ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಚರಾಜ್ಯ ಚುನಾವಣೆ ಫಲಿತಾಂಶ LIVE : 5 ರಾಜ್ಯಗಳಲ್ಲೂ ಬಿಜೆಪಿ ಧೂಳಿಪಟ!

|
Google Oneindia Kannada News

Recommended Video

      5 State Election Results 2018 : ಪಂಚರಾಜ್ಯ ಚುನಾವಣೆ ಫಲಿತಾಂಶ | ಮತಎಣಿಕೆ ಆರಂಭ | Oneindia Kannada

      ನವದೆಹಲಿ, ಡಿಸೆಂಬರ್ 11 : ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ, ತೆಲಂಗಾಣ, ಮಿಜೋರಾಂ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದರೆ, ಬಿಜೆಪಿ ಧೂಳಿಪಟವಾಗಿದೆ.

      ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಛತ್ತೀಸ್ ಗಢ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ ಈ ಐದು ರಾಜ್ಯಗಳಲ್ಲಿ ಚುನಾವಣೆ ನಡೆದಿತ್ತು.

      ರಾಜಸ್ಥಾನ ಚುನಾವಣೆ, ಅಂಕಿ-ಸಂಖ್ಯೆ: ಚಿತ್ರ ಮಾಹಿತಿರಾಜಸ್ಥಾನ ಚುನಾವಣೆ, ಅಂಕಿ-ಸಂಖ್ಯೆ: ಚಿತ್ರ ಮಾಹಿತಿ

      ಚುನಾವಣೋತ್ತರ ಸಮೀಕ್ಷೆಗಳು ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಆಡಳಿತಾರೂಢ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ತೆಲಂಗಾಣದಲ್ಲಿ ನಿರೀಕ್ಷೆಯಂತೆ ತೆಲಂಗಾಣ ರಾಷ್ಟ್ರ ಸಮಿತಿ ಜಯಭೇರಿ ಬಾರಿಸಿದೆ ಮತ್ತು ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಕಾಂಗ್ರೆಸ್ಸಿನಿಂದ ಅಧಿಕಾರ ಕಿತ್ತುಕೊಂಡಿದೆ.

      5 states assembly election results 2018: Live Updates

      ರಾಜಸ್ಥಾನ ಚುನಾವಣೆ : ಫಲಿತಾಂಶದ ಬಳಿಕ ಕಾಂಗ್ರೆಸ್ ತಂತ್ರ ಸಿದ್ಧರಾಜಸ್ಥಾನ ಚುನಾವಣೆ : ಫಲಿತಾಂಶದ ಬಳಿಕ ಕಾಂಗ್ರೆಸ್ ತಂತ್ರ ಸಿದ್ಧ

      ಐದೂ ರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಒನ್ಇಂಡಿಯಾ ಕನ್ನಡ ಬೆಳಿಗ್ಗೆ 8 ಗಂಟೆಯಿಂದಲೇ ಕ್ಷಣ ಕ್ಷಣದ ಮಾಹಿತಿ ನೀಡಿದ್ದು, ಎಲ್ಲ ರಾಜ್ಯಗಳ ಫಲಿತಾಂಶದ ಮುಖ್ಯಾಂಶಗಳು ಕೆಳಗಿನಂತಿವೆ.

      Newest FirstOldest First
      7:53 PM, 11 Dec

      ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ದಕ್ಕಿರುವ ಗೆಲುವಿಗಾಗಿ ಅಭ್ಯರ್ಥಿಗಳಿಗೆ, ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ. ನರೇಂದ್ರ ಮೋದಿ ವಿರುದ್ಧ ಜನ ತೀರ್ಪು ನೀಡಿದ್ದಾರೆ. ಇದು ಬದಲಾವಣೆಯ ಸಮಯ ಎಂದ ರಾಹುಲ್ ಗಾಂಧಿ.
      6:49 PM, 11 Dec

      ರಾಜಸ್ಥಾನದಲ್ಲಿ ಸೋಲಿನ ಹೊಣೆ ಹೊತ್ತು ಬಿಜೆಪಿ ನಾಯಕಿ ವಸುಂಧರಾ ರಾಜೇ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಛತ್ತೀಸ್ ಗಢದಲ್ಲಿ ಕೂಡ ರಮಣ ಸಿಂಗ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
      5:18 PM, 11 Dec

      ಮಧ್ಯಪ್ರದೇಶದಲ್ಲಿ ಬಿಜೆಪಿ 119, ಕಾಂಗ್ರೆಸ್ 102 ಸ್ಥಾನಗಳಲ್ಲಿ ಮುನ್ನಡೆ
      4:46 PM, 11 Dec

      ಮಧ್ಯಪ್ರದೇಶದಲ್ಲಿ ಬಿಜೆಪಿ 105, ಕಾಂಗ್ರೆಸ್ 115ಸ್ಥಾನಗಳಲ್ಲಿ ಮುನ್ನಡೆ
      4:31 PM, 11 Dec

