ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಿಂದ ಐರ್ಲೆಂಡ್‌ಗೆ ತೆರಳಲಿದ್ದಾರೆ ಕೇರಳದ 55 ನರ್ಸ್‌ಗಳು

|
Google Oneindia Kannada News

ನವದೆಹಲಿ, ಜೂನ್ 01 : ವಂದೇ ಭಾರತ್ ಮಿಷನ್ ಅಡಿ ದೆಹಲಿಯಿಂದ ಐರ್ಲೆಂಡ್‌ಗೆ ಏರ್ ಇಂಡಿಯಾ ವಿಮಾನ ಇಂದು ಸಂಚಾರ ನಡೆಸಲಿದೆ. ಕೇರಳದ 55 ನರ್ಸ್‌ಗಳು ಈ ವಿಮಾನದಲ್ಲಿ ಐರ್ಲೆಂಡ್‌ಗೆ ತೆರಳಲಿದ್ದಾರೆ.

ಐರ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದ ಕೆಲವು ನರ್ಸ್‌ಗಳು ರಜೆ ಮೇಲೆ ಕೇರಳಕ್ಕೆ ಬಂದಿದ್ದರು. ಇನ್ನೂ ಕೆಲವರು ಈಗ ಕೆಲಸಕ್ಕೆ ಸೇರಿದ್ದು, ಮೊದಲ ಬಾರಿಗೆ ಅಲ್ಲಿಗೆ ತೆರಳುತ್ತಿದ್ದಾರೆ. ಏಪ್ರಿಲ್ 10ರಂದು ತೆರಳಬೇಕಿದ್ದ ಎಲ್ಲರೂ ಲಾಕ್ ಡೌನ್ ಪರಿಣಾಮ ತಡವಾಗಿ ಹೊರಡುತ್ತಿದ್ದಾರೆ.

ಬಳ್ಳಾರಿಯಲ್ಲಿ ಸೋಂಕಿತನಿಗೆ ಚಿಕಿತ್ಸೆ ನೀಡಿದ ನರ್ಸ್ ಗೆ ಕೊರೊನಾ ವೈರಸ್! ಬಳ್ಳಾರಿಯಲ್ಲಿ ಸೋಂಕಿತನಿಗೆ ಚಿಕಿತ್ಸೆ ನೀಡಿದ ನರ್ಸ್ ಗೆ ಕೊರೊನಾ ವೈರಸ್!

ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ಅಂತರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತವಾಯಿತು. ಆದ್ದರಿಂದ, ನರ್ಸ್‌ಗಳ ಪ್ರಯಾಣ ವಿಳಂಬವಾಗಿತ್ತು. ಈಗ ವಿಶೇಷ ಏರ್ ಇಂಡಿಯಾ ವಿಮಾನದಲ್ಲಿ ಸಂಚರಿಸಲಿದ್ದಾರೆ.

ದಾವಣಗೆರೆಯ ಸೋಂಕಿತ ಸ್ಟಾಫ್ ನರ್ಸ್ ಗುಣಮುಖ ದಾವಣಗೆರೆಯ ಸೋಂಕಿತ ಸ್ಟಾಫ್ ನರ್ಸ್ ಗುಣಮುಖ

 55 Nurses To Fly From Delhi To Ireland

ದುಬೈ, ಬೆಂಗಳೂರಿನಲ್ಲಿ ನರ್ಸ್‌ ಆಗಿ ಕೆಲಸ ಮಾಡಿದ್ದ ಟೀನಾ ಮ್ಯಾಥ್ಯೂ ಐರ್ಲೆಂಡ್‌ಗೆ ಹೋಗುತ್ತಿದ್ದಾರೆ. 4 ವರ್ಷದ ಮಗನನ್ನು ಕೇರಳದಲ್ಲಿಯೇ ಬಿಟ್ಟು ಹೋಗುತ್ತಿದ್ದು, ಆಕೆಯ ಪೋಷಕರು ಮಗುವನ್ನು ನೋಡಿಕೊಳ್ಳಲಿದ್ದಾರೆ.

ಶಿವಮೊಗ್ಗ: 9 ತಿಂಗಳ ತುಂಬು ಗರ್ಭಿಣಿ ನರ್ಸ್ ಗೆ ಸಿಎಂ ಕರೆಶಿವಮೊಗ್ಗ: 9 ತಿಂಗಳ ತುಂಬು ಗರ್ಭಿಣಿ ನರ್ಸ್ ಗೆ ಸಿಎಂ ಕರೆ

ಸೌಮ್ಯಾ ಮ್ಯಾಥ್ಯೂ ಎಂಬ ನರ್ಸ್‌ ಸಹ ಐರ್ಲೆಂಡ್‌ಗೆ ವಾಪಸ್ ಆಗುತ್ತಿದ್ದಾರೆ. ಕಳೆದ 12 ವರ್ಷಗಳಿಂದ ಅವರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. 55 ಜನರು ಸಹ ಏಪ್ರಿಲ್ 10ರಂದು ಐರ್ಲೆಂಡ್‌ಗೆ ಹೋಗಬೇಕಿತ್ತು. ಆದರೆ, ಲಾಕ್ ಡೌನ್ ಪರಿಣಾಮ ಜೂನ್ 1ರಂದು ಹೊರಡಲಿದ್ದಾರೆ.

ವಂದೇ ಭಾರತ್ ಮಿಷನ್ ಅಡಿ ಏರ್ ಇಂಡಿಯಾದ ವಿಶೇಷ ವಿಮಾನದಲ್ಲಿ 55 ಜನರು ಪ್ರಯಾಣ ಮಾಡಲಿದ್ದಾರೆ. ಐರ್ಲೆಂಡ್ ತಲುಪುತ್ತಿದ್ದಂತೆ 14 ದಿನಗಳ ಕಾಲ ಎಲ್ಲರೂ ಕ್ವಾರಂಟೈನ್‌ನಲ್ಲಿರಬೇಕು. ಬಳಿಕ ಎಲ್ಲರೂ ಕೆಲಸ ಆರಂಭಿಸಲಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ವಿದೇಶಗಳಲ್ಲಿ ಭಾರತದ ಅದರಲ್ಲೂ ಕೇರಳದ ನರ್ಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಯುಕೆಯಲ್ಲಿ ಶೇ 30, ಯುಸ್‌ನಲ್ಲಿ ಶೇ 15 ಮತ್ತು ಆಸ್ಟ್ರೇಲಿಯಾದಲ್ಲಿ ಶೇ 12ರಷ್ಟು ಕೇರಳಿಗರು ನರ್ಸ್‌ಗಳಾಗಿ ದುಡಿಯುತ್ತಿದ್ದಾರೆ.

English summary
Under vande bharat mission special Airindia flight will fly from Delhi to Ireland on June 1, 2020. 55 nurses from Kerala will travel in the flight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X