ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಣ್ಮಕ್ಳೆ ಸ್ಟ್ರಾಂಗು ಗುರು: ಜನಧನ್ ಖಾತೆ ತೆರೆಯುವಲ್ಲೂ ಮಹಿಳೆಯರೇ ಮುಂದು!

|
Google Oneindia Kannada News

ನವದೆಹಲಿ, ಡಿಸೆಂಬರ್ 6: ಭಾರತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪರಿಚಯಿಸಿರುವ ಪ್ರಧಾನಮಂತ್ರಿ ಜನಧನ್ ಯೋಜನೆ ಅಡಿಯಲ್ಲಿ ಇದುವರೆಗೂ 44 ಕೋಟಿ ಜನರಿಗೆ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆ. ಅಚ್ಚರಿ ಎಂದರೆ ಒಟ್ಟು ಬ್ಯಾಂಕ್ ಖಾತೆಗಳ ಪೈಕಿ ಶೇ.55ರಷ್ಟು ಬ್ಯಾಂಕ್ ಖಾತೆಗಳು ಮಹಿಳೆಯರಿಗೆ ಸೇರಿವೆ.

ಸಂಸತ್ ಚಳಿಗಾಲ ಅಧಿವೇಶನದ ಆರನೇ ದಿನ ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಭಾಗವತ್ ಕರದ್, ದೇಶದಲ್ಲಿ ಜನಧನ್ ಖಾತೆಯನ್ನು ಹೊಂದಿರುವವರ ಕುರಿತು ಕಲಾಪಕ್ಕೆ ಸೋಮವಾರ ಅಧಿಕೃತವಾಗಿ ಮಾಹಿತಿ ನೀಡಿದರು.

ಕೊರೊನಾ ಸಂಕಷ್ಟ: ಮಹಿಳೆಯರಿಗೆ ನೀಡುವ 500 ರೂ ಜನಧನ್ ಖಾತೆಗೆ ವರ್ಗಾವಣೆಕೊರೊನಾ ಸಂಕಷ್ಟ: ಮಹಿಳೆಯರಿಗೆ ನೀಡುವ 500 ರೂ ಜನಧನ್ ಖಾತೆಗೆ ವರ್ಗಾವಣೆ

ಭಾರತದಲ್ಲಿ 2021ರ ನವೆಂಬರ್ 17ರ ಅಂಕಿ-ಅಂಶಗಳ ಪ್ರಕಾರ, ಪ್ರಧಾನಮಂತ್ರಿ ಜನಧನ್ ಯೋಜನೆ ಅಡಿಯಲ್ಲಿ ಒಟ್ಟು 43.90 ಕೋಟಿ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಈ ಪೈಕಿ ಶೇ.55.60ರಷ್ಟು ಖಾತೆದಾರರು ಮಹಿಳೆಯರೇ ಆಗಿದ್ದಾರೆ. ಅಂದರೆ 24.42 ಮಹಿಳೆಯರು ಜನಧನ್ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆಯನ್ನು ತೆರೆದಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

44 Crore Jan Dhan accounts in India; More than 55 percent account holders are women

ಗುಜರಾತಿನಲ್ಲಿ ಜನಧನ್ ಫಲಾನುಭವಿಗಳ ಸಂಖ್ಯೆ:
ಗುಜರಾತ್‌ನಲ್ಲಿ ಪ್ರಧಾನಮಂತ್ರಿ ಜನಧನ್ ಯೋಜನೆಯ ಲಾಭ ಪಡೆದವರ ಸಂಖ್ಯೆಯ ಬಗ್ಗೆ ಪ್ರಶ್ನಿಸಿದಾಗ ರಾಜ್ಯದನಲ್ಲಿ ಒಟ್ಟು 1.65 ಕೋಟಿ ಫಲಾನುಭವಿಗಳಿದ್ದು, ಅದರಲ್ಲಿ ಶೇ.51ರಷ್ಟು ಅಂದರೆ 84 ಲಕ್ಷ ಮಹಿಳೆಯರು ಬ್ಯಾಂಕ್ ಖಾತೆ ತೆರೆದಿದ್ದಾರೆ ಎಂದರು.

2014ರ ಆಗಸ್ಟ್ ನಲ್ಲಿ ಯೋಜನೆ ಘೋಷಣೆ:
ಕೇಂದ್ರ ಸರ್ಕಾರವು ಕಳೆದ 2014ರ ಆಗಸ್ಟ್ 15ರಂದು ರಾಷ್ಟ್ರೀಯ ಮಿಷನ್ ಆನ್ ಫೈನಾನ್ಶಿಯಲ್ ಇನ್‌ಕ್ಲೂಷನ್ ಅಡಿಯಲ್ಲಿ ಯೋಜನೆಯನ್ನು ಘೋಷಿಸಿತು. ದೇಶದ ಬ್ಯಾಂಕಿಂಗ್ ವ್ಯವಸ್ಥೆ ಸುಧಾರಿಸುವುದು, ದೇಶದ ಪ್ರತಿಯೊಬ್ಬರೂ ಕನಿಷ್ಠ ಒಂದು ಬ್ಯಾಂಕ್ ಖಾತೆ ತೆರೆಯುವುದು, ಪ್ರತಿ ಕುಟುಂಬಕ್ಕೆ ಒಂದು ಬ್ಯಾಂಕ್ ಖಾತೆಯನ್ನು ಒದಗಿಸುವ ಉದ್ದೇಶವನ್ನು ಯೋಜನೆ ಹೊಂದಿತ್ತು. ತದನಂತರ ಈ ಯೋಜನೆಯನ್ನು 2018ರ ಆಗಸ್ಟ್ 14ರವರೆಗೂ ವಿಸ್ತರಿಸಲಾಯಿತು. ಕೆಲವು ಮಾರ್ಪಾಡುಗಳೊಂದಿಗೆ 'ಪ್ರತಿ ಮನೆಯಿಂದ' ' ಬ್ಯಾಂಕ್ ಸಂಪರ್ಕವಿಲ್ಲದವರ ಹೆಸರಿನಲ್ಲಿ ಖಾತೆ ತೆರೆಯುವುದಕ್ಕೆ ಆದ್ಯತೆ ನೀಡಲಾಯಿತು. ಈ ಹಂತದಲ್ಲಿ PMJDY ಖಾತೆಗಳಲ್ಲಿ ಯಾವುದೇ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸುವ ಅಗತ್ಯವಿಲ್ಲ.

