ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

0 ರೂ.ಗೆ ಮೊಬೈಲ್, ಮುಖೇಶ್ ಅಂಬಾನಿ ಹೊಸ ಕಮಾಲ್!

By Sachhidananda Acharya
|
Google Oneindia Kannada News

ಮುಂಬೈ, ಜುಲೈ 21:'ರಿಲಯನ್ಸ್ ಜಿಯೋ' ಮೊಬೈಲ್ ಸೇವಾ ಕ್ಷೇತ್ರದ ನಂತರ ಇದೀಗ ಮೊಬೈಲ್ ಮಾರಾಟ ಕ್ಷೇತ್ರದಲ್ಲೂ ಧೂಳೆಬ್ಬಿಸಲು ಸಜ್ಜಾಗಿದೆ. ಗ್ರಾಹಕರಿಗೆ 0 ರೂಪಾಯಿಗೆ ಮೊಬೈಲ್ ಫೋನ್ ನೀಡುವುದಾಗಿ ರಿಲಾಯನ್ಸ್ ಸಂಸ್ಥೆ ಮುಖ್ಯಸ್ಥ ಮುಖೇಶ್ ಅಂಬಾನಿ ಅಚ್ಚರಿಯ ಘೋಷಣೆ ಮಾಡಿದ್ದಾರೆ.

"ಗ್ರಾಹಕರು ಫೋನ್ ಪಡೆದುಕೊಳ್ಳಲು 1500 ರೂಪಾಯಿ ಮುಂಗಡವಾಗಿ ಪಾವತಿಸಬೇಕು. ಆದರೆ ಇದನ್ನು ಮೂರು ವರ್ಷದಲ್ಲಿ ಗ್ರಾಹಕರಿಗೆ ವಾಪಸ್ ನೀಡಲಾಗುವುದು. ಅಂದರೆ 0 ರೂಪಾಯಿ ದರದಲ್ಲಿ ಫೋನ್ ಗ್ರಾಹಕರ ಕೈ ಸೇರಲಿದೆ," ಎಂದು ಮುಖೇಶ್ ಅಂಬಾನಿ ಮಹತ್ವದ ಘೋಷಣೆ ಮಾಡಿದ್ದಾರೆ. ಆಗಸ್ಟ್ 24 ರಿಂದ ಫೋನಿನ ಮುಂಗಡ ಬುಕ್ಕಿಂಗ್ ಆರಂಭವಾಗಲಿದೆ.

ಮುಂಬೈನಲ್ಲಿ ನಡೆಯುತ್ತಿರುವ ರಿಲಯನ್ಸ್ ಸಂಸ್ಥೆಯ 40ನೇ ವಾರ್ಷಿಕ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಈ ಘೋಷಣೆ ಮಾಡಿದ್ದಾರೆ.

ರಿಲಯನ್ಸ್ ಮಹಾರಾಜ ಅಂಬಾನಿಯ 9 ವರ್ಷದ ಸಂಬಳ ಬಹಿರಂಗ!ರಿಲಯನ್ಸ್ ಮಹಾರಾಜ ಅಂಬಾನಿಯ 9 ವರ್ಷದ ಸಂಬಳ ಬಹಿರಂಗ!

ಜಿಯೋ ಫೋನ್ ಕೈಗೆ ಬರೋದು ಯಾವಾಗ?

ಜಿಯೋ ಫೋನ್ ಕೈಗೆ ಬರೋದು ಯಾವಾಗ?

ಜಿಯೋ ಫೋನಿನ ಪರೀಕ್ಷೆ ಇದೇ ಆಗಸ್ಟ್ 15ರಿಂದ ಆರಂಭವಾಗಲಿದೆ. ಆಗಸ್ಟ್ 15ರಂದು ದೇಶಕ್ಕೆ ಡಿಜಿಟಲ್ ಫ್ರೀಡಂ ನೀಡುವುದಾಗಿ ಮುಖೇಶ್ ಅಂಬಾನಿ ಹೇಳಿದ್ದಾರೆ. ಆರಂಭದಲ್ಲಿ ಟೆಸ್ಟ್ ಮಾಡೆಲ್ ಬಳಕೆಗೆ ಬರಲಿದೆ. ನಂತರ ಆಗಸ್ಟ್ 24ರಿಂದ ಗ್ರಾಹಕರು ಫೋನನ್ನು ಮುಂಗಡವಾಗಿ ಬುಕ್ ಮಾಡಬಹುದು. ಮೊದಲು ಬಂದ ಗ್ರಾಹಕರಿಗೆ ಮೊದಲು ಫೋನ್ ಸಿಗಲಿದ್ದು ಸೆಪ್ಟೆಂಬರ್ ನಲ್ಲಿ ಫೋನ್ ಗಳು ಮಾರುಕಟ್ಟೆಗೆ ಬರಲಿವೆ.

