ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಗಡಿ ಭಾಗದಲ್ಲಿ 60,000 ಸೇನೆ ನಿಯೋಜನೆ ಮಾಡಿದ ಚೀನಾ

|
Google Oneindia Kannada News

ನವದೆಹಲಿ, ಜನವರಿ 04: ಪೂರ್ವ ಲಡಾಖ್‌ನಲ್ಲಿ ತೀವ್ರವಾದ ಚಳಿಗಾಲದಲ್ಲಿಯೂ ಸಹ ಚೀನಾವು ಸುಮಾರು 60,000 ಸೈನಿಕರನ್ನು ಗಡಿ ನಿಯಂತ್ರಣ ರೇಖೆಯ (ಎಲ್‌ಎಸಿ) ಯ ಉದ್ದಕ್ಕೂ ನಿಯೋಜನೆ ಮಾಡಿದೆ. ಈ ನಡುವೆ ಚೀನಾದ ಭಾರತವೂ ಕೂಡಾ ಲಡಾಖ್‌ನಲ್ಲಿ ತನ್ನ ಸೇನಾ ಬಲವನ್ನು ಹೆಚ್ಚು ಮಾಡಿದೆ.

ಚೀನಾ ಸೇನೆಯು ಲಡಾಖ್‌ನ ವಿರುದ್ಧ ದಿಕ್ಕಿನಲ್ಲಿ ಇರುವ ಪ್ರದೇಶದಿಂದ ಬೇಸಿಗೆ ತರಬೇತಿ ಪಡೆಗಳನ್ನು ಹಿಂದಕ್ಕೆ ಪಡೆದುಕೊಂಡಿದೆ. ಆದರೆ ಇನ್ನೂ ಅಧಿಕ ಅಂದರೆ 60,000 ಸೈನಿಕರನ್ನು ಲಡಾಖ್‌ ಗಡಿ ಭಾಗದಲ್ಲಿ ನಿಯೋಜನೆ ಮಾಡಿದೆ. ಚೀನಾವು ಯಾವುದೋ ಸಂಚು ಮಾಡಿ ಈ ರೀತಿ ಭಾರೀ ಪ್ರಮಾಣದಲ್ಲಿ ಸೇನೆಯನ್ನು ನಿಯೋಜನೆ ಮಾಡಿದೆ ಎಂದು ಮೂಲಗಳು ತಿಳಿಸಿದೆ.

 ಗಾಲ್ವಾನ್‌ ಕಣಿವೆಯಲ್ಲಿ ಚೀನಾದ ಬಾವುಟ: ಮೋದಿ ಸರ್ಕಾರದ ವಿರುದ್ಧ ರಾಹುಲ್‌ ಕಿಡಿ ಗಾಲ್ವಾನ್‌ ಕಣಿವೆಯಲ್ಲಿ ಚೀನಾದ ಬಾವುಟ: ಮೋದಿ ಸರ್ಕಾರದ ವಿರುದ್ಧ ರಾಹುಲ್‌ ಕಿಡಿ

ಭಾರತೀಯ ಸೇನೆಯು ಲಡಾಖ್ ಥಿಯೇಟರ್‌ನಲ್ಲಿ 14 ಕಾರ್ಪ್ಸ್ ಅನ್ನು ಬಲಪಡಿಸಲು ತನ್ನ ಭಯೋತ್ಪಾದನೆ ನಿಗ್ರಹ ರಾಷ್ಟ್ರೀಯ ರೈಫಲ್ಸ್ ಯೂನಿಫಾರ್ಮ್ ಫೋರ್ಸ್ ರಚನೆಗೆ ಮುಂದಾಗಿದೆ ಎಂದು ಕೂಡಾ ವರದಿ ಆಗಿದೆ. ಈ ನಿಟ್ಟಿನಲ್ಲಿ ಭಾರತೀಯ ಸೇನೆಯೂ ಕೂಡಾ ಲಡಾಖ್‌ನಲ್ಲಿ ಸೇನಾ ಬಲವನ್ನು ಅಧಿಕ ಮಾಡಿದೆ. ಭಾರತೀಯ ಪಡೆಯು ಯಾವುದೇ ಅಗತ್ಯ ಬಂದಲ್ಲಿ ಸೇನೆಯನ್ನು ಇನ್ನಷ್ಟು ಅಧಿಕ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

