ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕ ಶ್ರೇಣಿ ಏಕ ಪಿಂಚಣಿಯಿಂದ ಸರ್ಜಿಕಲ್ ಸ್ಟ್ರೈಕ್ ತನಕ ಸಾಧನೆ ಹಾದಿ

|
Google Oneindia Kannada News

ಏಕ ಶ್ರೇಣಿ ಏಕ ಪಿಂಚಣಿ ಬಹುದೊಡ್ಡ ವಿಚಾರವಾಗಿತ್ತು ಮತ್ತು ನಾಲ್ಕು ವರ್ಷದ ಅಧಿಕಾರಾವಧಿ ಪೂರೈಸಿದ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರಕಾರದ ಪಾಲಿಗೆ ಅತಿ ದೊಡ್ಡ ಸವಾಲಾಗಿತ್ತು. ತಮ್ಮದು ಎಂಬ ಯಾವುದೇ ಅಪೇಕ್ಷೆ ಇಲ್ಲದೆ ಅಥವಾ ಭಯ ಇಲ್ಲದೆ ದೇಶವನ್ನು ಕಾಯ್ದ ಲಕ್ಷಾಂತರ ನಿವೃತ್ತ ಯೋಧರಿಗೆ ಸಂಬಂಧಿಸಿದ ವಿಚಾರ ಇದಾಗಿತ್ತು.

ಈ ವಿಚಾರವನ್ನು ಸರಿಪಡಿಸುವ ಹಾಗೂ ಸಮಸ್ಯೆ ಇತ್ಯರ್ಥಪಡಿಸುವ ಜವಾಬ್ದಾರಿ ರಕ್ಷಣಾ ಸಚಿವಾಲಯಕ್ಕೆ ಇತ್ತು. ನಾಲ್ಕು ವರ್ಷದ ನಂತರ ಸಮಸ್ಯೆ ಬಗೆಹರಿದಿದೆ ಮತ್ತು ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ ಎಂದು ಸಚಿವಾಲಯ ಹೇಳಿತು. ಇನ್ನು ಇದೇ ಸಚಿವಾಲಯಕ್ಕೆ ಸಂಬಂಧಿಸಿದಂತೆ ಮತ್ತೊಂದು ದೊಡ್ಡ ಸುದ್ದಿ ಅಂದರೆ ಅದು ಪಾಕಿಸ್ತಾನದ ಮೇಲಿನ ಸರ್ಜಿಕಲ್ ಸ್ಟ್ರೈಕ್.

ಏಕ ಶ್ರೇಣಿ ಏಕ ಪಿಂಚಣಿ:
ಸಿಜಿಡಿಎ ವರದಿ ಪ್ರಕಾರ, ಏಕ ಶ್ರೇಣಿ ಏಕ ಪಿಂಚಣಿ ಸವಲತ್ತನ್ನು 30.9.2017ರಿಂದ 31.12.2017ರ ಮಧ್ಯೆ 4,161.45 ಕೋಟಿ, 2,397.22 ಕೋಟಿ, 2,320.7 ಕೋಟಿ ಹಾಗೂ 1,859.72 ಕೋಟಿ ಹೀಗಿ ಮೊದಲ, ಎರಡನೇ, ಮೂರನೇ ಹಾಗೂ ನಾಲ್ಕನೇ ಕಂತಿನಲ್ಲಿ ಏಕ ಶ್ರೇಣಿ ಏಕ ಪಿಂಚಣಿಯ ಬಾಕಿಯನ್ನು ಪಾವತಿಸಲಾಗಿದೆ.

20,43,354 ನಿವೃತ್ತ ಯೋಧರು/ಕುಟುಂಬ ಪಿಂಚಣಿದಾರರು, 15,94,063 ನಿವೃತ್ತ ಯೋಧರು, 15,71,744 ನಿವೃತ್ತ ಯೋಧರು ಮತ್ತು 13,28,313 ನಿವೃತ್ತ ಯೋಧರು ಈ ನಾಲ್ಕು ಕಂತಿನಲ್ಲಿ ಸವಲತ್ತು ಪಡೆದಂಥವರು. ಇದಕ್ಕಾಗಿ ಒಟ್ಟು 10,739.09 ಕೋಟಿ ರುಪಾಯಿಯನ್ನು ಪಾವತಿಸಲಾಗಿದೆ.

