• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಶಾಂತ್ ಕಿಶೋರ್ 'ಐ ಪ್ಯಾಕ್' ಸಮೀಕ್ಷೆಯಲ್ಲಿ ಮೋದಿಗೆ ಜಯ

By Mahesh
|

ಬೆಂಗಳೂರು, ಸೆಪ್ಟೆಂಬರ್ 04: 2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಭರ್ಜರಿ ಗೆಲುವು ಸಿಗಲು ಕಾರಣರಾಗಿದ್ದ ತಂತ್ರಗಾರಿಕೆ ನಿಪುಣ ಪ್ರಶಾಂತ್ ಕಿಶೋರ್ ಅವರು ಮತ್ತೆ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿಯಿದೆ. ಈ ನಡುವೆ ಪ್ರಶಾಂತ್ ಕಿಶೋರ್ ನೇತೃತ್ವದ ಐ ಪ್ಯಾಕ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಜಯಭೇರಿ ಬಾರಿಸಿದ್ದಾರೆ.

ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಬಿಟ್ಟು ಯಾರು ಬೆಸ್ಟ್?

2012ರಲ್ಲಿ ಗುಜರಾತ್ ವಿಧಾನಸಭೆ, 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದ ಪ್ರಶಾಂತ್ ಅವರು, ಸಾಮಾಜಿಕ ಜಾಲ ತಾಣಗಳಲ್ಲಿ ಮೋದಿ ಹಾಗೂ ಬಿಜೆಪಿ ಜನಪ್ರಿಯತೆ ಹೆಚ್ಚಳಕ್ಕೆ ಕಾರಣರಾಗಿದ್ದರು. ಆದರೆ, ಅಮಿತ್ ಶಾ ಜೊತೆಗಿನ ಮನಸ್ತಾಪದಿಂದ ಬೇಸತ್ತು ಪ್ರಶಾಂತ್ ಕಿಶೋರ್, ಬಿಜೆಪಿ ವಿರೋಧಿಗಳ ಜೊತೆ ಕೈಜೋಡಿಸಿ, ಬಿಹಾರದಲ್ಲಿ ಯಶಸ್ಸು ಸಾಧಿಸಿದ್ದು ಈಗ ಇತಿಹಾಸ.

ಇಂಡಿಯಾ ಟುಡೇ ಸಮೀಕ್ಷೆ : ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಲಿದೆ?

ಏನಿದು ಸಮೀಕ್ಷೆ: ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ(I-PAC) ನಡೆಸಿದ ಸಮೀಕ್ಷೆ ವರದಿಯಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಮತ್ತೊಮ್ಮೆ ಮುನ್ನಡೆಸಲು ಸಮರ್ಥರು ಎಂದು ಜನತೆ ಅಭಿಪ್ರಾಯಪಟ್ಟಿದ್ದಾರೆ. ಶೇ 48ರಷ್ಟು ಮಂದಿ ಮೋದಿ ಪರ ಮತ ಹಾಕಿದ್ದರೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪರ ಶೇ 11ರಷ್ಟು ಮತಗಳು ಬಂದಿವೆ.

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಈ ಸಮೀಕ್ಷೆಯಲ್ಲಿ 57 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಸಮೀಕ್ಷೆಯಲ್ಲಿ ಶೇಕಡಾ 48ರಷ್ಟು ಮಂದಿ, ನರೇಂದ್ರ ಮೋದಿ ದೇಶವನ್ನು ಸಮರ್ಥವಾಗಿ ಮುನ್ನೆಡಸಲಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಾರು ಯಾರಿಗೆ ಎಷ್ಟು ಶೇಕಡಾವಾರು ಮತಗಳು?

ಯಾರು ಯಾರಿಗೆ ಎಷ್ಟು ಶೇಕಡಾವಾರು ಮತಗಳು?

ಐ ಪ್ಯಾಕ್ ಸಮೀಕ್ಷೆಯಲ್ಲಿ 57 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಸಮೀಕ್ಷೆಯಲ್ಲಿ ಶೇಕಡಾ 48ರಷ್ಟು ಮಂದಿ, ನರೇಂದ್ರ ಮೋದಿ ದೇಶವನ್ನು ಸಮರ್ಥವಾಗಿ ಮುನ್ನೆಡಸಲಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಾರು ಯಾರಿಗೆ ಎಷ್ಟು ಶೇಕಡಾವಾರು ಮತಗಳು?:

