ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ನಿವಾರಣೆಗೆ ಲಸಿಕೆ ಕಂಡು ಹಿಡಿಯಲು ಹೇಗಿದೆ ಪೈಪೋಟಿ?

|
Google Oneindia Kannada News

ನವದೆಹಲಿ, ಜುಲೈ.20: ಜಾಗತಿಕ ಮಟ್ಟದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕೊರೊನಾವೈರಸ್ ಸೋಂಕು ಹರಡಿವಿಕೆಗೆ ಕಡಿವಾಣ ಹಾಕುವುದು ಹೇಗೆ. ಸಾವಿನ ಪ್ರಮಾಣ ತಗ್ಗಿಸುವುದಕ್ಕೆ ಲಸಿಕೆ ಕಂಡು ಹಿಡಿಯುವುದು ಯಾವಾಗ. ಮಾತ್ರೆ ಅಥವಾ ಲಸಿಕೆ ಯಾವುದೋ ಒಂದು ರೂಪದಲ್ಲಿ ವ್ಯಾಕ್ಸಿನ್ ಸಿಕ್ಕರೆ ಸಾಕು ಎನ್ನುವಂತಾ ಪರಿಸ್ಥಿತಿಯಿದೆ.

Recommended Video

Leopard enters home and takes away pet dog | Oneindia kannada

ದೇಶದಲ್ಲಿ ಸೋಮವಾರದ ಅಂಕಿ-ಅಂಶಗಳ ಪ್ರಕಾರ ಒಂದೇ ದಿನ 40,425 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 11,18,043ಕ್ಕೆ ಏರಿಕೆಯಾಗಿದೆ. ಈ ಪೈಕಿ 3,90,459 ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ ಕೊವಿಡ್-19 ಮಹಾಮಾರಿಗೆ 681 ಮಂದಿ ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 27,497ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.

ಓದುಗರಿಗೆ IMPORTANT: ಕೊರೊನಾವೈರಸ್ ಕುರಿತು 5 ಅನುಮಾನಗಳಿಗೆ ಉತ್ತರಓದುಗರಿಗೆ IMPORTANT: ಕೊರೊನಾವೈರಸ್ ಕುರಿತು 5 ಅನುಮಾನಗಳಿಗೆ ಉತ್ತರ

ಕೊರೊನಾವೈರಸ್ ಮಹಾಮಾರಿಯು ಹೀಗೆ ಭಾರತೀಯರ ಎದೆಯಲ್ಲೂ ನಡುಕ ಹುಟ್ಟಿಸುತ್ತಿದೆ. ಇನ್ನೊಂದೆಡೆ ರಷ್ಯಾದಲ್ಲಿ ಈಗಾಗಲೇ ಮನುಷ್ಯರ ಮೇಲೆ ನಡೆಸಿದ ವೈದ್ಯಕೀಯ ಪ್ರಯೋಗ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ಇದರ ನಡುವೆಯೂ ಏಳು ಸಂಸ್ಥೆಗಳ ನಡುವೆ ಕೊರೊನಾವೈರಸ್ ಸೋಂಕಿಗೆ ಔಷಧಿ ಕಂಡು ಹಿಡಿಯಲು ಭಾರಿ ಪೈಪೋಟಿ ನಡೆದಿದೆ.