4 years in office, resolving OROP and surgical strikes were the highs for the Defence Ministry

ನಿವೃತ್ತ ಯೋಧರಿಗಾಗಿ ತೆಗೆದುಕೊಂಡ ಇತರ ಕ್ರಮಗಳು
* ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನ ಯೋಜನೆ ಅಡಿಯ ಸಂಖ್ಯೆಯನ್ನು 4000ದಿಂದ 5500ಕ್ಕೆ ಶೈಕ್ಷಣಿಕ ವರ್ಷ 2015-16ರಿಂದ ಏರಿಸಲಾಗಿದೆ.

* ಮಗಳ ಮದುವೆ ಅನುದಾನವನ್ನು 2016ರ ಏಪ್ರಿಲ್ ನಿಂದ ರು.16 ಸಾವಿರದಿಂದ 50 ಸಾವಿರಕ್ಕೆ ಹೆಚ್ಚಿಸಲಾಗಿದೆ.

* ಕೇಂದ್ರೀಯ ಸೈನಿಕ್ ಬೋರ್ಡ್ ನಲ್ಲಿ ಮಾರ್ಚ್ 11, 2016ರಿಂದ ಅರ್ಜಿಗಳ ಆನ್ ಲೈನ್ ವಿಲೇವಾರಿಗಾಗಿ ಪ್ರಕ್ರಿಯೆ ಆರಂಭಿಸಲಾಗಿದೆ.

INS ಕಲ್ವರಿ
* INS ಕಲ್ವರಿ ಎಂಬುದು ದೇಶದ ನೌಕಾಪಡೆಗೆ ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 14, 2017ರಲ್ಲಿ ಸಮರ್ಪಣೆ ಮಾಡಿದ ಸಬ್ ಮರೀನ್.

* ಬ್ರಹ್ಮೋಸ್, ವಿಶ್ವದ ಅತ್ಯಂತ ವೇಗದ ಸೂಪರ್ ಸಾನಿಕ್ ಕ್ಷಿಪಣಿ 2017ರ ನವೆಂಬರ್ ನಲ್ಲಿ ಇತಿಹಾಸ ಸೃಷ್ಟಿಸಿತು. ಮೊದಲ ಬಾರಿಗೆ ಯಶಸ್ವಿಯಾಗಿ ವಾಯುಪಡೆಯ ಮುಂಚೂಣಿ ಸುಖೋಯ್- 30MKIನಲ್ಲಿ ಪ್ರಯೋಗ ಮಾಡಲಾಯಿತು.

* ನೆಲದಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ ಆಕಾಶ್ ಯಶಸ್ವಿ ಉಡಾವಣೆ

* ಮೊದಲ ಬಾರಿಗೆ ಭಾರತ ಮತ್ತು ರಷ್ಯಾ ಒಟ್ಟಿಗೆ 2017ರ ಅಕ್ಟೋಬರ್ ನಲ್ಲಿ ಟ್ರೈ ಸರ್ವೀಸ್ ತಾಲೀಮು ನಡೆಸಿದವು.

* ಹುತಾತ್ಮರು ಹಾಗೂ ಕರ್ತವ್ಯ ನಿರತ ಸೈನಿಕರ ತ್ಯಾಗದ ಸ್ಮರಣಾರ್ಥ ಸಶಸ್ತ್ರ ಪಡೆ ಧ್ವಜ ದಿನಾಚರಣೆಗೆ ವಿಶೇಷ ಅಭಿಯಾನ

* ಭಾರತದ ನೌಕಾ ಪಡೆಯ ಮಹಿಳೆಯರಿಂದ ವಿಶ್ವ ಪರ್ಯಟನೆ. INSV ತಾರಿಣಿಯಲ್ಲಿ ಮಹಿಳೆಯರೇ ಇರುವ ತಂಡದಿಂದ ಪರಿಕ್ರಮಣ. ಸೆಪ್ಟೆಂಬರ್ 10, 2017ರಂದು ಚಾಲನೆ. ಏಪ್ರಿಲ್, 2018ಕ್ಕೆ ಹಿಂತಿರುಗುವ ನಿರೀಕ್ಷೆ ಇತ್ತು. ಇದಕ್ಕೆ 'ನಾವಿಕ ಸಾಗರ್ ಪರಿಕ್ರಮ' ಎಂದು ಹೆಸರಿಸಲಾಗಿತ್ತು.

