• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Breaking; ಕಲ್ಲಿದ್ದಲು ಪೂರೈಕೆಗಾಗಿ 42 ಪ್ರಯಾಣಿಕ ರೈಲುಗಳು ರದ್ದು

|
Google Oneindia Kannada News

ನವದೆಹಲಿ, ಏಪ್ರಿಲ್ 29 ; ಕಲ್ಲಿದ್ದಲು ಸಾಗಣೆಗೆ ಅನುಕೂಲವಾಗುವಂತೆ ದೇಶಾದ್ಯಂತ 42 ಪ್ರಯಾಣಿಕ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ವಿವಿಧ ರಾಜ್ಯಗಳಲ್ಲಿ ವಿದ್ಯುತ್ ಕೊರತೆ ಎದುರಾಗಿದ್ದು, ಕಲ್ಲಿದ್ದಲಿಗೆ ಬೇಡಿಕೆ ಹೆಚ್ಚಾಗಿದೆ.

ವಿದ್ಯುತ್ ಘಟಕಗಳಿಗೆ ನೇರವಾಗಿ ಕಲ್ಲಿದ್ದಲು ಪೂರೈಕೆ ಮಾಡಲು ಯುದ್ಧೋಪಾದಿಯಲ್ಲಿ ರೈಲ್ವೆ ಕಾರ್ಯ ನಿರ್ವಹಣೆ ಮಾಡಲಿದೆ. ಈ ಹಿನ್ನಲೆಯಲ್ಲಿ ಪ್ರಯಾಣಿಕ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

ಕಲ್ಲಿದ್ದಲು ಪೂರೈಕೆ; ಗೂಡ್ಸ್‌ ರೈಲಿಗಾಗಿ ಪ್ರಯಾಣಿಕ ರೈಲುಗಳು ರದ್ದು ಕಲ್ಲಿದ್ದಲು ಪೂರೈಕೆ; ಗೂಡ್ಸ್‌ ರೈಲಿಗಾಗಿ ಪ್ರಯಾಣಿಕ ರೈಲುಗಳು ರದ್ದು

ಕಲ್ಲಿದ್ದಲು ಪೂರೈಕೆ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕ ಪ್ರಯಾಣಿಕರ ರೈಲುಗಳ ಸಂಚಾರ ಪುನಃ ಆರಂಭಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಛತ್ತೀಸ್‌ಗಢದಲ್ಲಿ ಮೂರು ರೈಲು ರದ್ದು ಮಾಡಲಾಗಿತ್ತು. ಆದರೆ ಸ್ಥಳೀಯ ಸಂಸದರ ಪ್ರತಿಭಟನೆ ಬಳಿಕ ಮತ್ತೆ ರೈಲು ಸೇವೆ ಆರಂಭಿಸಲಾಗಿದೆ.

ಕಲ್ಲಿದ್ದಲು ಪೂರೈಕೆ ಕಟ್: ದೆಹಲಿ ಮೆಟ್ರೋ, ಆಸ್ಪತ್ರೆಗಳಲ್ಲಿ ಪವರ್ ಕಟ್! ಕಲ್ಲಿದ್ದಲು ಪೂರೈಕೆ ಕಟ್: ದೆಹಲಿ ಮೆಟ್ರೋ, ಆಸ್ಪತ್ರೆಗಳಲ್ಲಿ ಪವರ್ ಕಟ್!

ದೆಹಲಿಯ ಇಂಧನ ಸಚಿವ ಸತ್ಯೇಂದ್ರ ಜೈನ್ ಮಾತನಾಡಿ, "ಕೆಲವು ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಒಂದು ದಿನಕ್ಕೆ ಆಗುವಷ್ಟು ಮಾತ್ರ ಕಲ್ಲಿದ್ದಲು ಸಂಗ್ರಹವಿದೆ. ಬೇಡಿಕೆ ಸಲ್ಲಿಸಿ 21 ದಿನಗಳು ಕಳೆದರೂ ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಮೆಟ್ರೋ, ಆಸ್ಪತ್ರೆಗಳಲ್ಲಿ ವಿದ್ಯುತ್ ಕಡಿತದ ಆತಂಕ ಉಂಟಾಗಿದೆ" ಎಂದರು.

ಕಲ್ಲಿದ್ದಲು ಕೊರತೆ ಆತಂಕ: ಜಾರ್ಖಂಡ್‌ನಲ್ಲಿ ಜೋಶಿ ಸಭೆಕಲ್ಲಿದ್ದಲು ಕೊರತೆ ಆತಂಕ: ಜಾರ್ಖಂಡ್‌ನಲ್ಲಿ ಜೋಶಿ ಸಭೆ

ಕಲ್ಲಿದ್ದಲು ಪೂರೈಕೆಯಲ್ಲಿನ ವಿಳಂಬಕ್ಕೆ ರೈಲ್ವೆಯನ್ನು ದೂರಲಾಗುತ್ತಿದೆ. ದೂರ ಸಂಚಾರ ನಡೆಸುವ ರೈಲುಗಳು ನಿಗದಿತ ಅವಧಿಗೆ ಬರುತ್ತಿಲ್ಲ ಎಂದು ಆರೋಪ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಯಾಣಿಕ ರೈಲು ರದ್ದುಗೊಳಿಸಿ ಗೂಡ್ಸ್ ರೈಲುಗಳ ಸಂಚಾರಕ್ಕೆ ಆದ್ಯತೆ ನೀಡಲಾಗಿದೆ.

English summary
42 passenger trains have been cancelled across India to allow faster movement of coal carriages. 3 Chhattisgarh trains cancelled earlier have been restored after protests by local MP's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X