• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಸರ್ಕಾರಕ್ಕೆ 4 ವರ್ಷ : ಶುದ್ಧ ಕುಡಿಯುವ ನೀರು ಪ್ರತಿಯೊಬ್ಬರ ಹಕ್ಕು

By Gururaj
|

ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ದೊರೆಯಬೇಕು ಎಂಬುದು ಅಗತ್ಯವಲ್ಲ, ಅದೊಂದು ಹಕ್ಕು.. ಎಂಬ ತತ್ವದಡಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಕಾರ್ಯ ನಿರ್ವಹಿಸುತ್ತದೆ. ನರೇಂದ್ರ ಮೋದಿ ಸರ್ಕಾರ 4 ವರ್ಷಗಳಲ್ಲಿ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.

ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ಯೋಜನೆ ರೂಪಿಸುವುದು, ಅನುದಾನ ಬಿಡುಗಡೆ ಮುಂತಾದವುಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತದೆ. ಯೋಜನೆ ಸಮರ್ಪಕವಾಗಿ ಜಾರಿಯಾಗುವಂತೆ ನಿರ್ವಹಣೆ ಮಾಡುವ ಹೊಣೆಯೂ ಸಚಿವಾಲಯದ ಮೇಲಿದೆ.

ಮೋದಿ ಸರಕಾರಕ್ಕೆ 4 ವರ್ಷ : ಅಪನಗದೀಕರಣದಿಂದ ಜಿಸ್ಟಿವರೆಗೆ

ಪ್ರಧಾನಿ ನರೇಂದ್ರ ಮೋದಿ ಅಧಿಕಾರವಹಿಸಿಕೊಂಡ ದಿನದಿಂದ ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. 2014ರ ಅಕ್ಟೋಬರ್ 2ರ ಗಾಂಧಿ ಜಯಂತಿ ದಿನದಂದು ಮೋದಿ ಅವರು ಸ್ವಚ್ಛ ಭಾರತ ಅಭಿಯಾನವನ್ನು ಘೋಷಣೆ ಮಾಡಿದರು.

ಸ್ವಚ್ಛ ಭಾರತ ಅಭಿಯಾನವನ್ನು ಹಲವು ರಾಜಕಾರಣಿಗಳು, ಸೆಲೆಬ್ರಿಟಿಗಳು, ಜನರು, ಅಧಿಕಾರಿಗಳು ಬೆಂಬಲಿಸಿದರು. ಚಿತ್ರನಟರು ಪೊರಕೆ ಹಿಡಿದು ರಸ್ತೆಯನ್ನು ಸ್ವಚ್ಛಗೊಳಿಸಿದರು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಕ್ಕೆ ಭಾರೀ ಬೆಂಬಲ ಸಿಕ್ಕಿತು.

ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ಗ್ರಾಮೀಣ ಭಾರತದಲ್ಲಿ ಅಭಿಯಾನವನ್ನು ಯಶಸ್ವಿಗೊಳಿಸುವ ಹೊಣೆ ಹೊತ್ತುಕೊಂಡಿತು. ಉಮಾಭಾರತಿ ಅವರು ಸಚಿವಾಲಯದ ಮುಖ್ಯಸ್ಥರು, ಕರ್ನಾಟಕದವರಾದ ರಮೇಶ್ ಜಿಗಜಿಣಗಿ, ಎಸ್.ಎಸ್.ಅಹ್ಲುವಾಲಿಯಾ ಅವರು ಖಾತೆಯ ರಾಜ್ಯ ಸಚಿವರಾಗಿದ್ದಾರೆ.

ಸ್ವಚ್ಛ ಭಾರತ ಅಭಿಯಾನ ಗ್ರಾಮೀಣ : ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕನಸಿನಂತೆ ಗ್ರಾಮೀಣ ಪ್ರದೇಶಗಳು ಸ್ವಚ್ಛವಾಗುವುದು, ಎಲ್ಲಾ ಮನೆಗಳಲ್ಲೂ ಶೌಚಾಲಯ ನಿರ್ಮಾಣ ಈ ಅಭಿಯಾನದ ಭಾಗವಾಗಿದೆ.

ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಅಂಕಿ ಅಂಶಗಳಂತೆ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳಲ್ಲಿ ಅಭಿಯಾನ ಘೋಷಣೆಯಾದ ಬಳಿಕ 6.26 ಕೋಟಿ ಶೌಚಾಲಯಗಳನ್ನು ಮಾರ್ಚ್ 21, 2018ರ ತನಕ ನಿರ್ಮಾಣ ಮಾಡಲಾಗಿದೆ.

3,23,560 ಹಳ್ಳಿ, 314 ಜಿಲ್ಲೆ, 11 ರಾಜ್ಯ (9 ರಾಜ್ಯ,2 ಕೇಂದ್ರಡಾಳಿತ ಪ್ರದೇಶ)ಗಳನ್ನು ಬಯಲು ಶೌಚ ಮುಕ್ತವಾಗಿ ಮಾರ್ಚ್ 21ರ ತನಕ ಘೋಷಣೆ ಮಾಡಲಾಗಿದೆ. 4,464 ಹಳ್ಳಿಗಳನ್ನು ನಮಾಮಿ ಗಂಗಾ ಯೋಜನೆಯಡಿ ಬಯಲು ಶೌಚ ಮುಕ್ತವಾಗಿಸಲಾಗಿದೆ.

ಸ್ವಚ್ಛ ಭಾರತ ಕೋಶ್ : ಸ್ವಚ್ಛ ಭಾರತ ಕೋಶ್ ಅಡಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಈ ಅಭಿಯಾನದಡಿ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತದೆ. ಅಭಿಯಾನದಡಿ 356 ಕೋಟಿ ರೂ.ಗಳನ್ನು ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲು ಮತ್ತು ಇದ್ದ ಶೌಚಾಲಯಗಳನ್ನು ದುರಸ್ತಿ ಮಾಡಲು ಖರ್ಚು ಮಾಡಲಾಗಿದೆ.

ಗ್ರಾಮೀಣ ಪ್ರದೇಶಕ್ಕೆ ಕುಡಿಯುವ ನೀರು : ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯಡಿ ವಸತಿ ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 1/4/14ರಂದು ಶೇ 73ರಷ್ಟಿದ್ದ ಪ್ರಮಾಣ 2017ಕ್ಕೆ ಶೇ 78ಕ್ಕೆ ಏರಿಕೆಯಾಗಿದೆ.

2,70,000 ವಸತಿ ಪ್ರದೇಶಗಳಿಗೆ 2014-17ರ ತನಕ ನೀರು ಒದಗಿಸಲಾಗಿದೆ. ಶೇ 56ರಷ್ಟು ಗ್ರಾಮೀಣ ಪ್ರದೇಶಗಳಿಗೆ ಈಗ ಶುದ್ಧ ಕುಡಿಯುವ ನೀರು ಸಿಗುತ್ತಿದೆ. ಶೇ 17ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ ನಲ್ಲಿಗಳ ಮೂಲಕ ನೀರು ಪೂರೈಸಲಾಗುತ್ತಿದೆ.

ಈ ಯೋಜನೆಯಡಿ 28,000 ಪ್ಲೋರೈಫೈಡ್ ಯುಕ್ತ ಕುಡಿಯುವ ನೀರು ಸಿಗುತ್ತಿರುವ ವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಒದಗಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi has been stressing on the importance of cleanliness, sanitation and access to toilets for all since the day he assumed office. The Ministry of Drinking Water and Sanitation is the nodal department for the overall policy. Let us take a look at the key achievements of the Ministry.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more