ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ನೇ ಅಲೆಯಲ್ಲಿ ಒಟ್ಟು ಮೃತ ಪಟ್ಟ ವೈದ್ಯರ ಸಂಖ್ಯೆ: ರಾಜ್ಯದಲ್ಲಿ ಎಷ್ಟು?

|
Google Oneindia Kannada News

ಕಳೆದ ಮಾರ್ಚ್ ತಿಂಗಳಿನಿಂದ ಆರಂಭವಾದ ಕೊರೊನಾ ಎರಡನೇ ಅಲೆ ಸಾಕಷ್ಟು ಸಾವುನೋವಿಗೆ ಕಾರಣವಾದ ನಂತರ, ಅದರ ಪ್ರಭಾವ ಈಗ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಾ ಸಾಗುತ್ತಿದೆ.

ಕರ್ನಾಟಕ ಸೇರಿದಂತೆ, ದೇಶದೆಲ್ಲಡೆ ಇದೇ ಮೊದಲ ಬಾರಿಗೆ ಒಂದು ಲಕ್ಷಕ್ಕಿಂತ ಕಮ್ಮಿ ಹೊಸ ಸೋಂಕಿತರ ಸಂಖ್ಯೆ ವರದಿಯಾಗಿದೆ. ಇನ್ನು, ಕರ್ನಾಟಕದಲ್ಲೂ 24 ಗಂಟೆಗಳಲ್ಲಿ 11,958 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ಜೂನ್ ಏಳರಂದು 27,299 ಸೋಂಕಿತರ ಚೇತರಿಕೆಯನ್ನು ಕಂಡಿದ್ದಾರೆ.

ಎಲ್ಲಾ ವಯಸ್ಕರಿಗೂ ಲಸಿಕೆ ನೀಡಿದ ದೇಶದ ಮೊದಲ ಹಳ್ಳಿ ಇದು...ಎಲ್ಲಾ ವಯಸ್ಕರಿಗೂ ಲಸಿಕೆ ನೀಡಿದ ದೇಶದ ಮೊದಲ ಹಳ್ಳಿ ಇದು...

ಕೊರೊನಾ ವಿರುದ್ದದ ಹೋರಾಟರಲ್ಲಿ ಫ್ರಂಟ್ ಲೈನ್ ನಲ್ಲಿರುವ ವೈದ್ಯಕೀಯ ಸಮುದಾಯದಲ್ಲೂ ಕೂಡಾ ಸಾಕಷ್ಟು ಸಾವುಗಳಾಗಿವೆ. ಬಿಡುಗಡೆಯಾದ ಅಂಕಿಅಂಶದ ಪ್ರಕಾರ, ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾವು ಆಗಿಲ್ಲ ಎನ್ನುವುದು ನೆಮ್ಮದಿಯ ವಿಚಾರ.

ಆದರೂ, ಕಳೆದ ಮಾರ್ಚ್ ತಿಂಗಳಿನಿಂದ ಜೂನ್ ಆದಿಯವರೆಗೆ, ಅಂದರೆ ಸುಮಾರು ಮೂರು ತಿಂಗಳಲ್ಲಿ ದೇಶಾದ್ಯಂತ ಆರು ನೂರಕ್ಕೂ ಹೆಚ್ಚು ವೈದ್ಯರು ಮೃತ ಪಟ್ಟಿದ್ದಾರೆ. ಆ ಪ್ರಕಾರ, ಯಾವಯಾವ ರಾಜ್ಯದಲ್ಲಿ ಎಷ್ಟು ವೈದ್ಯರು ಮೃತ ಪಟ್ಟಿದ್ದಾರೆ?

 ಹೊಸ ಪ್ರಕರಣ ಕಮ್ಮಿ, ಸಾವಿನ ಸಂಖ್ಯೆ ಜಾಸ್ತಿ: ಅಸಲಿ ಕಾರಣ ಬಿಚ್ಚಿಟ್ಟ ಬಿಬಿಎಂಪಿ ಆಯುಕ್ತರು ಹೊಸ ಪ್ರಕರಣ ಕಮ್ಮಿ, ಸಾವಿನ ಸಂಖ್ಯೆ ಜಾಸ್ತಿ: ಅಸಲಿ ಕಾರಣ ಬಿಚ್ಚಿಟ್ಟ ಬಿಬಿಎಂಪಿ ಆಯುಕ್ತರು