ಮೈಜಿಯೋ ಆ್ಯಪ್ ಮೂಲಕವೂ ಫೋನ್ ಬುಕ್ ಮಾಡುವ ಅವಕಾಶ ಇದೆ.

22 ಭಾಷೆಗಳಿಗೆ ಬೆಂಬಲ

22 ಭಾಷೆಗಳಿಗೆ ಬೆಂಬಲ

ಜಿಯೋ ಪೋನ್ 22 ಭಾರತೀಯ ಭಾಷೆಗಳನ್ನು ಬೆಂಬಲಿಸಲಿದೆ. ಕೀಬೋರ್ಡ್ ನಲ್ಲಿ ಪ್ರಾದೇಶಿಕ ಭಾಷೆಗಳಿರಲಿದ್ದು, ಗ್ರಾಹಕರು ಪ್ರಾದೇಶಿಕ ಭಾಷೆಗಳಲ್ಲಿ ಮಾತನ್ನೂ ಆಡಬಹುದು. ವಾಯ್ಸ್ ಕಮಾಂಡ್ ಮೂಲಕ ಎಸ್ಎಂಎಸ್ ಕಳುಹಿಸುವ ಕರೆ ಮಾಡುವ ಸೌಲಭ್ಯ ಫೋನಿನಲ್ಲಿ ಇರಲಿದೆ.

ಜಿಯೋ ಮ್ಯೂಸಿಕ್, ಜಿಯೋ ಸಿನೆಮಾ ಮತ್ತು ಜಿಯೋ ಆ್ಯಪ್ ಗಳು ಫೋನಿನ ಜತೆಗೇ ಬರಲಿವೆ.

ಎಸ್.ಡಿ ಕಾರ್ಡ್, 2.4 ಇಂಚು ಪರದೆ

ಎಸ್.ಡಿ ಕಾರ್ಡ್, 2.4 ಇಂಚು ಪರದೆ

ಫೋನಿನಲ್ಲಿ ಎಸ್.ಟಿ ಕಾರ್ಡ್ ಹಾಕಲು ಸ್ಲಾಟ್ ಇರಲಿದೆ. 2.4 ಇಂಚಿನ ಡಿಸ್ಪ್ಲೇ ಫೋನಿನಲ್ಲಿದೆ. ಈ ಪೀಚರ್ ಫೋನ್ ಬಳಕೆದಾರರಿಗೆ ತಿಂಗಳಿಗೆ 153 ರೂಪಾಯಿಗೆ ಜಿಯೋ ಧನ್ ಧನಾ ಧನ್ ಆಫರ್ ಇರಲಿದೆ. ಒಂದು ದಿನಕ್ಕೆ 500ಎಂಬಿ ಹೈಸ್ಪೀಡ್ ಡೇಟಾ ಹಾಗೂ ನಂತರ ಕಡಿಮೆ ಸ್ಪೀಡ್ ಡೇಟಾ ಸಿಗಲಿದೆ. ಈ ಆಫರ್ ಪ್ಲಾನ್ ಹಾಕಿಸಿಕೊಂಡವರಿಗೆ ಅನ್ ಲಿಮಿಟೆಡ್ ಡೇಟಾ ಕೂಡಾ ಸಿಗಲಿದೆ.

ಉಳಿದ ನೆಟ್ವರ್ಕ್ ಗಳಲ್ಲಿ ಇದೇ ಆಫರ್ ಗೆ 4-5 ಸಾವಿರ ರೂಪಾಯಿ ಖರ್ಚಾಗಲಿದೆ ಎಂದು ಅಂಬಾನಿ ಹೇಳಿದ್ದಾರೆ.

