ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹ್ಯಾಕ್ ಆಗಿ 6 ದಿನವಾದರೂ ಬಿಜೆಪಿ ವೆಬ್ ಸೈಟ್ ದುರಸ್ತಿ ಕಂಡಿಲ್ಲ!

|
Google Oneindia Kannada News

ನವದೆಹಲಿ, ಮಾರ್ಚ್ 11: ಲೋಕಸಭೆ ಚುನಾವಣಾ ಪ್ರಚಾರ ನಿರತವಾಗಿರಬೇಕಿದ್ದ ಭಾರತೀಯ ಜನತಾ ಪಕ್ಷಕ್ಕೆ ತನ್ನ ಅಧಿಕೃತ ವೆಬ್ ತಾಣವನ್ನು ಸರಿಪಡಿಸಲು ಆಗುತ್ತಿಲ್ಲ. ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾ, ಪಕ್ಷದ ಸಿದ್ಧಾಂತಗಳ ಬಗ್ಗೆ ಪ್ರಚಾರ ನೀಡಬೇಕಿದ್ದ ಸಂದರ್ಭದಲ್ಲಿ ವೆಬ್ ಸೈಟ್ ದುರಸ್ತಿ ಕಾರ್ಯದಲ್ಲಿದೆ. ವೆಬ್ ಸೈಟ್ ಹ್ಯಾಕ್ ಆಗಿ ಸುಮಾರು 6 ದಿನಗಳು ಕಳೆದರೂ ಬಿಜೆಪಿ ಅಧಿಕೃತ ವೆಬ್ ಸೈಟ್ ಸರಿ ಹೋಗಿಲ್ಲವೇಕೆ ಎಂದು ವಿಪಕ್ಷದವರು ಗೇಲಿ ಮಾಡುತ್ತಿದ್ದಾರೆ.

ಬ್ರೌಸರ್ ನಲ್ಲಿ ಬಿಜೆಪಿ.ಆರ್ಗ್ ಎಂದು ಹಾಕಿ ಗೋ ಎಂದರೆ "We'll be back soon! Sorry for the inconvenience but we're performing some maintenance at the moment. We'll be back online shortly!"ಎಂಬ ಸಂದೇಶ ನಿಮ್ಮ ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್ ಪರದೆ ಮೇಲೆ ಕಾಣಿಸುತ್ತದೆ.

ಬಿಜೆಪಿ ವೆಬ್ಸೈಟಿಗೆ ಕನ್ನ ಹಾಕಿ, ಮೋದಿ ಮೀಮ್ಸ್ ಬಿಟ್ಟ ಹ್ಯಾಕರ್ಸ್ ಬಿಜೆಪಿ ವೆಬ್ಸೈಟಿಗೆ ಕನ್ನ ಹಾಕಿ, ಮೋದಿ ಮೀಮ್ಸ್ ಬಿಟ್ಟ ಹ್ಯಾಕರ್ಸ್

ಮಂಗಳವಾರ ಬೆಳಗ್ಗೆ 11.30ರಿಂದ ಈ ಸಂದೇಶ ಕಾಣಿಸುತ್ತಿದೆ. ವೆಬ್ ಸೈಟ್ ಹ್ಯಾಕ್ ಆಗಿದೆ, ಅಥವಾ ತಾಂತ್ರಿಕ ದೋಷದಿಂದ ಡೌನ್ ಆಗಿದೆ ಎಂಬುದನ್ನು ಬಿಜೆಪಿ ಇನ್ನು ಒಪ್ಪಿಕೊಂಡಿಲ್ಲ. ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನು ನೀಡಿಲ್ಲ. ಬಿಜೆಪಿಯ ಸಾಮಾಜಿಕ ಜಾಲ ತಾಣ ಖಾತೆಗಳು ಮಾತ್ರ ಸಕ್ರಿಯವಾಗಿವೆ.

ಕಾಂಗ್ರೆಸ್ ನ ಐಟಿ ಸೆಲ್ ಕಣ್ಣಿಗೆ ಬಿಜೆಪಿ ವೆಬ್ ತಾಣ ಹ್ಯಾಕ್ ಆಗಿರುವುದು ಕಾಣುತ್ತಿದ್ದಂತೆ ಸ್ಕ್ರೀನ್ ಶಾಟ್ ತೆಗೆದುಕೊಂಡು, ಟ್ವೀಟ್ ಮಾಡಿದೆ. ಐಟಿ ಸೆಲ್ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಅವರು ಬಿಜೆಪಿ ವೆಬ್ ಸೈಟ್ ಹ್ಯಾಕ್ ಆಗಿದೆಯಂತೆ ಎಂದು ಗೇಲಿ ಮಾಡಿ ಟ್ವೀಟ್ ಮಾಡಿದ್ದರು.

