ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಮಾರ್ಚ್ 2023ರಿಂದ 5ಜಿ ಇಂಟರ್ನೆಟ್ ಸೇವೆ ಲಭ್ಯ: ಕೇಂದ್ರ ಸಚಿವ

|
Google Oneindia Kannada News

ಬೆಂಗಳೂರು ಜೂ. 16: ಭಾರತ ದೇಶದ ಜನರು 2023ರ ಮಾರ್ಚ್ ತಿಂಗಳ ನಂತರ ವೇಗದ 5ಜಿ ಇಂಟರ್ ನೆಟ್ ಬಳಸಲಿದ್ದಾರೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಈ ಕುರಿತು ಬುಧವಾರ 'ಭಾರತ್ ಕಾ 5ಜಿ' ಹ್ಯಾಶ್ ಟ್ಯಾಗ್ ಹಾಕಿ ಟ್ವಿಟ್ ಮಾಡಿರುವ ಅವರು, ಹಾಲಿ ನಾವು ಬಳ್ಳಸುತ್ತಿರುವ 4ಜಿ ನೆಟ್‌ವರ್ಕ್‌ಗಿಂತಲೂ ಸರಿಸುಮಾರು ಶೇ.10ರಷ್ಟು ವೇಗ ಹೊಂದಿದೆ. ಇಂತಹ ನೆಟ್‌ವರ್ಕ್‌ ಸೇವೆ 2023ರಿಂದ ಭಾರತದಲ್ಲಿ ಸಾಧ್ಯವಾಗಲಿದೆ. ಕೇಂದ್ರ ಸರ್ಕಾರ 20ವರ್ಷಗಳ ಅವಧಿಗೆ ಈ ನೂತನ ತರಂಗಾಂತರದ ಸೇವಾ ಹರಾಜಿಗೆ ಒಪ್ಪಿಗೆ ನೀಡಿದೆ. ಇದಕ್ಕೆ ಪೂರಕವಾಗಿ ಮುಂದಿನ ಜುಲೈ ಅಂತ್ಯದ ವೇಳೆಗೆ ಮೊದಲು 72 ಗಿಗಾ ಹಟ್ಸ್ಟ್ ಸ್ಪೆಕ್ಟ್ರಂ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

5ಜಿ ತರಂಗಾಂತರ ಹರಾಜಿಗೆ ಮೋದಿ ಸಂಪುಟ ಅನುಮತಿ5ಜಿ ತರಂಗಾಂತರ ಹರಾಜಿಗೆ ಮೋದಿ ಸಂಪುಟ ಅನುಮತಿ

ಡಿಜಿಟಲ್ ಬಳಕೆಯಲ್ಲಿ ಪ್ರಾಥಮಿಕ ವ್ಯವಸ್ಥೆಯಾಗಿದ್ದ ಟೆಲಿಕಾಂ ಈ ವಲಯದಲ್ಲಿ ಹಂತ ಹಂತವಾಗಿ ಮಹತ್ತರ ಬದಲಾವಣೆಗ ತರಲು ಕಾರಣವಾಯಿತು. ಇದೀಗ 4ಜಿ ತರಂಗಾಂತರ ಸಂಪರ್ಕ ಸಾಧಿಸಬಲ್ಲ ಎಲ್ಲ ಬಗೆಯ ಉಪಕರಣಗಳು ಲಭ್ಯವಾಗುತ್ತಿವೆ. ಇದೇ ಮಾದರಿಯಲ್ಲಿ 5ಜಿ ಸೇವೆಯಲ್ಲಿಯು ಲಭ್ಯವಾಗುವಂತೆ ಮಾಡುವ ಗುರಿ ಹೊಂದಿದ್ದೇವೆ ಎಂದರು.

