ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್‌ಇ ಮರು ಮೌಲ್ಯಮಾಪನ : 50 ವಿದ್ಯಾರ್ಥಿಗಳ ಅಂಕ ಹೆಚ್ಚಳ

By Nayana
|
Google Oneindia Kannada News

ನವದೆಹಲಿ, ಜು.25: ಈ ಬಾರಿಯ ಸಿಬಿಎಸ್‌ಇ ಪರೀಕ್ಷೆ ಫಲಿತಾಂಶದ ಬಳಿಕ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದವರಲ್ಲಿ ಬಹುತೇಕ ವಿದ್ಯಾರ್ಥಿಗಳ ಅಂಕಗಳು ಹೆಚ್ಚಾಗಿವೆ.

ನಾಗಪುರದ ವಿದ್ಯಾರ್ಥಿನಿ 12 ತರಗತಿ ವಿದ್ಯಾರ್ಥಿನಿ ಇಶ್ರಿತಾ ರಾಜ್ಯಶಾಸ್ತ್ರವನ್ನು ಮಾತ್ರ ಹೊರತುಪಡಿಸಿ ಉಳಿದೆಲ್ಲಾ ವಿಷಯಗಳಲ್ಲೂ 95ಕ್ಕಿಂತ ಹೆಚ್ಚು ಅಂಕ ಪಡೆದಿದ್ದಳು, ಟಾಪರ್‌ ಆಗುವ ಕನಸು ಹೊಂಡಿದ್ದಳು, ಆದರೆ ಅಂಕ ಕಡಿಮೆ ಬಂದಿದ್ದರಿಂದ ಆಕೆಗೆ ತುಂಬಾ ಬೇಸರವಾಗಿತ್ತು. ಇದೀಗ ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ ಇದೀಗ 22 ಅಂಕಗಳು ಹೆಚ್ಚಾಗಿದ್ದು, ಟಾಪರ್‌ ಪಟ್ಟಿಯಲ್ಲಿ ಅವಳ ಹೆಸರು ಸೇರ್ಪಡೆಯಾಗುವಂತಾಗಿದೆ.

ಸಿಬಿಎಸ್‌ಇ ಫಲಿತಾಂಶ: ಟಾಪ್‌ 3 ಪಟ್ಟಿಯಲ್ಲಿ ಕರ್ನಾಟಕ ಇಲ್ಸಿಬಿಎಸ್‌ಇ ಫಲಿತಾಂಶ: ಟಾಪ್‌ 3 ಪಟ್ಟಿಯಲ್ಲಿ ಕರ್ನಾಟಕ ಇಲ್

ಅರ್ಜಿ ಸಲ್ಲಿಸಿದ 9,111 ವಿದ್ಯಾರ್ಥಿಗಳಲ್ಲಿ ಬರೋಬ್ಬರಿ 4,632 ವಿದ್ಯಾರ್ಥಿಗಳ ಉತ್ತರ ಪತ್ರಿಕೆಯಲ್ಲಿ ಮೌಲ್ಯಮಾಪನ ದೋಷಗಳು ಕಂಡುಬಂದಿವೆ. ಸರಿಯಾದ ಉತ್ತರಗಳಿಗೆ ಶೂನ್ಯ ಅಂಕ, ಸರಣಿ ಉತ್ತರಗಳನ್ನು ಮೌಲ್ಯಮಾಪನ ಮಾಡದೇ ಇರುವುದು ಸೇರಿದಂತೆ ಅನೇಕ ತಪ್ಪುಗಳನ್ನೆಸಲಾಗಿದೆ.

50percent Class 12 CBSE students who asked for reval got more marks

ದೆಹಲಿಯ ವಿದ್ಯಾರ್ಥಿಯೊಬ್ಬರಿಗೂ ಹೀಗೆಯೇ ಆಗಿದ್ದು, ಮೌಲ್ಯಮಾಪನದಿಂದ ಹೆಚ್ಚು ಅಂಕ ಪಡೆದಿದ್ದಾರೆ, ಆದರೆ ಒಬ್ಬರೋ ಇಬ್ಬರಿಗೆ ಅಲ್ಲ ಈ ಬಾರಿ ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದವರಲ್ಲಿ ಬಹುತೇಕ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.

English summary
Ishrita Gupta is the Class XII CBSE board topper in Nagpur today because she didn’t accept her low marks in political science, and opted for re-evaluation. A brilliant student, Ishrita had more than 95 marks in all other subjects. Sure enough, re-evaluation showed 17 of her answers had been incorrectly marked, and her score increased by 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X