'ಅಮ್ಮ' ಇಲ್ಲವಾಗಿ ಒಂದು ವರ್ಷ! ಅನಾಥವಾಯ್ತು ತಮಿಳುನಾಡು ರಾಜಕೀಯ

Posted By:
Subscribe to Oneindia Kannada
ಜಯಲಲಿತಾ ಎಲ್ಲರನ್ನ ಅಗಲಿ ಇಂದಿಗೆ 1 ವರ್ಷ | ಟ್ವಿಟ್ಟರ್ ನಲ್ಲಿ ಕಂಬನಿ | Oneindia Kannada

ತಮಿಳುನಾಡು ರಾಜಕೀಯದ ಉಕ್ಕಿನ ಮಹಿಳೆ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅಸುನೀಗಿ ಇಂದಿಗೆ(ಡಿ.5) ಒಂದು ವರ್ಷ. ಬದುಕಿದ್ದಾಗ ತಮ್ಮ ದಿಟ್ಟ ವ್ಯಕ್ತಿತ್ವದಿಂದ ಸದಾ ಸುದ್ದಿಯಲ್ಲಿರುತ್ತಿದ್ದ, ತಮಿಳುನಾಡಿನ ಜನರ ಪಾಲಿಗೆ 'ಅಮ್ಮ'ನಾಗಿ, ಇಡಿ ದೇಶದ ರಾಜಕೀಯದಲ್ಲೂ ಹಲವು ಬಾರಿ ನಿರ್ಣಾಯಕ ಪಾತ್ರ ವಹಿಸಿದ್ದ ಜಯಲಲಿತಾ ಅವರ ಸಾವನ್ನು ತಮಿಳುನಾಡಿನ ಹಲವರು ಇಂದಿಗೂ ಒಪ್ಪಿಕೊಂಡಿಲ್ಲ. ಅವರೆಲ್ಲರ ಮನಸ್ಸಿನಲ್ಲಿ 'ಅಮ್ಮ' ಇನ್ನೂ ಬದುಕಿದ್ದಾರೆ. ಆ ಸ್ಥಾನವನ್ನು ಮತ್ತ್ಯಾರೂ ತುಂಬುವುದಕ್ಕೆ ಸಾಧ್ಯವೇ ಇಲ್ಲ ಎಂಬಷ್ಟರಮಟ್ಟಿಗೆ 'ಅಮ್ಮ' ಎಂಬ ಪದಕ್ಕೆ ಜಯಲಲಿತಾ ಅನ್ವರ್ಥವಾಗಿದ್ದಾರೆ!

ಜಯಲಲಿತಾ ಅನಾರೋಗ್ಯ: ಸೆಪ್ಟೆಂಬರ್ 23ರಿಂದ ಡಿಸೆಂಬರ್ 4ರವರೆಗೆ

ಹೃದಯಾಘಾತವಾಗಿ ಆಸ್ಪತ್ರೆಗೆ ಸೇರಿದ 68 ವರ್ಷ ವಯಸ್ಸಿನ ಜಯಲಲಿತಾ, ನಂತರ ಹೊರಬಂದಿದ್ದು ಶವವಾಗಿಯೇ. ಈ ನಡುವೆ ಹುಟ್ಟಿದ ಊಹಾಪೋಹಗಳೆಷ್ಟೋ, ವಿವಾದಗಳೆಷ್ಟೋ, ಅನಿಮಾನಗಳೆಷ್ಟೋ! ಅವೆಲ್ಲ ಇಂದಿಗೂ ಬಗೆಹರಿದಿಲ್ಲ. ಜಯಲಲಿತಾ ಬದುಕಿನಂತೆ ಅವರ ಸಾವೂ ನಿಗೂಢವಾಗಿಯೇ ಉಳಿಯಿತು.

ಜಯಾ ಸಾವಿನ ಬಗ್ಗೆ ತಮಿಳುನಾಡು ಸರಕಾರ ಸುಳ್ಳು ಹೇಳಿದೆಯಾ?

ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಡಿಸೆಂಬರ್ 5, 2016 ರಂದು ರಾತ್ರಿ 11:30 ಕ್ಕೆ ಜಯಲಲಿತಾ ಅವರು ಅಸುನೀಗುತ್ತಿದ್ದಂತೆಯೇ ತಮಿಳುನಾಡಿನ ಚಿತ್ರಣವೇ ಬದಲಾಗಿತ್ತು. ಕುಟುಂಬದ ಆತ್ಮೀಯರೊಬ್ಬರು ಅಸುನೀಗಿದಾಗ ಮೂಡುವ ಸೂತಕದ ಛಾಯೆ ಇಡೀ ರಾಜ್ಯವನ್ನು ಆವರಿಸಿತ್ತು. ಅವರ ಅಂತ್ಯ ಸಂಸ್ಕಾರದಲ್ಲಿ ನೆರೆದಿದ್ದ ಲಕ್ಷಾಂತರ ಜನ, ಬಿಕ್ಕಿ ಬಿಕ್ಕಿ ಅತ್ತು, ಒಲ್ಲದ ಮನಸ್ಸಿನಿಂದಲೇ ಅಮ್ಮನನ್ನು ಬಾರದ ಲೋಕಕ್ಕೆ ಕಳಿಸಿಕೊಟ್ಟಿದ್ದರು. ಅವೆಲ್ಲ ಮುಗಿದು ಇಂದಿಗೆ ಒಂದು ವರ್ಷವಾಗಿದ್ದರೂ, ಇಂದಿಗೂ ತಮಿಳುನಾಡಿನ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಅಮ್ಮ ನೆಲೆಸಿದ್ದಾರೆ.

