ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಮತ್ತೆ 47 ಚೀನಾ ಆ್ಯಪ್ ಗಳ ನಿಷೇಧ

|
Google Oneindia Kannada News

ನವದೆಹಲಿ, ಜುಲೈ.27: ಭಾರತದ ಪಾಲಿಗೆ ಮಗ್ಗಲ ಮುಳ್ಳಿನಂತೆ ಆಗಿರುವ ಚೀನಾಗೆ ಕೇಂದ್ರ ಸರ್ಕಾರವು ಪಾಠ ಕಲಿಸುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ಡ್ರ್ಯಾಗನ್ ರಾಷ್ಟ್ರದ 47 ಆಪ್ ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ.

Recommended Video

PUBG to get banned soon | Oneindia Kannada

ಕಳೆದ ತಿಂಗಳಷ್ಟೇ ಚೀನಾಗೆ ಸೇರಿದ 59 ಅಪ್ಲಿಕೇಶನ್ ಗಳನ್ನು ದೇಶದಲ್ಲಿ ಬಳಕೆ ಮಾಡದಂತೆ ನಿಷೇಧ ವಿಧಿಸಲಾಗಿತ್ತು. ಇದರ ಬೆನ್ನಲ್ಲೇ ಮತ್ತೆ 47 ಚೀನೀ ಆಪ್ ಗಳಿಗೆ ನಿಷೇಧ ಹೇರುವುದಕ್ಕೆ ಕೇಂದ್ರ ಸರ್ಕಾರವು ನಿರ್ಧರಿಸಿದೆ. ಆ 47 ಅಪ್ಲಿಕೇಷನ್ ಗಳು ಯಾವುವು ಎನ್ನುವುದರ ಕುರಿತು ಪಟ್ಟಿಯನ್ನು ಇನ್ನಷ್ಟೇ ಬಿಡುಗಡೆಯಾಗಲಿದೆ.

TikTok ನಿಷೇಧದ ಹಿಂದಿನ ಅಸಲಿ ರಹಸ್ಯ ಬಿಚ್ಚಿಟ್ಟ ಅಮೆರಿಕಾ!TikTok ನಿಷೇಧದ ಹಿಂದಿನ ಅಸಲಿ ರಹಸ್ಯ ಬಿಚ್ಚಿಟ್ಟ ಅಮೆರಿಕಾ!

ಆಲಿಬಾಬಾ ಜೊತೆಗೆ ಸಂಪರ್ಕ ಹೊಂದಿರುವ ಅಪ್ಲಿಕೇಶನ್ ಗಳನ್ನೂ ಒಳಗೊಂಡಂತೆ ಒಟ್ಟು 250ಕ್ಕೂ ಹೆಚ್ಚು ಚೀನಾ ಆ್ಯಪ್ ಗಳನ್ನು ಪಟ್ಟಿ ಮಾಡಲಾಗಿದೆ. ಪ್ರಜೆಗಳ ವೈಯಕ್ತಿಯ ಮಾಹಿತಿ ಹಾಗೂ ದೇಶದ ಸುರಕ್ಷತಾ ಮಾಹಿತಿ ಸೋರಿಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಚೀನಾ ಆ್ಯಪ್ ಗಳ ಮೇಲೆ ಕಣ್ಣಿಟ್ಟಿದ್ದು, ಗೇಮಿಂಗ್ ಆ್ಯಪ್ ಆಗಿರುವ ಪಬ್-ಜೀ ಅನ್ನು ಕೂಡಾ ಪಟ್ಟಿಯಲ್ಲಿ ಸೇರಿಸಲಾಗಿದೆ.

ಗುಪ್ತಚರ ಸಂಸ್ಥೆಯ ಜೊತೆಗೆ ಬಳಕೆದಾರರ ಮಾಹಿತಿ ವಿನಿಮಯ

ಗುಪ್ತಚರ ಸಂಸ್ಥೆಯ ಜೊತೆಗೆ ಬಳಕೆದಾರರ ಮಾಹಿತಿ ವಿನಿಮಯ

ಚೀನಾದ ಗುಪ್ತಚರ ಸಂಸ್ಥೆಗಳ ಜೊತೆಗೆ ಬಳಕೆದಾರರ ಮಾಹಿತಿಯನ್ನು ಅಪ್ಲಿಕೇಷನ್ ಸಂಸ್ಥೆಗಳು ವಿನಿಮಯ ಮಾಡಿಕೊಳ್ಳುತ್ತಿರುವ ಶಂಕೆ ವ್ಯಕ್ತವಾಗಿದೆ. ಭಾರತವಷ್ಟೇ ಅಲ್ಲದೇ ವಿಶ್ವದ ಸುರಕ್ಷತೆ ದೃಷ್ಟಿಯಿಂದ ಇದು ಅಪಾಯಕಾರಿ ಬೆಳವಣಿಗೆಯಾಗಿದೆ. ಈ ಹಿನ್ನೆಲೆ ಚೀನಾ ಆ್ಯಪ್ ಬಳಸುವುದಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರವು ಮುಂದಾಗಿದೆ.

