• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶತಮಾನದ ಸುದೀರ್ಘ ಚಂದ್ರಗ್ರಹಣ: ತಿಳಿಯಬೇಕಾದ 6 ಸಂಗತಿ

|
   ಜುಲೈ 27ರಂದು ಸಂಭವಿಸಲಿರುವ ಚಂದ್ರಗ್ರಹಣದ ಬಗ್ಗೆ ತಿಳಿಯಲೇಬೇಕಾದ 6 ಸಂಗತಿಗಳು | Oneindia Kannada

   ಈ ವರ್ಷದ ಎರಡನೇ ಚಂದ್ರಗ್ರಹಣವನ್ನು ನೋಡಲು ಜಗತ್ತಿನೆಲ್ಲೆಡೆ ಜನರು ಉತ್ಸುಕರಾಗಿದ್ದಾರೆ. ಈ ಶತಮಾನದ ಸುದೀರ್ಘ ಚಂದ್ರಗ್ರಹಣ ಎಂಬ ಕಾರಣಕ್ಕೆ ಈ ಗ್ರಹಣದ ಬಗ್ಗೆ ಕುತೂಹಲ ಹೆಚ್ಚಿದೆ.

   ಇದೇ ವರ್ಷದ ಜನವರಿ 31 ರಂದು ಆಕಾಶದಲ್ಲಿ ಚಮಾತ್ಕಾರವೊಂದು ನಡೆದಿತ್ತು. ಸೂಪರ್ ಬ್ಲ್ಯೂ ಬ್ಲಡ್ ಮೂನ್ ಅನ್ನು ಜಗತ್ತಿನಾದ್ಯಂತ ಜನರು ಕಣ್ತುಂಬಿಸಿಕೊಂಡಿದ್ದರು. ಬೆಳ್ಳಿ ಬಟ್ಟಲಿನಂತೆ ಆಗಸದಲ್ಲಿ ತೇಲಾಡುವ ಚಂದಮಾಮ ಆ ದಿನ ನಾಚಿ ಕೆಂಪಾಗಿದ್ದ!

   ಜುಲೈ 27ಕ್ಕೆ ಮಕರದಲ್ಲಿ ಕೇತುಗ್ರಸ್ತ ಚಂದ್ರ ಗ್ರಹಣ, ಉಪಯುಕ್ತ ಮಾಹಿತಿ

   ವಾತಾವರಣದಲ್ಲಿನ ಧೂಳಿನ ಕಣಗಳಿಂದಾಗಿ ಗ್ರಹಣದ ವೇಳೆ ಚಂದ್ರನ ಬಣ್ಣ ರಕ್ತವರ್ಣಕ್ಕೆ ತಿರುಗಿತ್ತು. ಭೂಮಿಯ ನೆರಳು ಚಂದ್ರ ಮೇಲೆ ಬೀಳುವುದರಿಂದ ಚಂದ್ರ, ಕಾಂತಿ ಕಳೆದುಕೊಂಡು ಹಾಗೆ ಕಂಡಿದ್ದ. ಈ ವಿಸ್ಮಯವಂತೂ ಖಗೋಳಶಾಸ್ತ್ರಜ್ಞರಿಗೆ ರಸದೌತಣವೆನ್ನಿಸಿತ್ತು. ಇದೀಗ ಜು.27 ರಂದು ಸಂಭವಿಸಲಿರುವ ಚಂದ್ರಗ್ರಹಣವೂ ರಕ್ತ ಚಂದ್ರಗ್ರಹಣವಾಗಿದ್ದು, ಚಂದ್ರ ಕೆಂಪಾಗಿ ಗೋಚರಿಸಲಿದ್ದಾನೆ.