ಪ್ರಧಾನಿ ಮೋದಿ: 48%

ರಾಹುಲ್ ಗಾಂಧಿ : 11%

ಅರವಿಂದ್ ಕೇಜ್ರಿವಾಲ್ : 9.3%

ಅಖಿಲೇಶ್ ಯಾದವ್ : 7%

ಮಮತಾ ಬ್ಯಾನರ್ಜಿ : 4.2%

ಮಾಯಾವತಿ : 3.1%

ಐಪ್ಯಾಕ್ ಆನ್ ಲೈನ್ ಸಮೀಕ್ಷೆ

55 ದಿನಗಳ ಕಾಲ ದೇಶದ 712 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆದಿದೆ. #NationalAgendaForum ಎಂಬ ಹೆಸರಿನಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ 57 ಲಕ್ಷ ಮಂದಿ ಪಾಲ್ಗೊಂಡಿದ್ದರು. ದೇಶದ ಪ್ರಧಾನಿ, ಮುಖ್ಯಮಂತ್ರಿಗಳು, ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳಿತ್ತು.

ಆನ್ ಲೈನ್ ಸಮೀಕ್ಷೆಯಾದರೂ ಮುಖ್ಯ

ಇದು ಆನ್ ಲೈನ್ ಸಮೀಕ್ಷೆಯಾದರೂ, ದೇಶದ ಜನತೆಯ ನಿಲುವಿನ ಒಂದು ಅಂಶವಾದರೂ ತಿಳಿಯಲಿದೆ. ದೇಶದ ಪ್ರಮುಖ ಮುಖ್ಯಮಂತ್ರಿಗಳ ಪೈಕಿ ದೆಹಲಿಯ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಲದ ಮಮತಾ ಬ್ಯಾನರ್ಜಿ, ಒಡಿಶಾದ ನವೀನ್ ಪಟ್ನಾಯಕ್, ಬಿಹಾರದ ನಿತೀಶ್ ಕುಮಾರ್ ಟಾಪ್ ಸ್ಥಾನಗಳನ್ನು ಗಳಿಸಿದ್ದಾರೆ.

ಪ್ರಮುಖವಾಗಿ ಗಮನ ಹರಿಸಬೇಕಾದ ಸಮಸ್ಯೆಗಳು

ಪ್ರಮುಖವಾಗಿ ಗಮನ ಹರಿಸಬೇಕಾದ ಸಮಸ್ಯೆಗಳು, ಹಾಗೂ ಆದ್ಯತೆ ಮೇರೆಗೆ ಅಭಿವೃದ್ಧಿ ಕಾಣಬೇಕಾದ ಕ್ಷೇತ್ರಗಳ ಪೈಕಿ ಮಹಿಳಾ ಸಬಲೀಕರಣ, ಕೃಷಿ, ಆರ್ಥಿಕ ಸಮಾನತೆ, ವಿದ್ಯಾರ್ಥಿಗಳ ಸಮಸ್ಯೆ, ಆರೋಗ್ಯ ಶಿಕ್ಷಣ, ಸಮುದಾಯ ಐಕ್ಯತೆ, ಭಾಷೆ, ಮೂಲ ಶಿಕ್ಷಣ, ಗ್ರಾಮ ನೈರ್ಮಲೀಕರಣ,ವಯಸ್ಕರ ಶಿಕ್ಷಣ ಹೆಚ್ಚಿನ ಮತ ಪಡೆದುಕೊಂಡಿವೆ.

ಅಮೀರ್ ಖಾನ್ ರಾಜಕೀಯಕ್ಕೆ ಬರಲಿ

ನಟ ಅಮೀರ್ ಖಾನ್, ಅಕ್ಷಯ್ ಕುಮಾರ್, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಬಾಬಾ ರಾಮದೇವ್, ಕೈಲಾಶ್ ಸತ್ಯಾರ್ಥಿ, ಎಂಎಸ್ ಧೋನಿ, ರಘುರಾಮ್ ರಾಜನ್, ರತನ್ ಟಾಟಾ, ಪತ್ರಕರ್ತ ರವೀಶ್ ಕುಮಾರ್, ಸೌರವ್ ಗಂಗೂಲಿ ಅವರು ಸಕ್ರಿಯ ರಾಜಕೀಯಕ್ಕೆ ಬರಲಿ ಎಂದು ನೆಟಿಜನ್ಸ್ ಬಯಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In the survey performed by Indian Political Action Committee, PM Narendra Modi is seen far ahead of other leaders of the country. 48% respondents picked PM Modi as the leader who they feel would take the country ahead, whereas Congress President Rahul Gandhi has bagged mere 11 percent of the votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more