• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜನರನ್ನು ಮರುಳಾಗಿಸುವ ಆರೋಗ್ಯ ಕುರಿತ ಜಾಹೀರಾತಿಗೆ ಬೀಳಲಿದೆ ಭಾರಿ ದಂಡ, ಶಿಕ್ಷೆ

|

ನವದೆಹಲಿ, ಫೆಬ್ರವರಿ 5: 'ಈ ಕ್ರೀಮ್ ಹಚ್ಚಿದರೆ ನಿಮ್ಮ ಚರ್ಮ ಕಾಂತಿಯುತವಾಗುತ್ತದೆ', ಈ ಶಾಂಪುವಿನಿಂದ ಕೂದಲಿನ ಉದುರುವಿಕೆ ನಿಂತು ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತದೆ', 'ಈ ಪೌಡರ್ ಕುಡಿದರೆ ನೀವು ಎತ್ತರ ಆಗುತ್ತೀರಿ' ಎಂದು ಜನರನ್ನು ಮೋಡಿ ಮಾಡಿ ವಂಚಿಸುವ ಉತ್ಪನ್ನಗಳಿಗೆ ಸಂಕಷ್ಟ ಎದುರಾಗಿದೆ.

ಈ ರೀತಿ ಔಷಧ ರೂಪದಲ್ಲಿ ಚಿಕಿತ್ಸೆ ನೀಡುವುದಾಗಿ ಜನರನ್ನು ವಂಚಿಸುವ ಜಾಹೀರಾತುಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.

ತಪ್ಪುದಾರಿಗೆ ಎಳೆಯುವ ಜಾಹೀರಾತು: ಸೆಲೆಬ್ರಿಟಿಗಳಿಗೆ ಕಂಟಕ

ಔಷಧ ಮತ್ತು ಐಂದ್ರಜಾಲಿಕ ಪರಿಹಾರಗಳ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆ, 1954ಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಪ್ರಸ್ತಾವ ಸಲ್ಲಿಸಿದೆ. ಸರ್ಕಾರ ಸಿದ್ಧಪಡಿಸಿರುವ ಕರಡು ಮಸೂದೆ ಪ್ರಕಾರ, ಚರ್ಮದ ಕಾಂತಿ, ಕಿವುಡುತನ, ಎತ್ತರದ ಸುಧಾರಣೆ, ಕೂದಲು ಉದುರುವಿಕೆ ಅಥವಾ ಬೆಳ್ಳಗಾಗುವಿಕೆ, ಸ್ಥೂಲಕಾಯ ಸೇರಿದಂತೆ ವಿವಿಧ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಔಷಧೀಯ ಉತ್ಪನ್ನಗಳ ಬಳಕೆಗಾಗಿ ಜಾಹೀರಾತು ಪ್ರಚಾರ ನೀಡಿದರೆ 50 ಲಕ್ಷ ರೂ.ವರೆಗೆ ದಂಡ ಮತ್ತು ಐದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದು.

ಮೊದಲ ಅಪರಾಧಕ್ಕೆ ಎರಡು ವರ್ಷ

ಮೊದಲ ಅಪರಾಧಕ್ಕೆ ಎರಡು ವರ್ಷ

ಔಷಧ ಮತ್ತು ಐಂದ್ರಜಾಲಿಕ ಪರಿಹಾರಗಳ (ಆಕ್ಷೇಪಾರ್ಹ ಜಾಹೀರಾತುಗಳು) (ತಿದ್ದುಪಡಿ) ಮಸೂದೆಯಲ್ಲಿ ಹೊಸ ಕರಡು, ಮೊದಲ ಬಾರಿ ಅಪರಾಧ ಎಸಗಿದರೆ 10 ಲಕ್ಷ ರೂ,ವರೆಗೆ ದಂಡ ಮತ್ತು ಎರಡು ವರ್ಷಗಳವರೆಗೆ ಜೈಲುಶಿಕ್ಷೆಯನ್ನು ಪ್ರಸ್ತಾಪಿಸಿದೆ. ಈ ಅಪರಾಧ ಪುನರಾವರ್ತನೆಯಾದರೆ ಶಿಕ್ಷೆಯನ್ನು ಐದು ವರ್ಷಗಳವರೆಗೂ ವಿಸ್ತರಿಸಬಹುದು ಹಾಗೂ 50 ಲಕ್ಷ ರೂ.ವರೆಗೂ ದಂಡ ಹಾಕಬಹುದು.

