ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ಎಚ್ಚರಿಕೆ ನಂತರ 48 ವೆಬ್ ಹ್ಯಾಕ್ ಮಾಹಿತಿ ಬಹಿರಂಗ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 29: ಭಾರತದಲ್ಲಿ 500ಕ್ಕೂ ಹೆಚ್ಚು ಬಳಕೆದಾರರು ಸೇರಿದಂತೆ ಜಾಗತಿಕವಾಗಿ 12 ಸಾವಿರ ಬಳಕೆದಾರರಿಗೆ ಸರ್ಕಾರಿ ಪ್ರಾಯೋಜಿತ ಸೈಬರ್ ದಾಳಿಯ ಬಗ್ಗೆ ಗೂಗಲ್ ಎಚ್ಚರಿಕೆ ನೀಡಿದ ಬೆನ್ನಲ್ಲೇ 48 ಕೇಂದ್ರ ಸಚಿವರ ವೆಬ್ ತಾಣಗಳು ಹ್ಯಾಕ್ ಆಗಿರುವ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ.

ಅಕ್ಟೋಬರ್ 2019ರ ತನಕ ಕೇಂದ್ರ ಹಾಗೂ ರಾಜ್ಯ ಸಚಿವರ ವೆಬ್ ತಾಣಗಳು ಸೇರಿದಂತೆ 48 ವೆಬ್ ತಾಣಗಳು ಹ್ಯಾಕ್ ಆಗಿದ್ದವು ಎಂದು ಗುರುವಾರದಂಡು ಸಂಸತ್ತಿನಲ್ಲಿ ಮಾಹಿತಿ ನೀಡಲಾಗಿದೆ.

ಸಿಇಆರ್ ಟಿ- ಇನ್ ಮಾಹಿತಿಯಂತೆ 110ಕ್ಕೂ ಅಧಿಕ ವೆಬ್ ತಾಣಗಳು ಹ್ಯಾಕ್ ಆಗಿವೆ. ಈ ಪೈಕಿ 48 ಸಚಿವರುಗಳಿಗೆ ಸೇರಿದ್ದಾಗಿದೆ. 2018 ರಿಂದ 2019ರ ಅವಧಿಯಲ್ಲಿ ಈ ಕೃತ್ಯ ನಡೆದಿದೆ ಎಂಡು ಐಟಿ ಖಾತೆ ರಾಜ್ಯ ಸಚಿವ ಸಂಜಯ್ ಧೋತ್ರೆ ಲಿಖಿತ ಉತ್ತರ ನೀಡಿದರು.

48 websites of central ministries hacked upto October 2019

ಗೂಗಲ್ ತನ್ನ ಬಳಕೆದಾರರ ಮಾಹಿತಿಯನ್ನು ಕೇಳುವಂತಹ ರೀತಿಯ ಇ-ಮೇಲ್‍ಗಳ ಮೂಲಕ ಹ್ಯಾಕ್ ಮಾಡುವುದು, ಸರ್ವರ್ ಮೇಲೆ ದಾಳಿ ನಡೆಸುವುದು, ಹ್ಯಾಕ್ ಮಾಡುವವರ ಬಗ್ಗೆ ತಿಳಿಯದಂತೆ ಎಚ್ಚರಿಕೆ ವಹಿಸುವುದು ಎಲ್ಲವೂ ವ್ಯವಸ್ಥಿತ ಸೈಬರ್ ದಾಳಿಯ ಭಾಗವಾಗಿದೆ.

ಸಿಇಆರ್ ಟಿ-ಇನ್ ಮಾಹಿತಿಯಂತೆ ಸೈಬರ್ ದಾಳಿ ನಡೆಸಿದವರ ಇಂಟರ್ನೆಟ್ ಪ್ರೊಟೊಕಾಲ್(ಐಪಿ) ವಿಳಾಸ ಹುಡುಕಿದರೆ ಚೀನಾ, ಪಾಕಿಸ್ತಾನ, ನೆದರ್ಲೆಂಡ್ಸ್, ಫ್ರಾನ್ಸ್, ತೈವಾನ್, ರಷ್ಯಾ, ಅಲ್ಜೀರಿಯಾ, ಸೆರ್ಬಿಯಾ ಹೀಗೆ ವಿವಿಧ ದೇಶಗಳ ಲೊಕೇಷನ್ ತೋರಿಸಿದೆ ಎಂದು ಸಚಿವ ಸಂಜಯ್ ವಿವರಿಸಿದರು(ಪಿಟಿಐ)

English summary
Forty-eight websites of ministries of Centre and state governments were hacked this year up to October, Parliament was informed on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X