ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂದೇ ಭಾರತ್ ಮಿಷನ್; ದೇಶಕ್ಕೆ ವಾಪಸ್ ಆದವರು ಎಷ್ಟು ಜನ?

|
Google Oneindia Kannada News

ನವದೆಹಲಿ, ಮೇ 12 : ಲಾಕ್ ಡೌನ್ ಪರಿಣಾಮ ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ವಾಪಸ್ ಕರೆತರಲು ಸರ್ಕಾರ 'ವಂದೇ ಭಾರತ್ ಮಿಷನ್' ಆರಂಭ ಮಾಡಿತ್ತು. ಇದುವರೆಗೂ ದೇಶಕ್ಕೆ 6037 ಜನರು ವಾಪಸ್ ಆಗಿದ್ದಾರೆ.

ಏರ್ ಇಂಡಿಯಾದ 42 ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ 24 ಒಟ್ಟು 64 ವಿಮಾನಗಳು ವಂದೇ ಭಾರತ್ ಮಿಷನ್ ಅಡಿ ಹಾರಾಟ ನಡೆಸಿವೆ. ಮೇ 7ರಿಂದ ಇದುವರೆಗೂ 6037 ಜನರನ್ನು ಭಾರತಕ್ಕೆ ವಾಪಸ್ ಕರೆ ತಂದಿವೆ.

ವಿದೇಶದಲ್ಲಿರುವ ಭಾರತೀಯರು ವಾಪಸ್; ವಿಮಾನದ ದರ ಎಷ್ಟು?ವಿದೇಶದಲ್ಲಿರುವ ಭಾರತೀಯರು ವಾಪಸ್; ವಿಮಾನದ ದರ ಎಷ್ಟು?

ವಂದೇ ಭಾರತ್ ಮಿಷನ್ ಅಡಿ ಒಟ್ಟು 12 ದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ವಾಪಸ್ ಕರೆತರಲಾಗುತ್ತಿದೆ. ರಾಯಭಾಯ ಕಚೇರಿ ಮೂಲಕ ಭಾರತಕ್ಕೆ ಬರಲು ಜನರು ನೋಂದಣಿ ಮಾಡಿಕೊಂಡಿದ್ದರು. ತುರ್ತು ಅಗತ್ಯ ಇರುವವರನ್ನು ಮೊದಲು ಕರೆತರಲಾಗಿದೆ.

ವಂದೇ ಭಾರತ್ ಮಿಷನ್: ಲಂಡನ್ To ಬೆಂಗಳೂರು ಯಶಸ್ವಿವಂದೇ ಭಾರತ್ ಮಿಷನ್: ಲಂಡನ್ To ಬೆಂಗಳೂರು ಯಶಸ್ವಿ

 6037 Indians Brought Back Under Vande Bharat Mission

ಅಮೆರಿಕ, ಯುಕೆ, ಬಾಂಗ್ಲಾದೇಶ, ಸಿಂಗಪುರ, ಸೌದಿ ಅರೇಬಿಯಾ, ಕುವೈತ್, ಫಿಲಿಫೈನ್ಸ್, ಯುಎಇ ಮತ್ತು ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳಿಂದ 14,800 ಜನರನ್ನು ಮೊದಲ ಹಂತದಲ್ಲಿ ಕರೆತರಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆ ಹೇಳಿದೆ.

Fact Check: 10 ದಿನಗಳ ಕಾಲ ಭಾರತೀಯ ಸೈನ್ಯದ ವಶಕ್ಕೆ ಮುಂಬೈ ನಗರ?Fact Check: 10 ದಿನಗಳ ಕಾಲ ಭಾರತೀಯ ಸೈನ್ಯದ ವಶಕ್ಕೆ ಮುಂಬೈ ನಗರ?

ವಿದೇಶದಿಂದ ಬರುವವರು ಟಿಕೆಟ್‌ಗೆ ಅವರೇ ಹಣವನ್ನು ಪಾವತಿ ಮಾಡಬೇಕು. ಭಾರತದ ವಿವಿಧ ನಗರಕ್ಕೆ ಬರುವ ಅವರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದೆ. ಆರೋಗ್ಯ ತಪಾಸಣೆ ನಡೆಸಿಯೇ ಎಲ್ಲರನ್ನೂ ಕರೆತರಲಾಗುತ್ತಿದೆ.

ಕೇಂದ್ರ ಸರ್ಕಾರ ಮೇ 16 ರಿಂದ 22ರ ತನಕ 2ನೇ ಹಂತದ ವಂದೇ ಭಾರತ ಮಿಷನ್ ಕಾರ್ಯಾಚರಣೆ ನಡೆಸಲಿದೆ. 31 ದೇಶಗಳಿಂದ 149 ವಿಮಾನಗಳಲ್ಲಿ ಜನರು ಭಾರತಕ್ಕೆ ಆಗಮಿಸಲಿದ್ದಾರೆ.

English summary
Flights operated by Air India and Air India Express under Vande Bharat Mission have brought back 6,037 Indians since May 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X