ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 24 ಗಂಟೆಗಳಲ್ಲಿ 6088 ಕೊರೊನಾ ಪ್ರಕರಣಗಳು

|
Google Oneindia Kannada News

ನವದೆಹಲಿ, ಮೇ 22: ಭಾರತದಲ್ಲಿ ಕೊರೊನಾ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ 6088 ಕೊರೊನಾ ಪ್ರಕರಣಗಳು ದೇಶಾದ್ಯಂತ ದಾಖಲಾಗಿವೆ. 24 ಗಂಟೆಯಲ್ಲಿ 148 ಜನರು ಕೊರೊನಾಗೆ ಬಲಿಯಾಗಿದ್ದಾರೆ.

Recommended Video

ವರ್ಕ್ ಫ್ರಂ ಹೋಂ‌ನಿಂದ ಆಗ್ತಿರೋ ಸಮಸ್ಯೆಗಳು ಅಷ್ಟಿಷ್ಟಲ್ಲ... | Oneindia Kannada

ಕೊರೊನಾ ಕೇಸ್‌ಗಳು ಹೆಚ್ಚಾಗಲು ಲಾಕ್‌ಡೌನ್ ಸಡಿಲಿಕೆ ಪ್ರಮುಖ ಕಾರಣವಾಗಿದೆ. ಅಂತರ ರಾಜ್ಯ, ಅಂತರ ಜಿಲ್ಲಾ ಪ್ರಯಾಣಕ್ಕೆ ಅನುಮತಿ ಸಿಕ್ಕಿದೆ. ಬಸ್‌ಗಳ, ಖಾಸಗಿ ವಾಹನಗಳ ಓಡಾಟ ನಡೆಯುತ್ತಿದೆ. ಹೀಗಾಗಿ, ಸೋಂಕು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.

ನಂಜನಗೂಡಿನ ಜುಬಿಲೆಂಟ್ ಕಂಪನಿಯೂ, ಕೇಂದ್ರ ಸರ್ಕಾರದ ರಾಜಕಾರಣವೂ!ನಂಜನಗೂಡಿನ ಜುಬಿಲೆಂಟ್ ಕಂಪನಿಯೂ, ಕೇಂದ್ರ ಸರ್ಕಾರದ ರಾಜಕಾರಣವೂ!

ದೇಶದಲ್ಲಿ ಸೋಂಕಿತರ ಸಂಖ್ಯೆ 1,18,447ಕ್ಕೆ ಏರಿಕೆಯಾಗಿದೆ. ಇದರಲ್ಲಿ 48,533 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆದರೆ, ಇನ್ನೂ 66,330 ಸೋಂಕಿತರು ಇದ್ದಾರೆ. ಗುಣಮುಖರಾಗಿ ಆಸ್ಪತ್ರೆಯಿಂದ ಹೊರಗೆ ಬರುವವರ ಸಂಖ್ಯೆಗಿಂತ, ಹೊಸ ಸೋಂಕಿತರು ಹೆಚ್ಚಾಗಿದ್ದಾರೆ.

6088 New Coronavirus Cases Reported In India Last 24 Hours

ಮಹಾರಾಷ್ಟ್ರ ಅತಿ ಹೆಚ್ಚು ಸೋಂಕಿತರನ್ನು ಹೊಂದಿದೆ. ಬರೋಬ್ಬರಿ 41,642 ಮಂದಿ ಸೋಂಕಿಗೆ ಒಳಗಾಗಿದ್ದಾರೆ. 1,454 ಜನರು ಕೊರೊನಾಗೆ ಸಾಪನಪ್ಪಿದ್ದಾರೆ. ನಿನ್ನೆ ಎರಡು ಸಾವಿರ ಪಾಸಿಟಿವ್ ಕೇಸ್‌ಗಳು ಕಂಡು ಬಂದಿದೆ. ಮಹಾರಾಷ್ಟ್ರದ ನಂತರ ಸ್ಥಾನದಲ್ಲಿ ತಮಿಳುನಾಡು ಇದೆ. 13,967 ಮಂದಿ ಸೋಂಕಿತರು ಇದ್ದಾರೆ. 95 ಮಂದಿ ಮೃತರಾಗಿದ್ದಾರೆ.

ಕರ್ನಾಟಕಕ್ಕೆ ಬಂದರೆ, 1,605 ಮಂದಿಗೆ ಸೋಂಕು ತಗುಲಿದ್ದು, ಇದರಲ್ಲಿ 571 ಮಂದಿ ಗುಣಮುಖರಾಗಿದ್ದಾರೆ. 41 ಜನರು ಮರಣ ಹೊಂದಿದ್ದಾರೆ. ಮುಂಬೈನಿಂದ ರಾಜ್ಯಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದ್ದು, ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ.

English summary
Coronavirus in India: 6088 new coronavirus cases, 148 deaths reported in India last 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X