ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19: ಭಾರತದಲ್ಲಿ 7 ಸಂಸ್ಥೆಗಳಿಗೆ ಮಾತ್ರ ಲಸಿಕೆ ತಯಾರಿಕೆಗೆ ಪರವಾನಗಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 18: ಭಾರತದಲ್ಲಿ ಒಟ್ಟು 7 ಸಂಸ್ಥೆಗಳಿಗೆ ಮಾತ್ರ ಕೊವಿಡ್ 19 ಲಸಿಕೆ ತಯಾರಿಸಲು ಪರವಾನಗಿ ಇದೆ ಎಂದು ಆರೋಗ್ಯ ಸಚಿವಾಲಯ ಲೋಕಸಭೆಯಲ್ಲಿ ತಿಳಿಸಿದೆ.

ಏಳು ಸಂಸ್ಥೆಗಳಿಗೆ ಪೂರ್ವ ಕ್ಲಿನಿಕಲ್ ಪರೀಕ್ಷೆ, ವಿಶ್ಲೇಷಣೆ, ಕೊವಿಡ್ ಲಸಿಕೆ ತಯಾರಿಸಲು ಕೇಂದ್ರ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ ಅನುಮತಿ ನೀಡಿದೆ.

7 Firms In India Have License For Covid Vaccine Manufacture

ಸಂಸ್ಥೆಗಳ ಹೆಸರು ಹೀಗಿದೆ
-ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ-ಪುಣೆ
-ಕ್ಯಾಡಿಲಾ ಹೆಲ್ತ್ ಕೇರ್ ಲಿಮಿಟೆಡ್-ಅಹಮದಾಬಾದ್
-ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್-ಹೈದರಾಬಾದ್
-ಬಯೋಲಾಜಿಕಲ್ ಇಲಿಮಿಟೆಡ್-ಹೈದರಾಬಾದ್
-ರಿಲಾಯಾನ್ಸ್ ಲೈಫ್ ಸೈನ್ಸಸ್-ಮುಂಬೈ
-ಅರವಿಂದೋ ಫಾರ್ಮಾ ಲಿಮಿಟೆಡ್-ಹೈದರಾಬಾದ್
-ಗೆನ್ನೋವಾ ಬಯೋಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್-ಪುಣೆ
ಈ ಸಂಸ್ಥೆಗಳಿಗೆ ಮಾತ್ರ ಲಸಿಕೆ ತಯಾರಿಸಲು ಅನುಮತಿ ಇದೆ. ಆರೋಗ್ಯ ಸಚಿವ ಹರ್ಷವರ್ಧನ್ 2021ರ ಆರಂಭದಲ್ಲಿ ಭಾರತಕ್ಕೆ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ತಿಳಿಸಿದ್ದರು. ವಿಶ್ವ ಆರೋಗ್ಯ ಸಂಸ್ಥೆ ಜತೆಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಯುರೋಪ್‌ನಲ್ಲಿ ಕೊರೊನಾ ಪರಿಸ್ಥಿತಿ ತುಂಬಾ ಗಂಭೀರ: ವಿಶ್ವ ಆರೋಗ್ಯ ಸಂಸ್ಥೆಯುರೋಪ್‌ನಲ್ಲಿ ಕೊರೊನಾ ಪರಿಸ್ಥಿತಿ ತುಂಬಾ ಗಂಭೀರ: ವಿಶ್ವ ಆರೋಗ್ಯ ಸಂಸ್ಥೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ತಜ್ಞರ ತಂಡ ಸಂಶೋಧನೆ ನಡೆಸುತ್ತಿದೆ. ನಮ್ಮಲ್ಲಿ ಸುಧಾರಿತ ಯೋಜನೆಗಳಿದ್ದು, ಮುಂದಿನ ವರ್ಷದ ಆರಂಬದ ವೇಳೆಗೆ ಭಾರತದಲ್ಲಿ ಲಸಿಕೆ ಲಭ್ಯವಾಗುವ ನಿರೀಕ್ಷೆಗಳಿವೆ ಎಂದು ಹೇಳಿದ್ದಾರೆ.

ಬಹುತೇಕ ರಾಷ್ಟ್ರಗಳು ಸತತ ಯತ್ನಗಳನ್ನು ನಡೆಸುತ್ತಿದ್ದು, ಇದೇ ವೇಳೆ ಭಾರತದಲ್ಲಿ ಲಸಿಕೆ ಬಿಡುಗಡೆ ಕುರಿತು ಕೇಂದ್ರ ಸರ್ಕಾರ ಮಹತ್ವದ ಸುಳಿವು ನೀಡಿದೆ. ಲಸಿಕೆ ಕಂಡು ಹಿಡಿಯಲು ಇತರೆ ರಾಷ್ಟ್ರಗಳಂತೆ ಭಾರತ ಕೂಡ ಸತತ ಪ್ರಯತ್ನಗಳನ್ನು ನಡೆಸುತ್ತಿದೆ.

Recommended Video

Air ಇಂಡಿಯಾಗೆ ಗ್ರಾಹಕರಿಗೆ ದೊಡ್ಡ shock | Oneindia Kannada

ಈಗಾಗಲೇ ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ 51 ಲಕ್ಷ ಗಡಿದಾಟಿದ್ದು ಸಾವಿನ ಸಂಖ್ಯೆ ಕೂಡ 83 ಸಾವಿರ ಗಡಿ ದಾಟಿದೆ. ಕೊರೊನಾ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ.

English summary
The health ministry informed the Lok Sabha on Friday that the Central Drugs Standard Control Organization has not received any report regarding any deviation from the standard procedures in research and development of Covid-19 vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X