      ಮಧ್ಯಪ್ರದೇಶದಲ್ಲಿ ಚೌಹಾಣ್ ಆಪ್ತರಿಗೆ ಭಾರೀ ಹಿನ್ನಡೆ
      4:22 PM, 11 Dec

      ರಾಜಸ್ಥಾನದಲ್ಲಿ ಬಿಜೆಪಿ 69, ಕಾಂಗ್ರೆಸ್ 105 ಸ್ಥಾನಗಳಲ್ಲಿ ಮುನ್ನಡೆ‌
      4:20 PM, 11 Dec

      ತೆಲಂಗಾಣದಲ್ಲಿ ಟಿಆರ್ ಎಸ್ 87, ಕಾಂಗ್ರೆಸ್ 22, ಬಿಜೆಪಿ 1 ಸ್ಥಾನಗಳಲ್ಲಿ ಮುನ್ನಡೆ
      Advertisement
      4:15 PM, 11 Dec

      ಮಧ್ಯಪ್ರದೇಶದಲ್ಲಿ ಬಿಜೆಪಿ 104, ಕಾಂಗ್ರೆಸ್ 116 ಸ್ಥಾನಗಳಲ್ಲಿ ಮುನ್ನಡೆ
      4:07 PM, 11 Dec

      ಮಧ್ಯಪ್ರದೇಶದಲ್ಲಿ ಬಿಜೆಪಿ 107, ಕಾಂಗ್ರೆಸ್ 113 ಸ್ಥಾನಗಳಲ್ಲಿ ಮುನ್ನಡೆ
      3:51 PM, 11 Dec

      ಮಧ್ಯಪ್ರದೇಶದಲ್ಲಿ ಬಿಜೆಪಿ 105, ಕಾಂಗ್ರೆಸ್ 115 ಸ್ಥಾನಗಳಲ್ಲಿ ಮುನ್ನಡೆ
      3:43 PM, 11 Dec

      ಮಧ್ಯಪ್ರದೇಶದಲ್ಲಿ ಬಿಜೆಪಿ 102, ಕಾಂಗ್ರೆಸ್ 116 ಸ್ಥಾನಗಳಲ್ಲಿ ಮುನ್ನಡೆ
      3:38 PM, 11 Dec

      ಮಧ್ಯಪ್ರದೇಶದಲ್ಲಿ ಬಿಜೆಪಿ 106, ಕಾಂಗ್ರೆಸ್ 114 ಸ್ಥಾನಗಳಲ್ಲಿ ಮುನ್ನಡೆ
      Advertisement
      3:36 PM, 11 Dec

      "ಛತ್ತೀಸ್ ಗಢದ ಜನರು ನಮ್ಮ ಪರವಾಗಿ ಹೋರಾಡಿದ್ದಾರೆ. ನಾವು ಜನರಿಗಾಗಿ ಹೋರಾಡುತ್ತೇವೆ. ನಾವು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಋಣಿಯಾಗಿದ್ದೇವೆ. ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕ್ಷೇತ್ರ ಗೆದ್ದಿದ್ದೇವೆ. ಯಾರು ಮುಖ್ಯಮಂತ್ರಿಯಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ"- ಭುಪೇಶ್ ಬಾಘೇಲ್, ಛತ್ತೀಸ್ ಗಢ ಕಾಂಗ್ರೆಸ್ ಮುಖಂಡ
      3:32 PM, 11 Dec

      ಸಂಜೆ 4 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಸದೀಯ ಸಭೆ. ಐದು ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚೆ
      3:29 PM, 11 Dec

      "ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಜನರಿಗೆ ಏನೂ ಮಾಡಿಲ್ಲ ಎಂಬುದು ಜನರಿಗೆ ಗೊತ್ತಾಗಿದೆ. ಅದಕ್ಕೆಂದೇ ಜನರು ಪರ್ಯಾಯ ಹುಡುಕಿದ್ದಾರೆ. ಬಿಜೆಪಿ ವಿರುದ್ಧದ ಹೋರಾಟದಲ್ಲಿ ಜನರು ನಮ್ಮೊಂದಿಗಿದ್ದಾರೆ. ಈ ಐದು ರಾಜ್ಯಗಳ ಚುನಾವಣೆ ಬಿಜೆಪಿ ವಿರುದ್ಧ ಪರ್ಯಾಯ ಸೃಷ್ಟಿಸಲು ನಮಗೆ ಸಹಕಾರಿಯಾಗಿದೆ" -ಚಂದ್ರಬಾಬು ನಾಯ್ಡು, ಆಂಧ್ರ ಪ್ರದೇಶ ಮುಖ್ಯಮಂತ್ರಿ, ಟಿಡಿಪಿ ಮುಖಂಡ
      3:25 PM, 11 Dec