ಚೀನಾದ ಗೇಮಿಂಗ್ ಆಪ್ ಗೆ ನಿಷೇಧ

ಚೀನಾದ ಗೇಮಿಂಗ್ ಆಪ್ ಗೆ ನಿಷೇಧ

ಭಾರತದ ಭದ್ರತಾ ಸುರಕ್ಷತೆ ದೃಷ್ಟಿಯಿಂದ ಗೇಮಿಂಗ್ ಆ್ಯಪ್ ಬಳಕೆಗೂ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ತೀರ್ಮಾನಿಸಿದೆ. ಅಗ್ರಸ್ಥಾನದಲ್ಲಿರುವ ಚೀನಾದ ಗೇಮಿಂಗ್ ಆ್ಯಪ್ ಗಳನ್ನು ದೇಶದಲ್ಲಿ ನಿಷೇಧಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಅದಕ್ಕಾಗಿ ಕೆಲವು ಅಪ್ಲಿಕೇಷನ್ ಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸುತ್ತಿದೆ.

ಗಾಲ್ವಾನ್ ಗಡಿಯ ಸಂಘರ್ಷವೇ ಇಷ್ಟಕ್ಕೆಲ್ಲ ಕಾರಣ

ಗಾಲ್ವಾನ್ ಗಡಿಯ ಸಂಘರ್ಷವೇ ಇಷ್ಟಕ್ಕೆಲ್ಲ ಕಾರಣ

ಕಳೆದ ಜೂನ್.15 ಮತ್ತು 16ರಂದು ಚೀನಾ ಸೈನಿಕರು ತೋರಿದ ಕ್ರೌರ್ಯಕ್ಕೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, 76 ಯೋಧರು ಗಾಯಗೊಂಡಿರುವ ಬಗ್ಗೆ ಭಾರತೀಯ ಸೇನೆಯು ಬಹಿರಂಗವಾಗಿ ಸ್ಪಷ್ಟನೆ ನೀಡಿತು. ಆದರೆ ಚೀನಾ ಯಾವುದೇ ರೀತಿಯ ಮಾಹಿತಿ ನೀಡಿರಲಿಲ್ಲ. ಅಮೆರಿಕಾದ ಗುಪ್ತಚರ ಇಲಾಖೆ ನೀಡಿದ ಅಂಕಿ-ಅಂಶಗಳ ಪ್ರಕಾರ ಭಾರತೀಯ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಚೀನಾದ ಕನಿಷ್ಠ 35 ಸೈನಿಕರು ಹತರಾಗಿದ್ದಾರೆ ಎಂದು ತಿಳಿದು ಬಂದಿತ್ತು. ಈ ಸಂಘರ್ಷದಿಂದ ಉಭಯ ರಾಷ್ಟ್ರಗಳ ನಡುವ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿಯೇ ಚೀನಾ ಅಪ್ಲಿಕೇಷನ್ ಗಳನ್ನು ನಿಷೇಧಿಸುವುದಕ್ಕೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಚೀನಾದ 59 ಅಪ್ಲಿಕೇಷನ್ ಗಳಿಗೆ ನಿರ್ಬಂಧ

ಭಾರತದಲ್ಲಿ ಚೀನಾದ 59 ಅಪ್ಲಿಕೇಷನ್ ಗಳಿಗೆ ನಿರ್ಬಂಧ

ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ತರುತ್ತಿರುವ ಆರೋಪದ ಹಿನ್ನೆಲೆ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ 59 ಮೊಬೈಲ್ ಅಪ್ಲಿಕೇಷನ್ ಗಳ ಬಳಕೆ ನಿಷೇಧಿಸಲಾಗಿತ್ತು. ಕೇಂದ್ರ ಸರ್ಕಾರವು ಇದಕ್ಕೆ ಸಂಬಂಧಿಸಿದಂತೆ ಜೂನ್.29ರಂದು ಭಾರತೀಯ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ 69ಎ ಅಡಿಯಲ್ಲಿ ಚೀನಾ ಅಪ್ಲಿಕೇಷನ್ ಗಳನ್ನು ನಿಷೇಧಿಸಿ ಆದೇಶಿಸಿತ್ತು. ಚೀನಾದ ಸರ್ಕಾರಿ ಮಾಧ್ಯಮ ದಿ ಗ್ಲೋಬಲ್ ಟೈಮ್ಸ್ ಪ್ರಕಟಿಸಿದ ವರದಿ ಪ್ರಕಾರ, ಟಿಕ್‌ಟಾಕ್ ಮತ್ತು ಹೆಲೋ ಅಪ್ಲಿಕೇಶನ್‌ಗಳ ಕಂಪನಿಯಾಗಿರುವ ಬೈಟ್‌ ಡ್ಯಾನ್ಸ್ ಗೆ ಇದರಿಂದ 45 ಸಾವಿರ ಕೋಟಿ ರೂಪಾಯಿ ನಷ್ಟವಾಗಬಹುದು ಎಂದು ಅಂದಾಜಿಸಲಾಗಿತ್ತು.

English summary
47 More Chinese Apps Banned In India Over User Privacy Violations. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X