ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

44 ನೇ ಜಿಎಸ್‌ಟಿ ಮಂಡಳಿ ಸಭೆ: ಇಲ್ಲಿದೆ ಪ್ರಮುಖ ಮಾಹಿತಿ

|
Google Oneindia Kannada News

ನವದೆಹಲಿ, ಜೂ.12: ಕೊರೊನಾ ಸಾಂಕ್ರಾಮಿಕ, ಬ್ಲ್ಯಾಕ್‌ ಫಂಗಸ್‌ ಮಧ್ಯೆ ಸಾವಿರಾರು ಜನರಿಗೆ ಸಹಾಯವಾಗುವ ಮಹತ್ವದ ನಿರ್ಧಾರವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಕೈಗೊಂಡಿದ್ದಾರೆ. ಕೇಂದ್ರ ಸರ್ಕಾರವು ಔಷಧಿ ಹಾಗೂ ಉಪಕರಣಗಳು ಸೇರಿದಂತೆ ಕೋವಿಡ್ -19 ಅಗತ್ಯ ವಸ್ತುಗಳು ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ, ಹಾಗೆಯೇ ಕೆಲವೊಂದು ಅಗತ್ಯ ವೈದ್ಯಕೀಯ ಸಲಕರಣೆಗಳಿಗೆ ವಿನಾಯತಿ ಮಾಡಿದೆ. ಜೂನ್ 12 ರಂದು ನಡೆದ 44 ನೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಕೋವಿಡ್‌ನ ಈ ಸಂದರ್ಭದಲ್ಲಿ ಕೊರೊನಾ ಅಗತ್ಯ ವಸ್ತುಗಳ ಮೇಲಿನ ತೆರಿಗೆ ಪರಿಹಾರವನ್ನು ಪರಿಗಣಿಸುವಂತೆ ರಾಜ್ಯಗಳು ಈ ಹಿಂದೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಹಾಗೆಯೇ ರಾಜ್ಯ ಸರ್ಕಾರದ ಹಣಕಾಸು ಸಚಿವರುಗಳು 43 ನೇ ಸಭೆಗೂ ಮುನ್ನ ಆನ್‌ಲೈನ್‌ ಸಭೆ ನಡೆಸಿ ಕೋವಿಡ್ -19 ಅಗತ್ಯ ವಸ್ತುಗಳ ತೆರಿಗೆ ಮನ್ನಾ ಮಾಡಲು ಸರ್ಕಾರದ ಮುಂದೆ ಬೇಡಿಕೆ ಇರಿಸುವ ನಿರ್ಧಾರ ಕೈಗೊಂಡಿದ್ದರು. ಇಂದು ನಡೆದ 44 ನೇ ಸಭೆಯಲ್ಲಿ ಸರ್ಕಾರ ತೆರಿಗೆ ವಿನಾಯತಿಯ ತೀರ್ಮಾನ ಕೈಗೊಂಡಿದೆ.

43ನೇ GST ಮಂಡಳಿ ಸಭೆ: ಕೊರೊನಾ ಉಪಕರಣಗಳ ಮೇಲೆ ವಿಶೇಷ ವಿನಾಯತಿ43ನೇ GST ಮಂಡಳಿ ಸಭೆ: ಕೊರೊನಾ ಉಪಕರಣಗಳ ಮೇಲೆ ವಿಶೇಷ ವಿನಾಯತಿ

ಹಿಂದಿನ ಸಭೆಯಲ್ಲಿ ವಿಪಕ್ಷಗಳು ಔಷಧಿ ಹಾಗೂ ಉಪಕರಣಗಳು ಸೇರಿದಂತೆ ಕೋವಿಡ್ -19 ಅಗತ್ಯ ವಸ್ತುಗಳು ಮೇಲಿನ ತೆರಿಗೆಯನ್ನು ಮನ್ನಾ ಮಾಡುವಂತೆ ಸರ್ಕಾರವನ್ನು ಒತ್ತಾಯಿಸದ ಬೆನ್ನಲ್ಲೇ ಈ ಬಗ್ಗೆ ಪರಿಶೀಲನೆ ನಡೆಸಲು ನಿರ್ಮಲಾ ಸೀತಾರಾಮನ್‌ ಹಣಕಾಸು ಸಚಿವರುಗಳ ಗುಂಪನ್ನು ರಚಿಸಿದರು.

44th GST Council Meeting: Highlights and Key Takeways in Kannada

ಮೇಘಾಲಯ ಮುಖ್ಯಮಂತ್ರಿ ಕಾರ್ನಾಡು ಸಂಗ್ಮಾ ಈ ಗುಂಪಿನ ಸಂಚಾಲಕರಾಗಿ ನೇಮಕ ಮಾಡಲಾಗಿತ್ತು. ಜೂನ್ 8 ರೊಳಗೆ ತನ್ನ ಶಿಫಾರಸುಗಳನ್ನು ಪರಿಷತ್ತಿಗೆ ಸಲ್ಲಿಸುವ ಕಾರ್ಯವನ್ನು ಮಾಡಲಾಗಿದೆ. ಜೂನ್ 7 ರಂದು ಈ ಗುಂಪು ವರದಿಯನ್ನು ಸಲ್ಲಿಸಿದೆ. ಕೆಲವು ಕೋವಿಡ್‌ ಅಗತ್ಯ ವಸ್ತುಗಳ ಜಿಎಸ್‌ಟಿ ದರವನ್ನು ಶೇಕಡಾ 5 ಕ್ಕೆ ಕಡಿತಗೊಳಿಸಲು ಸೂಚಿಸಿತ್ತು.

