ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವರ್ಷದಂದು ಭಾರತದಲ್ಲಿ 60,000 ಶಿಶುಗಳ ಜನನ; ಯುನಿಸೆಫ್

|
Google Oneindia Kannada News

ನವದೆಹಲಿ, ಜನವರಿ 01: 60,000 ಶಿಶುಗಳ ಜನನದೊಂದಿಗೆ ಭಾರತ 2021ರ ಹೊಸ ವರ್ಷದಂದು ವಿಶ್ವದಲ್ಲೇ ಅತಿ ಹೆಚ್ಚು ಜನನ ಸಂಖ್ಯೆಯನ್ನು ದಾಖಲಿಸಲಿದೆ. ಆದರೆ 2020ರ ಹೊಸ ವರ್ಷಕ್ಕೆ ಹೋಲಿಸಿದರೆ, 7,390 ಕಡಿಮೆ ಶಿಶುಗಳು ಜನಿಸಿವೆ ಎಂದು ಯುನಿಸೆಫ್ ಮಾಹಿತಿ ನೀಡಿದೆ.

ಈ ವರ್ಷದ ಜನವರಿ 1ರಂದು ಚೀನಾ ಭಾರತಕ್ಕಿಂತ ಅರ್ಧದಷ್ಟು ಕಡಿಮೆ ಜನನ ಸಂಖ್ಯೆ ಹೊಂದಿದ್ದು, 35,615 ಶಿಶುಗಳು ಜನಿಸಿವೆ. ವಿಶ್ವದಾದ್ಯಂತ ಈ ದಿನ 371504 ಶಿಶುಗಳು ಜನಿಸುವುದಾಗಿ ಯುನಿಸೆಫ್ ಅಂದಾಜಿಸಿದೆ. ಈ ಪೈಕಿ ಹತ್ತು ದೇಶಗಳಲ್ಲಿ 52% ಜನನ ಪ್ರಮಾಣ ಇರಲಿದೆ. ಈ ವರ್ಷ ವಿಶ್ವದಾದ್ಯಂತ 84 ವರ್ಷದ ಜೀವಿತಾವಧಿಯೊಂದಿಗೆ 140 ದಶಲಕ್ಷ ಮಕ್ಕಳು ಜನಿಸುವ ಸಾಧ್ಯತೆಯಿರುವುದಾಗಿ ತಿಳಿಸಿದೆ.

ಉತ್ತರ ಪ್ರದೇಶದಲ್ಲಿ 2 ವರ್ಷದ ಮಗುವಿಗೆ ರೂಪಾಂತರಿ ಕೊರೊನಾ ಸೋಂಕುಉತ್ತರ ಪ್ರದೇಶದಲ್ಲಿ 2 ವರ್ಷದ ಮಗುವಿಗೆ ರೂಪಾಂತರಿ ಕೊರೊನಾ ಸೋಂಕು

ಇಂದು ಜನಿಸಿದ ಮಕ್ಕಳು, ಭಿನ್ನವಾಗಿರುವ ಜಗತ್ತಿಗೆ ಬರುತ್ತಿದ್ದಾರೆ. ಹೊಸ ವರ್ಷ ಹೊಸ ಅವಕಾಶವನ್ನು ತರುತ್ತಿದೆ. ಸಾಂಕ್ರಾಮಿಕ ರೋಗ, ಆರ್ಥಿಕ ಹಿನ್ನಡೆ, ಬಡತನ ಹಾಗೂ ಅಸಮಾನತೆಯನ್ನು ಇಡೀ ಜಗತ್ತೇ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಯುನಿಸೆಫ್ ಅಗತ್ಯ ಹೆಚ್ಚಿದೆ ಎಂದು ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಟಾ ಫೋರ್ ತಿಳಿಸಿದ್ದಾರೆ. ಈ ವರ್ಷ ಯುನಿಸೆಫ್ 75ನೇ ವಾರ್ಷಿಕೋತ್ಸವವನ್ನೂ ಆಚರಿಸಿಕೊಳ್ಳಲಿದೆ.

60000 Babies Born In India On New Years Day Said UNICEF

ಭಾರತದಲ್ಲಿ 2021ರಲ್ಲಿ ಜನಿಸಿದ ಶಿಶುಗಳ ಜೀವಿತಾವಧಿ 80.9 ವರ್ಷಗಳಾಗಿದ್ದು, ಇದು ಜಾಗತಿಕ ಸರಾಸರಿಗಿಂತ ಮೂರು ವರ್ಷ ಕಡಿಮೆಯಾಗಿದೆ ಎಂದು ತಿಳಿಸಿದೆ.

English summary
With the birth of nearly 60,000 babies, India will see the highest number of births on New Year’s Day 2021 across the globe said unicef,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X