 ಸುಮಾರು ಮೂರು ತಿಂಗಳಲ್ಲಿ ದೇಶಾದ್ಯಂತ ಆರು ನೂರಕ್ಕೂ ಹೆಚ್ಚು ವೈದ್ಯರು ಮೃತ

ಸುಮಾರು ಮೂರು ತಿಂಗಳಲ್ಲಿ ದೇಶಾದ್ಯಂತ ಆರು ನೂರಕ್ಕೂ ಹೆಚ್ಚು ವೈದ್ಯರು ಮೃತ

ಪಟ್ಟಿಯ ಪ್ರಕಾರ ಅತಿಹೆಚ್ಚು ದೆಹಲಿಯಲ್ಲಿ 109, ಇದಾದ ನಂತರ ಬಿಹಾರ್ ನಲ್ಲಿ 97, ಉತ್ತರ ಪ್ರದೇಶದಲ್ಲಿ 79, ರಾಜಸ್ಥಾನದಲ್ಲಿ 43, ಜಾರ್ಖಂಡ್ ನಲ್ಲಿ 39, ಆಂಧ್ರ ಪ್ರದೇಶದಲ್ಲಿ 35 ವೈದ್ಯರು, ಕೋವಿಡ್ ಎರಡನೇ ಅಲೆಯಲ್ಲಿ ಮೃತ ಪಟ್ಟಿದ್ದಾರೆಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.

 ಇಂಡಿಯನ್ ಮೆಡಿಕಲ್ ಅಸೋಶಿಯೇಷನ್ ನೀಡಿರುವ ಹೇಳಿಕೆ

ಇಂಡಿಯನ್ ಮೆಡಿಕಲ್ ಅಸೋಶಿಯೇಷನ್ ನೀಡಿರುವ ಹೇಳಿಕೆ

ದೇಶದ 26 ರಾಜ್ಯಗಳಲ್ಲಿ 646 ವೈದ್ಯರು ಎರಡನೇ ಅಲೆಗೆ ಇದುವರಿಗೆ ಮೃತರಾಗಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಅಸೋಶಿಯೇಷನ್ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ. ಇನ್ನು ಅಸ್ಸಾಂ ನಲ್ಲಿ ಎಂಟು, ಛತ್ತೀಸಗಢದಲ್ಲಿ ಐದು, ಗೋವಾದಲ್ಲಿ ಇಬ್ಬರು, ಹರ್ಯಾಣದಲ್ಲಿ ಮೂವರು ವೈದ್ಯರು ಕೋವಿಡ್ ಎರಡನೇ ಅಲೆಗೆ ಮೃತ ಪಟ್ಟಿದ್ದಾರೆ.

ಕರ್ನಾಟಕದಲ್ಲಿ ಇದುವರೆಗೆ ಒಂಬತ್ತು ವೈದ್ಯರು ಎರಡನೇ ಅಲೆಗೆ ಮೃತ

ಇನ್ನು, ಕರ್ನಾಟಕದಲ್ಲಿ ಇದುವರೆಗೆ ಒಂಬತ್ತು ವೈದ್ಯರು ಎರಡನೇ ಅಲೆಗೆ ಮೃತ ಪಟ್ಟಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ.ಸುಧಾಕರ್, "ರಾಜ್ಯದಲ್ಲಿ ಕಮ್ಮಿ ಸಂಖ್ಯೆಯಲ್ಲಿ ವೈದ್ಯರು ಮೃತ ಪಟ್ಟಿದ್ದಾರೆ. ನಮ್ಮ ಕೋವಿಡ್ ವಾರಿಯರ್ಸ್ ರನ್ನು ರಕ್ಷಿಸಲು ಸರಕಾರ ತೆಗೆದುಕೊಂಡ ಮುಂಜಾಗ್ರತಾ ಕ್ರಮ ಇದನ್ನು ತೋರಿಸುತ್ತದೆ"ಎಂದು ಅವರು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

 ಮಹಾರಾಷ್ಟ್ರದಲ್ಲಿ ಮತ್ತು ಒರಿಸ್ಸಾದಲ್ಲಿ ತಲಾ 23

ಮಹಾರಾಷ್ಟ್ರದಲ್ಲಿ ಮತ್ತು ಒರಿಸ್ಸಾದಲ್ಲಿ ತಲಾ 23

ಇನ್ನು, ಕೇರಳದಲ್ಲಿ ಐದು, ಮಧ್ಯಪ್ರದೇಶದಲ್ಲಿ ಹದಿನಾರು, ಮಹಾರಾಷ್ಟ್ರದಲ್ಲಿ ಮತ್ತು ಒರಿಸ್ಸಾದಲ್ಲಿ ತಲಾ 23, ಪಂಜಾಬ್ ನಲ್ಲಿ ಮೂವರು, ತ್ರಿಪುರಾದಲ್ಲಿ ಇಬ್ಬರು, ಉತ್ತರಾಖಂಡದಲ್ಲಿ ಇಬ್ಬರು, ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ವೈದ್ಯರು ಕೋವಿಡ್ ಎರಡನೇ ಅಲೆಗೆ ಮೃತ ಪಟ್ಟಿದ್ದಾರೆ.

English summary
646 doctors died in India during COVID-19 second wave, state wise list
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X