ಔಷಧಿಗಳು, ಆಮ್ಲಜನಕ, ಆಮ್ಲಜನಕ-ಉತ್ಪಾದನಾ ಉಪಕರಣಗಳು, ಪರೀಕ್ಷಾ ಕಿಟ್‌ಗಳು, ಇತರ ಯಂತ್ರಗಳು ಮತ್ತು ಕೋವಿಡ್ ಸಂಬಂಧಿತ ಪರಿಹಾರ ಸಾಮಗ್ರಿಗಳು ಎಂಬ 4 ವಿಭಾಗಗಳಿಗೆ ಜಿಎಸ್‌ಟಿ ದರಗಳನ್ನು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ದರಗಳನ್ನು ಪ್ರಕಟಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ವಿದ್ಯುತ್ ಉಪಕರಣಗಳು ಮತ್ತು ತಾಪಮಾನ ತಪಾಸಣೆ ಸಾಧನಗಳ ಮೇಲಿನ ಜಿಎಸ್‌ಟಿ ಶೇಕಡಾ 5, ಆಂಬುಲೆನ್ಸ್‌ಗಳ ಜಿಎಸ್‌ಟಿ 12 ಕ್ಕೆ ಇಳಿಸಲಾಗಿದೆ. ತಂಡ ಶಿಫಾರಸು ಮಾಡಿದ ಈ ದರವು ಆಗಸ್ಟ್ ಅಂತ್ಯದವರೆಗೆ ಇರಲಿದೆ ಎಂದು ಸೀತಾರಾಮನ್ ಮಾಹಿತಿ ನೀಡಿದ್ದಾರೆ.

ವಿನಾಯತಿ ಬಳಿಕ ಲಸಿಕೆಗೆ ಶೇ.5 ಜಿಎಸ್‌ಟಿ ಇರಲಿದೆ. ಕೇಂದ್ರವು ಘೋಷಿಸಿದಂತೆ ಶೇ. 75 ಲಸಿಕೆಯನ್ನು ಖರೀದಿಸಲಿದೆ. ಅದರ ಜಿಎಸ್‌ಟಿ ಕೂಡಾ ಪಾವತಿ ಮಾಡಲಿದೆ. ಆದರೆ ಜಿಎಸ್‌ಟಿಯಿಂದ ಬರುವ ಆದಾಯದ ಶೇ. 70 ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಕೂಡಾ ಸಚಿವೆ ನಿರ್ಮಲಾ ವಿವರಿಸಿದ್ದಾರೆ.

44 ನೇ ಜಿಎಸ್‌ಟಿ ಮಂಡಳಿ ಸಭೆಯ ಶಿಫಾರಸುಗಳು

ಟೊಸಿಲಿಜುಮಾಬ್ (Tocilizumab): ಜಿಎಸ್‌ಟಿ ಮನ್ನಾ
ಆಂಫೊಟೆರಿಸಿನ್ ಬಿ (Amphotericin B): ಜಿಎಸ್‌ಟಿ ಮನ್ನಾ
ಆಂಟಿಕೋಗುಲಂಟ್ಸ್ (Anti-coagulants): ಜಿಎಸ್‌ಟಿ ಕಡಿತ (ಶೇ.5)
ರೆಮ್ಡೆಸಿವಿರ್ (Remdesivir): ಜಿಎಸ್‌ಟಿ ಕಡಿತ (ಶೇ.5)
ಕೊರೊನಾ ಚಿಕಿತ್ಸೆಗೆ ಬಳಸುವ ಔಷಧಿಗಳು: ಜಿಎಸ್‌ಟಿ ಕಡಿತ (ಶೇ.5)
ಆಕ್ಸಿಜನ್‌, ವೆಂಟಿಲೇಟರ್‌, ಇತರೆ ಸಾಮಾಗ್ರಿಗಳು: ಜಿಎಸ್‌ಟಿ ಕಡಿತ (ಶೇ.5)
ಕೋವಿಡ್‌ ಪರೀಕ್ಷಾ ಕಿಟ್‌: ಜಿಎಸ್‌ಟಿ ಕಡಿತ (ಶೇ.5)
ಇತರೆ ಕಿಟ್‌ಗಳು: ಜಿಎಸ್‌ಟಿ ಕಡಿತ (ಶೇ.5)
ಸ್ಯಾನಿಟೈಜರ್‌, ಆಂಬುಲೆನ್ಸ್‌: ಜಿಎಸ್‌ಟಿ ಕಡಿತ (ಶೇ.5)

Recommended Video

Renukacharya ಅವರು ಹೋಮ ಮಾಡಿ ಸಂಕಷ್ಟಕ್ಕೀಡಾದರು | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
GST Council Meeting, chaired by Finance Minister Nirmala Sitharaman, reduced the tax rates on major COVID-related essential items, however, vaccines will continue to attract a 5% GST.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X