ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೆಯುವ ಚಳಿ ನಡುವೆ 58 ಮನೆಗಳು ಬೆಂಕಿಗೆ ಆಹುತಿ

ಶಿಮ್ಲಾದ ತನ್ನು(tangnu) ಗ್ರಾಮದಲ್ಲಿ ಭಾನುವಾರ ಮುಂಜಾನೆ ಮೈ ಕೊರೆಯುವ ಚಳಿಯ ನಡುವೆ ಬೆಂಕಿ ಅವಘಡ ಸಂಭವಿಸಿದೆ. ಸುಮಾರು 58ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿಯಾಗಿವೆ.

By Mahesh
|
Google Oneindia Kannada News

ಶಿಮ್ಲಾ, ಜನವರಿ 15: ಶಿಮ್ಲಾದ ತನ್ನು(tangnu) ಗ್ರಾಮದಲ್ಲಿ ಭಾನುವಾರ ಮುಂಜಾನೆ ಮೈ ಕೊರೆಯುವ ಚಳಿಯ ನಡುವೆ ಬೆಂಕಿ ಅವಘಡ ಸಂಭವಿಸಿದೆ. ಸುಮಾರು 58ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿಯಾಗಿವೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ, ಆದರೆ, 200ಕ್ಕೂ ಅಧಿಕ ಮಂದಿ ಮನೆ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿಮ್ಲಾ ಮತ್ತು ಧರ್ಮಶಾಲಾ ಸುತ್ತಮುತ್ತ ಕಳೆದ ಕೆಲದಿನಗಳಿಂದ ಸಾಕಷ್ಟು ಚಳಿ ಇದ್ದು, ಅಲ್ಲಿನ ನಿವಾಸಿಗಳು ಬೆಂಕಿ ಕಾಯಿಸಲೇಬೇಕಾದ ಸ್ಥಿತಿ ಇದೆ. ಸಾವಿರಾರು ಪ್ರವಾಸಿಗಳು ಭೇಟಿ ನೀಡುವ ಸಂದರ್ಭದಲ್ಲಿ ಘಟನೆ ನಡೆದಿರುವುದು ಸಹಜವಾಗಿ ಎಲ್ಲರಲ್ಲೂ ಆತಂಕ ಮೂಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

58 houses gutted in fire in Himachal Pradesh

ಪೈನ್ ಮರಗಳಿರುವ ಪ್ರದೇಶ ಇದಾಗಿದ್ದರಿಂದ ಬೆಂಕಿ ಬೇಗ ಪಸರಿಸಿತು ಎಂದು ಹೇಳಲಾಗುತ್ತಿದೆ. ಅರಣ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಅಂದಾಜು 8,600 ಎಕರೆ ಜಾಗದಲ್ಲಿರುವ ಮರಗಳು ಬೆಂಕಿಗಾಹುತಿಯಾಗಿವೆ.(ಪಿಟಿಐ)

English summary
As many as 58 houses were gutted in a massive fire at Tangnu village in Rohroo area here, rendering around 216 persons homeless and over a dozen cattle dead, officials said today(January 15).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X