ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

64 ಸಂಸದ, ಶಾಸಕರ ವಿರುದ್ಧ ಅಪಹರಣ ಪ್ರಕರಣ, ಬಿಜೆಪಿಗೆ ಅಗ್ರಸ್ಥಾನ!

|
Google Oneindia Kannada News

ನವದೆಹಲಿ, ಜುಲೈ 31: ಒಟ್ಟು 1024 ಹಾಲಿ ಶಾಸಕ, ಸಂಸದರ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 64 ಜನರ ವಿರುದ್ಧ ಅಪಹರಣ ಪ್ರಕರಣಗಳು ದಾಖಲಾಗಿವೆ ಎಂದು ಅಸೋಸಿಯೇಶನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ಸ್(ADR) ವರದಿ ತಿಳಿಸಿದೆ.

ಅಪಹರಣ ಪ್ರಕರಣಗಳು ದಾಖಲಾದ 64 ಶಾಸಕರು ಮತ್ತು ಸಂಸದರ ಪೈಕಿ 16 ಜನ ಬಿಜೆಪಿಯವರೇ ಇದ್ದಾರೆ ಎಂದು ಈ ವರದಿ ಹೇಳಿದೆ.

ಕ್ರಿಮಿನಲ್ ಕೇಸು ಹೆಚ್ಚಿರುವವರ ಸಾಲಿನಲ್ಲಿ ಬಿಜೆಪಿ ಸಿಎಂ ಫಡ್ನವೀಸ್ ನಂಬರ್ ಒನ್ ಕ್ರಿಮಿನಲ್ ಕೇಸು ಹೆಚ್ಚಿರುವವರ ಸಾಲಿನಲ್ಲಿ ಬಿಜೆಪಿ ಸಿಎಂ ಫಡ್ನವೀಸ್ ನಂಬರ್ ಒನ್

ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ(ಆರ್ ಜೆಡಿ) ಪಕ್ಷಗಳ ತಲಾ 6 ಜನರು ಈ ಪಟ್ಟಿಯಲ್ಲಿದ್ದಾರೆ.

64 MPS and MLAs have kidnapping case against them

ಜೊತೆಗೆ ಎನ್ ಸಿಪಿ, ಬಿಜೆಡಿ, ಡಿಎಂಕೆ, ಎಸ್ಪಿ, ಟಿಡಿಪಿ, ಟಿಎಂಸಿ, ಸಿಪಿಎಂ, ಸಿಪಿಸಿ(ಎಂ), ಜೆಡಿಯು, ಎಲ್ ಜೆಪಿ, ಟಿಆರ್ ಎಸ್ ಸೇರಿದಂತೆ ಬಹುಪಾಲು ಎಲ್ಲ ಪಕ್ಷಗಳ ಶಾಸಕರು, ಸಂಸದರ ಮೇಲೂ ಅಪಹರಣದ ಆರೋಪವಿದೆ.

ಈ 64 ಜನರಲ್ಲಿ ಹೆಚ್ಚಿನ ಜನರಿ ಬಿಹಾರ ಮತ್ತು ಉತ್ತರ ಪ್ರದೇಶದವರು! ಆರ್ ಜೆಡಿಯ ರಾಜೇಶ್ ರಂಜಾನ್ ಅಲಿಯಾಸ್ ಪಪ್ಪು ಯಾದವ್ ಒಬ್ಬರೇ 6 ಅಪಹರಣ ಪ್ರಕರಣಗಳನ್ನು ಹೊಂದಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ!

English summary
According to Association of Democratic Reforms (ADR) 64 sitting MPs and MLAs have kidnapping cases against them. 16 among them are from ruling BJP and 6 are from Congress
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X