• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜುಲೈ 9ರ ತನಕ 4,615 ಶ್ರಮಿಕ್ ರೈಲುಗಳ ಸಂಚಾರ

|

ನವದೆಹಲಿ, ಜುಲೈ 24 : ಭಾರತೀಯ ರೈಲ್ವೆ ಇದುವರೆಗೂ 4,615 ಶ್ರಮಿಕ್ ರೈಲುಗಳನ್ನು ಓಡಿಸಿದೆ. ಲಾಕ್ ಡೌನ್ ಸಮಯದಲ್ಲಿ ವಿವಿಧ ರಾಜ್ಯಗಳಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರು ತವರು ರಾಜ್ಯಕ್ಕೆ ಮರಳಲು ಶ್ರಮಿಕ್ ರೈಲುಗಳ ಸಂಚಾರವನ್ನು ಮೇ ತಿಂಗಳಿನಲ್ಲಿ ಆರಂಭಿಸಲಾಗಿತ್ತು.

ರೈಲ್ವೆ ಬೋರ್ಡ್ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಜುಲೈ 9ರ ತನಕ 4,615 ಶ್ರಮಿಕ್ ರೈಲುಗಳನ್ನು ಓಡಿಸಲಾಗಿದೆ. 63 ಲಕ್ಷ ಜನರು ರೈಲಿನಲ್ಲಿ ಪ್ರಯಾಣಿಸಿದ್ದಾರೆ" ಎಂದರು.

ಶ್ರಮಿಕ್ ರೈಲುಗಳ ಸಂಚಾರ; ಕರ್ನಾಟಕದಿಂದ ವಾಪಸ್ ಆದ ಕಾರ್ಮಿಕರು ಎಷ್ಟು?

ಭಾರತೀಯ ರೈಲ್ವೆ ಜುಲೈ 9ರಂದು ಕೊನೆಯ ಶ್ರಮಿಕ್ ರೈಲನ್ನು ಓಡಿಸಿದೆ. ಯಾವುದಾದರೂ ರಾಜ್ಯ ಬೇಡಿಕೆ ಸಲ್ಲಿಸಿದರೆ ಈಗಲೂ ಸಹ ರೈಲನ್ನು ಓಡಿಸಲು ಇಲಾಖೆ ಸಿದ್ಧವಿದೆ. ಆದರೆ, ಇದುವರೆಗೂ ಯಾವುದೇ ರಾಜ್ಯ ಬೇಡಿಕೆ ಸಲ್ಲಿಸಿಲ್ಲ.

ಶ್ರಮಿಕ್ ರೈಲು ಒದಗಿಸಲು ಸಿದ್ಧ; ಭಾರತೀಯ ರೈಲ್ವೆ

"ಜುಲೈ 9ರ ಬಳಿಕ ಯಾವುದೇ ರಾಜ್ಯ ಶ್ರಮಿಕ್ ರೈಲಿಗಾಗಿ ಬೇಡಿಕೆ ಸಲ್ಲಿಸಿಲ್ಲ. ಆದ್ದರಿಂದ, ರಾಜ್ಯಗಳ ಬೇಡಿಕೆ ಪೂರ್ಣಗೊಂಡಿದೆ ಎಂದು ನಾವು ಭಾವಿಸಿದ್ದೇವೆ" ಎಂದು ವಿನೋದ್ ಕುಮಾರ್ ಯಾದವ್ ಹೇಳಿದ್ದಾರೆ.

ಕರ್ನಾಟಕದಿಂದ ಓಡಿದ್ದು 194 ಶ್ರಮಿಕ್ ರೈಲು; 2.8 ಲಕ್ಷ ಜನರ ಪ್ರಯಾಣ

ಮೇ 1ರಂದು ಭಾರತೀಯ ರೈಲ್ವೆ ಶ್ರಮಿಕ್ ರೈಲುಗಳ ಸಂಚಾರವನ್ನು ಆರಂಭಿಸಿತು. ಜುಲೈ 9ರ ತನಕ 4,615 ರೈಲುಗಳನ್ನು ಓಡಿಸಲಾಗಿದೆ. ಕೇಂದ್ರ ಸರ್ಕಾರ ಈ ರೈಲುಗಳ ವೆಚ್ಚದ ಶೇ 85ರಷ್ಟನ್ನು ನೀಡಿದೆ. ಉಳಿದ ಭಾಗವನ್ನು ರಾಜ್ಯ ಸರ್ಕಾರಗಳು ನೀಡಿವೆ.

ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಯಿತು. ಆಗ ವಲಸೆ ಕಾರ್ಮಿಕರು ಬೇರೆ-ಬೇರೆ ರಾಜ್ಯಗಳಲ್ಲಿ ಸಿಲುಕಿದರು. ಅವರು ತವರು ರಾಜ್ಯಕ್ಕ ವಾಪಸ್ ಆಗಲು ಸಹಾಯಕವಾಗುವಂತೆ ಶ್ರಮಿಕ್ ರೈಲುಗಳನ್ನು ಓಡಿಸಲಾಯಿತು.

English summary
Till July 4, 615 Shramik special trains run by Indian railways and 63 lakh people transported. We are ready to run trains if any state demand now said railways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X