ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2018ರ ಜೂನ್ ಹೊತ್ತಿಗೆ ಭಾರತದಲ್ಲಿ ಇಂಟರ್ ನೆಟ್ ಬಳಕೆದಾರರು 50 ಕೋಟಿ

|
Google Oneindia Kannada News

ರೋಟಿ, ಕಪಡಾ, ಮಕಾನ್ ಇವು ಜೀವನಾವಶ್ಯಕವಾದವು. ಇದಕ್ಕೆ ಹೊಸ ಸೇರ್ಪಡೆ ಅಂದರೆ ಇಂಟರ್ ನೆಟ್. ಏಕೆಂದರೆ ವರದಿಯೊಂದರ ಅಂಕಿ-ಅಂಶ ಇದನ್ನು ಬಹಿರಂಗ ಪಡಿಸಿದೆ. ಕಳೆದ ವರ್ಷದ ಡಿಸೆಂಬರ್ ಅಂತ್ಯಕ್ಕೆ ಅಂದಾಜಿಸಿದಂತೆ ಭಾರತದಲ್ಲಿನ ಇಂಟರ್ ನೆಟ್ ಬಳಕೆದಾರರ ಸಂಖ್ಯೆ 48.1 ಕೋಟಿ. 2016ರ ಡಿಸೆಂಬರ್ ಅಂತ್ಯಕ್ಕೆ ಹೋಲಿಸಿದರೆ ಶೇ 11.34ರಷ್ಟು ಬಳಕೆದಾರರು ಹೆಚ್ಚಾಗಿದ್ದಾರೆ.

ಭಾರತದ ಗ್ರಾಮೀಣ ಭಾಗದಲ್ಲಿ ಇಂಟರ್ ನೆಟ್ ಬಳಸುವವರ ಪ್ರಮಾಣದಲ್ಲಿನ ಏರಿಕೆ ಗಮನಾರ್ಹವಾಗಿದೆ. ಏಕೆಂದರೆ ಆ ಭಾಗದಲ್ಲಿ ಇಂಟರ್ ನೆಟ್ ಬಳಸುವವರೇ ಕಡಿಮೆ ಇದ್ದರು. ಹಾಗೆ ಒಟ್ಟಾರೆಯಾಗಿ ನೋಡಿದಾಗ ಈಗಲೂ ಗ್ರಾಮೀಣ ಭಾಗದಲ್ಲಿ ಇಂಟರ್ ನೆಟ್ ಬಳಸುವವರು ಸಂಖ್ಯೆ ಕಡಿಮೆಯೇ ಇದೆ.

500 ರುಪಾಯಿಗೆ 4G ಸ್ಮಾರ್ಟ್ ಫೋನ್, ರು. 60ಕ್ಕೆ ಕಾಲ್, ಇಂಟರ್ ನೆಟ್500 ರುಪಾಯಿಗೆ 4G ಸ್ಮಾರ್ಟ್ ಫೋನ್, ರು. 60ಕ್ಕೆ ಕಾಲ್, ಇಂಟರ್ ನೆಟ್

2018ರ ಜೂನ್ ಹೊತ್ತಿಗೆ ಇಂಟರ್ ನೆಟ್ ಬಳಕೆ ಮಾಡುವವರ ಸಂಖ್ಯೆ 50 ಕೋಟಿ ತಲುಪುವ ಅಂದಾಜಿದೆ. 'ಭಾರತದಲ್ಲಿ ಅಂತರ್ಜಾಲ 2017' ಎಂಬ ವರದಿ ಈ ಅಂಕಿ-ಅಂಶವನ್ನು ಬಯಲು ಮಾಡಿದೆ. ಈ ವರದಿಯನ್ನು ಸಿದ್ಧಪಡಿಸಿರುವುದು ಇಂಟರ್ ನೆಟ್ ಅಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಕಂತರ್ ಐಎಂಆರ್ ಬಿ.

ಈ ವರದಿ ಪ್ರಕಾರವೇ ಹೇಳುವುದಾದರೆ, ಡಿಸೆಂಬರ್ 2017ರ ಅಂತ್ಯಕ್ಕೆ ಭಾರತದ ಒಟ್ಟು ಜನಸಂಖ್ಯೆಯ ಶೇ 35ರಷ್ಟು ಮಂದಿ ಇಂಟರ್ ನೆಟ್ ಬಳಕೆ ಮಾಡುತ್ತಿದ್ದಾರೆ. ಇಡೀ ವರದಿಯಲ್ಲಿ ಬಯಲು ಮಾಡಿರುವ ಅಂಕಿ-ಅಂಶಗಳು ನಮ್ಮೆಲ್ಲರ ಜೀವನದ ಮೇಲೆ ಇಂಟರ್ ನೆಟ್ ನ ಪ್ರಭಾವ ಯಾವ ಮಟ್ಟದಲ್ಲಿ ಆಗಿದೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಡುತ್ತದೆ.

