ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡದಲ್ಲಿ 6 ತಿಂಗಳ ಮಗು ವಿರುದ್ಧ ಪ್ರಕರಣ ದಾಖಲು!

|
Google Oneindia Kannada News

ಉತ್ತರಕಾಶಿ, ಏಪ್ರಿಲ್ 24: ಉತ್ತರಾಖಂಡದಲ್ಲಿ ಆರು ತಿಂಗಳ ಮಗು ವಿರುದ್ಧ ಪ್ರಕರಣ ದಾಖಲಾಗಿದೆ.

ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಿದ್ದರೂ, ಅದನ್ನು ಉಲ್ಲಂಘಿಸಿ ಇತರರ ಜೀವಕ್ಕೆ ಅಪಾಯವನ್ನುಂಟುಮಾಡಿದ ಆರೋಪವನ್ನು ಮಗುವಿನ ಮೇಲೆ ಹೊರಿಸಲಾಗಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಆಶಿಶ್ ಚೌವ್ಹಾಣ್ ,ಮಕ್ಕಳ ಮೇಲೆ ಪ್ರಕರಣ ದಾಖಲಿಸಿದ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

6 Month Old Baby Booked In Uttarakhand For Not Following Quarantine

ಹರಿಯಾಣದಲ್ಲಿ ಕೆಲಸ ಹುಡುಕಿಕೊಂಡು ಹೋಗಿದ್ದ ಚಿನ್ಯಾಲಿಸೂರ್‌ನ ಕುಟುಂಬವೊಂದರ ಇಬ್ಬರು ಮಕ್ಕಳು ಮತ್ತಿತರು ಸೇರಿ 47 ಮಂದಿ ಜಿಲ್ಲೆಗೆ ವಾಪಸಾಗಿದ್ದರು. ಇದನ್ನು ಗಮನಿಸಿದ್ದ ಗಿರೀಶ್ ಸಿಂಗ್ ರಾಣಾ, ಮುನ್ನೆಚ್ಚರಿಕ ಕ್ರಮವಾಗಿ ಕ್ವಾರಂಟೈನ್‌ನಲ್ಲಿರುವಂತೆ ಈ ಕುಟುಂಬ ಸೇರಿ ಎಲ್ಲರಿಗೂ ಸೂಚಿಸಿದ್ದರು.

ಕೃಷಿ ಇಲಾಖೆಯ ಅಸಿಸ್ಟೆಂಟ್ ಎಂಜಿನಿಯರ್ ಗಿರೀಶ್ ಸಿಂಗ್ ಅಮಾನತುಗೊಂಡ ಅಧಿಕಾರಿಯಾಗಿದ್ದಾರೆ. ಉತ್ತರಕಾಶಿ ಜಿಲ್ಲೆಯ ಚಿನ್ಯಾಲಿಸೂರ್ ಎಂಬಲ್ಲಿ ಗಿರೀಶ್ ಸಿಂಗ್ ರಾಣಾ ಕೊವಿಡ್ 19 ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಂಡಿದ್ದರು.

ಆರು ತಿಂಗಳ ಹಾಗೂ ಮೂರು ವರ್ಷದ ಮಗುವಿನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕ್ವಾರಂಟೈನ್ ಉಲ್ಲಂಘಿಸಿ ಬೇರೆಯವರ ಜೀವಕ್ಕೆ ಆಪತ್ತು ತಂದ ಆರೋಪ ಮಕ್ಕಳ ಮೇಲಿದೆ.

English summary
A six-month-old baby and a three-year-old child were among more than 40 people booked in a village in Uttarakhand’s Uttarkashi district for ‘not following home quarantine and endangering the life of others.’
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X