ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ,ಕೇರಳ ಸೇರಿ ದೇಶದ ವಿವಿಧೆಡೆ 5 ದಿನ ಧಾರಾಕಾರ ಮಳೆ

|
Google Oneindia Kannada News

ಬೆಂಗಳೂರು, ಜುಲೈ 28: ನಗರದ ಹಲವು ಭಾಗಗಳಲ್ಲಿ ಸೋಮವಾರ ರಾತ್ರಿ 8 ರಿಂದ ತಡರಾತ್ರಿವರೆಗೂ ಧಾರಾಕಾರ ಮಳೆ ಸುರಿದಿದೆ.

ಕೇರಳದಲ್ಲೂ ಈ ತಿಂಗಳಾಂತ್ಯದಲ್ಲಿ ಎರಡು ದಿನ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ಬೆಂಗಳೂರಿನ ಕೆಲ ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ನಗರದಲ್ಲಿ ರಾತ್ರಿ9 ಗಂಟೆ ನಂತರ ಕರ್ಫ್ಯೂ ಜಾರಿಯಲ್ಲಿರುವ ಕಾರಣ , ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇರಳದಲ್ಲಿ ಮಳೆ; ಮರುಜೀವ ಪಡೆದ ಬಂಡೀಪುರದ ಮೂಲೆಹೊಳೆಕೇರಳದಲ್ಲಿ ಮಳೆ; ಮರುಜೀವ ಪಡೆದ ಬಂಡೀಪುರದ ಮೂಲೆಹೊಳೆ

ಸಿಂಗಸಂದ್ರದಲ್ಲಿ 14.5 ಮಿ.ಮೀ, ನಾಗೇನಹಳ್ಳಿ 14 ಮಿ.ಮೀ, ಬೆಳ್ಳಂದೂರು 13 ಮಿ.ಮೀ, ಬಾಣಸವಾಡಿಯಲ್ಲಿ 11.5 ಮಿ.ಮೀ ವರ್ತೂರಿನಲ್ಲಿ 10.5 ಮಿ.ಮೀ ಮಳೆಯಾಗಿದೆ. ಆಗಸ್ಟ್ 2ರವರೆಗೂ ಮೋಡಕವಿದ ವಾತಾವರಣವಿರಲಿದ್ದು,ಆಗಾಗ ಮಳೆಯಾಗುವ ಸಾಧ್ಯತೆ ಇದೆ. ಸೋಮವಾರ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಕನಿಷ್ಠ ಉಷ್ಣಾಂಶ 20.4 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಇನ್ನು ಉತ್ತರಾಖಂಡ್, ಗೋವಾ, ಉತ್ತರಪ್ರದೇಶ ಸೇರಿದಂತೆ ವಿವಿಧೆಡೆ ಮಳೆಯಾಗುತ್ತಿದೆ.

ದೇಶದ ವಿವಿಧೆಡೆ ಭಾರಿ ಮಳೆ

ದೇಶದ ವಿವಿಧೆಡೆ ಭಾರಿ ಮಳೆ

ಹಿಮಾಚಲ ಪ್ರದೇಶ, ಉತ್ತರಾಖಂಡ್, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲಪ್ರದೇಶ, ಕೊಂಕಣ, ಗೋವಾ, ಅಸ್ಸಾಂ, ಮೇಘಾಲಯದಲ್ಲಿ ಮುಂದಿನ ಐದು ದಿನಗಳ ಕಾಲ ಧಾರಾಕಾರ ಮಳೆಯಾಗಲಿದೆ.

ಜುಲೈ 28 ರಂದು ಮಳೆ ಬೀಳುವ ಪ್ರದೇಶಗಳು

ಜುಲೈ 28 ರಂದು ಮಳೆ ಬೀಳುವ ಪ್ರದೇಶಗಳು

ಜುಲೈ 28 ರಂದು ಉತ್ತರಾಖಂಡ್, ಉತ್ತರಪ್ರದೇಶ, ಬಿಹಾರ, ಅರುಣಾಚಲಪ್ರದೇಶ, ಅಸ್ಸಾಂ, ಮೇಘಾಲಯದಲ್ಲಿ ಧಾರಾಕಾರ ಮಳೆಯಾಗಲಿದೆ. ಹಿಮಾಚಲಪ್ರದೇಶ, ಮಧ್ಯಪ್ರದೇಶ, ಒಡಿಶಾ, ಸಿಕ್ಕಿಂ, ಅಂಡಮಾನ್ ಮತ್ತು ನಿಕೋಬಾರ್, ನಾಗಾಲೆಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಕರಾವಳಿ ಕರ್ನಾಟಕ, ತಮಿಳುನಾಡು, ಪುದುಚೆರಿ, ಕೇರಳದಲ್ಲಿ ಸಾಧಾರಣ ಮಳೆಯಾಗಲಿದೆ.

ಜುಲೈ 29 ರಂದು ಮಳೆ ಬೀಳಲಿರುವ ಪ್ರದೇಶಗಳು

ಜುಲೈ 29 ರಂದು ಮಳೆ ಬೀಳಲಿರುವ ಪ್ರದೇಶಗಳು

ಕರ್ನಾಟಕ, ಕೇರಳ, ಮಹಾರಾಷ್ಟ್ರ, ರಾಜಸ್ಥಾನ, ವಿದರ್ಭಾ, ಲಡಾಖ್, ಕಾಶ್ಮೀರ, ದೆಹಲಿ, ಚಂಡೀಗಢ, ತಮಿಳುನಾಡು, ಮೇಘಾಲಯ, ನಾಗಾಲ್ಯಾಂಡ್, ಮಣಿಪುರದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ.

ಜುಲೈ 30 ರಂದು ಮಳೆಯಾಗಲಿರುವ ಪ್ರದೇಶಗಳು

ಜುಲೈ 30 ರಂದು ಮಳೆಯಾಗಲಿರುವ ಪ್ರದೇಶಗಳು

ಜುಲೈ 30 ರಂದು ಹರ್ಯಾಣಾ, ದೆಹಲಿ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಸಿಕ್ಕಿಂ, ಕರ್ನಾಟಕ ಕರಾವಳಿ ಪ್ರದೇಶ, ಕೇರಳ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಅರುಣಾಚಲ ಪ್ರದೇಶ, ತಮಿಳುನಾಡು, ಗೋವಾ, ಕೊಂಕಣದಲ್ಲಿ ಮಳೆಯಾಗಲಿದೆ.

English summary
Heavy rains were experienced in many parts of the Bengaluru from 8 pm till late at night Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X