ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

48 ವರ್ಷದ ವಿಪ್ಲವ್ ದೇವ್ ಗೆ ಒಲಿಯುತ್ತಾ ತ್ರಿಪುರಾ ಸಿಎಂ ಪಟ್ಟ?

By Sachhidananda Acharya
|
Google Oneindia Kannada News

ಅಗರ್ತಲಾ, ಮೇ 3: ತ್ರಿಪುರಾದಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರಿದೆ. ಎಲ್ಲರ ನಿರೀಕ್ಷೆ, ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಬರೋಬ್ಬರಿ 60 ರಲ್ಲಿ 41 ಸ್ಥಾನಗಳನ್ನು ಕೇಸರಿ ಪಕ್ಷ ತನ್ನ ಮಿತ್ರ ಪಕ್ಷಗಳೊಂದಿಗೆ ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಈ ಗೆಲುವಿನೊಂದಿಗೆ ಮುಂದಿನ ತ್ರಿಪುರಾ ಸಿಎಂ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.

ತ್ರಿಪುರಾದ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿ ವಿಪ್ಲವ್ ಕುಮಾರ್ ದೇವ್ ಮುಂಚೂಣಿಯಲ್ಲಿದ್ದಾರೆ. 48 ವರ್ಷದ ಬಿಪ್ಲಾಬ್ ಕುಮಾರ್ ದೇವ್ ತ್ರಿಪುರಾದಲ್ಲಿ ಕಮಲ ಪಕ್ಷ ಅರಳುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಪಕ್ಷದ ರಾಜ್ಯಾಧ್ಯಕ್ಷರಾಗಿದ್ದುಕೊಂಡು ಚಾಣಕ್ಯ ತಂತ್ರಗಳನ್ನು ಹೆಣೆದು ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ.

ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ ಚುನಾವಣೆ: ಇಂದು ಫಲಿತಾಂಶ ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ ಚುನಾವಣೆ: ಇಂದು ಫಲಿತಾಂಶ

ಹಾಗೆ ನೋಡಿದರೆ ವಿಪ್ಲವ್ ಕುಮಾರ್ ದೇವ್ ಬಿಜೆಪಿಯ ರಾಜ್ಯಾಧ್ಯಕ್ಷರುಗಳಲ್ಲೇ ಅತ್ಯಂತ ತರುಣರು. ಅವರಿಗಿನ್ನೂ ಕೇವಲ 48 ವರ್ಷ.

48 year old Biplab Kumar Dev is in the forefront of CM race in Tripura

ಒಂದು ಕಾಲದಲ್ಲಿ ದೆಹಲಿಯಲ್ಲಿ ಜಿಮ್ ಒಂದರಲ್ಲಿ ತರಬೇತುದಾರರಾಗಿದ್ದರು. ನಂತರ ಅವರು ಆರ್.ಎಸ್.ಎಸ್ ಸೇರಿದರು. ಮುಂದೆ ಬಿಜೆಪಿಗೆ ವರ್ಗಾವಣೆಯಾದ ವಿಪ್ಲವ್ ತ್ರಿಪುರಾ ಬಿಜೆಪಿಯ ಅಧ್ಯಕ್ಷರಾದರು.

LIVE: ತ್ರಿಪುರಾದಲ್ಲಿ ಅಭೂತಪೂರ್ವ ಜಯದತ್ತ ಬಿಜೆಪಿLIVE: ತ್ರಿಪುರಾದಲ್ಲಿ ಅಭೂತಪೂರ್ವ ಜಯದತ್ತ ಬಿಜೆಪಿ

ತ್ರಿಪುರಾ ಬಿಜೆಪಿ ಉಸ್ತುವಾರಿ ಸುನಿಲ್ ದಿಯೊಧಾರ್ ಮಾರ್ಗದರ್ಶನದಲ್ಲಿ ಬೆಳೆದ ವಿಪ್ಲವ್ ಅಪ್ರತಿಮ ಸಂಘಟಕರಾಗಿ ಬೆಳೆದರು. ಪರಿಣಾಮ ಇವತ್ತು ಕಣ್ಣ ಮುಂದಿದೆ. ತ್ರಿಪುರಾದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ.

48 year old Biplab Kumar Dev is in the forefront of CM race in Tripura

ಈ ಎಲ್ಲಾ ಕಾರಣಗಳಿಗಾಗಿ ವಿಪ್ಲವ್ ಕುಮಾರ್ ದೇವ್ ತ್ರಿಪುರಾದ ಮುಖ್ಯಮಂತ್ರಿಯಾದರೆ ಅಚ್ಚರಿಯಿಲ್ಲ. ಆದರೆ ಸಂಜೆ ನವದೆಹಲಿಯಲ್ಲಿ ನಡೆಯಲಿರುವ ಬಿಜೆಪಿ ಸಂಸದೀಯ ಮಮಡಳಿ ಸಭೆಯಲ್ಲಿ ತ್ರಿಪುರಾದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗುತ್ತದೆ. ವಿಪ್ಲವ್ ಕುಮಾರ್ ದೇವ್ ತ್ರಿಪುರಾ ಮುಖ್ಯಮಂತ್ರಿಯಾಗುತ್ತಾರಾ ಎಂಬ ಪ್ರಶ್ನೆಗೆ ಉತ್ತರ ಸಿಗಲು ಸಂಜೆವರೆಗೆ ಕಾಯಲೇಬೇಕಾಗಿದೆ.

ತ್ರಿಪುರಾ : ಯುವಜನತೆ ಬಿಜೆಪಿ ಜಯಭೇರಿಯ ರೂವಾರಿತ್ರಿಪುರಾ : ಯುವಜನತೆ ಬಿಜೆಪಿ ಜಯಭೇರಿಯ ರೂವಾರಿ

ನಾನೇನೂ ಹೇಳಲ್ಲ
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಪ್ಲವ್ ದೇವ್, ನಾನು ಈ ಬಗ್ಗೆ ಏನೂ ಪ್ರತಿಕ್ರಿಯೆ ನೀಡುವುದಿಲ್ಲ. ಪಕ್ಷ ಈ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ," ಎಂದಿದ್ದಾರೆ.

ಈಶಾನ್ಯದ ಹೀನಾಯ ಸೋಲು : ರಾಹುಲ್ ಮೇಲೆ ನೆಟ್ ನೋಟ ಈಶಾನ್ಯದ ಹೀನಾಯ ಸೋಲು : ರಾಹುಲ್ ಮೇಲೆ ನೆಟ್ ನೋಟ

English summary
Tripura assembly election results 2018: Biplab Kumar Dev, 48, might be the BJP’s chief ministerial pick for Tripura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X