ಒಂದೇ ವರ್ಷದಲ್ಲಿ ಭರ್ಜರಿ ಏರಿಕೆ

ಒಂದೇ ವರ್ಷದಲ್ಲಿ ಭರ್ಜರಿ ಏರಿಕೆ

ವರದಿಯ ಮುಖ್ಯಾಂಶಗಳ ಪ್ರಕಾರ, ಡಿಸೆಂಬರ್ 2016ಕ್ಕೆ ಹೋಲಿಸಿದರೆ ನಗರ ಪ್ರದೇಶದಲ್ಲಿ ಇಂಟರ್ ನೆಟ್ ಬಳಕೆದಾರರ ಸಂಖ್ಯೆಯಲ್ಲಿ ಶೇ 9.66ರಷ್ಟು ಏರಿಕೆಯಾಗಿದೆ. ಸದ್ಯಕ್ಕೆ ಅಂದಾಜು ಮಾಡಿರುವಂತೆ 2017ರ ಡಿಸೆಂಬರ್ ಕೊನೆಗೆ 29.5 ಕೋಟಿ ಬಳಕೆದಾರರಿದ್ದಾರೆ. ಇನ್ನು ಗ್ರಾಮೀಣ ಭಾರತದಲ್ಲಿ 2016ರ ಡಿಸೆಂಬರ್ ನಿಂದ ಶೇ 14.11ರಷ್ಟು ಪ್ರಗತಿಯಾಗಿದೆ. ಸದ್ಯಕ್ಕೆ ಅಂದಾಜಿಸಿದಂತೆ 2017ರ ಡಿಸೆಂಬರ್ ಅಂತ್ಯಕ್ಕೆ 18.6 ಕೋಟಿ ಇಂಟರ್ ನೆಟ್ ಬಳಕೆದಾರರಿದ್ದಾರೆ.

ಗ್ರಾಮೀಣ ಪ್ರದೇಶದವರೇ ಮುಂದೆ

ಗ್ರಾಮೀಣ ಪ್ರದೇಶದವರೇ ಮುಂದೆ

ನಗರ ಪ್ರದೇಶದಲ್ಲಿನ ಇಂಟರ್ ನೆಟ್ ಬಳಕೆದಾರರು 2017ರ ಡಿಸೆಂಬರ್ ಕೊನೆಗೆ ಶೇ 64.84 ಇದೆ. 2016ರ ಡಿಸೆಂಬರ್ ನಲ್ಲಿ ಈ ಪ್ರಮಾಣ ಶೇ 60.6 ಇತ್ತು. ಕಳೆದ ಡಿಸೆಂಬರ್ ನಲ್ಲಿ ಇಂಟರ್ ನೆಟ್ ಬಳಸುವ ಗ್ರಾಮೀಣ ಭಾಗದವರ ಏರಿಕೆ ಪ್ರಮಾಣ ಶೇ 18ರಷ್ಟು ಇದ್ದರೆ, 2017ರ ಡಿಸೆಂಬರ್ ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 20.26ರಷ್ಟು ಏರಿಕೆ ಆಗಿದೆ.

18.29 ಕೋಟಿ ಮಂದಿ ನಿತ್ಯ ಇಂಟರ್ ನೆಟ್ ಬಳಕೆ

18.29 ಕೋಟಿ ಮಂದಿ ನಿತ್ಯ ಇಂಟರ್ ನೆಟ್ ಬಳಕೆ

ವರದಿಯೇ ತಿಳಿಸಿರುವ ಮಾಹಿತಿ ಪ್ರಕಾರ, ಅಂದಾಜು 28.2 ಕೋಟಿ ನಿತ್ಯ ಇಂಟರ್ ನೆಟ್ ಬಳಸುವವರಿದ್ದಾರೆ. ಆ ಪೈಕಿ 18.29 ಕೋಟಿ ಅಥವಾ ಶೇ 62ರಷ್ಟು ಮಂದಿ ನಗರ ಪ್ರದೇಶದಲ್ಲಿ ನಿತ್ಯವೂ ಇಂಟರ್ ನೆಟ್ ನೋಡುತ್ತಾರೆ. ಅದೇ ಗ್ರಾಮೀಣ ಭಾಗದಲ್ಲಿ 9.8 ಕೋಟಿ ಅಥವಾ ಶೇ 53ರಷ್ಟು ಗ್ರಾಮೀಣ ಭಾಗದಲ್ಲಿ ನಿತ್ಯ ಇಂಟರ್ ನೆಟ್ ಬಳಸುತ್ತಾರೆ.