ಭಾರತದಲ್ಲೇ ಉತ್ಪಾದನೆ-ಹಲವು ವೈಶಿಷ್ಠ್ಯ

ಭಾರತದಲ್ಲೇ ಉತ್ಪಾದನೆ-ಹಲವು ವೈಶಿಷ್ಠ್ಯ

ಫೋನನ್ನು ಭಾರತದಲ್ಲೇ ಉತ್ಪಾದನೆ ಮಾಡಲಾಗುತ್ತದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.

KAI ಆಪರೇಟಿಂಗ್ ಸಿಸ್ಟಂನಲ್ಲಿ ಫೋನ್ ಕಾರ್ಯಚರಿಸಲಿದೆ. 512 ಎಂಬಿ ರ್ಯಾಮ್ ಹಾಗೂ 4 ಜಿಬಿ ಇಂಟರ್ನಲ್ ಮೆಮೊರಿ ಫೋನಿನಲ್ಲಿದೆ ಎನ್ನಲಾಗಿದೆ. 128 ಜಿಬಿವರೆಗೆ ಫೋನಿನ ಆಂತರಿಕ ಮೆಮೊರಿಯನ್ನು ಹೆಚ್ಚಿಸಬಹುದಾಗಿದೆ. 2 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಹಾಗೂ ವಿಜಿಎ ಮುಂಭಾಗದ ಕ್ಯಾಮೆರಾ ಇರಲಿದೆ. 2000mAh ಬ್ಯಾಟರಿ, ಬ್ಲೂಟೂತ್, ವೈಫೈ, ಎಫ್ಎಂ ರೇಡಿಯೋ ಸೌಲಭ್ಯ ಕೂಡ ಮೊಬೈಲ್ ನಲ್ಲಿ ಇರಲಿದೆ.

ಸ್ಯಾಷೆಟ್

ಸ್ಯಾಷೆಟ್

ಇದರ ಜತೆಗೆ ಎರಡು ದಿನದ ಮತ್ತು ಒಂದು ವಾರದ ಆಫರ್ ನ್ನು ಕ್ರಮವಾಗಿ ರೂಪಾಯಿ 24, 54 ರೂಪಾಯಿ ಬೆಲೆಗೆ ರಿಲಯನ್ಸ್ ಬಿಡುಗಡೆ ಮಾಡಿದೆ. 153 ಪ್ಯಾಕ್ ಹಾಕಿಸಿಕೊಳ್ಳಲು ಇಷ್ಟವಿಲ್ಲದವರು ಈ ಪ್ಯಾಕ್ ಹಾಕಿಸಿಕೊಳ್ಳಬಹುದು.

ಮೊಬೈಲ್ ನಿಂದ ಟಿವಿಗೆ ಸಂಪರ್ಕ

ಮೊಬೈಲ್ ನಿಂದ ಟಿವಿಗೆ ಸಂಪರ್ಕ

ಮೊಬೈಲ್ ನಿಂದ ಟಿವಿಗೆ ಸಂಪರ್ಕ ಮಾಡಿ ಟಿವಿಯಲ್ಲಿ ಸಿನಿಮಾಗಳನ್ನು ನೋಡಿ ಆನಂದಿಸಬಹುದು ಇದಕ್ಕಾಗಿ ಜಿಯೋ ಕೇಬಲ್ ಬೇಕು. ಇದಕ್ಕೆ 309 ರೂಪಾಯಿ ದರವಿರಲಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.

 50 ಕೋಟಿ ಫೀಚರ್ ಫೋನ್ ಗ್ರಾಹಕರಿಗೆ ಭರ್ಜರಿ ಕೊಡುಗೆ

50 ಕೋಟಿ ಫೀಚರ್ ಫೋನ್ ಗ್ರಾಹಕರಿಗೆ ಭರ್ಜರಿ ಕೊಡುಗೆ

ದೇಶದಲ್ಲಿ 2ಜಿ ಫೋನ್ ಬಳಸುವ 50 ಕೋಟಿ ಗ್ರಾಹಕರಿದ್ದಾರೆ. ಇವರಿಗೆ ಡಿಜಿಟಲ್ ಕ್ರಾಂತಿ ತಲುಪಿರಲಿಲ್ಲ. ಇದೀಗ ಫೀಚರ್ ಫೋನಿನೊಂದಿಗೆ ಅವರನ್ನೂ ಜಿಯೋ ತಲುಪಲಿದೆ. ಮುಂದಿನ ಒಂದು ವರ್ಷದಲ್ಲಿ ಜಿಯೋ ದೇಶದ 99 ಶೇಕಡಾ ಜನರನ್ನು ತಲುಪಲಿದೆ ಎಂದು ಅಂಬಾನಿ ಹೇಳಿದರು.