   ಶತಮಾನದ ಸುದೀರ್ಘ ಚಂದ್ರಗ್ರಹಣ

   ಶತಮಾನದ ಸುದೀರ್ಘ ಚಂದ್ರಗ್ರಹಣ

   ಜುಲೈ 27, ಶುಕ್ರವಾರದಂದು ಸಂಭವಿಸುವ ಈ ಚಂದ್ರಗ್ರಹಣ 21ನೇ ಶತಮಾನದ ಸುದೀರ್ಘ ಚಂದ್ರಗ್ರಹಣವೂ ಹೌದು! 2001 ರಿಂದ 2100 ರ ಅವಧಿಯಲ್ಲಿ ಇಂಥ ಗ್ರಹಣ ಸಂಭವಿಸಿಲ್ಲ, ಸಂಭವಿಸೋಲ್ಲ! 1 ಗಂಟೆ 42 ನಿಮಿಷ 57 ಸೆಕೆಂಡ್ ನಷ್ಟು ದೀರ್ಘ ಕಾಲ ಖಗ್ರಾಸ ಗ್ರಹಣ ಸಂಭವಿಸಲಿದೆ. ಒಟ್ಟು ಸುಮಾರು 3:45 ನಿಮಿಷಗಳಷ್ಟು ದೀರ್ಘಕಾಲ ಈ ಗ್ರಹಣ ಕಾಣಿಸಿಕೊಳ್ಳಲಿದೆ.

   ಖಗೋಳದಲ್ಲಿ ಸಂಭವಿಸಲಿದೆ ಮತ್ತೊಂದು ವಿಸ್ಮಯ!

   ಖಗೋಳದಲ್ಲಿ ಸಂಭವಿಸಲಿದೆ ಮತ್ತೊಂದು ವಿಸ್ಮಯ!

   ಸುದೀರ್ಘ ಚಂದ್ರಗ್ರಹಣದೊಟ್ಟಿಗೆ ಖಗೋಳದಲ್ಲಿ ಇನ್ನೊಂದು ವಿಸ್ಮಯ ಸಂಭವಿಸಲಿದೆ. ಈ ದಿನ ಮಂಗಳ ಗ್ರಹ ಭೂಮಿಗೆ ಅತೀ ಹತ್ತಿರ ಬರಲಿದ್ದು, ಸೂರ್ಯ ಮತ್ತು ಮಂಗಳ ಗ್ರಹ ಒಂದೇ ರೇಖೆಯಲ್ಲಿ ಕಾಣಿಸಿಕೊಳ್ಳಲಿವೆ. ದಶಕದ ನಂತರ ಭೂಮಿಗೆ ಅತೀ ಹತ್ತಿರದಲ್ಲಿ ಮಂಗಳ ಗ್ರಹ ಕಾಣಿಸುವುದರಿಂದ ಆಕಾಶದಲ್ಲಿ ಇದು ಅತ್ಯಂತ ದೊಡ್ಡದಾಗಿ ಕಾಣಿಸಿಕೊಳ್ಳುತ್ತದೆ.

   ಹನ್ನೆರಡು ರಾಶಿಗಳ ಮೇಲೆ ಜುಲೈ 27ರ ಚಂದ್ರ ಗ್ರಹಣದ ಫಲಾಫಲ

   ಮರೆಯಾಗಲಿದ್ದಾನೆ ಚಂದ್ರ

   ಮರೆಯಾಗಲಿದ್ದಾನೆ ಚಂದ್ರ

   2001 ರಿಂದ ಇಲ್ಲಿಯವರೆಗೆ ಇದು 17ನೇ ಸಂಪೂರ್ಣ(Total eclipse) ಚಂದ್ರಗ್ರಹಣ. ಈ ಶತಮಾನ ಇನ್ನೂ 85 ಸಂಪೂರ್ಣ ಚಂದ್ರಗ್ರಹಣವನ್ನು ಕಾಣಬೇಕಿದೆ. ಈ ಗ್ರಹಣದಲ್ಲಿ ಭೂಮಿಯ ನೆರಳು ಬಿದ್ದು ಚಂದ್ರ ಸಂಪೂರ್ಣವಾಗಿ ಮರೆಯಾಗುತ್ತಾನೆ. 103 ನಿಮಿಷಗಳ ಕಾಲ ಇದೇ ಸ್ಥಿತಿಯಲ್ಲಿ ಚಂದ್ರ ಇರುತ್ತಾನೆ. ಇದೇ ರೀತಿಯ ಚಂದ್ರಗ್ರಹಣ ಇನ್ನುಮುಂದೆ 2036 ರ ಆಗಸ್ಟ್ 6 ಅಥವಾ 7 ಸಂಭವಿಸಲಿದೆ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ.