      ರಾಜಸ್ಥಾನದಲ್ಲಿ ಬಿಜೆಪಿ 73, ಕಾಂಗ್ರೆಸ್ 100 ಸ್ಥಾನಗಳಲ್ಲಿ ಮುನ್ನಡೆ
      3:23 PM, 11 Dec

      ಮಧ್ಯಪ್ರದೇಶದಲ್ಲಿ ಬಿಜೆಪಿ 106, ಕಾಂಗ್ರೆಸ್ 113 ಸ್ಥಾನಗಳಲ್ಲಿ ಮುನ್ನಡೆ
      3:20 PM, 11 Dec

      ಮಧ್ಯಪ್ರದೇಶದ ಹತ್ತು ಕ್ಷೇತ್ರಗಳಲ್ಲಿ ಬಿಜೆಪಿ 1000 ಮತಗಳಿಂದ ಮುನ್ನಡೆ ಪಡೆದಿದ್ದರೆ, ಮೂವತ್ತು ಕ್ಷೇತ್ರಗಳಲ್ಲಿ 2000 ಮತಗಳ ಮುನ್ನಡೆಯನ್ನು ಕಾಂಗ್ರೆಸ್ ಪಡೆದುಕೊಂಡಿದೆ.
      3:19 PM, 11 Dec

      ಮಧ್ಯಪ್ರದೇಶದಲ್ಲಿ ಬಿಜೆಪಿ 110, ಕಾಂಗ್ರೆಸ್ 110 ಸ್ಥಾನಗಳಲ್ಲಿ ಮುನ್ನಡೆ
      3:16 PM, 11 Dec

      ತೆಲಂಗಾಣದಲ್ಲಿ ಸನಥ್ ನಗರ್ ಕ್ಷೇತ್ರದ ಟಿಆರ್ ಎಸ್ ಅಭ್ಯರ್ಥಿ ತಲಸನಿ ಶ್ರೀನಿವಾಸ್ ಗೆಲುವು
      3:12 PM, 11 Dec

      ರಾಜಸ್ಥಾನದಲ್ಲಿ ಬಿಜೆಪಿ 73, ಕಾಂಗ್ರೆಸ್ 101 ಸ್ಥಾನಗಳಲ್ಲಿ ಮುನ್ನಡೆ
      3:09 PM, 11 Dec

      ಛತ್ತೀಸ್ ಗಢದಲ್ಲಿ ಬಿಜೆಪಿ 15, ಕಾಂಗ್ರೆಸ್ 66 ಸ್ಥಾನಗಳಲ್ಲಿ ಮುನ್ನಡೆ
      2:57 PM, 11 Dec

      ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ 102 ಕ್ಷೇತ್ರಗಳಲ್ಲಿ ಮುನ್ನಡೆ ಪಡೆಯುವ ಮೂಲಕ ಕಾಂಗ್ರೆಸ್ ಬಹುಮತ ಪಡೆಯುವುದು ಖಚಿತವಾಗಿದೆ.
      2:41 PM, 11 Dec

      ಮಧ್ಯಪ್ರದೇಶದಲ್ಲಿ ಬಿಜೆಪಿ 113, ಕಾಂಗ್ರೆಸ್ 106
      2:39 PM, 11 Dec

      ಗಜ್ವಾಲ್ ಕ್ಷೇತ್ರದಿಂದ 50,000 ಮತಗಳ ಅಂತರದಿಂದ ಗೆದ್ದ ಕೆ.ಚಂದ್ರಶೇಖರ್ ರಾವ್
      2:00 PM, 11 Dec

      ಜಲ್ರಾಪಠಾಣ್ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಮನ್ವೇಂದ್ರ ಸಿಂಗ್ ವಿರುದ್ಧ ಬಿಜೆಪಿಯ ವಸುಂಧರಾ ರಾಜೆ ಗೆಲುವು.
      1:59 PM, 11 Dec

      ಮಧ್ಯಪ್ರದೇಶದಲ್ಲಿ ಬಿಜೆಪಿ 114, ಕಾಂಗ್ರೆಸ್ 106 ಸ್ಥಾನಗಳಲ್ಲಿ ಮುನ್ನಡೆ
      1:58 PM, 11 Dec

      ಪಂಜಾಬಿನ ಲುಧಿಯಾನದಲ್ಲಿ ಕಾಂಗ್ರೆಸ್ ವಿಜಯೋತ್ಸವ
      1:52 PM, 11 Dec

      ಮಧ್ಯಪ್ರದೇಶದಲ್ಲಿ ಬಿಜೆಪಿ 111, ಕಾಂಗ್ರೆಸ್ 108 ಸ್ಥಾನಗಳಲ್ಲಿ ಮುನ್ನಡೆ
      1:40 PM, 11 Dec

      ಛತ್ತೀಸ್ ಗಢದಲ್ಲಿ ಬಿಜೆಪಿ 19, ಕಾಂಗ್ರೆಸ್ 65 ಸ್ಥಾನಗಳಲ್ಲಿ ಮುನ್ನಡೆ
      READ MORE

      English summary
      5 states assembly election results 2018: Live Updates in Kannada. Rajasthan, Madhya Pradesh, Telangana, Chhattisgarh, Mizoram states have faced crucial elections in November and December. Results will be out today(Dec 11).Here are LIVE updates in Kannada.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X