ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೇ ಟಿಕೆಟ್ ರಿಯಾಯಿತಿ ಕೈಬಿಟ್ಟ 42 ಲಕ್ಷ ಹಿರಿಯರು: ಮೋದಿ

By Sachhidananda Acharya
|
Google Oneindia Kannada News

ನವದೆಹಲಿ, ಜೂನ್ 29: 42 ಲಕ್ಷ ಹಿರಿಯ ನಾಯಕರು ಸ್ವಯಂ ಪ್ರೇರಿತರಾಗಿ ರೈಲ್ವೇ ಟಿಕೆಟ್ ರಿಯಾಯಿತಿಯನ್ನು ಕೈ ಬಿಟ್ಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದರು. ಕಳೆದ 9 ತಿಂಗಳ ಹಿಂದೆ ಸ್ವಯಂ ಪ್ರೇರಿತರಾಗಿ ರೈಲ್ವೇ ರಿಯಾಯಿತಿಗಳನ್ನು ಕೈ ಬಿಡುವಂತೆ ಅಭಿಯಾನ ಕೈಗೊಳ್ಳಲಾಗಿತ್ತು. ಇದೀಗ ಇದರ ಪರಿಣಾಮ ಎಂಬಂತೆ ದೊಡ್ಡ ಪ್ರಮಾಣದ ಜನರು ರಿಯಾಯಿತಿಯನ್ನು ಕೈಬಿಟ್ಟಿದ್ದಾರೆ.

ಇದೇ ವೇಳೆ 1.25 ಕೋಟಿ ಜನರು ಗ್ಯಾಸ್ ಸಬ್ಸಿಡಿಯನ್ನೂ ಸ್ವಯಂ ಪ್ರೇರಿತವಾಗಿ ಕೈ ಬಿಟ್ಟಿದ್ದಾರೆ ಎಂದು ಪ್ರಧಾನಿ ಮಾಹಿತಿ ನೀಡಿದರು.

ಥ್ಯಾಂಕ್ ಯು ಮಾಮ್ ಡ್ಯಾಡ್, ನೀವಿಂದು ಪ್ರಜಾಪ್ರಭುತ್ವವನ್ನು ಉಳಿಸಿದ್ದೀರಿ ಥ್ಯಾಂಕ್ ಯು ಮಾಮ್ ಡ್ಯಾಡ್, ನೀವಿಂದು ಪ್ರಜಾಪ್ರಭುತ್ವವನ್ನು ಉಳಿಸಿದ್ದೀರಿ

ದೇಶದಲ್ಲಿ ಪ್ರಾಮಾಣಿಕತೆಯ ವಾತಾವರಣ ಹೆಚ್ಚಾಗುತ್ತಿದೆ. ದೇಶದ ಜನರು ಸ್ವಯಂ ಪ್ರೇರಿತಾಗಿ ಸಬ್ಸಿಡಿಗಳನ್ನು ತೊರೆದು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

42 lakh senior citizens gave up railway concessions in 9 months: PM

"ರೈಲ್ವೇ ವಿಚಾರದಲ್ಲಿ ನಾನು ಏನನ್ನೂ ಘೋಷಣೆ ಮಾಡಿರಲಿಲ್ಲ. ಆದರೆ ರೈಲ್ವೇಯವರು ಅವರದೇ ರೀತಿಯಲ್ಲಿ ಹಿರಿಯ ನಾಗರಿಕರು ರಿಯಾಯಿತಿಗಳನ್ನು ಬಿಡಬಹುದೇ ಎಂದು ಕೇಳಿದರು. ಕಳೆದ 8-9 ತಿಂಗಳಲ್ಲಿ 42 ಲಕ್ಷ ರಿಯಾಯಿತಿಯ ಟಿಕೆಟ್ ಗಳನ್ನು ಹಿರಿಯರು ಸ್ವಯಂ ಪ್ರೇರಿತವಾಗಿ ಕೈ ಬಿಟ್ಟಿದ್ದಾರೆ. ನನಗೆ ಇದರ ಬಗ್ಗೆ ಹೆಮ್ಮೆಯಾಗುತ್ತಿದೆ," ಎಂದು ಮೋದಿ ಹೇಳಿದರು.

ಹಿರಿಯ ನಾಗರಿಕರಿಗೆ ಕುಮಾರಸ್ವಾಮಿಯಿಂದ ಉಚಿತ ಸೇವೆಗಳ ಭರವಸೆ ಹಿರಿಯ ನಾಗರಿಕರಿಗೆ ಕುಮಾರಸ್ವಾಮಿಯಿಂದ ಉಚಿತ ಸೇವೆಗಳ ಭರವಸೆ

ಇದೇ ವೇಳೆ ತಾವು ತಿಂಗಳಿಗೆ ಒಮ್ಮೆ ಗರ್ಭಿಣಿ ಮಹಿಳೆಯರಿಗೆ ಉಚಿತವಾಗಿ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಮನವಿ ಮಾಡಿಕೊಂಡಿದ್ದೆ. ಇದಕ್ಕೆ ಸ್ಪಂದಿಸಿ 1.25 ಕೋಟಿ ಮಹಿಳೆಯರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.

"ಇದು ಸರಕಾರದ ಮೇಲೆ ಜನರು ಇಟ್ಟಿರುವ ನಂಬಿಕೆ ಬೆಳೆಯುತ್ತಿರುವ ಸೂಚಕ. ನಾವು ಕಟ್ಟುವ ತೆರಿಗೆಯಲ್ಲಿ ಪ್ರತೀ ಪೈಸೆಯೂ ಅಭಿವೃದ್ಧಿ ಕೆಲಸಕ್ಕೆ ಉಪಯೋಗವಾಗುತ್ತಿದೆ ಎಂಬ ನಂಬಿಕೆ ಜನರಿಗಿದೆ,"' ಎಂದು ಅಭಿಪ್ರಾಯಪಟ್ಟರು.

English summary
Prime Minister Narendra Modi said today that 42 lakh senior citizens had voluntarily given up their railway concession in the past nine months while 1.25 crore families had surrendered their gas subsidy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X