ಜಯಲಲಿತಾ ಸಾವಿನ ರಹಸ್ಯ, ಪಾಂಡಿಯನ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ

ಅಗಲಿದ 'ಅಮ್ಮ'ನಿಗೆ ಹಲವರು ಟ್ವಿಟ್ಟರ್ ಮೂಲಕ ಮತ್ತೊಮ್ಮೆ ಕಂಬನಿ ಮಿಡಿದಿದ್ದಾರೆ.

ಆಕೆಯ ಸ್ಥಾನ ತುಂಬುವವರ್ಯಾರು?

ಇದೇ ದಿನ ನಾವು ನಮ್ಮ ಉಕ್ಕಿನ ಮಹಿಳೆಯನ್ನು ಕಳೆದುಕೊಂಡೆವು. ತಮಿಳುನಾಡಿನ ರಾಜಕೀಯದಲ್ಲಿ ಆಕೆಯ ಸ್ಥಾನವನ್ನು ತುಂಬುವ ಶಕ್ತಿ ಯಾರಿಗೂ ಇಲ್ಲ ಎಂದು ಶೇಖ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಅವರೆಂಥ ರಾಜಕಾರಣಿ!

ಡಿಸೆಂಬರ್ 5 ಜಯಲಲಿತಾ ಅವರ ಮೊದಲ ಪುಣ್ಯತಿಥಿ. ಇಡೀ ರಾಜ್ಯವೂ ಅವರನ್ನು ಮಿಸ್ ಮಾಡಿಕೊಳ್ಳುತ್ತಿದೆ. ಅವರೆಂಥ ರಾಜಕಾರಣಿ! ಉಕ್ಕಿನ ಮಹಿಳೆ ಅವರು ಎಂದು ಲತಾ ಶ್ರೀನಿವಾಸನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಅಂಥ ಮಹಿಳೆಯನ್ನು ಮತ್ತೆ ನೋಡೋಲ್ಲ!

ಅಮ್ಮ ಅಸುನೀಗಿ ಒಂದು ವರ್ಷವಾಯ್ತು. ಅವರ ಅಗಲಿಕೆಯ ನಂತರ ಅಂಥ ಯಾವ ಮಹಿಳೆಯನ್ನೂ ನಾವು ತಮಿಳುನಾಡಿನಲ್ಲಿ ಕಂಡಿಲ್ಲ. ಭವಿಷ್ಯದಲ್ಲಿ ಕಾಣುವುದೂ ಇಲ್ಲ ಎಂದು ವಿಶ್ವಾಸಮ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ರಾಜಕೀಯದಲ್ಲಿ ನಿರ್ವಾತ ಸೃಷ್ಟಿಯಾಗಿದೆ!

ಅಮ್ಮ ತಮಿಳುನಾಡಿನ ಜನರನ್ನು ಅಕ್ಕರೆಯಿಂದ ಆಳಿದವರು. ಅವರ ಆಳ್ವಿಕೆಯಲ್ಲಿ ಸಿಹಿ-ಕಹಿ ಎಲ್ಲವೂ ಇತ್ತು. ಅವರ ಅಗಲಿಕೆ ತಮಿಳುನಾಡಿನ ರಾಜಕೀಯದಲ್ಲಿ ನಿರ್ವಾತ ಸೃಷ್ಟಿಸಿತು. ಆ ನಿರ್ವಾತವನ್ನು ತುಂಬುವುದಕ್ಕೆ ಹಲವು ಸಮಯವೇ ಬೇಕಾದೀತು ಎಂದು ಶ್ರೀಧರ್ ಪಿಳೈ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಪುರುಷ ಪ್ರಧಾನ ಸಮಾಜದಲ್ಲಿ ಆಕೆ ಒಬ್ಬ ಆಶಾಕಿರಣ

ತಮಿಳುನಾಡಿನ ಜನರು ಒಬ್ಬ ಸಮರ್ಥ ಆಡಳಿತಗಾರರನ್ನು ಕಳೆದುಕೊಂಡಿದ್ದಾರೆ. ಈ ಪುರುಷ ಪ್ರಧಾನ ಸಮಾರಂಭದಲ್ಲಿ ಆಕೆ ಒಂದು ಬೆಳ್ಳಿಮಿಂಚಾಗಿದ್ದವರು. ಅವರೊಬ್ಬ ದಿಟ್ಟ ಮಹಿಳೆ. ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರದಲ್ಲೂ ಮಾದರಿ ವ್ಯಕ್ತಿ ಅವರು ಎಂದು ರಮೇಶ್ ಬಾಲಾ ಎಂಬುವವರು ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After one year of Jayalalith's demise, Tamil Nadu politics still missing her, Tamil people are still not ready to accept her death. She totally created a vacuum in Tamil nadu politics. She was died on 5th december 2016 in Chennai's Apollo hospital due to illhealth.
Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