ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಿಂದ ಭಾರತಕ್ಕೆ ಬಂದ 545 ಆಕ್ಸಿಜನ್ ಕಾನ್ಸಂಟ್ರೇಟರ್

|
Google Oneindia Kannada News

ನವದೆಹಲಿ, ಮೇ 04; ಕೋವಿಡ್ 2ನೇ ಅಲೆ ತಡೆಯಲು ವಿಶ್ವದ ವಿವಿಧ ರಾಷ್ಟ್ರಗಳು ಭಾರತಕ್ಕೆ ಸಹಾಯ ಮಾಡುತ್ತಿವೆ. ಅಮೆರಿಕರಿಂದ ಐದನೇ ಬ್ಯಾಚ್‌ನ 545 ಆಕ್ಸಿಜನ್ ಕಾನ್ಸಂಟ್ರೇಟರ್ ಭಾರತಕ್ಕೆ ಬಂದು ತಲುಪಿದೆ.

ವಿದೇಶಾಂಗ ಸಚಿವಾಲಯದ ವಕ್ತಾರರಾದ ಅರಿಂದಮ್ ಬಾಗ್ಚಿ ಈ ಕುರಿತು ಟ್ವೀಟ್ ಮಾಡಿದ್ದಾರೆ. "ಅಮೆರಿಕದಿಂದ 5ನೇ ಹಂತದ ವೈದ್ಯಕೀಯ ಉಪಕರಣಗಳು ಬಂದಿವೆ. 545 ಆಕ್ಸಿಜನ್ ಕಾನ್ಸಂಟ್ರೇಟರ್ ಮಂಗಳವಾರ ಆಗಮಿಸಿದೆ" ಎಂದು ಹೇಳಿದ್ದಾರೆ.

ದ.ಕ ಜಿಲ್ಲೆಯಲ್ಲಿ 24 ಗಂಟೆಗಳಿಗೆ ಆಗುವಷ್ಟು ಮಾತ್ರ ಆಕ್ಸಿಜನ್ ಲಭ್ಯ!ದ.ಕ ಜಿಲ್ಲೆಯಲ್ಲಿ 24 ಗಂಟೆಗಳಿಗೆ ಆಗುವಷ್ಟು ಮಾತ್ರ ಆಕ್ಸಿಜನ್ ಲಭ್ಯ!

ಭಾರತಕ್ಕೆ ವೈದ್ಯಕೀಯ ಸಲಕರಣೆಗಳನ್ನು ಹೊತ್ತು ಸಾಗಬೇಕಿರುವ ಎರಡು ವಿಮಾನಗಳು ತಾಂತ್ರಿಕ ಕಾರಣದಿಂದ ತಡವಾಗಿವೆ. ಬುಧವಾರ ಅವು ದೇಶವನ್ನು ತಲುಪುವ ನಿರೀಕ್ಷೆ ಇದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ.

ಕೋವಿಡ್ 19: ಭಾರತದಿಂದ ಪ್ರಯಾಣಿಸುವವರಿಗೆ ಅಮೆರಿಕ ನಿರ್ಬಂಧಕೋವಿಡ್ 19: ಭಾರತದಿಂದ ಪ್ರಯಾಣಿಸುವವರಿಗೆ ಅಮೆರಿಕ ನಿರ್ಬಂಧ

545 Oxygen Concentrators Arrives From US

ಭಾನುವಾರ ಅಮೆರಿಕದಿಂದ 1.25 ಲಕ್ಷ ರೆಮ್ಡೆಸಿವಿರ್ ಲಸಿಕೆ ಹೊತ್ತ ವಿಮಾನ ಭಾರತಕ್ಕೆ ಆಗಮಿಸಿತ್ತು. ಶನಿವಾರ 1000 ಆಕ್ಸಿಜನ್ ಸಿಲಿಂಡರ್‌, ಇತರ ವೈದ್ಯಕೀಯ ಉಪಕರಣಗಳನ್ನು ಹೊತ್ತ ವಿಮಾನ ಆಗಮಿಸಿತ್ತು.

ಕೋವಿಡ್ 19: ಅಮೆರಿಕ ಭಾರತಕ್ಕೆ ಒದಗಿಸುತ್ತಿರುವ ವೈದ್ಯಕೀಯ ಸಾಮಗ್ರಿಗಳ ವಿವರ ಕೋವಿಡ್ 19: ಅಮೆರಿಕ ಭಾರತಕ್ಕೆ ಒದಗಿಸುತ್ತಿರುವ ವೈದ್ಯಕೀಯ ಸಾಮಗ್ರಿಗಳ ವಿವರ

ಕಳೆದ ವಾರ ಅಮೆರಿಕದಿಂದ ಎನ್ 95 ಮಾಸ್ಕ್, ಆಕ್ಸಿಜನ್ ಸಿಲಿಂಡರ್ ಹೊತ್ತ ಮೊದಲ ವಿಮಾನ ಭಾರತಕ್ಕೆ ಆಗಮಿಸಿತ್ತು. ಇದುವರೆಗೂ ಒಟ್ಟು 5 ವಿಮಾನಗಳು ದೇಶಕ್ಕೆ ಆಗಮಿಸಿದ್ದು, ತುರ್ತು ಅಗತ್ಯವಿರುವ ವೈದ್ಯಕೀಯ ಉಪಕರಣಗಳ ವ್ಯವಸ್ಥೆಯನ್ನು ಅಮೆರಿಕ ಮಾಡಿದೆ.

Recommended Video

Corona ಕಡಿಮೆಯಾಗಿದೆ ಎಂದು ವರದಿಯಾಗಲು ಇದೇ ಕಾರಣ | Oneindia Kannada

ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಕೊಂಚ ಇಳಿಮುಖ ಕಂಡುಬಂದಿದೆ. 3,68,147 ಹೊಸ ಪ್ರಕರಣಗಳು ದಾಖಲಾಗಿವೆ. 3,417 ಜನರು ಮೃತಪಟ್ಟಿದ್ದಾರೆ ಎಂದು ಸೋಮವಾರ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

English summary
India fight against COVID 19. 5th consignment carrying 545 oxygen concentrators arrives from America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X