ಪ್ರಸ್ತುತ ಇರುವ ಕಾನೂನಿನಂತೆ ಮೊದಲ ಅಪರಾಧಕ್ಕೆ ದಂಡ ಅಥವಾ ದಂಡ ರಹಿತವಾಗಿ ಆರು ತಿಂಗಳವರೆಗೆ ಜೈಲು ಶಿಕ್ಷೆ ಹಾಗೂ ಎರಡನೆಯ ಬಾರಿ ಅಪರಾಧ ಎಸಗಿದರೆ ಒಂದು ವರ್ಷದವರೆಗೆ ಜೈಲುಶಿಕ್ಷೆ ವಿಧಿಸಲು ಅವಕಾಶವಿದೆ.

ಯಂತ್ರ ತಂತ್ರ ವಿದ್ಯೆ ಪ್ರಚಾರ

ಯಂತ್ರ ತಂತ್ರ ವಿದ್ಯೆ ಪ್ರಚಾರ

ಯಂತ್ರ, ತಂತ್ರ, ಮಂತ್ರಶಕ್ತಿ, ಕವಚ, ತಾಯತ ಮುಂತಾದ ಪವಾಡ ಶಕ್ತಿಗಳ ಮೂಲಕ ಮನುಷ್ಯರು ಅಥವಾ ಪ್ರಾಣಿಗಳ ಯಾವುದೇ ರೀತಿಯ ಕಾಯಿಲೆಗಳನ್ನು ಪತ್ತೆಹಚ್ಚುವ, ಗುಣಪಡಿಸುವ, ತಗ್ಗಿಸುವ, ಚಿಕಿತ್ಸೆ ನೀಡುವ ಅಥವಾ ತಡೆಯುವ ಅಥವಾ ದೇಹದ ರಚನೆ, ಅಂಗಾಂಗಗಳ ಕಾರ್ಯಾಚರಣೆಯ ಮೇಲೆ ಪ್ರಭಾವ ಬೀರುವುದಾಗಿ ಹೇಳುವಂತಹ ಜಾಹೀರಾತುಗಳನ್ನು 'ಐಂದ್ರಜಾಲಿಕ ಪರಿಹಾರ' ಎಂದು ಪರಿಗಣಿಸಲಾಗುತ್ತದೆ.

ಅವಹೇಳನಾಕಾರಿ ಜಾಹೀರಾತು: ನಟ ಅಕ್ಷಯ್ ಕುಮಾರ್ ವಿರುದ್ಧ ಮರಾಠ ಸಂಘಟನೆ ದೂರು

ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಸಮಯಕ್ಕೆ ಅನುಗುಣವಾಗಿ ಈ ಕಾಯ್ದೆಗೆ ತಿದ್ದುಪಡಿ ತರುವುದು ಅಗತ್ಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.

ಯಾವುದು ಜಾಹೀರಾತು ಎನಿಸುತ್ತದೆ?

ಯಾವುದು ಜಾಹೀರಾತು ಎನಿಸುತ್ತದೆ?