ಗ್ರಾಮೀಣ ಭಾಗದಲ್ಲಿ ಈಗಲೂ ಕಡಿಮೆ ಬಳಕೆ

ಗ್ರಾಮೀಣ ಭಾಗದಲ್ಲಿ ಈಗಲೂ ಕಡಿಮೆ ಬಳಕೆ

ನಿತ್ಯ ಇಂಟರ್ ನೆಟ್ ಬಳಕೆ ಗ್ರಾಮೀಣ- 53% ನಗರ- 62 %

ವಾರಕ್ಕೆ ಒಮ್ಮೆ ಬಳಕೆ ಗ್ರಾಮೀಣ- 19% ನಗರ- 21%

ತಿಂಗಳಲ್ಲಿ ಎರಡು- ಮೂರು ಬಾರಿ ಬಳಕೆ ಗ್ರಾಮೀಣ- 1% ನಗರ- 2%

ತಿಂಗಳಲ್ಲಿ ಒಮ್ಮೆ ಬಳಕೆ ಗ್ರಾಮೀಣ- 1% ನಗರ- 1%

ತಿಂಗಳಿಗಿಂತ ಕಡಿಮೆ ಗ್ರಾಮೀಣ- 26% ನಗರ- 14%

ಡಿಜಿಟಲ್ ಸಾಕ್ಷರತೆ ಹೆಚ್ಚಾಗಬೇಕಿದೆ

ಡಿಜಿಟಲ್ ಸಾಕ್ಷರತೆ ಹೆಚ್ಚಾಗಬೇಕಿದೆ

ಇಂಟರ್ ನೆಟ್ ಬಳಸುವವರಲ್ಲಿ ಪುರುಷರ ಸಂಖ್ಯೆಯೇ ಹೆಚ್ಚಿದೆ. ಒಂದು ಅಂದಾಜಿನ ಪ್ರಕಾರ ಇಂಟರ್ ನೆಟ್ ಬಳಸುವ ಮಹಿಳೆಯರ ಸಂಖ್ಯೆ 14.3 ಕೋಟಿ. ಇಂಟರ್ ನೆಟ್ ಬಳಸುವವರ ಸಂಖ್ಯೆಯಲ್ಲಿ ಶೇ 30ರಷ್ಟು ಮಾತ್ರ ಮಹಿಳೆಯರು. ಗ್ರಾಮೀಣ ಭಾರತದಲ್ಲೂ ಡಿಜಿಟಲ್ ಇಂಡಿಯಾ ಮುನ್ನುಗ್ಗುತ್ತಿದ್ದರೂ ಬಳಕೆದಾರರಲ್ಲಿ ಲಿಂಗ ಅಸಮಾನತೆಯ ಪ್ರಮಾಣ ಹೆಚ್ಚಾಗಿಯೇ ಇದೆ. ಆದ್ದರಿಂದ ಡಿಜಿಟಲ್ ಸಾಕ್ಷರತೆ ಹೆಚ್ಚಾಗಬೇಕಿದೆ. ಲಿಂಗಾನುಪಾತದಲ್ಲೇ ತಿಳಿಸಬೇಕು ಅಂದರೆ 100 ಬಳಕೆದಾರರಲ್ಲಿ 64 ಪುರುಷರು, 36 ಮಹಿಳೆಯರಿದ್ದಾರೆ. 2016ರ ನಂತರ ಗ್ರಾಮೀಣ ಭಾಗದ ಮಹಿಳೆಯರ ಇಂಟರ್ ನೆಟ್ ಬಳಕೆ ಬಗ್ಗೆ ಅರಿವು ಹೆಚ್ಚಾಗಿರುವುದು ಕಂಡುಬಂದಿದೆ.

ಕಾಲೇಜು- ಶಾಲೆಗೆ ಹೋಗುವವರೇ ಹೆಚ್ಚು

ಕಾಲೇಜು- ಶಾಲೆಗೆ ಹೋಗುವವರೇ ಹೆಚ್ಚು

ಇಂಟರ್ ನೆಟ್ ಬಳಸುವವರು ಯಾರು ಎಂದು ವರ್ಗೀಕರಣ ಮಾಡಿ, ಶೇಕಡಾವಾರು ವಿಂಗಡಣೆ ಮಾಡಿ ವರದಿ ನೀಡಲಾಗಿದೆ. ಆದರನ್ವಯ ಲೆಕ್ಕಾಚಾರ ಹೀಗಿದೆ.

ಅನಕ್ಷರಸ್ಥರು -ಹದಿನೆಂಟಕ್ಕಿಂತ ಕಡಿಮೆ ವಯಸ್ಸಿನವರು ಶೇ 3

ಕಾಲೇಜು ವಿದ್ಯಾರ್ಥಿಗಳು, ಶಾಲೆಗೆ ಹೋಗುವ ಮಕ್ಕಳು ಶೇ 33

ಯುವಕರು ಶೇ 26

ವಯಸ್ಸಾದ ಪುರುಷರು ಶೇ 14

ಉದ್ಯೋಗಸ್ಥ ಮಹಿಳೆಯರು ಶೇ 9

ಉದ್ಯೋಗದಲ್ಲಿ ಇಲ್ಲದ ಮಹಿಳೆಯರು ಶೇ 15

English summary
The number of Internet users in India was estimated to be 48.1 crore in December 2017, a growth of 11.34% over December 2016 estimated figures. The number of internet users is expected to reach 50 crore by June 2018, according to a report ‘Internet in India 2017’, published jointly by the Internet and Mobile Association of India & Kantar IMRB.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X