ಏಳು ಸಂಸ್ಥೆಗಳ ನಡುವೆ ಲಸಿಕೆ ಕಂಡು ಹಿಡಿಯಲು ಸ್ಪರ್ಧೆ

ಏಳು ಸಂಸ್ಥೆಗಳ ನಡುವೆ ಲಸಿಕೆ ಕಂಡು ಹಿಡಿಯಲು ಸ್ಪರ್ಧೆ

ಭಾರತದಲ್ಲಿಯೂ ಕೊರೊನಾವೈರಸ್ ಸೋಂಕು ನಿವಾರಣೆಗೆ ಅಗತ್ಯವಿರುವ ಲಸಿಕೆಯನ್ನು ಕಂಡು ಹಿಡಿಯುವುದಕ್ಕೆ ಪ್ರಮುಖವಾಗಿ ಏಳು ಸಂಸ್ಥೆಗಳ ನಡುವೆ ಪೈಪೋಟಿ ನಡೆಯುತ್ತಿದೆ. ಭಾರತ್ ಬಯೋಟೆಕ್, ಸೇರಂ ಇನ್ಸ್ ಟಿಟ್ಯೂಟ್, ಜಿದುಸ್ ಕ್ಯಾಡಿಲಾ, ಪ್ಯಾನಸಿಯಾ ಬಯೋಟೆಕ್, ಇಂಡಿಯನ್ ಇಮ್ಯುನೋಲಾಜಿಕಲ್, ಮೈನ್ ವ್ಯಾಕ್ಸ್ ಮತ್ತು ಬೈಲಾಜಿಕಲ್ ಇ ಸಂಸ್ಥೆಗಳು ಕೊರೊನಾವೈರಸ್ ಸೋಂಕಿಗೆ ಔಷಧಿ ಕಂಡು ಹಿಡಿಯುವ ಕಾರ್ಯದಲ್ಲಿ ಪೈಪೋಟಿಗೆ ನಿಂತಿವೆ.

ಅತಿಶೀಘ್ರದಲ್ಲೇ ಕೊವಿಡ್-19ಗೆ ಔಷಧಿ ಸಂಶೋಧಿಸಲು ಸ್ಪರ್ಧೆ

ಅತಿಶೀಘ್ರದಲ್ಲೇ ಕೊವಿಡ್-19ಗೆ ಔಷಧಿ ಸಂಶೋಧಿಸಲು ಸ್ಪರ್ಧೆ

ಕೊರೊನಾವೈರಸ್ ಸೋಂಕು ನಿವಾರಣೆಗೆ ಔಷಧಿ ಕಂಡು ಹಿಡಿಯಬೇಕಿದ್ದಲ್ಲಿ ಸಾಮಾನ್ಯವಾಗಿ ವರ್ಷಗಳೇ ಬೇಕಾಗುತ್ತದೆ. ಆದರೆ ಸಾಂಕ್ರಾಮಿಕ ಪಿಡುಗು ದೇಶದಲ್ಲಿ ಸಮುದಾಯದ ಹಂತದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ತುರ್ತು ಔಷಧಿ ಕಂಡು ಹಿಡಿಯುವ ಅನಿವಾರ್ಯತೆ ಸಾಂಕ್ರಾಮಿಕ ರೋಗತಜ್ಞರು ಮತ್ತು ವಿಜ್ಞಾನಿಗಳಿಗೆ ಎದುರಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್ ಔಷಧಿಯನ್ನು ಮೊದಲ ಮತ್ತು ಎರಡನೇ ಹಂತದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದಕ್ಕೆ ಭಾರತ್ ಬಯೋಟೆಕ್ ಸಂಸ್ಥೆಯು ಅನುಮತಿಯನ್ನು ಪಡೆದುಕೊಂಡಿದೆ. ಹೈದ್ರಾಬಾದ್ ನಲ್ಲಿ ಅಭಿವೃದ್ಧಿಪಡಿಸಿರುವ ಔಷಧಿಯನ್ನು ಕಳೆದ ವಾರವೇ ಮನುಷ್ಯರ ಮೇಲೆ ಪ್ರಯೋಗಿಸುವುದಕ್ಕೆ ಆರಂಭಿಸಲಾಗಿದೆ.

ಪುಟ್ಟ ಮಕ್ಕಳ ಕೆಮ್ಮಿಗೆ ಕೊರೊನಾವೈರಸ್ ಕಾರಣವೇ; ಭಯ ಬಿಟ್ಟು ವರದಿ ಓದಿಪುಟ್ಟ ಮಕ್ಕಳ ಕೆಮ್ಮಿಗೆ ಕೊರೊನಾವೈರಸ್ ಕಾರಣವೇ; ಭಯ ಬಿಟ್ಟು ವರದಿ ಓದಿ