ಈ ಕರಡು ಮಸೂದೆಯು ಯಾವುದೇ ಆಡಿಯೋ ಅಥವಾ ದೃಶ್ಯ ಪ್ರಚಾರ, ಪ್ರತಿನಿಧಿಸುವಿಕೆ, ದೃಢೀಕರಣ ಅಥವಾ ಬೆಳಕು, ಶಬ್ಧ, ಹೊಗೆ, ಅನಿಲ, ಮುದ್ರಣ, ವಿದ್ಯುನ್ಮಾನ ಮಾಧ್ಯಮ, ಅಂತರ್ಜಾಲ, ವೆಬ್‌ಸೈಟ್ ಮೂಲಕ ಘೋಷಣೆ ಮಾಡುವುದು ಮತ್ತು ಯಾವುದೇ ನೋಟಿಸ್, ಸುತ್ತೋಲೆ, ಲೇವಲ್, ಕರಪತ್ರ, ಬ್ಯಾನರ್, ಪೋಸ್ಟರ್ ಅಥವಾ ಅಂತಹ ಯಾವುದೇ ದಾಖಲಾತಿಗಳ ಮೂಲಕ ಪ್ರಚುರಪಡಿಸುವುದನ್ನು ಜಾಹೀರಾತು ಎಂದು ವ್ಯಾಖ್ಯಾನಿಸಿದೆ. ಲೇಬಲ್ ಅಥವಾ ಹೊದಿಕೆಯು ಯಾವುದೇ ಮಾಹಿತಿಯನ್ನು ಒಳಗೊಂಡಿದ್ದರೆ ಹಾಗೂ ನಿಯಮದಲ್ಲಿ ಇರುವ ಅಂಶಗಳನ್ನು ಬಿಟ್ಟು ಬೇರೆ ಮಾಹಿತಿ ಹೊಂದಿದ್ದರೆ ಅದನ್ನು ಕೂಡ ಜಾಹೀರಾತು ಎಂದೇ ಪರಿಗಣಿಸಲಾಗಿತ್ತದೆ.

78 ಕಾಯಿಲೆಗಳಿಗೆ ಔಷಧ ಜಾಹೀರಾತು

78 ಕಾಯಿಲೆಗಳಿಗೆ ಔಷಧ ಜಾಹೀರಾತು

78 ಕಾಯಿಲೆಗಳು, ಆರೋಗ್ಯ ಸಮಸ್ಯೆಗಳು ಅಥವಾ ನಿರ್ದಿಷ್ಟ ಸ್ಥಿತಿಗತಿಗಳಲ್ಲಿ ಯಾವುದನ್ನಾದರೂ ಗುಣಪಡಿಸುವುದಾಗಿ ಔಷಧ ಮತ್ತು ಉತ್ಪನ್ನಗಳ ಜಾಹೀರಾತು ನೀಡುವುದನ್ನು ನಿಷೇಧಿಸಲು ಸಚಿವಾಲಯ ಕರಡು ಮಸೂದೆಯನ್ನು ಪ್ರಸ್ತಾಪಿಸಿದೆ. ಈಗಿರುವ ಕಾಯ್ದೆಯಲ್ಲಿ 54 ಕಾಯಿಲೆಗಳು ಮತ್ತು ಆರೋಗ್ಯ ಸಮಸ್ಯೆಗಳನ್ನು ಗುರುತಿಸಲಾಗಿದೆ.

ವಾಹನಗಳ ಮೇಲೆ ಜಾಹೀರಾತು ಹಾಕುವಂತಿಲ್ಲ, ಅನುಮತಿ ಕಡ್ಡಾಯ

ಸಚಿವಾಲಯವು ಈ ಕರಡು ಮಸೂದೆಗೆ ಸಾರ್ವಜನಿಕರು ಮತ್ತು ವ್ಯಾಪಾರಿಗಳಿಂದ ಸಲಹೆಗಳು, ಅಭಿಪ್ರಾಯಗಳು ಅಥವಾ ಆಕ್ಷೇಪಗಳಿದ್ದರೆ ನೀಡಬಹುದು ಎಂದು ತಿಳಿಸಿದೆ. ಇದಕ್ಕೆ 45 ದಿನಗಳ ಕಾಲಾವಕಾಶ ನೀಡಲಾಗಿದೆ.

English summary
The government has proposed upto 5 years imprisonment and up to Rs 50 lakh fine for deceprive advertisement of drugs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X