 ವಿಶ್ವ ದಾಖಲೆ ಬರೆದ ಜಿಯೋ

ವಿಶ್ವ ದಾಖಲೆ ಬರೆದ ಜಿಯೋ

ಜಿಯೋ ಒಂದರ ಮೇಲೊಂದು ದಾಖಲೆ ಬರೆಯುತ್ತಿದೆ. ಕಳೆದ 170 ದಿನಗಳಲ್ಲಿ 10 ಕೋಟಿ ಗ್ರಾಹಕರು ಜಿಯೋ ಸಿಮ್ ಖರೀದಿಸಿದ್ದಾರೆ. ಜಿಯೋ ದೇಶದ ಅತೀ ಹೆಚ್ಚು ಡಾಟಾ ಸೇವೆ, ಅಪ್ಲಿಕೇಶನ್ ನೀಡುವ ಕಂಪನಿಯಾಗಿದೆ. ಒಂದರ ಮೇಲೊಂದು ದಾಖಲೆಯನ್ನು ಜಿಯೋ ಮುರಿಯುತ್ತಿದೆ ಎಂದು ಮುಖೇಶ್ ಅಂಬಾನಿ ಹೇಳಿದರು.

ಪ್ರತಿ ಸೆಕೆಂಡಿಗೆ 7 ಗ್ರಾಹಕರು ಜಿಯೋ ಸಂಪರ್ಕಕ್ಕೆ ಬರುತ್ತಿದ್ದಾರೆ ಎಂದು ಅಂಬಾನಿ ಹೇಳಿದರು.

 ಫೇಸ್ಬುಕ್, ವಾಟ್ಸಾಪ್, ಸ್ಕೈಪ್ ಮೀರಿಸಿದ ಜಿಯೋ

ಫೇಸ್ಬುಕ್, ವಾಟ್ಸಾಪ್, ಸ್ಕೈಪ್ ಮೀರಿಸಿದ ಜಿಯೋ

ವಿಶ್ವದಲ್ಲೇ ತಂತ್ರಜ್ಞಾನವೊಂದನ್ನು ಬಲು ಬೇಗ ಒಪ್ಪಿಕೊಂಡಿದ್ದು ಅಂದರೆ ಅದು ಜಿಯೋ. ಫೇಸ್ಬುಕ್, ವಾಟ್ಸಾಪ್, ಸ್ಕೈಪ್ ಗಿಂತಲೂ ವೇಗವಾಗಿ ಜನರು ಜಿಯೋ ಅಪ್ಪಿಕೊಂಡಿದ್ದಾರೆ ಎಂದು ಅಂಬಾನಿ ಹೇಳಿದರು

 ಅಮೆರಿಕಾ, ಚೀನಾ ಹಿಂದಿಕ್ಕಿ ಭಾರತವೇ ನಂ. 1

ಅಮೆರಿಕಾ, ಚೀನಾ ಹಿಂದಿಕ್ಕಿ ಭಾರತವೇ ನಂ. 1

ಭಾರತದಲ್ಲಿ ಜಿಯೋ ಉದ್ಘಾಟನೆಯಾಗುವ ಮೊದಲು ತಿಂಗಳಿಗೆ 20 ಕೋಟಿ ಡೇಟಾ ಬಳಕೆ ಮಾಡುತ್ತಿತ್ತು. ಇದೀಗ ಈ ಸಂಖ್ಯೆ ಪ್ರತಿ ತಿಂಗಳು 120 ಕೋಟಿ ಜಿಬಿಗೆ ಏರಿಕೆಯಾಗಿದೆ. ಪ್ರತಿದಿನ ಜಿಯೋ ಗ್ರಾಹಕರು 250 ಕೋಟಿ ನಿಮಿಷಗಳ ಕರೆ ಮತ್ತು ವಿಡಿಯೋ ಕರೆಗಳನ್ನು ಮಾಡುತ್ತಿದ್ದಾರೆ. ಜಿಯೋ ವಿಶ್ವದ ಟಾಪ್ ವಿಡಿಯೋ ನೆಟ್ವರ್ಕ್ ಆಗಿದೆ ಎಂದು ಅಂಬಾನಿ ಮಾಹಿತಿ ನೀಡಿದರು.