2020ರ ವರ್ಷಾಂತ್ಯದ ವೇಳೆಗೆ ಸಿಗುತ್ತೆ ಕೊರೊನಾವೈರಸ್ ಔಷಧಿ

2020ರ ವರ್ಷಾಂತ್ಯದ ವೇಳೆಗೆ ಸಿಗುತ್ತೆ ಕೊರೊನಾವೈರಸ್ ಔಷಧಿ

ಭಾರತದ ಮತ್ತೊಂದು ಪ್ರಸಿದ್ಧ ಸೇರಂ ಇನ್ಸ್ ಟಿಟ್ಯೂಟ್ ಕೊರೊನಾವೈರಸ್ ಸೋಂಕಿಗೆ 2020ರ ವರ್ಷಾಂತ್ಯದ ವೇಳೆಗೆ ಔಷಧಿ ಲಭ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ನಾವು ಆಸ್ಚ್ರಾ ಜೆನೆಕಾ ಎಂಬ ಆಕ್ಸ್ ಫರ್ಡ್ ವ್ಯಾಕ್ಸಿನ್ ನ್ನು ಮೂರನೇ ಹಂತದ ವೈದ್ಯಕೀಯ ಪ್ರಯೋಗ ನಡೆಸುವುದರ ಮೇಲೆ ಕೆಲಸ ಮಾಡುತ್ತಿದ್ದೇವೆ. ತದನಂತರದಲ್ಲಿ 2020ರ ಆಗಸ್ಟ್ ತಿಂಗಳಿನಿಂದ ಮನುಷ್ಯರ ಮೇಲೆ ಔಷಧಿ ಪ್ರಯೋಗವನ್ನು ಆರಂಭಿಸಲಾಗುತ್ತದೆ. ಈಗಾಗಲೇ ಕೊರೊನಾವೈರಸ್ ಸೋಂಕಿಗೆ ಲಸಿಕೆ ಕಂಡು ಹಿಡಿಯುವುದಕ್ಕೆ ಸಾಕಷ್ಟು ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಆದರೆ ಅತಿಹೆಚ್ಚು ಪರಿಣಾಮಕಾರಿ ಆಗಿರುವ ಆಕ್ಸ್ ಫರ್ಡ್ ನ ವ್ಯಾಕ್ಸಿನ್ ಆಗಿರುವ ಆಸ್ಟ್ರಾಜೆನಿಕಾ ಈ ವರ್ಷಾಂತ್ಯದ ವೇಳೆಗೆ ಲಭ್ಯವಾಗಲಿದೆ ಎಂದು ಸೇರಂ ಇನ್ಸ್ ಟಿಟ್ಯೂಟ್ ಸಂಸ್ಥೆಯ ಸಿಇಓ ಅದರ್ ಪೂನಾವಲ್ಲಾ ತಿಳಿಸಿದ್ದಾರೆ.

ಎರಡು ಸಂಸ್ಥೆಗಳಿಂದ 1 ಬಿಲಿಯನ್ ಡೋಸ್ ವ್ಯಾಕ್ಸಿನ್ ಉತ್ಪಾದನೆ

ಎರಡು ಸಂಸ್ಥೆಗಳಿಂದ 1 ಬಿಲಿಯನ್ ಡೋಸ್ ವ್ಯಾಕ್ಸಿನ್ ಉತ್ಪಾದನೆ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಮೂಲದ ಆಕ್ಸ್ ಫರ್ಡ್ ನ ಆಸ್ಟ್ರಾ ಜೆನಿಕ್ ವ್ಯಾಕ್ಸಿನ್ ಉತ್ಪಾದನೆಯಲ್ಲಿ ಸೇರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದನಾ ಪಾಲುದಾರಿಕೆಯನ್ನು ಹೊಂದಿದೆ. ಎರಡು ಸಂಸ್ಥೆಗಳು ಒಟ್ಟುಗೂಡಿ 1 ಬಿಲಿಯನ್ ಡೋಸ್ ಕೊವಿಡ್-19 ವ್ಯಾಕ್ಸಿನ್ ಉತ್ಪಾದಿಸುವ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ಸೇರಂ ಇನ್ಸ್ ಟಿಟ್ಯೂಟ್ ಸಂಸ್ಥೆಯ ಸಿಇಓ ಅದರ್ ಪೂನಾವಲ್ಲಾ ಹೇಳಿದರು.

ಭಾರತದಲ್ಲಿ ಸಮುದಾಯಕ್ಕೆ ಹರಡಿದ ಕೊರೊನಾವೈರಸ್ ನಿಂದ ಗಂಡಾಂತರ!ಭಾರತದಲ್ಲಿ ಸಮುದಾಯಕ್ಕೆ ಹರಡಿದ ಕೊರೊನಾವೈರಸ್ ನಿಂದ ಗಂಡಾಂತರ!

