ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರ ಗಲ್ವಾನ್ ಕಣಿವೆ ಸಂದರ್ಭದಲ್ಲಿ ಪ್ರಾಣ ಬಿಟ್ಟ ಚೀನಾ ಸೈನಿಕರು ಎಷ್ಟು?

|
Google Oneindia Kannada News

ನವದೆಹಲಿ, ಫೆಬ್ರವರಿ 03: ಭಾರತ ಮತ್ತು ಚೀನಾ ಸೇನೆಯ ನಡುವೆ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಮೃತಪಟ್ಟ ಸೈನಿಕರ ಸಂಖ್ಯೆ ಕುರಿತು ಇಂದಿಗೂ ಸ್ಪಷ್ಟನೆ ಸಿಗುತ್ತಿಲ್ಲ. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯು ನೀಡಿದ ಸೈನಿಕರ ಸಾವಿನ ಲೆಕ್ಕ ಇನ್ನೂ ಪಕ್ಕಾ ಇಲ್ಲವೇ ಎಂಬ ಅನುಮಾನ ದಟ್ಟವಾಗುತ್ತಿದೆ.

ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಸಂಘರ್ಷದಲ್ಲಿ ಎಷ್ಟು ಜನರ ಚೀನಾ ಯೋಧರು ಮೃತಪಟ್ಟರು ಎಂಬುದರ ಬಗ್ಗೆ ಆಸ್ಟ್ರೇಲಿಯಾದ ದಿ ಕ್ಲಾಕ್ಸನ್ ಪತ್ರಿಕೆಯು ವಿಶೇಷ ವರದಿಯೊಂದನ್ನು ಪ್ರಕಟಿಸಿದೆ.

ಸಂಧಾನ ಸಫಲ: ಗೋಗ್ರಾ ಎತ್ತರದ ಶಿಖರದಿಂದ ಕಾಲ್ಕಿತ್ತ ಚೀನಾ ಸೇನೆ!ಸಂಧಾನ ಸಫಲ: ಗೋಗ್ರಾ ಎತ್ತರದ ಶಿಖರದಿಂದ ಕಾಲ್ಕಿತ್ತ ಚೀನಾ ಸೇನೆ!

ಕಳೆದ 2020ರ ಜೂನ್ 15 ಮತ್ತು 16ರ ರಾತ್ರಿ ಲಡಾಖ್ ಪೂರ್ವ ಗಡಿ ಪ್ರದೇಶದ ಗಾಲ್ವಾನ್ ಕಣಿವೆಯ ಬಳಿ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆಯಿತು. ರೌಡಿಗಳಂತೆ ವರ್ತಿಸಿದ ಚೀನಾ ಯೋಧರು ಮಾರಕಾಸ್ತ್ರಗಳಿಂದ ಭಾರತೀಯ ಯೋಧರ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಭಾರತದ 20 ಯೋಧರು ಹುತಾತ್ಮರಾಗಿದ್ದು, 70 ಯೋಧರು ಗಾಯಗೊಂಡಿದ್ದರು. ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರ ಸಾವಿಗೆ ಕಾರಣವಾದ ಚೀನಾದ ವಿರುದ್ಧ ಭಾರತೀಯ ಯೋಧರು ಪ್ರತೀಕಾರ ತೀರಿಸಿಕೊಂಡರು. ಭಾರತ ನಡೆಸಿದ ಪ್ರತಿದಾಳಿಯಲ್ಲಿ ಚೀನಾದ 40ಕ್ಕೂ ಹೆಚ್ಚು ಯೋಧರು ಹತರಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಚೀನಾ ನೀಡಿದ ಲೆಕ್ಕಕ್ಕಿಂತ ನಾಲ್ಕರಿಂದ ಒಂಬತ್ತು ಪಟ್ಟು ಚೀನಾ ಯೋಧರು ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಈ ವರದಿ ಕುರಿತು ಪ್ರಮುಖ ಅಂಶಗಳನ್ನು ಮುಂದೆ ಓದಿ.

ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ನಡುವಿನ ಸಂಘರ್ಷ:

- ಕಳೆದ 2020ರ ಜೂನ್ 15-16 ಘರ್ಷಣೆಯ ಆರಂಭಿಕ ಹಂತಗಳಲ್ಲಿ ವೇಗವಾಗಿ ಹರಿಯುವ ಗಾಲ್ವಾನ್ ನದಿಯನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ಕನಿಷ್ಠ 38 ಸೈನಿಕರು ಕೊಲ್ಲಲ್ಪಟ್ಟರು ಎಂದು ಒಂದು ವರ್ಷದ ತನಿಖೆಯ ನಂತರ ಸಿದ್ಧಪಡಿಸಿದ ವರದಿ ಹೇಳುತ್ತದೆ. ಅಂದು ಸೈನಿಕರು ಶೂನ್ಯ ತಾಪಮಾನದಲ್ಲಿ ಮತ್ತು ಕತ್ತಲೆಯಲ್ಲಿ ನದಿಯನ್ನು ದಾಟುತ್ತಿದ್ದರು ಎಂದು ಹೇಳಲಾಗಿದೆ.

- ಚೀನಾ ದೃಢಪಡಿಸಿದ ನಾಲ್ವರು ಸೈನಿಕರಲ್ಲಿ ಒಬ್ಬ ಜೂನಿಯರ್ ಸಾರ್ಜೆಂಟ್ ವಾಂಗ್ ಝುರಾನ್ ಮುಳುಗಿ ಸಾವನ್ನಪ್ಪಿದ್ದಾರೆ ಎಂದು "ಗಾಲ್ವಾನ್ ಡಿಕೋಡೆಡ್" ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.

- "ಹಲವಾರು ವೈಬೊ ಬಳಕೆದಾರರನ್ನು" ಉಲ್ಲೇಖಿಸಿದೆ ಮತ್ತು "ವಾಂಗ್ ಜೊತೆಗೆ ಕನಿಷ್ಠ 38 PLA (ಪೀಪಲ್ಸ್ ಲಿಬರೇಶನ್ ಆರ್ಮಿ) ಪಡೆಗಳು ಆ ರಾತ್ರಿ ನೀರಿನಲ್ಲಿ ಕೊಚ್ಚಿಹೋಗಿ ಮುಳುಗಿದವು. ಇದರಲ್ಲಿ ಅಧಿಕೃತವಾಗಿ ಸತ್ತ ನಾಲ್ಕು ಸೈನಿಕರಲ್ಲಿ ವಾಂಗ್ ಎಂದು ಘೋಷಿಸಲಾಯಿತು".

42 Chinese Soldiers Died in June 2020 Galwan Valley Clash; Key Points

- "ಯೋಧರ ನಡುವಿನ ಸಂಘರ್ಷದ ನಂತರ, ಸೈನಿಕರ ಶವಗಳನ್ನು ಮೊದಲು ಶಿಕ್ವಾನ್ಹೆ ಹುತಾತ್ಮರ ಸ್ಮಶಾನಕ್ಕೆ ಕೊಂಡೊಯ್ಯಲಾಯಿತು. ನಂತರ ಕೊಲ್ಲಲ್ಪಟ್ಟ ಸೈನಿಕರ ಸ್ಥಳೀಯ ಪಟ್ಟಣಗಳಲ್ಲಿ ಸ್ಥಳೀಯ ಸಮಾರಂಭಗಳು ನಡೆದವು" ಎಂದು ವರದಿಯಲ್ಲಿ ಹೇಳಲಾಗಿದೆ.

- ವೈಬೊ ಬಳಕೆದಾರ (ಕಿಯಾಂಗ್) ಪ್ರದೇಶದಲ್ಲಿ ಸೇವೆ ಸಲ್ಲಿಸಿರುವುದಾಗಿ ಹೇಳಿಕೊಂಡಿರುವುದನ್ನು ಇದು ಉಲ್ಲೇಖಿಸಿದೆ. ಚೀನೀ ಸೇನೆಯು ಬಫರ್ ವಲಯದಲ್ಲಿ ಮೂಲಸೌಕರ್ಯವನ್ನು ಸೃಷ್ಟಿಸುತ್ತಿದ್ದು, ಪರಸ್ಪರ ಒಪ್ಪಂದದ ಬಗ್ಗೆ ಉಲ್ಲಂಘಿಸುತ್ತಿದೆ. ಏಪ್ರಿಲ್ 2020 ರಿಂದ ಬಫರ್ ವಲಯದೊಳಗೆ ತನ್ನ ಗಸ್ತು ಮಿತಿಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ.