5G Service in India After 2023 march: Central Minister Ashwini Vaishnaw

ದೇಶದಲ್ಲಿ ಹೊಸ ವೇಗದ ತರಂಗಾಂತರ ಸೇವೆ ಎಲ್ಲ ಪ್ರಾಯೋಗಿಕ ಹಂತ ದಾಟಿ ಯಶಸ್ವಿಯಾಗಿದ್ದು, ಇನ್ನೇನು ಕೆಲವು ತಿಂಗಳುಗಳಲ್ಲಿ ದೇಶಾದ್ಯಂತ ಸಂಪರ್ಕ ಸಾಧಿಸಲು ಸಜ್ಜಾಗಿದೆ.

ಹೊಸ ನೆಟ್ ವರ್ಕ ಸೇವೆ ಆರಂಭವಾದರೆ ಕೃಷಿ, ಆರೋಗ್ಯ, ಶಿಕ್ಷಣ, ಉದ್ಯಮ, ಕೈಗಾರಿಕೆ, ಮೂಲಸೌಕರ್ಯ, ತಂತ್ರಜ್ಞಾನ ಮತ್ತಿತರ ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸುಧಾರಣೆಗಳು ಆಗುತ್ತವೆ. ಪ್ರತಿ ವಲಯದ ಬೆಳವಣಿಗೆಯಲ್ಲಿ ಈ ತರಂಗಾಂತರ ಸೇವೆ ಪ್ರಮುಖ ಪಾತ್ರ ವಹಿಸಲಿದೆ. ಉದ್ಯೋಗವು ಸೃಷ್ಟಿಯಾಗುತ್ತದೆ ಎಂದು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದರು ಎಂದು ಸಚಿವರು ತಿಳಿಸಿದರು.

ಪ್ರಸ್ತಾವನೆಗೆ ಒಪ್ಪಿಗೆ

ದೇಶದಲ್ಲಿ 5ಇಂಟರ್ ನೆಟ್ ಸೇವೆಗೆ ಉತ್ತಮ ಬಿಡ್ಡರ್ ಗಳಿಗೆ ಹರಾಜು ನೀಡಲು ಉದ್ದೇಶಿಸಲಾದ ದೂರಸಂಪರ್ಕ ಇಲಾಖೆ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ನಂತರವೇ ಸಂಪುಟದಲ್ಲಿ ಅಂಗೀಕಾರಗೊಂಡಿದೆ. ಇದರ ಬೆನ್ನಲ್ಲೆ ಬಿಡ್ಡರ್ ಕಂಪನಿಗಳು ಈ ವರ್ಷಾಂತ್ಯಕ್ಕೆ ಕಾರ್ಯೋನ್ಮುಖವಾಗಲಿವೆ.

5G Service in India After 2023 march: Central Minister Ashwini Vaishnaw

6ಜಿಯಲ್ಲಿ ಭಾರತ ಅಗ್ರಗಣ್ಯ?

Recommended Video

Pakistan ಜನ Tea ಕುಡಿಯೋದನ್ನು ನಿಲ್ಲಿಸಬೇಕಂತೆ!! | OneIndia Kannada

ಭಾರತದಲ್ಲಿ ಐದನೇ ತರಂಗಾಂತರ ಸೇವೆಯನ್ನು 'ಟೆಲಿಕಾಂ ವ್ಯವಸ್ಥೆಯಲ್ಲಿನ ' ಹೊಸ ಯುಗ ಎಂದು ಬಣ್ಣಿಸಿರುವ ಸಚಿವ ಅಶ್ವಿನಿ ವೈಷ್ಣವ್ ಅವರು, ಬರಲಿವೆ 5ಜಿ ತಂತ್ರಜ್ಞಾನದಲ್ಲಿ ಹಾಗೂ ಭವಿಷ್ಯ 6ಜಿ ನೆಟ್ ವರ್ಕ ಸೇವೆ ಬಳಕೆಯಲ್ಲಿ ಸಹ ಭಾರತ ಪ್ರಮುಖ ರಾಷ್ಟ್ರವಾಗಿ ಹೊರ ಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

English summary
Central cabinet has cleared the 5G spectrum auction. Minister Ashwin Vaishnav said, 5G network service will be in India from March 2023.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X