ಸುಕನ್ಯಾ ಸಮೃದ್ಧಿ ಖಾತೆ:
"ಸುಕನ್ಯಾ ಸಮೃದ್ಧಿ ಖಾತೆಯ ಅಡಿಯಲ್ಲಿ ಏಪ್ರಿಲ್ 1, 2018 ರಿಂದ ಅಕ್ಟೋಬರ್ 31, 2021 ರವರೆಗೆ ತೆರೆಯಲಾದ ಹೊಸ ಖಾತೆಗಳ ಸಂಖ್ಯೆ 1,42,73,910 ಇದೆ ಎಂದು ಸುಕನ್ಯಾ ಸಮೃದ್ಧಿ ಖಾತೆ (ಎಸ್‌ಎಸ್‌ಎ) ಕುರಿತಾದ ಪ್ರತ್ಯೇಕ ಪ್ರಶ್ನೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದರು. "ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶಗಳು ಆ ಕ್ರಮದಲ್ಲಿ ಅತಿ ಹೆಚ್ಚು ಸುಕನ್ಯಾ ಸಮೃದ್ಧಿ ಖಾತೆ ಖಾತೆಗಳನ್ನು ಹೊಂದಿರುವ ಟಾಪ್ -5 ರಾಜ್ಯಗಳಾಗಿವೆ. ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಡಾಖ್, ಮಿಜೋರಾಂ ಮತ್ತು ಸಿಕ್ಕಿಂ ಅತಿಕಡಿಮೆ ಖಾತೆಗಳನ್ನು ತೆರೆದಿರುವ ಐದು ರಾಜ್ಯಗಳಾಗಿ ಗುರುತಿಸಿಕೊಂಡಿವೆ.

ಸಾರ್ವಜನಿಕ ವಲಯದ ಬ್ಯಾಂಕ್‌ಗಳು 96.24% ರಷ್ಟು ಅಂತಹ ಖಾತೆ ತೆರೆಯುವಿಕೆಗೆ ಕಾರಣವಾಗಿದ್ದರೆ, ಯೋಜನೆ ಪ್ರಾರಂಭವಾದಾಗಿನಿಂದ 2021ರ ಅಕ್ಟೋಬರ್ 31 ರವರೆಗೆ ಖಾಸಗಿ ವಲಯದ ಬ್ಯಾಂಕ್‌ಗಳು ಅಂತಹ ಖಾತೆಗಳನ್ನು ತೆರೆಯುವಲ್ಲಿ 3.76% ಪಾಲನ್ನು ಹೊಂದಿವೆ. "ವಿವಿಧ ರಾಜ್ಯಗಳಲ್ಲಿ ವಿಭಿನ್ನ ಸಂಖ್ಯೆಯ ಖಾತೆಗಳಿಗೆ ಕಾರಣಗಳೆಂದರೆ ಜನಸಂಖ್ಯೆಯ ಗಾತ್ರ, ಸಾಮರ್ಥ್ಯ ಮತ್ತು ಉಳಿತಾಯದ ಇಚ್ಛೆ ಇತ್ಯಾದಿ," ಎಂದು ಚೌಧರಿ ಹೇಳಿದರು.

ಸುಕನ್ಯಾ ಸಮೃದ್ಧಿ ಖಾತೆ ಯಾರಿಗೆ ಉಪಯೋಗ?:
ಪೋಷಕರು ಅಥವಾ ತಂದೆ-ತಾಯಿಗಳು 10 ವರ್ಷ ವಯಸ್ಸಿನವರೆಗೆ ಹೆಣ್ಣು ಮಗುವಿನ ಹೆಸರಿನಲ್ಲಿ ಕನಿಷ್ಠ 250 ರೂಪಾಯಿಯಿಂದ ಗರಿಷ್ಠ 1.5 ಲಕ್ಷ ರೂಪಾಯಿವರೆಗೂ ಠೇವಣಿಯೊಂದಿಗೆ ಸುಕನ್ಯ ಸಮೃದ್ಧಿ ಖಾತೆ ತೆರೆಯಬಹುದು. ಹೆಣ್ಣು ಮಗುವಿನ ಹೆಸರಿನಲ್ಲಿ ಒಂದು ಖಾತೆಯನ್ನು ಮಾತ್ರ ತೆರೆಯಬಹುದು. ಖಾತೆಯನ್ನು ತೆರೆದ ದಿನಾಂಕದಿಂದ 21 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಹಣವನ್ನು ಬಿಡಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

English summary
44 Crore Jan Dhan accounts in India; More than 55 percent account holders are women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X