ಫ್ರಾನ್ಸಿನ್ ಎಥನಿಕಲ್ ಹ್ಯಾಕರ್ ಅಲ್ಡರ್ಸನ್

ಫ್ರೆಂಚ್ ಹ್ಯಾಕರ್ ಎಲಿಯಟ್ ಆಲ್ಡರ್ಸನ್ ಅವರು ಟ್ವೀಟ್ ಮಾಡಿ, ಬಿಜೆಪಿ ವೆಬ್ ಸೈಟ್ ಇನ್ನು ಸರಿ ಹೋಗಿಲ್ಲವೇ, ಹೊಸದಾಗಿ ವೆಬ್ ಸೈಟ್ ಕಟ್ಟಬೇಕಿದೆ. ಎಂದು ಡಿಜಿಟಲ್ ಇಂಡಿಯಾ ಹ್ಯಾಶ್ ಟ್ಯಾಗ್ ಹಾಕಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಟ್ವಿಟ್ಟರ್ ಖಾತೆ ಸಕ್ರಿಯ

ಬಿಜೆಪಿ ಟ್ವಿಟ್ಟರ್ ಖಾತೆ ಸಕ್ರಿಯವಾಗಿದೆ. ಬಿಜೆಪಿ ವೆಬ್ ಸೈಟ್ ಹ್ಯಾಕ್ ಆದ ದಿನವೂ ಕೂಡಾ ತಮಿಳುನಾಡಿನಲ್ಲಿ ನಡೆದ ಮೋದಿ ಸಮಾವೇಶದ ಬಗ್ಗೆ ಟ್ವೀಟ್ ಮಾಡಲಾಗಿದೆ. ಕಂದಹಾರ್ ಅಪಹರಣದ ಸಂದರ್ಭದಲ್ಲಿ ಉಗ್ರರನ್ನು ಬಿಟ್ಟು ಕಳಿಸಿದ ಅಜಿತ್ ದೋವಲ್ ಬಗ್ಗೆ ವಿಡಿಯೋ ಹಾಕಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ, ಬಿಜೆಪಿ ತಕ್ಕ ಉತ್ತರ ನೀಡಿದೆ.

ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ 'ಫಿರ್ ಮೋದಿ' ಟ್ರೆಂಡಿಂಗ್ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ 'ಫಿರ್ ಮೋದಿ' ಟ್ರೆಂಡಿಂಗ್

ಮೋದಿ ಇರುವ ವಿಡಿಯೋ ಹಾಕಿದ್ದ ಹ್ಯಾಕರ್ಸ್

ಬಿಜೆಪಿ ವೆಬ್ ಸೈಟ್ ಹ್ಯಾಕ್ ಮಾಡಿದ ಬಳಿಕ ಮೋದಿ ಅವರಿರುವ ವಿಡಿಯೋ ಕ್ಲಿಪಿಂಗ್ ಹಾಕಲಾಗಿದ್ದು, ಜತೆಗೆ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮೆರ್ಕಲ್ ಇದ್ದಾರೆ. ಪ್ರಧಾನಿ ಮೋದಿ ಅವರು ಹೆಲೋ ಎನ್ನುತ್ತಿರುವಾಗ ಏಂಜೆಲಾ ಅವರು ನನಗೆ ಬಾಯ್ ಫ್ರೆಂಡ್ ಇದ್ದಾನೆ ಎನ್ನುತ್ತಾ ಮೋದಿ ಅವರನ್ನು ನೋಡದಂತೆ ಅವರ ಹಿಂಬದಿಗೆ ಸರಿಯುವಂಥ ವಿಡಿಯೋ ಹಾಕಲಾಗಿದೆ.

ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ದಿವ್ಯಸ್ಪಂದನ

ಭಾಯಿಯೋ ಔರ್ ಬೆಹನೋ ಎಂದು ಮೋದಿ ಶೈಲಿಯಲ್ಲಿ ಟ್ವೀಟ್ ಶುರು ಮಾಡಿ, ಬಿಜೆಪಿ ವೆಬ್ ಸೈಟ್ ಸಿಗುತ್ತಿಲ್ಲ ಎಂದರೆ ನೀವು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಎಂದರ್ಥ ಎಂದು ಟ್ವೀಟ್ ಮಾಡಿದ ದಿವ್ಯಸ್ಪಂದನ

English summary
It has been over 5 days ever since an alleged hacking attempt took it down but the Bharatiya Janata Party (BJP)'s official website is yet to become operational after going into "maintenance mode".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X