ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋರಖ್ ಪುರ ಆಯ್ತು, ಈಗ ಫಾರೂಕಾಬಾದ್ ನಲ್ಲಿ ಮಕ್ಕಳ ಮಾರಣ ಹೋಮ!

ಫಾರೂಕಾಬಾದ್ ಆಸ್ಪತ್ರೆಯಲ್ಲಿ 49 ಮಕ್ಕಳ ಸಾವು. ಕಳೆದೊಂದು ತಿಂಗಳಲ್ಲಿ ಶಿಶುಗಳ ಸಾವು.

|
Google Oneindia Kannada News

ಲಖ್ನೋ, ಸೆಪ್ಟಂಬರ್ 4: ಇತ್ತೀಚೆಗಷ್ಟೇ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಗೋರಖ್ ಪುರದ ಬಿಆರ್ ಡಿ ಆಸ್ಪತ್ರೆಯಲ್ಲಿನ ಮಕ್ಕಳ ಸಾವು ಪ್ರಕರಣ ಮಾಸುವ ಮುನ್ನವೇ ಉತ್ತರ ಪ್ರದೇಶದ್ದೇ ಮತ್ತೊಂದು ನಗರವಾದ ಫಾರೂಕಾಬಾದ್ ನ ರಾಮ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ನೂರಾರು ಮಕ್ಕಳು ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ.

72 ಗಂಟೆಗಳಲ್ಲಿ 61 ಮಕ್ಕಳ ಸಾವು: ಗೋರಖ್ ಪುರದಲ್ಲಿ ಮತ್ತೆ ಮರಣಮೃದಂಗ!72 ಗಂಟೆಗಳಲ್ಲಿ 61 ಮಕ್ಕಳ ಸಾವು: ಗೋರಖ್ ಪುರದಲ್ಲಿ ಮತ್ತೆ ಮರಣಮೃದಂಗ!

ಕಳೆದೊಂದು ತಿಂಗಳಲ್ಲಿ ಈ ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳಲ್ಲಿ ಈಗಾಗಲೇ 49 ಮಕ್ಕಳು ಸಾವಿಗೀಡಾಗಿದ್ದಾರೆಂದು ಮೂಲಗಳು ತಿಳಿಸಿವೆ. ಇದೀಗ, ಪ್ರಕರಣದ ತನಿಖೆಗೆ ಉತ್ತರ ಪ್ರದೇಶ ಆದೇಶಿಸಿದೆ. ಅದರಂತೆ, ತನಿಖೆ ಆರಂಭಿಸಿರುವ ಉತ್ತರ ಪ್ರದೇಶ ಪೊಲೀಸ್ ಇಲಾಖೆಯು, ತನ್ನ ಮೊದಲ ಎಫ್ ಐಆರ್ ನಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ವಿರುದ್ಧ ಆರೋಪ ದಾಖಲಿಸಿದೆ.

49 children die due to lack of oxygen in Farrukhabad

ಗೋರಖ್ ಪುರದ ಬಿಆರ್ ಡಿ ಆಸ್ಪತ್ರೆಯಲ್ಲಿ ಆಗಿದ್ದಂತೆ ಇಲ್ಲಿನ ರಾಮ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲೂ ಆಮ್ಲಜನಕ ಸಿಲಿಂಡರ್ ಪೂರೈಕೆಯ ಕೊರತೆ ಕಂಡಿದ್ದೇ ಶಿಶುಗಳ ಸಾವಿಗೆ ಕಾರಣವೆಂದು ಹೇಳಲಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ (ಡಿಎಂ), ಈ ಪ್ರಕರಣದ ಕೂಲಂಕಷ ತನಿಖೆ ನಡೆಸಿ ಅದರ ವರದಿಯನ್ನು ತನಗೆ ಸಲ್ಲಿಸುವಂತೆ ಪೊಲೀಸ್ ಇಲಾಖೆಗೆ ತಾಕೀತು ಮಾಡಿದೆ.

English summary
A first information report (FIR) has been filed against the Chief Medical Officer (CMO) of a government-run hospital in Farrukhabad, Uttar Pradesh, after 49 children died, says the sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X