ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭೀತಿ; ಭಾರತೀಯ ರೈಲ್ವೆಯ 5 ಪ್ರಮುಖ ಕಾರ್ಯಗಳು

|
Google Oneindia Kannada News

ಬೆಂಗಳೂರು, ಏಪ್ರಿಲ್ 02 : ಕೊರೊನಾ ವಿಶ್ವದ ವಿವಿಧ ದೇಶಗಳಲ್ಲಿ ಭೀತಿಯನ್ನು ಹುಟ್ಟು ಹಾಕಿದೆ. ಭಾರತದಲ್ಲಿಯೂ ಸೋಂಕು ಹರಡದಂತೆ ತಡೆಯಲು 21 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ದೇಶದಲ್ಲಿ ಪ್ರಯಾಣಿಕ ರೈಲ್ವೆ ಸಂಚಾರವನ್ನು ರದ್ದುಗೊಳಿಸಲಾಗಿದೆ.

ದೇಶದಲ್ಲಿನ ಬಹುಪಾಲು ಜನರು ಸಂಚಾರಕ್ಕೆ ರೈಲ್ವೆಯನ್ನು ಬಳಸುತ್ತಾರೆ. ವಿಪತ್ತಿನ ಸಂದರ್ಭದಲ್ಲಿ ಭಾರತೀಯ ರೈಲ್ವೆ ದೇಶದ ಜನರ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಜನರಿಗಾಗಿ ಕೆಲಸ ಮಾಡುತ್ತಿದೆ.

ಲಾಕ್ ಡೌನ್ ; ನೈಋತ್ಯ ರೈಲ್ವೆಯಿಂದ ವಿಶೇಷ ರೈಲು ಸಂಚಾರ ಲಾಕ್ ಡೌನ್ ; ನೈಋತ್ಯ ರೈಲ್ವೆಯಿಂದ ವಿಶೇಷ ರೈಲು ಸಂಚಾರ

ಕೊರೊನಾ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು ಸೇರಿದಂತೆ ಹಲವು ಕ್ರಮಗಳನ್ನು ರೈಲ್ವೆ ಕೈಗೊಂಡಿದೆ. ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಕೊರತೆ ಉಂಟಾಗದಂತೆ ಗೂಡ್ಸ್‌ ರೈಲುಗಳ ಸಂಚಾರವನ್ನು ನಡೆಸುತ್ತಿದೆ.

ಕೊರೊನಾ : ರೈಲ್ವೆ ನಿರ್ಮಿಸುತ್ತಿರುವ ವಾರ್ಡ್‌ಗಳು ಎಷ್ಟು ಗೊತ್ತಾ? ಕೊರೊನಾ : ರೈಲ್ವೆ ನಿರ್ಮಿಸುತ್ತಿರುವ ವಾರ್ಡ್‌ಗಳು ಎಷ್ಟು ಗೊತ್ತಾ?

ಏಪ್ರಿಲ್ 14ರ ಬಳಿಕ ದೇಶದಲ್ಲಿ ರೈಲು ಸೇವೆ ಆರಂಭವಾಗಲಿದೆಯೇ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಭಾರತೀಯ ರೈಲ್ವೆ ವಿಪತ್ತಿನ ಸಂದರ್ಭದಲ್ಲಿ ಕೈಗೊಂಡಿರುವ 5 ಕ್ರಮಗಳ ವಿವರಗಳು ಇಲ್ಲಿವೆ....

 ಹುಬ್ಬಳ್ಳಿ; ಐಸೊಲೇಷನ್ ವಾರ್ಡ್ ಆಗುವತ್ತ ರೈಲ್ವೆ ಬೋಗಿಗಳು... ಹುಬ್ಬಳ್ಳಿ; ಐಸೊಲೇಷನ್ ವಾರ್ಡ್ ಆಗುವತ್ತ ರೈಲ್ವೆ ಬೋಗಿಗಳು...

ರೈಲ್ವೆ ಬೋಗಿ ವಾರ್ಡ್‌ಗಳಾಗಿ ಪರಿವರ್ತನೆ

ರೈಲ್ವೆ ಬೋಗಿ ವಾರ್ಡ್‌ಗಳಾಗಿ ಪರಿವರ್ತನೆ

ಭಾರತೀಯ ರೈಲ್ವೆ ತನ್ನ ಬೋಗಿಗಳನ್ನು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಐಸೋಲೇಷನ್ ವಾರ್ಡ್‌ ಮತ್ತು ಕ್ವಾರಂಟೈನ್‌ಗೆ ಬೇಕಾದ ವಾರ್ಡ್‌ಗಳಾಗಿ ಪರಿವರ್ತನೆ ಮಾಡುತ್ತಿದೆ. ಒಟ್ಟು 5 ವಲಯಗಳಲ್ಲಿ ಸೇರಿ 20 ಸಾವಿರ ಬೋಗಿಗಳನ್ನು ವಾರ್ಡ್‌ಗಳಾಗಿ ಪರಿವರ್ತಿಸಲಾಗುತ್ತದೆ. ಸದ್ಯಕ್ಕೆ 5 ಸಾವಿರ ವಾರ್ಡ್‌ಗಳು ಸಿದ್ಧವಾಗಿದೆ.