ತೀರಾ ಕಡಿಮೆ ಬೆಲೆಯಲ್ಲಿ ಸಿಗುತ್ತೆ ಕೊರೊನಾವೈರಸ್ ವ್ಯಾಕ್ಸಿನ್

ತೀರಾ ಕಡಿಮೆ ಬೆಲೆಯಲ್ಲಿ ಸಿಗುತ್ತೆ ಕೊರೊನಾವೈರಸ್ ವ್ಯಾಕ್ಸಿನ್

ಕೊರೊನಾವೈರಸ್ ಸೋಂಕಿಗೆ ಗುರಿಯಾಗಿರುವ ಮಧ್ಯಮ ವರ್ಗ ಮತ್ತು ಅಲ್ಪ ಆದಾಯವನ್ನು ಹೊಂದಿರುವ ಕುಟುಂಬಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅತ್ಯಂತ ಕಡಿಮೆ ದರದಲ್ಲಿ ವ್ಯಾಕ್ಸಿನ್ ಕಂಡು ಹಿಯಲಾಗುತ್ತಿದೆ ಎಂದು ಜಿದುಸ್ ಕ್ಯಾಡಿಲಾ ಸಂಸ್ಥೆಯು ತಿಳಿಸಿದೆ. ಕಳೆದ ವಾರವಷ್ಟೇ ವೈದ್ಯಕೀಯ ಪ್ರಯೋಗವನ್ನು ಆರಂಭಿಸಲಾಗಿದ್ದು, ಏಳು ತಿಂಗಳಿನಲ್ಲೇ ZyCoV-D ಔಷಧಿಯ ವೈದ್ಯಕೀಯ ಪ್ರಯೋಗಗಳು ಪೂರ್ಣಗೊಳ್ಳಲಿವೆ ಎಂದು ಜಿದುಸ್ ಕ್ಯಾಡಿಲಾ ಸಂಸ್ಥೆ ಚೇರ್ ಮೆನ್ ಪಂಕಜ್ ಆರ್ ಪಟೇಲ್ ತಿಳಿಸಿದ್ದಾರೆ.

ಪ್ಯಾನಸಿಯಾ ಬಯೋಟೆಕ್ ಔಷಧಿ ಬಗ್ಗೆ ಹೇಳುವುದೇನು?

ಪ್ಯಾನಸಿಯಾ ಬಯೋಟೆಕ್ ಔಷಧಿ ಬಗ್ಗೆ ಹೇಳುವುದೇನು?

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಸಹಯೋಗದೊಂದಿಗೆ ಪ್ಯಾನಸಿಯಾ ಬಯೋಟೆಕ್ ಕಂಪನಿಯು ಕೊರೊನಾವೈರಸ್ ಸೋಂಕು ನಿವಾರಣೆಗೆ ಲಸಿಕೆ ಅಭಿವೃದ್ಧಿಪಡಿಸುತ್ತಿದೆ. COVID-19 ಗೆ ಲಸಿಕೆ ಅಭಿವೃದ್ಧಿಪಡಿಸಲು ಯುಎಸ್ ಮೂಲದ ರೆಫಾನಾ ಇಂಕ್‌ನೊಂದಿಗೆ ಐರ್ಲೆಂಡ್‌ನಲ್ಲಿ ಜಂಟಿ ಉದ್ಯಮ ಸಂಸ್ಥೆಯನ್ನು ಸ್ಥಾಪಿಸುವ ಬಗ್ಗೆ ಪ್ಯಾನಸಿಯಾ ಬಯೋಟೆಕ್ ಜೂನ್ ತಿಂಗಳಿನಲ್ಲಿಯೇ ತಿಳಿಸಿದೆ. ಒಟ್ಟು 500 ಮಿಲಿಯನ್ ಡೋಸ್ ಔಷಧಿಯನ್ನು ಉತ್ಪಾದಿಸುವ ಉದ್ದೇಶವನ್ನು ಹೊಂದಲಾಗಿದ್ದು, ಮುಂದಿನ ವರ್ಷದ ವೇಳೆಗೆ 40 ಮಿಲಿಯನ್ ಡೋಸ್ ಔಷಧಿಯನ್ನು ಪೂರೈಕೆ ಮಾಡುವ ಬಗ್ಗೆ ಪ್ಯಾನಸಿಯಾ ಸಂಸ್ಥೆ ತಿಳಿಸಿದೆ.

