ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಪಂಜಾಬ್ ನಲ್ಲಿ ರಜಾ

|
Google Oneindia Kannada News

ಜಮ್ಮು-ಕಾಶ್ಮೀರದ ಕೆಲ ಭಾಗ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದು, ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದ ದೊಡಾ ಜಿಲ್ಲೆಯಲ್ಲಿ ಭೂ ಕುಸಿತದಿಂದಾಗಿ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಶಂಕೆಯಿದೆ. ಮನಾಲಿಯಲ್ಲಿ ಕಾರಿನಲ್ಲಿದ್ದ ಐವರು ಕೊಚ್ಚಿಹೋಗಿದ್ದು, ಅವರಿನ್ನೂ ಪತ್ತೆಯಾಗಿಲ್ಲ.

ಬೆಂಗಳೂರಲ್ಲಿ 3 ದಿನಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸಾಧ್ಯತೆಬೆಂಗಳೂರಲ್ಲಿ 3 ದಿನಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸಾಧ್ಯತೆ

ಹಿಮಾಚಲ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳೂ ಸೇರಿದಂತೆ ಹಲವು ರಸ್ತೆಗಳು ಭೂ ಕುಸಿತದಿಂದಾಗಿ ಮುಚ್ಚಿಹೋಗಿವೆ. ಪ್ರಸಿದ್ಧ ಪ್ರವಾಸಿ ತಾಣವಾದ ಮನಾಲಿಗೆ ರಸ್ತೆ ಸಂಪರ್ಕವೇ ಇಲ್ಲದಂತಾಗಿದೆ. ಕಳೆದ ಇಪ್ಪತ್ನಾಲ್ಕು ಗಂಟೆಯಿಂದ ಸುರಿಯುತ್ತಿರುವ ಮಳೆಗೆ ಬೀಸ್ ನದಿ ಉಕ್ಕಿ ಹರಿಯುತ್ತಿದ್ದು, ರಸ್ತೆಗಳು ಮುಳುಗಿವೆ.

6 killed in J&K and Himachal Pradesh, schools closed in Punjab

ಚಂಡೀಗಢದಲ್ಲೂ ಭಾರೀ ಮಳೆ ಆಗುತ್ತಿರುವುದರಿಂದ ಇಪ್ಪತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸುಕ್ನಾ ಸರೋವರದ ಎರಡು ಪ್ರವಾಹದ ಗೇಟ್ ಗಳನ್ನು ತೆರೆಯಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಮಳೆಯಿಂದ ಅತ್ಯಂತ ಹೆಚ್ಚು ಮಳೆಯನ್ನು ಹಿಮಾಚಲ ಪ್ರದೇಶ ಕೇಂದ್ರ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ನಿರೀಕ್ಷೆ ಮಾಡಲಾಗಿದೆ. ಕುಲು, ಲಹುಲು-ಸ್ಪಿಟಿ, ಕಿನ್ನೌರ್ ನಲ್ಲಿ ಹಿಮಪಾತ ಆಗಬಹುದು ಎಂದು ಮಾಹಿತಿ ನೀಡಲಾಗಿದೆ.

6 killed in J&K and Himachal Pradesh, schools closed in Punjab

ಭಾರೀ ಮಳೆ ಹಾಗೂ ನೆರೆಯ ಅಪಾಯ ಇರುವ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಪಂಜಾಬ್ ನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜ್ಯದ ಎಲ್ಲ ಶಾಲೆಗಳಿಗೆ ಸೆಪ್ಟೆಂಬರ್ ಇಪ್ಪತ್ತೈದರ ಮಂಗಳವಾರದಂದು ರಜಾ ಘೋಷಣೆ ಮಾಡಿದ್ದಾರೆ.

ಕೇರಳಕ್ಕೆ ಮತ್ತೆ ಅಪ್ಪಳಿಸಲಿದೆ ಧಾರಾಕಾರ ಮಳೆ: yellow alert ಘೋಷಣೆಕೇರಳಕ್ಕೆ ಮತ್ತೆ ಅಪ್ಪಳಿಸಲಿದೆ ಧಾರಾಕಾರ ಮಳೆ: yellow alert ಘೋಷಣೆ

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಭಾರೀ ಮಳೆಗೆ ರಸ್ತೆ ಮೇಲೆ ನೀರು ನಿಂತಿದೆ.

6 killed in J&K and Himachal Pradesh, schools closed in Punjab

ನೀರಿನ ಮಟ್ಟ ಏರಿರುವುದರಿಂದ ನದಿಗಳ ಬಳಿ ತೆರಳದಂತೆ ಹಾಗೂ ಸಾಧ್ಯವಾದಷ್ಟೂ ಮನೆಗಳಲ್ಲಿ ಇರುವಂತೆ ಜನರನ್ನು ಮನವಿ ಮಾಡುತ್ತಿರುವುದಾಗಿ ಮಂಡಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

6 killed in J&K and Himachal Pradesh, schools closed in Punjab

ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ವಾಂಗ್ಟೂ ಮತ್ತು ತಪ್ತಿಯಲ್ಲಿ ರಸ್ತೆ ಮುಚ್ಚಿ ಹೋಗಿದ್ದು, ಮತ್ತೆ ಸಂಚಾರಕ್ಕೆ ಮುಕ್ತಗೊಳಿಸಲು ಕೆಲಸ ಭರದಿಂದ ನಡೆಯುತ್ತಿದೆ.

English summary
Heavy rains lashed parts of Jammu and Kashmir and Himachal Pradesh killing six people and blocking roads, officials said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X