ಇದರಲ್ಲಿ ರಿಲಯನ್ಸ್ ಒಂದರಲ್ಲೇ ಸುಮಾರು 125 ಕೋಟಿ ಜಿಬಿವರೆಗೆ ಡೇಟಾ ಬಳಸಲಾಗುತ್ತಿದೆ. 165 ಕೋಟಿ ಗಂಟೆ ಹೈ ಸ್ಪೀಡ್ ವಿಡಿಯೋ ವಿಕ್ಷಣೆಯೂ ಪ್ರತಿ ತಿಂಗಳು ನಡೆಯುತ್ತಿದೆ ಎಂದೂ ಅವರು ಹೇಳಿದರು.

 30,000 ಕೋಟಿ ತಲುಪಿದ ರಿಲಯನ್ಸ್ ಲಾಭಗಳಿಕೆ

30,000 ಕೋಟಿ ತಲುಪಿದ ರಿಲಯನ್ಸ್ ಲಾಭಗಳಿಕೆ

ಇದೇ ಸಂದರ್ಭದಲ್ಲಿ ರಿಲಯನ್ಸ್ ಸಂಸ್ಥೆಯ ನಿವ್ವಳ ಲಾಭದ ಬಗ್ಗೆ ಮಾತನಾಡಿದ ಮುಖೇಶ್ ಅಂಬಾನಿ ಸಂಸ್ಥೆಯ ಲಾಭಗಳಿಗೆ ಇದೀಗ 3 ಕೋಟಿಯಿಂದ 30,000 ಕೋಟಿಗೆ ಏರಿಕೆಯಾಗಿದೆ. ಒಟ್ಟಾರೆ ಲಾಭದಲ್ಲಿ 10,000 ಪಟ್ಟು ಹೆಚ್ಚಳವಾಗಿದೆ ಎಂದು ಹೇಳಿದರು. 29,901 ಕೋಟಿ ನಿವ್ವಳ ಲಾಭವನ್ನು ಕಂಪೆನಿ ದಾಖಲಿಸಿದ್ದು ಭಾರತದಲ್ಲೇ ಗರಿಷ್ಠ ಲಾಭ ಗಳಿಸಿದ ಸಂಸ್ಥೆಯಾಗಿದೆ.

 5ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ

5ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ

ರಿಲಯನ್ಸ್ ಸಂಸ್ಥೆಯ ಮಾರುಕಟ್ಟೆ ಮೌಲ್ಯ 5 ಲಕ್ಷ ಕೋಟಿಗೆ ಏರಿಕೆಯಾಗಿದೆ. ಒಟ್ಟಾರೆ 50,000 ಪಟ್ಟು ಮಾರುಕಟ್ಟೆ ಮೌಲ್ಯ ವೃದ್ಧಿಸಿದ್ದು ಶೇಕಡಾ 32 ರ ದರದಲ್ಲಿ ಏರಿಕೆಯಾಗುತ್ತಲೇ ಇದೆ ಎಂದು ಹೇಳಿದ್ದರು. ಪ್ರತೀ ಎರಡೂವರೆ ವರ್ಷಗಳಲ್ಲಿ ನಿಮ್ಮ ಹಣ ದ್ವಿಗುಣವಾಗುತ್ತಿದೆ ಎಂದು ಅಂಬಾನಿ ಷೇರುದಾರರಿಗೆ ಮಾಹಿತಿ ನೀಡಿದರು.