ಕೊವಿಡ್-19 ನೆಗೆಟಿವ್ ಬಂದರೂ ಮೊಬೈಲ್ ಸಂಖ್ಯೆಗೆ SMSಕೊವಿಡ್-19 ನೆಗೆಟಿವ್ ಬಂದರೂ ಮೊಬೈಲ್ ಸಂಖ್ಯೆಗೆ SMS

ಆಸ್ಟ್ರೇಲಿಯಾ ಸಂಸ್ಥೆಯೊಂದಿಗೆ ಇಂಡಿಯನ್ ಇಮ್ಯುನೋಲಾಜಿಕಲ್ ಒಪ್ಪಂದ

ಆಸ್ಟ್ರೇಲಿಯಾ ಸಂಸ್ಥೆಯೊಂದಿಗೆ ಇಂಡಿಯನ್ ಇಮ್ಯುನೋಲಾಜಿಕಲ್ ಒಪ್ಪಂದ

ನ್ಯಾಷನಲ್ ಡೈರಿ ಡೆವಲಪ್ ‌ಮೆಂಟ್ ಬೋರ್ಡ್ (ಎನ್‌ಡಿಡಿಬಿ)ನ ಅಂಗಸಂಸ್ಥೆಯಾಗಿರುವ ಇಂಡಿಯನ್ ಇಮ್ಯುನೋಲಾಜಿಕಲ್ ಸಂಸ್ಥೆಯು ಆಸ್ಟ್ರೇಲಿಯಾದ ಗ್ರಿಫಿತ್ ವಿಶ್ವವಿದ್ಯಾಲಯದೊಂದಿಗೆ ಕೊರೊನಾವೈರಸ್ ‌ಗೆ ಲಸಿಕೆ ಅಭಿವೃದ್ಧಿಪಡಿಸಲು ಒಪ್ಪಂದ ಮಾಡಿಕೊಂಡಿದೆ. ಇದರ ಜೊತೆಗೆ ಮೈನ್ ವ್ಯಾಕ್ಸ್ ಮತ್ತು ಬೈಲಾಜಿಕಲ್ ಇ ಸಂಸ್ಥೆಗಳು ಕೂಡಾ ಕೊವಿಡ್-19ಗೆ ಲಸಿಕೆ ಕಂಡು ಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ.

ಜಗತ್ತಿನಲ್ಲಿ ಈವರೆಗೂ 140 ವಿಧದ ವ್ಯಾಕ್ಸಿನ್ ಅಭಿವೃದ್ಧಿ

ಜಗತ್ತಿನಲ್ಲಿ ಈವರೆಗೂ 140 ವಿಧದ ವ್ಯಾಕ್ಸಿನ್ ಅಭಿವೃದ್ಧಿ

ಕೊರೊನಾವೈರಸ್ ಸೋಂಕಿನ ವಿರುದ್ಧ ಹೋರಾಡುವುದಕ್ಕೆ ಜಗತ್ತಿನಾದ್ಯಂತ 140ಕ್ಕೂ ಹೆಚ್ಚು ಬಗೆಯ ವ್ಯಾಕ್ಸಿನ್ ಗಳನ್ನು ಅಭಿವೃದ್ಧಿ ಪಡಿಸಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ. ಈ ಪೈಕಿ 24 ಔಷಧಿಗಳನ್ನು ಮನುಷ್ಯರ ಮೇಲೆ ವೈದ್ಯಕೀಯ ಪ್ರಯೋಗಕ್ಕೆ ಅನುಮತಿ ನೀಡಲಾಗಿದೆ. ಚೀನಾದ ಸಿನೊವಾಕ್ ಬಯೋಟೆಕ್ ಮೂರನೇ ಹಂತದ ಪ್ರಯೋಗವನ್ನು ನಡೆಸುತ್ತಿದೆ. ಬ್ರೆಜಿಲ್ ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾ ಜೆನಿಕಾ ಮೇಲೆ ಎರಡು ಮತ್ತು ಮೂರನೇ ಹಂತದ ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಇಂಗ್ಲೆಂಡ್ ನಲ್ಲಿ ಅಭಿವೃದ್ಧಿಪಡಿಸಿದ ಔಷಧಿಯನ್ನು ಕೂಡಾ ಮೂರನೇ ಹಂತದ ವೈದ್ಯಕೀಯ ಪ್ರಯೋಗಕ್ಕೆ ಒಳಪಡಿಸಲಾಗಿದೆ.

English summary
Here Are The List Of 7 Indian Pharma Players Are In Race To Develop Vaccine For Covid-19. Take A Look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X