- "ಪೀಪಲ್ಸ್ ಲಿಬರೇಷನ್ ಆರ್ಮಿಯು ತನ್ನ ಭರವಸೆಗೆ ಬದ್ಧವಾಗಿರಲಿಲ್ಲ. ಪಿಎಲ್ಎ ಒಪ್ಪಿಕೊಂಡಂತೆ ತನ್ನ ಮೂಲಸೌಕರ್ಯಗಳನ್ನು ಕೆಡವಿ ಹಾಕುವ ಬದಲಿಗೆ ಭಾರತೀಯ ಸೇನೆಯು ನದಿ ದಾಟುವುದಕ್ಕೆ ನಿರ್ಮಿಸಿದ ಸೇತುವೆಯನ್ನು ರಹಸ್ಯವಾಗಿ ಕೆಡವಿತು," ಎಂದು ವರದಿ ಹೇಳಿದೆ.

- ಭಾರತ ಮತ್ತು ಚೀನಾ ಸೈನಿಕರ ನಡುವಿನ ಸಂಘರ್ಷದ ನಂತರದಲ್ಲಿ ತನ್ನ ದೇಶದ ಎಷ್ಟು ಸೈನಿಕರು ಮೃತಪಟ್ಟರು ಎಂಬುದರ ಬಗ್ಗೆ ತಿಳಿಸುವ ವಿಚಾರದಲ್ಲಿ ಚೀನಾ ಮೌನಕ್ಕೆ ಶರಣಾಯಿತು.

42 Chinese Soldiers Died in June 2020 Galwan Valley Clash; Key Points

- ಕ್ಸಿನ್‌ಜಿಯಾಂಗ್ ಮಿಲಿಟರಿ ಪ್ರದೇಶದ ಒಂದು ವಿಭಾಗವಾಗಿದೆ. "ಕ್ರಾಂತಿಕಾರಿ ಹುತಾತ್ಮರಿಗೆ ಪುಷ್ಪಾರ್ಚನೆ ಮಾಡಲು ಶಿಕ್ವಾನೆ ಹುತಾತ್ಮರ ಸ್ಮಶಾನಕ್ಕೆ ಹೋಗಲು ಅಧಿಕಾರಿಗಳು ಮತ್ತು ಸೈನಿಕರನ್ನು ಸಂಘಟಿಸಲಾಗಿದ್ದು, ಅಲ್ಲಿ ಪ್ರಮಾಣವಚನ ಸ್ವೀಕರಿಸುವುದು ಮತ್ತು ವೀರರಿಗಾಗಿ ಸಮಾಧಿಗಳನ್ನು ನಿರ್ಮಿಸಲಾಗುತ್ತಿದೆ," ಎಂದು ಕ್ಲಾಕ್ಸನ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

- "ಮುಖ್ಯ ಭೂಭಾಗದ ಚೈನೀಸ್ ಬ್ಲಾಗರ್‌ಗಳೊಂದಿಗಿನ ಚರ್ಚೆ, ಮುಖ್ಯ ಭೂ-ಆಧಾರಿತ ಚೀನೀ ನಾಗರಿಕರಿಂದ ಪಡೆದ ಮಾಹಿತಿ ಮತ್ತು ಚೀನಾದ ಅಧಿಕಾರಿಗಳಿಂದ ತೆಗೆದು ಹಾಕಲಾಗಿದ್ದ ಮಾಧ್ಯಮ ವರದಿಗಳನ್ನು ಆಧರಿಸಿ ಈ ತನಿಖಾ ವರದಿಯನ್ನು ಪ್ರಕಟಿಸಲಾಗಿದೆ.

- 1962ರ ಯುದ್ಧದ ನಂತರ ಘರ್ಷಣೆಯಲ್ಲಿ 20 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಭಾರತ ಅಧಿಕೃತವಾಗಿ ಘೋಷಿಸಿತ್ತು.

English summary
India China Border News: Australian newspaper The Klaxon had claimed that 42 Chinese soldiers were killed in the clashes at the Galwan Valley. Know key points.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X