 10 ವರ್ಷಗಳಲ್ಲಿ ವಿಶ್ವದ ಟಾಪ್ 50 ಕಂಪನಿ

10 ವರ್ಷಗಳಲ್ಲಿ ವಿಶ್ವದ ಟಾಪ್ 50 ಕಂಪನಿ

ಮುಂದಿನ 10 ವರ್ಷಗಳಲ್ಲಿ ಕಂಪನಿ ಇನ್ನಷ್ಟು ಅಭಿವೃದ್ಧಿ ಹೊಂದುವ ವಿಶ್ವಾಸವಿದೆ. 50ನೇ ವರ್ಷಾಚರಣೆ ವೇಳೆ ಕಂಪೆನಿ ವಿಶ್ವದ ಟಾಪ್ 50 ಕಂಪನಿಗಳಲ್ಲಿ ಒಂದಾಗಲಿದೆ ಎಂದು ಹೇಳಿದ ಅಂಬಾನಿ ಕಂಪೆನಿಯ ಎಲ್ಲಾ ಸಂಸ್ಥೆಗಳು ಗಣನೀಯವಾಗಿ ಅಭಿವೃದ್ಧಿ ಕಾಣುತ್ತಿವೆ ಎಂದರು.

ಕಳೆದ ಎರಡು ವರ್ಷಗಳಲ್ಲಿ ರಿಲಯನ್ಸ್ ಫೌಂಡೇಶನ್ ಯೂತ್ ಸ್ಪೋರ್ಟ್ 8 ನಗರಗಳ 20 ಲಕ್ಷ ಮಕ್ಕಳನ್ನು ತಲುಪಿದೆ ಎಂದು ಹೇಳಿದರು. ಒಟ್ಟಾರೆ ದೇಶದ ಻ಅತೀ ದೊಡ್ಡ ಕಾರ್ಪೊರೇಟ್ ಫೌಂಡೇಶನ್ ರೂಪದಲ್ಲಿ ತಲೆ ಎತ್ತಿರುವ ರಿಲಯನ್ಸ್ ಫೌಂಡೇಶನ್ 1.2 ಕೋಟಿ ಜನರನ್ನು ತಲುಪಿದೆ ಎಂದು ಅಂಬಾನಿ ಹೇಳಿದರು.

ಎಲ್ಲಾ ಕ್ಷೇತ್ರಗಳಲ್ಲೂ ಜಿಯೋ ಅಭಿವೃದ್ಧಿ

ಎಲ್ಲಾ ಕ್ಷೇತ್ರಗಳಲ್ಲೂ ಜಿಯೋ ಅಭಿವೃದ್ಧಿ

ಕಳೆದ ಒಂದು ವರ್ಷದಲ್ಲಿ 142 ಪೆಟ್ರೋಲ್ ಬಂಕ್ ಗಳನ್ನು ರಿಲಯನ್ಸ್ ಆರಂಭಿಸಿದೆ. 371 ರಿಟೇಲ್ ಔಟ್ ಲೆಟ್ ಗಳನ್ನು ರಿಲಯನ್ಸ್ ಸ್ಥಾಪಿಸಿವೆ.

ರಿಲಯನ್ಸ್ ಡಿಜಿಟಲ್ ನಲ್ಲಿ ಪ್ರತಿ ಸೆಕೆಂಡಿಗೆ 8 ಸ್ಮಾರ್ಟ್ ಫೋನ್ ಗಂಟೆಗೆ 42 ಲ್ಯಾಪ್ ಟಾಪ್, 68 ಟಿವಿಗಳು ಮಾರಾಟವಾಗುತ್ತಿವೆ ಎಂದು ಅಂಬಾನಿ ಮಾಹಿತಿ ನೀಡಿದರು.