60,000 Chinese troops deployed near Indian border

ಗಡಿ ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚು ಪ್ರದೇಶಗಳಲ್ಲಿ ಬದಲಾವಣೆಯನ್ನು ಮಾಡಲು ಚೀನಿಯರ ಏಕಪಕ್ಷೀಯ ಮತ್ತು ಪ್ರಚೋದನಕಾರಿ ಕ್ರಮಗಳಿಗೆ ನಾವು ಕೂಡಾ ತಕ್ಕ ಉತ್ತರ ನೀಡಿದ್ದೇವೆ ಎಂದು ರಕ್ಷಣಾ ಸಚಿವಾಲಯವು ತನ್ನ ವರ್ಷಾಂತ್ಯದ ವಿಮರ್ಶೆಯಲ್ಲಿ ಹೇಳಿದೆ. ಇನ್ನು ಈ ಗಡಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಉಭಯ ದೇಶಗಳ ಮಿಲಿಟರಿಗಳು ವಿವಿಧ ಹಂತಗಳಲ್ಲಿ ಮಾತುಕತೆಯಲ್ಲಿ ತೊಡಗಿವೆ.

ಇನ್ನು ಹಲವಾರು ಬಾರಿ ಮಾತುಕತೆ ನಡೆಸಿದ ಬಳಿಕ ಹಲವಾರು ಪ್ರದೇಶಗಳಿಂದ ಸೇನೆಯನ್ನು ಹಿಂದಕ್ಕೆ ಪಡೆಯುವ ನಿರ್ಧಾರಕ್ಕೆ ಬರಲಾಗಿದೆ. ಆದರೆ ಈ ನಡುವೆ ಸೇನೆಯನ್ನು ಹಿಂದಕ್ಕೆ ಪಡೆಯಬೇಕಾದ ಪ್ರದೇಶದಲ್ಲಿಯೇ ಉಭಯ ರಾಷ್ಟ್ರಗಳು ಸೇನೆಯನ್ನು ಹೆಚ್ಚಳ ಮಾಡಿದೆ. ಚೀನಾವು ಸುಮಾರು 60,000 ಸೈನಿಕರನ್ನು ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ನಿಯೋಜನೆ ಮಾಡುವ ಮೂಲಕ ಬೆದರಿಕೆಯೊಡ್ಡುವ ಪ್ರಯತ್ನ ಮಾಡಿದೆ.

ಇನ್ನು ಭಾರತವು ಚೀನಾದೊಂದಿಗೆ ಸದ್ಯ ಶಾಂತಿಯುತವಾದ ಮಾತುಕತೆಯನ್ನು ಮುಂದುವರಿಸಿದೆ. ಚೀನಾ ಒಂದೆಡೆ ಶಾಂತಿಯುತ ಮಾತುಕತೆಯ ಮಧ್ಯೆ ಗಡಿ ಭಾಗದಲ್ಲಿ ಸೇನಾ ಬಲವನ್ನು ಅಧಿಕ ಮಾಡಿದೆ. ಭಾರತ ಚೀನಾ ಗಡಿ ಪ್ರದೇಶದಲ್ಲಿ ರಸ್ತೆಗಳು, ಸುರಂಗಗಳು, ನಾಲ್ಕು ಆಯಕಟ್ಟಿನ ರೈಲು ಮಾರ್ಗಗಳು, ಬ್ರಹ್ಮಪುತ್ರದಾದ್ಯಂತ ಹೆಚ್ಚುವರಿ ಸೇತುವೆಗಳು, ನಿರ್ಣಾಯಕ ಭಾರತ-ಚೀನಾ ಗಡಿಯಲ್ಲಿ ಸೇತುವೆಗಳ ಮೇಲ್ದರ್ಜೆಗೇರಿಸುವಿಕೆ ಸೇರಿದಂತೆ ಉತ್ತರದ ಗಡಿಯಲ್ಲಿನ ಮೂಲಸೌಕರ್ಯಗಳ ಉನ್ನತೀಕರಣ ಮತ್ತು ಅಭಿವೃದ್ಧಿಯನ್ನು ಸಮಗ್ರ ರೀತಿಯಲ್ಲಿ ಮಾಡಲಾಗುತ್ತಿದೆ.

ಭಾರತವೇ ಟಾರ್ಗೆಟ್: ಪ್ಯಾಂಗೊಂಗ್ ತ್ಸೋ ಗಡಿಯಲ್ಲಿ ಸೇತುವೆ ನಿರ್ಮಿಸಿದ ಚೀನಾ!ಭಾರತವೇ ಟಾರ್ಗೆಟ್: ಪ್ಯಾಂಗೊಂಗ್ ತ್ಸೋ ಗಡಿಯಲ್ಲಿ ಸೇತುವೆ ನಿರ್ಮಿಸಿದ ಚೀನಾ!

