ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಅಂಗವಿಕಲ ಭಿಕ್ಷುಕನ ವಾರ್ಷಿಕ ಆದಾಯ 4 ಲಕ್ಷ, ಹೆಂಡತಿಯರು ಮೂವರು

|
Google Oneindia Kannada News

ಈ ವರದಿಯಲ್ಲಿನ ವ್ಯಕ್ತಿ ಕುತೂಹಲಕ್ಕೆ ಕಾರಣವಾಗಿರುವುದು ತನ್ನ ಆದಾಯ, ಅದರ ಮೂಲದ ಕಾರಣಕ್ಕೆ. ಈತನ ಹೆಸರು ಛೋಟು ಬರೈಕ್. ವಯಸ್ಸು ನಲವತ್ತು ವರ್ಷ. ಅಂಗವಿಕಲ. ಜಾರ್ಖಂಡ್ ನ ಈ ಭಿಕ್ಷುಕನ ವಾರ್ಷಿಕ ಆದಾಯ ಮೂರು ಲಕ್ಷಕ್ಕೂ ಹೆಚ್ಚು. ಸೊಂಟದ ಕೆಳಗಿನ ಭಾಗ ಸ್ವಾಧೀನ ಇಲ್ಲದ ಛೋಟು ಚಕ್ರಧರ್ ಪುರದ ರೈಲ್ವೆ ನಿಲ್ದಾಣದಲ್ಲಿ ಕಾಣಸಿಗುತ್ತಾನೆ.

ಪಾಟ್ನಾ: ಅಮ್ಮನ ಚಿಕಿತ್ಸಾವೆಚ್ಚ ಭರಿಸುವುದಕ್ಕೆ ಭಿಕ್ಷೆ ಬೇಡಿದ ಪುಟ್ಟಕಂದಪಾಟ್ನಾ: ಅಮ್ಮನ ಚಿಕಿತ್ಸಾವೆಚ್ಚ ಭರಿಸುವುದಕ್ಕೆ ಭಿಕ್ಷೆ ಬೇಡಿದ ಪುಟ್ಟಕಂದ

ಭಿಕ್ಷೆ ಬೇಡುವುದೊಂದೇ ಈತನ ಆದಾಯ ಮೂಲವಲ್ಲ. ಈತನಿಗೆ ವ್ಯಾಪಾರದ ಮೂಲಕವೂ ಆದಾಯವಿದೆ. ವೆಸ್ಟಿಜ್ ನ ವಿತರಕನಾಗಿರುವ ಛೋಟು ಆರೋಗ್ಯದ ಉತ್ಪನ್ನಗಳನ್ನು ಜನರಿಗೆ ಮಾರಾಟ ಮಾಡುತ್ತಾನೆ. ಈತನ ಬಗ್ಗೆ ದೈನಿಕ್ ಭಾಸ್ಕರ್ ವರದಿ ಮಾಡಿದೆ. ಆ ಪ್ರಕಾರ ಈತನ ವಾರ್ಷಿಕ ಆದಾಯ ನಾಲ್ಕು ಲಕ್ಷ ರುಪಾಯಿ.

40-year-old disabled beggar who earns 4 lakh a year and has 3 wives!

ಅಷ್ಟೇ ಅಲ್ಲ, ಸಿಮ್ದೇಗಾ ಜಿಲ್ಲೆಯ ಬಂಡಿ ಗ್ರಾಮದಲ್ಲಿ ಈತನದೊಂದು ಪಾತ್ರೆ ಅಂಗಡಿ ಇದೆ. ಇನ್ನೂ ಆಶ್ಚರ್ಯದ ಮಾಹಿತಿ ಅಂದರೆ, ಛೋಟುಗೆ ಮೂವರು ಹೆಂಡತಿಯರು. ನೀವು ಓದುತ್ತಿರುವುದು ನಿಜ. ಈತನ ಮೂವರು ಪತ್ನಿಯರ ಪೈಕಿ ಒಬ್ಬಾಕೆ ಪಾತ್ರೆ ಅಂಗಡಿ ನಡೆಸಲು ನೆರವಾಗುತ್ತಾಳೆ. ನೆಮ್ಮದಿವಂತ ಜೀವನ ನಡೆಸಲು ಬೇಕಾದಷ್ಟು ಆದಾಯ ಈತನಿಗಿದೆ. ತನ್ನ ಮೂವರೂ ಪತ್ನಿಯರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ.

English summary
Chotu Baraik, a 40-year-old disable beggar, from Jharkhand makes INR 30000 per month just by begging! He has three wives. He also have an income from business.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X