   ಗ್ರಹಣ ಸ್ಪರ್ಶ ಯಾವಾಗ?

   ಗ್ರಹಣ ಸ್ಪರ್ಶ ಯಾವಾಗ?

   ಗ್ರಹಣ ಸ್ಪರ್ಶ ಕಾಲ ರಾತ್ರಿ 11.54, ಗ್ರಹಣ ಮಧ್ಯಕಾಲ ಮಧ್ಯರಾತ್ರಿ 1.52, ಗ್ರಹಣ ಮೋಕ್ಷ ಕಾಲ ರಾತ್ರಿ 3.49. ಭಾರತದಲ್ಲೂ ಚಂದ್ರಗ್ರಹಣದ ಆಚರಣೆಯಿದ್ದು, ಆಷಾಢ ಮಾಸದ ಶುದ್ಧ ಪೌರ್ಣಿಮೆಯಂದು ಈ ಗ್ರಹಣ ಸಂಭವಿಸಲಿದ್ದು, ಇದು ಕೇತುಗ್ರಸ್ತ ಚಂದ್ರಗ್ರಹಣವಾಗಿದೆ.

   ಬಾನಂಗಳದಲ್ಲಿ ರಕ್ತ ಚಂದ್ರ!

   ಬಾನಂಗಳದಲ್ಲಿ ರಕ್ತ ಚಂದ್ರ!

   ರಕ್ತ ವರ್ಣದಲ್ಲಿ ಕಾಣಿಸಿಕೊಳ್ಳುವ ಚಂದ್ರನನ್ನು ಬರಿಗಣ್ಣಿನಲ್ಲಿ ವೀಕ್ಷಿಸಬಹುದು. ಭಾರತದಲ್ಲಿ ಎಲ್ಲೆಡೆಯೂ ಚಂದ್ರಗ್ರಹಣ ಕಾಣಸಿಗಲಿದ್ದು, ಮೋಡ, ಮಳೆಯ ಅಡ್ಡಿಯಿಲ್ಲವೆಂದರೆ ಈ ಖಗೋಳ ವಿಸ್ಮಯವನ್ನು ಎಲ್ಲರೂ ಕಣ್ತುಂಬಿಸಿಕೊಳ್ಳಬಹುದು.

   ಜವಾಹರಲಾಲ ನೆಹರು ತಾರಾಲಯದಲ್ಲಿ ವೀಕ್ಷಣೆ

   ಜವಾಹರಲಾಲ ನೆಹರು ತಾರಾಲಯದಲ್ಲಿ ವೀಕ್ಷಣೆ

   ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದಲ್ಲಿ ಚಂದ್ರಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡದಲಾಗುವುದು ಎಂದು ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಜಿ. ಗಲಗಲಿ ಹೇಳಿದ್ದಾರೆ. ಬೆಳಗ್ಗಿನ ಜಾವ 3.49 ರವರೆಗೂ ಕಾಣಸಿಗುವ ಈ ಗ್ರಹಣವನ್ನು ತಪ್ಪದೇ ವೀಕ್ಷಿಸಿ. ಏಕೆಂದರೆ ಇಂಥ ಗ್ರಹಣವನ್ನು ನೋಡಲು ಮತ್ತೆ 2036 ರವರೆಗೆ ಸಾಧ್ಯವಿಲ್ಲ!

   English summary
   Don't miss longest total Lunar eclipse 2018 on July 27. This is the longest lunar eclipse of the century. Keep an eye on 'Blood moon' on 27th July. 6 things to know Red Blood Moon.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X