ಅಗತ್ಯ ವಸ್ತುಗಳ ಸರಬರಾಜು

ಅಗತ್ಯ ವಸ್ತುಗಳ ಸರಬರಾಜು

ಭಾರತೀಯ ರೈಲ್ವೆ ಏಪ್ರಿಲ್ 14ರ ತನಕ ಎಲ್ಲಾ ಪ್ರಯಾಣಿಕ ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ಆದರೆ, ಗೂಡ್ಸ್ ರೈಲುಗಳು ಸಂಚಾರ ನಡೆಸುತ್ತಿವೆ. ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಕೊರತೆ ಉಂಟಾಗದಂತೆ ರೈಲ್ವೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಪ್ರತಿ ರಾಜ್ಯಕ್ಕೂ ವಸ್ತುಗಳನ್ನು ಪೂರೈಕೆ ಮಾಡಲು ಪ್ರಯತ್ನ ನಡೆಸುತ್ತಿದೆ.

ವೈದ್ಯಕೀಯ ಸಾಮಾಗ್ರಿ ಉತ್ಪಾದನೆ

ವೈದ್ಯಕೀಯ ಸಾಮಾಗ್ರಿ ಉತ್ಪಾದನೆ

ಭಾರತೀಯ ರೈಲ್ವೆ ತನ್ನ ವರ್ಕ್‌ ಶಾಪ್ ಸೇರಿದಂತೆ ವಿವಿಧ ಕಾರ್ಖಾನೆಗಳಲ್ಲಿ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ವಿವಿಧ ವೈದ್ಯಕೀಯ ಸಾಮಾಗ್ರಿಗಳನ್ನು ಉತ್ಪಾದನೆ ಮಾಡಿ ಪೂರೈಕೆ ಮಾಡುತ್ತಿದೆ. ಈ ಮೂಲಕ ಜನರಿಗೆ ನೆರವಾಗುತ್ತಿದೆ.

ವಾಸ್ತವ್ಯಕ್ಕೆ ಅವಕಾಶ

ವಾಸ್ತವ್ಯಕ್ಕೆ ಅವಕಾಶ

ಪ್ರಯಾಣಿಕರ ರೈಲು ಸಂಚಾರ ಸಂಪೂರ್ಣ ರದ್ದುಗೊಂಡಿದೆ. ಆದರೆ, ರೈಲ್ವೆಗೆ ಸೇರಿದ ವಿಶ್ರಾಂತಿ ಗೃಹದಲ್ಲಿ ಇರುವವರು ಏಪ್ರಿಲ್ 14ರ ತನಕ ಅಲ್ಲಿಯೇ ವಾಸ್ತವ್ಯ ಹೂಡಲು ರೈಲ್ವೆ ಅವಕಾಶ ಮಾಡಿಕೊಟ್ಟಿದೆ. ಇದರಿಂದಾಗಿ ಸಾವಿರಾರು ಜನರು ಲಾಕ್ ಡೌನ್ ಸಂದರ್ಭದಲ್ಲಿ ವಾಸ್ತವ್ಯಕ್ಕಾಗಿ ಸ್ಥಳ ಹುಡುಕುವ ತೊಂದರೆ ತಪ್ಪಿದೆ.

ಐಆರ್‌ಸಿಟಿಸಿಯಿಂದ ಊಟ

ಐಆರ್‌ಸಿಟಿಸಿಯಿಂದ ಊಟ

ಐಆರ್‌ಸಿಟಿಸಿಯ ಅಡುಗೆ ಮನೆಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಅಡುಗೆ ಮನೆಯ ಸುತ್ತ-ಮುತ್ತ ಆಹಾರ ಅಗತ್ಯ ಇರುವ ಜನರಿಗೆ ಎರಡು ಹೊತ್ತು ಊಟವನ್ನು ನೀಡುತ್ತಿವೆ.

English summary
Indian railways suspended passenger train services during lockdown time. Here are the top 5 steps by Indian Railways taken to help people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X