ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಖಲೆ ಪ್ರಮಾಣದಲ್ಲಿ ತುಟ್ಟಿಭತ್ಯೆ ಹೆಚ್ಚಳಕ್ಕೆ ಮುಂದಾದ ಮೋದಿ ಸರ್ಕಾರ

|
Google Oneindia Kannada News

ನವದೆಹಲಿ, ಜುಲೈ 01: ಮೋದಿ ಸರ್ಕಾರ್ 2.0 ಸ್ಥಾಪನೆಯಾದ ಬಳಿಕ ಚೊಚ್ಚಲ ಬಜೆಟ್ ಮಂಡನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಜ್ಜಾಗಿದ್ದಾರೆ. ಈ ನಡುವೆ ಸರ್ಕಾರಿ ನೌಕರರಿಗೆ ಭರ್ಜರಿ ಕೊಡುಗೆ ನೀಡಲು ಮೋದಿ ಸರ್ಕಾರ ಮುಂದಾಗಿದೆ.

7ನೇ ವೇತನ ಆಯೋಗ ಸ್ಥಾಪನೆಗೊಂಡಾಗಿನಿಂದ ಇಲ್ಲಿ ತನಕ ನೀಡದಷ್ಟು ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಘೋಷಣೆ ಸಾಧ್ಯತೆ ಕಂಡು ಬಂದಿದೆ.

ಮೋದಿ ಸರ್ಕಾರ್ 2.0 ಚೊಚ್ಚಲ ಬಜೆಟ್ ನಲ್ಲಿ ಸರ್ಕಾರಿ ನೌಕರರಿಗೆ ನಿರಾಶೆ? ಮೋದಿ ಸರ್ಕಾರ್ 2.0 ಚೊಚ್ಚಲ ಬಜೆಟ್ ನಲ್ಲಿ ಸರ್ಕಾರಿ ನೌಕರರಿಗೆ ನಿರಾಶೆ?

ತುಟ್ಟಿಭತ್ಯೆ ಪ್ರಮಾಣ ಕೂಡಾ ಶೇ3ರ ಬದಲಿಗೆ ಶೇ 4ಕ್ಕಿಂತ ಅಧಿಕವಾಗುವ ನಿರೀಕ್ಷೆಯಿದೆ ಎಂದು ಅಖಿಲ ಭಾರತ ಅಕೌಂಟ್ಸ್ ಹಾಗೂ ಆಡಿಟ್ ಸಂಸ್ಥೆಯ ಸಹಾಯಕ ಕಾರ್ಯದರ್ಶಿ ಹರಿಶಂಕರ್ ತಿವಾರಿ ಹೇಳಿದ್ದರು. ಆದರೆ, ಶೇ 5ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಜುಲೈ ತಿಂಗಳಿನಲ್ಲೇ ಸರ್ಕಾರ ಘೋಷಿಸಲು ಸಜ್ಜಾಗಿದೆ.

5% increase in DA likely for Central Government Employees in July 2019

ಲಭ್ಯ ಮಾಹಿತಿಯಂತೆ ಶೇ12 ರಿಂದ ಶೇ 17ಕ್ಕೆ ಡಿಎ ಏರಿಕೆಯಾಗಲಿದೆ. ಗ್ರಾಹಕ ದರ ಸೂಚ್ಯಂಕ, ಸಗಟು ಹಣದುಬ್ಬರ ಗಮನಿಸಿ, ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕ(ಎಐಸಿಪಿಐ) ಏಪ್ರಿಲ್ ನಲ್ಲಿ ಏರಿಕೆಯಾಗಿದೆ.

ಈ ಹಿಂದಿನ ಅಪ್ಡೇಟ್ಸ್ : ಕೇಂದ್ರ ಸರ್ಕಾರ ತುಟ್ಟಿ ಭತ್ಯೆ(ಡಿಎ) ಹಾಗೂ ತುಟ್ಟಿ ಪರಿಹಾರ (ಡಿಆರ್) ಗಳನ್ನು ಜುಲೈ 01,2018ರಿಂದ ಅನ್ವಯವಾಗುವಂತೆ ಶೇ.2ರಷ್ಟು ಹೆಚ್ಚಳ ಮಾಡಲಾಗಿತ್ತು. ಶೇ 13.39ರಿಂದ ಶೇ 15.49ಕ್ಕೇರಿಯಾಗಿತ್ತು.

ಇದರಿಂದ ಸುಮಾರು 1.1 ಕೋಟಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ನೆರವಾಗಲಿದ್ದು, ಕೇಂದ್ರ ಸರ್ಕಾರದ ಮೇಲೆ ವಾರ್ಷಿಕವಾಗಿ 6,112.20 ಕೋಟಿ ರೂ. ಹೆಚ್ಚಿನ ಹೊರೆ ಬೀಳಲಿದೆ. 2013-14ರಲ್ಲಿ 63,000 ಕೋಟಿ ಇದ್ದ ಇಲಾಖೆಯ ಬಹೆಟ್ ಈಗ 2018-19ರಲ್ಲಿ 110 ಲಕ್ಷ ಕೋಟಿಗೆ ಏರಿಕೆಯಾಗಿದೆ.

2014ರಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇಕಡಾ 14ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಸರ್ಕಾರಿ ನೌಕರರು ಇದಕ್ಕೆ ತೃಪ್ತಿ ವ್ಯಕ್ತಪಡಿಸಿರಲಿಲ್ಲ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ಮಾಡಬೇಕೆಂಬ ಬೇಡಿಕೆಯಿಟ್ಟಿದ್ದರು. ತುಟ್ಟಿಭತ್ಯೆ ಹೆಚ್ಚಳವು ಜನವರಿ 01, 2018ರಿಂದ ಜಾರಿಗೆ ಬರಬೇಕಿದ್ದು, 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 61 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಲಾಭ ತರಲಿದೆ. ಇದರ ಜತೆಗೆ ಈಗ ನಿವೃತ್ತಿ ವಯಸ್ಸು 62ಕ್ಕೇರಿಸಿದರೆ 1.1 ಕೋಟಿ ಮಂದಿಗೆ ಲಾಭವಾಗಲಿದೆ. ಆದರೆ, ನಿವೃತ್ತಿ ವಯಸ್ಸು ಏರಿಕೆ, ಕನಿಷ್ಠ ವೇತನದಲ್ಲಿ ಬದಲಾವಣೆ ಬಗ್ಗೆ ಸುಳಿವು ಸಿಕ್ಕಿಲ್ಲ.

English summary
The Dearness Allowance (DA) for the Central Government employees is set to increase from 12 percent to 17 percent from July 1 onwards, said reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X