1,47,755 ಕೋಟಿ ರೂ ಬೆಲೆಯ ವಸ್ತುಗಳು ರಫ್ತು

1,47,755 ಕೋಟಿ ರೂ ಬೆಲೆಯ ವಸ್ತುಗಳು ರಫ್ತು

ಕಳೆದ ಒಂದು ವರ್ಷದಲ್ಲಿ ರಿಲಯನ್ಸ್ 1,47,755 ಕೋಟಿ ಬೆಲೆಯ ವಸ್ತುಗಳನ್ನು ರಫ್ತು ಮಾಡಿದ್ದು ದೇಶದ ಒಟ್ಟು ರಫ್ತಿನಲ್ಲಿ ಶೇಕಡಾ 8 ಪಾಲು ಹೊಂದಿದೆ. ಕಳೆದೊಂದು ವರ್ಷದಲ್ಲಿ 29,637 ಕೋಟಿ ಕಸ್ಟಮ್ಸ್ ಮತ್ತು ಎಕ್ಸೈಸ್ ತೆರಿಯನ್ನು ಸಂಸ್ಥೆ ಪಾವತಿಸಿದ್ದು ಭಾರತದ ಒಟ್ಟಾರೆ ತೆರಿಗೆಯ ಶೇಕಡಾ 5ರಷ್ಟಾಗಿದೆ. ರೂಪಾಯಿ 8,880 ಕೋಟಿ ತೆರಿಗೆಯನ್ನೂ ಇದೇ ಅವಧಿಯಲ್ಲಿ ರಿಲಯನ್ಸ್ ಪಾವತಿಸಿದ್ದು ದೇಶದಲ್ಲೇ ಅತೀ ಹೆಚ್ಚು ತೆರಿಗೆ ವಾಪತಿಸುವ ಸಂಸ್ಥೆಯಾಗಿದೆ.

7ಲಕ್ಷ ಕೋಟಿ ಆಸ್ತಿ

7ಲಕ್ಷ ಕೋಟಿ ಆಸ್ತಿ

ಸಂಸ್ಥೆಯ ಆಸ್ತಿ 7 ಲಕ್ಷ ಕೋಟಿಗೆ ಏರಿಕೆಯಾಗಿದೆ. 1977ರಲ್ಲಿ 70 ಕೋಟಿಯಿಂದ ಇವತ್ತಿಗೆ 3.3 ಲಕ್ಷ ಕೋಟಿಗೆ ಕಂಪೆನಿಯ ವಾರ್ಷಿಕ ವಹಿವಾಟು ಏರಿಕೆಯಾಗಿದೆ ಎಂದು ಅಂಬಾನಿ ಮಾಹಿತಿ ನೀಡಿದರು

ಕಣ್ಣೀರಾದ ತಾಯಿ ಕೋಕಿಲಾ ಬೆನ್

ಕಣ್ಣೀರಾದ ತಾಯಿ ಕೋಕಿಲಾ ಬೆನ್

"ನಾನು ಈ 40 ವರ್ಷಗಳ ಸಾಧನೆ ಮತ್ತು ದಾಖಲೆಗಳನ್ನು ಒಬ್ಬರೇ ಒಬ್ಬ ವ್ಯಕ್ತಿಗೆ ಅರ್ಪಿಸಲು ಇಚ್ಚಿಸುತ್ತೇನೆ. ಅವರು ರಿಲಯನ್ಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಧೀರೂಭಾಯಿ ಅಂಬಾನಿ. ನಾನು ನನ್ನ ತಾಯಿ ಬಗ್ಗೆಯೂ ಹೆಮ್ಮೆ ಪಡುತ್ತೇನೆ," ಎಂದು ಮುಖೇಶ್ ಅಂಬಾನಿ ಭಾವುಕರಾಗಿ ಹೇಳಿದರು.

ತಮ್ಮ ಪತಿಗೆ ಮುಖೇಶ್ ಅಂಬಾನಿ ಗೌರವ ಸೂಚಿಸುತ್ತಿದ್ದಂತೆ ಅಲ್ಲೇ ಉಪಸ್ಥಿತರಿದ್ದ ತಾಯಿ ಕೋಕಿಲಾ ಬೆನ್ ಅಂಬಾನಿ ಕಣ್ಣೀರು ಸುರಿಸಿದರು.

ಕಾರ್ಯಕ್ರಮದಲ್ಲಿ ಅಂಬಾನಿ ಮಕ್ಕಳಾದ ಆಕಾಶ್, ಇಶಾ, ಪತ್ನಿ ನೀತಾ ಅಂಬಾನಿ ಉಪಸ್ಥಿತರಿದ್ದರು.

English summary
Kokila Ben Ambani goes emotional while son Mukesh Ambani dedicates 40 years of Reliance achievements to his father Dhirubhai Ambani. The AGB of Reliance held in Mumbai on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X