಐಗೆ ತಿಳಿಸಿದ್ದಾರೆ.

ಕೋವಿಡ್‌ ಹೆಚ್ಚಳ: ಆರು ರಾಜ್ಯಗಳಿಗೆ ತಂಡ ಕಳುಹಿಸಿದ ಕೇಂದ್ರ ಸರ್ಕಾರಕೋವಿಡ್‌ ಹೆಚ್ಚಳ: ಆರು ರಾಜ್ಯಗಳಿಗೆ ತಂಡ ಕಳುಹಿಸಿದ ಕೇಂದ್ರ ಸರ್ಕಾರ

ಇನ್ನು ''ಜೈಲಿನಿಂದ ಪರಾರಿಯಾದವರ ಪತ್ತೆ ಕಾರ್ಯವನ್ನು ಪ್ರಾರಂಭಿಸಲಾಗಿದೆ,'' ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ''ಇಂಡಿಯಾ ರಿಸರ್ವ್ ಬೆಟಾಲಿಯನ್‌ನ ಪೊಲೀಸರು ಮತ್ತು ಸಿಬ್ಬಂದಿಗಳು ಪೂರ್ವ ಸಿಯಾಂಗ್ ಪಟ್ಟಣದಲ್ಲಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಎಲ್ಲಾ ನಿರ್ಗಮನ ಸ್ಥಳಗಳನ್ನು ಬಂದ್‌ ಮಾಡಲಾಗಿದೆ. ನಾವು ಶೀಘ್ರದಲ್ಲೇ ಈ ಕೈದಿಗಳನ್ನು ವಶಕ್ಕೆ ಪಡೆಯುತ್ತೇವೆ,'' ಎಂದು ಅಧಿಕಾರಿ ಹೇಳಿದರು.

''ಕೊರೊನಾ ಕಾರಣದಿಂದಾಗಿ ಮಧ್ಯಾಹ್ನ 3 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಇರುವುದರಿಂದ ತಪ್ಪಿಸಿಕೊಳ್ಳುವ ಕೈದಿಗಳಿಗೆ ಈ ಪರಿಸ್ಥಿತಿಯಲ್ಲಿ ಹೆಚ್ಚು ದೂರ ಹೋಗುವುದು ಕಷ್ಟ,'' ಎಂದು ಪಾಸಿಘಾಟ್ ಉಪ ಪೊಲೀಸ್ ವರಿಷ್ಠಾಧಿಕಾರಿ ತಪಾಂಗ್ ತಾಟಕ್ ಹೇಳಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Seven undertrial prisoners (UTPs) escaped from a jail in Arunachal Pradesh by throwing chilli and pepper powder and salt at the guards manning the jail, a senior police official said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X