ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಗಳಿಗೆ ಇದುವರೆಗೂ 6.4 ಕೋಟಿ ಲಸಿಕೆ ರವಾನೆ: ಕೇಂದ್ರ

|
Google Oneindia Kannada News

ನವದೆಹಲಿ, ಜುಲೈ 29: ವಿದೇಶಗಳಿಗೆ ಇದುವರೆಗೂ ಒಟ್ಟು 6.4 ಕೋಟಿ ಡೋಸ್ ಲಸಿಕೆ ರವಾನಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಈ ಕುರಿತಂತೆ ಕೇಂದ್ರ ಸರ್ಕಾರ ಗುರುವಾರ ಸಂಸತ್ತಿಗೆ ಮಾಹಿತಿ ನೀಡಿದ್ದು, ಈ ವರ್ಷದ ಜನವರಿ 12 ರಿಂದ ಜುಲೈ 22ರ ಅವಧಿಯಲ್ಲಿ ಒಟ್ಟು 6.4 ಕೋಟಿ ಕೋವಿಡ್ ಲಸಿಕೆಗಳನ್ನು ವಿದೇಶಗಳಿಗೆ ಕಳುಹಿಸಿಕೊಟ್ಟಿದೆ.

ದೇಶದಲ್ಲಿ ಮತ್ತೆ 4 ಲಕ್ಷ ದಾಟಿದ ಕೊರೊನಾ ಸಕ್ರಿಯ ಪ್ರಕರಣದೇಶದಲ್ಲಿ ಮತ್ತೆ 4 ಲಕ್ಷ ದಾಟಿದ ಕೊರೊನಾ ಸಕ್ರಿಯ ಪ್ರಕರಣ

ಇದೇ ಅವಧಿಯಲ್ಲಿ ದೇಶದಾದ್ಯಂತ ನೀಡಲಾಗಿರುವ ಲಸಿಕೆಯ ಪ್ರಮಾಣ 45 ಕೋಟಿಗೂ ಅಧಿಕವಾಗಿದೆ. ಇವರಲ್ಲಿ 18-44 ವರ್ಷದವರಿಗೆ ನೀಡಿದ 15.38 ಕೋಟಿ ಡೋಸ್‌ ಲಸಿಕೆಗಳು ಸೇರಿವೆ ಎಂದು ತಿಳಿಸಿದ್ದಾರೆ.

6.4 Crore COVID-19 Vaccine Doses Dispatched Abroad From Jan 12 to Jul 22: Govt

ಈ ಕುರಿತು ನಾಗರಿಕ ವಿಮಾನಯಾನ ಸಚಿವ ವಿ.ಕೆ.ಸಿಂಗ್‌ ಅವರು ಮಾತನಾಡಿ, ಈ ಅವಧಿಯಲ್ಲಿ ಒಟ್ಟಾಗಿ 42.2 ಕೋಟಿ ಡೋಸ್‌ ಲಸಿಕೆಗಳನ್ನು ವಿಮಾನಗಳ ಮೂಲಕ ರವಾನಿಸಲಾಗಿದೆ. ಈ ಪೈಕಿ 35.8 ಕೋಟಿ ಡೋಸ್‌ ಲಸಿಕೆಗಳನ್ನು ದೇಶೀಯ ವಿಮಾನಗಳ ಮೂಲಕ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ 43,509 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

ಇದೇ ಅವಧಿಯಲ್ಲಿ 38,465 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದು ದಿನದ ಅವಧಿಯಲ್ಲಿ ಸೋಂಕಿನಿಂದ 640 ಮಂದಿ ಸಾವನ್ನಪ್ಪಿದ್ದಾರೆ.

ಗುರುವಾರದ ಈ ಅಂಕಿಸಂಖ್ಯೆ ಪ್ರಕಾರ, ಇದುವರೆಗೂ ದೇಶದಲ್ಲಿ ಒಟ್ಟು 31,528,114 ಕೊರೊನಾ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ ನಾಲ್ಕು ಲಕ್ಷ ದಾಟಿದ್ದು, ಸದ್ಯ 4,03,840 ಪ್ರಕರಣಗಳಿವೆ.

ಇಲ್ಲಿಯವರೆಗೆ ಸೋಂಕಿನಿಂದ 4,22,662 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿನ ಗುಣಮುಖ ಪ್ರಮಾಣ ಶೇ 97.38 ಆಗಿದೆ.

English summary
India dispatched approximately 6.4 crore COVID-19 vaccine doses to foreign countries from January 12 to July 22, the government informed Parliament on July 29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X