ಗಡಿ ಭಾಗದಲ್ಲಿ ಚೀನಾದಿಂದ ಹಲವು ಕಸರತ್ತು

ಚೀನಾವು ಭಾರತ ಚೀನಾ ಗಡಿ ಮಾತ್ರವಲ್ಲದೇ ಬೇರೆ ಬೇರೆ ದೇಶಗಳ ಗಡಿ ಭಾಗವನ್ನು ವಿಸ್ತರಣೆ ಮಾಡುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲಿದೆ. ಕೆಲ ದಿನಗಳ ಹಿಂದೆ ಗಡಿ ಪ್ರದೇಶದಲ್ಲಿನ ಗ್ರಾಮಗಳ ಹೆಸರುಗಳನ್ನು ಬದಲಾವಣೆ ಮಾಡಲು ಚೀನಾ ಮುಂದಾಗಿತ್ತು. ಗಡಿ ಪ್ರದೇಶ ಗ್ರಾಮಗಳ ಹೆಸರನ್ನು ಬದಲಾವಣೆ ಮಾಡಿ ತನ್ನ ದೇಶಕ್ಕೆ ಸೇರ್ಪಡೆ ಮಾಡುವ ಕುತಂತ್ರವನ್ನು ಚೀನಾ ಮಾಡಿತ್ತು. ಇದನ್ನು ಭಾರತ ಸರ್ಕಾರವು ತೀವ್ರವಾಗಿ ವಿರೋಧ ಮಾಡಿತ್ತು. ಇನ್ನು ಚೀನಾವು ಅರುಣಾಚಲ ಪ್ರದೇಶವು ತನ್ನ ನಿಯಂತ್ರಣದಲ್ಲಿರುವ ದಕ್ಷಿಣ ಟಿಬೆಟ್‌ ಎಂದು ಕೂಡಾ ಹೇಳಿಕೊಂಡಿದೆ.

ಹಾಗೆಯೇ ಅಲ್ಲಿನ 15 ಸ್ಥಳಗಳ ಹೆಸರನ್ನು ಚೀನಾ ಬದಲಾವಣೆ ಮಾಡಿದೆ. ಅರುಣಾಚಲ ಪ್ರದೇಶವನ್ನು ಚೀನಾ ಭೂಪಟ 'ಝಂಗ್ನಾನ್' (ದಕ್ಷಿಣ ಟಿಬೆಟ್) ಎಂದೇ ತೋರಿಸುತ್ತದೆ. ಝಂಗ್ನಾನ್‌ನ 15 ಪ್ರದೇಶಗಳ ಹೆಸರನ್ನು ಚೀನೀ ಭಾಷೆಯಲ್ಲಿ, ಟಿಬೆಟಿಯನ್ ಮತ್ತು ರೋಮನ್ ಅಕ್ಷರಗಳಲ್ಲಿ ಉನ್ನತೀಕರಿಸಿದ್ದೇವೆ ಎಂದು ಚೀನಾ ನಾಗರಿಕ ವ್ಯವಹಾರಗಳ ಸಚಿವಾಲಯ ಹೇಳಿಕೊಂಡಿದೆ. ಇನ್ನು 2022ರ ಹೊಸ ವರ್ಷದ ಮೊದಲ ದಿನದಂದು ಚೀನಾವು ಗಾಲ್ವಾನ್‌ನಲ್ಲಿ ತನ್ನ ಬಾವುಟವನ್ನು ಹಾರಿಸುವ ದೃಶ್ಯವು ವೈರಲ್‌ ವಿಡಿಯೋದಲ್ಲಿ ಕಂಡು ಬಂದಿದೆ. ಪ್ಯಾಂಗೊಂಗ್ ತ್ಸೋ ಗಡಿಯಲ್ಲಿ ಚೀನಾವು ಸೇತುವೆಯನ್ನು ನಿರ್ಮಾಣ ಮಾಡಿದೆ. (ಒನ್‌ಇಂಡಿಯಾ ಸುದ್ದಿ)

Recommended Video

ನನ್ನ ಕೊಲೆ ಮಾಡಿಸೋಕೆ ಸಂಚು - ರೆಹಮ್ ಖಾನ್ | Oneindia Kannada

English summary
60,000 Chinese troops deployed near Indian border, Indian Army also enhances troops in Ladakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X