• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ 500 ರೈಲ್ವೆ ನಿಲ್ದಾಣಗಳಲ್ಲಿ ವೈಫೈ : ಗೂಗಲ್

By Mahesh
|
Google Oneindia Kannada News

ನವದೆಹಲಿ, ಡಿ. 16: ಭಾರತಕ್ಕಾಗಿ ಗೂಗಲ್ ಕಂಡಿರುವ ಕನಸುಗಳನ್ನು ಸಿಇಒ ಸುಂದರ್ ಪಿಚ್ಚೈ ಅವರು ಬುಧವಾರ ಹಂಚಿಕೊಂಡಿದ್ದಾರೆ. ಇದರಲ್ಲಿ ರೈಲ್ವೆ ನಿಲ್ದಾಣಗಳಿಗೆ ವೈಫೈ ಒದಗಿಸುವ ಯೋಜನೆ ಪ್ರಮುಖವಾಗಿದೆ.

2016ರ ಅಂತ್ಯದೊಳಗೆ ಭಾರತದ 100 ರೈಲ್ವೆ ನಿಲ್ದಾಣಗಳಿಗೆ ಇಂಟರ್ನೆಟ್ ಸಂಪರ್ಕ ಒದಗಿಸಲಾಗುತ್ತದೆ. ರೈಲ್ ಟೆಲ್ ಜೊತೆ ಸಹಯೋಗದೊಂದಿಗೆ ಜನವರಿ 2016ರ ವೇಳೆಗೆ ಮುಂಬೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವೈಫೈ ಸೌಲಭ್ಯ ಬಳಸಬಹುದಾಗಿದೆ ಎಂದು ಸುಂದರ್ ಭರವಸೆ ನೀಡಿದ್ದಾರೆ.[ಭಾರತಕ್ಕಾಗಿ ಗೂಗಲ್, ಪಿಚ್ಚೈ ಹಂಚಿದ ಕನಸುಗಳೇನು?]

ರೈಲ್ವೆ ಇಲಾಖೆಯ ಟೆಲಿಕಾಂ ವಿಭಾಗವಾದ ರೈಲ್ ಟೆಲ್ ನ ಸಹಯೋಗದೊಂದಿಗೆ ಈ ಯೋಜನೆಯನ್ನು ದೇಶದೆಲ್ಲೆಡೆರುವ 400 ನಿಲ್ದಾಣಗಳಿಗೆ ವಿಸ್ತರಿಸಲಾಗುತ್ತದೆ. ಒಟ್ಟಾರೆ 500 ರೈಲು ನಿಲ್ದಾಣಗಳಿಗೆ ವೈಫೈ ಒದಗಿಸುವುದು ನಮ್ಮ ಗುರಿ ಎಂದರು.[ಸುಂದರ್ ಪಿಚೈ- ಗೂಗಲ್ ಸಿಇಒ ಬಗ್ಗೆ ಒಂದಿಷ್ಟು]

ಗ್ರಾಮೀಣ ಭಾಗಕ್ಕೆ ನೆರವಾಗಬಲ್ಲ ಕಡಿಮೆ ದರದಲ್ಲಿ ಸಂಪರ್ಕ ಸಾಧ್ಯತೆ ನೀಡುವ ಪ್ರಾಜೆಕ್ಟ್ ಲೂನ್ ಭಾರತಕ್ಕೂ ತರಲಾಗುವುದು. ಇಂಟರ್ನೆಟ್ ಸಂಪರ್ಕ ಎಲ್ಲರಿಗೂ ಸಿಗುವಂತೆ ಮಾಡುವುದು. ಸರಿಯಾದ ಸಮಯಕ್ಕೆ ಸರಿಯಾದ ಮಾಹಿತಿ ಜನತೆಗೆ ಸಿಗುವಂತಾಗಬೇಕು ಭಾರತದಿಂದ ನಾನು ಹೆಚ್ಚು ಪಡೆದುಕೊಂಡಿದ್ದೇನೆ ಈಗ ಗೂಗಲ್ ಮೂಲಕ ಭಾರತಕ್ಕೆ ವಾಪಸ್ ಕೊಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದರು.

ಪ್ರಧಾನಿ ಮೋದಿ ಅವರು ಕ್ಯಾಲಿಫೋರ್ನಿಯಾದ ಗೂಗಲ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಕುರಿತು ಮಾತುಕತೆ ನಡೆಸಲಾಗಿತ್ತು. 2015ರ ಸೆಪ್ಟೆಂಬರ್ ತಿಂಗಳಿನಲ್ಲಿ ವೈಫೈ ಹೊಂದಲಿರುವ ಭಾರತದ 100 ರೈಲು ನಿಲ್ದಾಣಗಳ ಪಟ್ಟಿಯನ್ನು ತಯಾರಿಸಲಾಗಿತ್ತು. ಮೋದಿ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಗೆ ಪೂರಕವಾಗಿ ಗೂಗಲ್ ಈ ಯೋಜನೆ ಕೈಗೊಂಡಿದೆ.

English summary
Technology giant Google will bring Internet connectivity to 100 railway stations across the country by next year, its CEO Sundar Pichai said. This is part of the US-based firm's focus on bringing Internet to everyone in India, which has the world's second largest population.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X