ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ವರ್ಷದಲ್ಲಿ ಭಾರತದ ಪೌರತ್ವ ತೊರೆದವರ ಸಂಖ್ಯೆ 6.76 ಲಕ್ಷ

|
Google Oneindia Kannada News

ನವದೆಹಲಿ, ಫೆಬ್ರವರಿ 10: ಭಾರತದಲ್ಲಿ 2015 ರಿಂದ 2019ರ ಅವಧಿಯಲ್ಲಿ 6.76 ಲಕ್ಷ ಭಾರತೀಯರು ತಮ್ಮ ಪೌರತ್ವ ತ್ಯಜಿಸಿದ್ದಾರೆ. ಐದು ವರ್ಷದಲ್ಲಿ ಒಟ್ಟು 6,76,074 ಲಕ್ಷ ಜನರು ಭಾರತದ ಪೌರತ್ವ ತೊರೆದಿರುವುದಾಗಿ ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ತಮಿಳುನಾಡಿನ ಶಿವಗಂಗಾ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಕೇಳಿದ ಪ್ರಶ್ನೆಗೆ ಗೃಹ ಸಚಿವಾಲಯ ಲಿಖಿತ ಉತ್ತರ ನೀಡಿದೆ. 2015ರಲ್ಲಿ 1,41,656 ಜನರು, 2016ರಲ್ಲಿ 1,44942, 2017ರಲ್ಲಿ 1,27,905, 2018ರಲ್ಲಿ 1,25,130 ಮತ್ತು 2019ರಲ್ಲಿ 1,36,441 ಜನರು ಭಾರತದ ನಾಗರಿಕ ಸೌಲಭ್ಯವನ್ನು ತ್ಯಜಿಸಿದ್ದಾರೆ.

ದೇಣಿಗೆ ಸಂಗ್ರಹಿಸುವವರು 'ಚಂದಾ ಜೀವಿ'ಗಳೇ?: ಸರ್ಕಾರಕ್ಕೆ ಅಖಿಲೇಶ್ ಯಾದವ್ ಪ್ರಶ್ನೆದೇಣಿಗೆ ಸಂಗ್ರಹಿಸುವವರು 'ಚಂದಾ ಜೀವಿ'ಗಳೇ?: ಸರ್ಕಾರಕ್ಕೆ ಅಖಿಲೇಶ್ ಯಾದವ್ ಪ್ರಶ್ನೆ

ವಿದೇಶಗಳಲ್ಲಿ ಒಟ್ಟು 1,24,99,395 ಭಾರತೀಯರು ನೆಲೆಸಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಹಾಗೆಯೇ ದ್ವಿಪೌರತ್ವ ನೀಡುವ ಯಾವುದೇ ಪ್ರಸ್ತಾಪವನ್ನು ಸರ್ಕಾರ ಪ್ರಸ್ತುತ ಪರಿಗಣಿಸುತ್ತಿಲ್ಲ ಎಂದು ಅದು ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

6.76 Lakh People Gave Up Citizenship Of India From 2015 To 2019: Home Ministry

ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ (ಒಸಿಐ) ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಿರುವ ಜನರ ಸಂಖ್ಯೆಯ ಕುರಿತಾದ ಪ್ರಶ್ನೆಗೆ, 2020ರಲ್ಲಿ ಒಟ್ಟು 1,91,609 ಮಂದಿ ವಿದೇಶಿಗರು ಒಸಿಐ ಕಾರ್ಡುದಾರರಾಗಿ ನೋಂದಣಿ ಮಾಡಿಸಿಕೊಂಡಿರುವುದಾಗಿ ಸಚಿವಾಲಯ ಹೇಳಿದೆ.

 ಬದಲಾವಣೆ ಮಾಡದಿರಲು ಕೃಷಿ ಕಾಯ್ದೆ ಧಾರ್ಮಿಕ ಗ್ರಂಥವೇ?; ಅಬ್ದುಲ್ಲಾ ಬದಲಾವಣೆ ಮಾಡದಿರಲು ಕೃಷಿ ಕಾಯ್ದೆ ಧಾರ್ಮಿಕ ಗ್ರಂಥವೇ?; ಅಬ್ದುಲ್ಲಾ

ಕಳೆದ ಐದು ವರ್ಷಗಳಲ್ಲಿ ಬೇರೊಂದು ದೇಶಕ್ಕಾಗಿ ಭಾರತದ ಪೌರತ್ವ ತ್ಯಜಿಸಿದ ಮತ್ತು ಪ್ರಸ್ತುತ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ಸಂಖ್ಯೆಗಳನ್ನು ನೀಡುವಂತೆ ಕಾರ್ತಿ ಚಿದಂಬರಂ ಕೋರಿದ್ದರು. ಇದಕ್ಕೆ ಗೃಹಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಬಳಿ ಲಭ್ಯವಿರುವ ಮಾಹಿತಿಗೆ ಅನುಗುಣವಾಗಿ ಲಿಖಿತ ಉತ್ತರ ನೀಡಿದ್ದಾರೆ.

English summary
Home Ministry in a written reply to Congress MP Karti Chidambaram said, over 6.76 lakh Indians gave up their Indian Citizenship from 2015 to 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X