ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಸಾಮಾನ್ಯರಿಗೂ ವಿಮಾನಯಾನದ ಅನುಕೂಲ ಕಲ್ಪಿಸಿದ ಮೋದಿ ಸರ್ಕಾರ

|
Google Oneindia Kannada News

ನವದೆಹಲಿ, ಮೇ 30: ವಿಮಾನಯಾನ ಎಂಬುದು ಬಡವರಿಗೆ ಗಗನಕುಸುಮ ಎಂಬ ಮಾತನ್ನು ಸುಳ್ಳಾಗಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೊದಿ ಸರ್ಕಾರಕ್ಕೆ ಸಲ್ಲುತ್ತದೆ.

ಅಷ್ಟೇ ಅಲ್ಲ, ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಸಾಕಷ್ಟು ಮಹತ್ವದ ಬದಲಾವಣೆಯನ್ನು ಮಾಡಿದ ಹೆಗ್ಗಳಿಗೆ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ್ದು. ಸರ್ಕಾರಕ್ಕೆ ನಾಲ್ಕು ವರ್ಷ ಸಂದಿದ್ದು, ಈ ಸದರ್ಭದಲ್ಲಿ ವಿಮಾನಯಾನ ಕ್ಷೇತ್ರದಲ್ಲಿ ಸಾಧಿಸಿದ ಮೈಲಿಗಲ್ಲುಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಮೋದಿ ಸರಕಾರಕ್ಕೆ 4 ವರ್ಷ: ವಿದೇಶಾಂಗ ಸಚಿವಾಲಯದ ಅದ್ಭುತ ಸ್ಪರ್ಶ ಮೋದಿ ಸರಕಾರಕ್ಕೆ 4 ವರ್ಷ: ವಿದೇಶಾಂಗ ಸಚಿವಾಲಯದ ಅದ್ಭುತ ಸ್ಪರ್ಶ

ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಸರ್ಕಾರದ ವಿಮಾನಯಾನ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಮತ್ತು ಹೊಸ ಯೋಜನೆಗಳಿಂದಾಗಿ ವಿಮಾನಯಾನ ಮಾಡುವ ಪ್ರಯಾಣಿಕರ ಸಂಖ್ಯೆ 18-20 ಪ್ರತಿಶತ ಹೆಚ್ಚಾಗಿದೆ.

4 years of Modi Sarkar: How air travel becomes accessible to the Aam Aadmi

ಉಡಾನ್ ಯೋಜನೆ

ನಾಗರಿಕ ವಿಮಾನಯಾನ ಸಚಿವಾಲಯ ಆರಂಭಿಸಿದ ಉಡಾನ್ ಯೋಜನೆ, ಭಾರತದ ಸಣ್ಣ ಪುಟ್ಟ ನಗರಗಳು ಮತ್ತು ಗುಡ್ಡಗಾಡು ಪ್ರದೇಶಗಳಿಗೆ ವಿಮಾನಯಾನ ಕಲ್ಪಿಸುವ ಯೋಜನೆ. ಅತ್ಯಂತ ಕಡಿಮೆ ಬೆಲೆಗೆ, ಅಂದರೆ ಸಾಮಾನ್ಯ ಜನರಿಗೂ ಕೈಗೆಟುಕುವ ದರದಲ್ಲಿ ವಾನಯಾನ ಕ್ಲಪಿಸಲಾಗಿದೆ. ಈಗಾಗಲೇ ಈ ಯೋಜನೆಯಡಿಯಲ್ಲಿ 100 ಕ್ಕು ಹೆಚ್ಚು ವಿಮಾನ ನಿಲ್ದಾಣಗಳು ದೇಶದಲ್ಲಿ ತಲೆ ಎತ್ತಿವೆ.

ಮಹಿಳಾ ಕಲ್ಯಾಣದತ್ತ ಮೋದಿ ಸರ್ಕಾರದ ದಿಟ್ಟ ಹೆಜ್ಜೆ ಮಹಿಳಾ ಕಲ್ಯಾಣದತ್ತ ಮೋದಿ ಸರ್ಕಾರದ ದಿಟ್ಟ ಹೆಜ್ಜೆ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಭಾರತದ ಹಲವು ಪ್ರಾದೇಶಿಕ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನಾಗಿ ಬದಲಿಸುವ ಯೋಜನೆಗೂ ಸರ್ಕಾರ ಕೈಹಾಕಿದೆ. ಭೋಪಾಲ್, ಇಂದೋರ್ ಮತ್ತು ರಾಯ್ಪುರ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನಾಗಿ ಮಾಡುವ ಕುರಿತೂ ಚಿಂತನೆ ನಡೆಯುತ್ತಿದೆ.

ವಿಮಾನ ನಿಲ್ದಾಣಗಳಲ್ಲಿ ಗೋ ಗ್ರೀನ್ ಸಂಕಲ್ಪ!

ದೆಹಲಿ, ಕೊಚ್ಚಿ, ಹೈದರಾಬಾದ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ವಿಮಾನ ನಿಲ್ದಾನಗಳಲ್ಲಿ ಸೋಲಾರ್ ಶಕ್ತಿಯನ್ನು ಬಳಸಲಾಗುತ್ತಿದೆ. ಕೊಚ್ಚಿಯಲ್ಲಿ 100 ಪ್ರತಿಶತ ಸೌರ ಫಲಕಗಳನ್ನು ಹಾಕಲಾಗಿದೆ. ವಿದ್ಯುತ್ ಉಳಿಸುವ ಈ ಮಹತ್ವದ ಯೋಜನೆಗೆ ಸಾಕಷ್ಟು ಮೆಚ್ಚುಗೆ ದೊರಕಿದೆ.

English summary
The civil aviation industry in India has emerged as one of the fastest growing industries in the country during the last four years. As far as the civil aviation sector is concerned, the Centre has addressed issues such as infrastructure constraints at airports, boosting air connectivity to smaller towns and developing the local human resource.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X