ಇತರ ಆರಂಭಗಳು:
ಡಿಫೆನ್ಸ್ ಟ್ರಾವೆಲ್ ಸಿಸ್ಟಮ್ (ರಕ್ಷಣಾ ಪ್ರಯಾಣ ಪದ್ಧತಿ) ಆರಂಭ. ಆ ಮೂಲಕ ರಕ್ಷಣಾ ಘಟಕಗಳಿಂದಲೇ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್

ಈ ಯೋಜನೆಯನ್ನು ಭಾರತೀಯ ರೈಲ್ವೆ ಆರಂಭಿಸಿತು. ರೈಲು ಮತ್ತು ವಿಮಾನ ಪ್ರಯಾಣ ಮಾದರಿ ಅಭಿವೃದ್ಧಿಪಡಿಸಲಾಗಿದೆ. ಡಿಸೆಂಬರ್ 28, 2017ಕ್ಕೆ 10675ರ ಪೈಕಿ 5759 ರಕ್ಷಣಾ ಘಟಕಗಳು ಒಳಗೊಂಡಿವೆ. ಒಟ್ಟು 12,19,969 ಫಲಾನುಭವಿಗಳಿದ್ದಾರೆ. ಸರಾಸರಿ 5.1 ಲಕ್ಷ ರೈಲು ಟಿಕೆಟ್ ಗಳು ಈ ವ್ಯವಸ್ಥೆ ಅಡಿ ಬುಕ್ ಆಗಿವೆ. ತಿಂಗಳಿಗೆ ಸರಾಸರಿ 70 ಕೋಟಿ ರುಪಾಯಿ ಖರ್ಚಾಗಿದೆ.

ಆಯಾ ಕಾಲಕ್ಕೆ ಹಾಗೂ ಬಳಕೆದಾರರ ಸಲಹೆಗೆ ತಕ್ಕಂತೆ ಈ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ಮಾಡಲಾಗುತ್ತಿದೆ.

ಸಮಗ್ರ ವೆಬ್ ಆಧಾರಿತ ಇಂಟರ್ ಆಕ್ಟಿವ್ ಪಿಂಚಣಿ ವಿಲೇವಾರಿ ಪದ್ಧತಿಯನ್ನು ನಿವೃತ್ತರಿಗೆ ಅಂತಲೇ ಪರಿಚಯಿಸಲು ತೀರ್ಮಾನಿಸಲಾಗಿದೆ. ಈ ವ್ಯವಸ್ಥೆ ಅಡಿಯಲ್ಲಿ ಪಿಂಚಣಿ ಪ್ರಸ್ತಾವ ಮತ್ತು ವಿಲೇವಾರಿ ಕೇಂದ್ರೀಯ ವ್ಯವಸ್ಥೆ ಅಡಿ ನಡೆಯುತ್ತದೆ. ಇದರಿಂದ ರಕ್ಶಃಅಣಾ ವಲಯದ ಪಿಂಚಣಿದಾರರ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಸರಳೀಕೃತ MAKE- II:
ಜನವರಿ 16, 2018ರಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ ಸಭೆಯಲ್ಲಿ ಸರಳೀಕೃತ MAKE- IIಗೆ ಒಪ್ಪಿಗೆ ನೀಡಲಾಯಿತು. ರಕ್ಷಣಾ ಸಲಕರಣೆಗಳನ್ನು ಉತ್ಪಾದನೆ ಮಾಡಲು ಕೈಗಾರಿಕೆಗಳು ಪಾಲ್ಗೊಳ್ಳುವ ಪ್ರಕ್ರಿಯೆಯನ್ನು ಇದು ಬಹಳ ಸರಳಗೊಳಿಸುತ್ತದೆ.

ಈ ಪ್ರಕ್ರಿಯೆಯಿಂದ ಆಮದು ಪ್ರಮಾಣ ಕಡಿಮೆಯಾಗಿ, ಹೊಸ ಅನ್ವೇಷಣೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ.

ಸರಳೀಕೃತ MAKE- II ಪ್ರಕ್ರಿಯೆಯು ಸದ್ಯಕ್ಕೆ ಇರುವ ಡಿಫೆನ್ಸ್ ಪ್ರಕ್ಯೂರ್ ಮೆಂಟ್ ಪ್ರೊಸಿಜರ್ (ಡಿಪಿಸಿ)- 2016 'ಉತ್ಪಾದನಾ ನಿಯಮಗಳ'ನ್ನು ತಿದ್ದುಪಡಿ ಮಾಡಿತ್ತದೆ.

ರಫೇಲ್:
ಭಾರತ ಸರಕಾರವು ಅಂತರ ಸರಕಾರಿ ಒಪ್ಪಂದ (ಐಜಿಎ)ವೊಂದನ್ನು ಫ್ರಾನ್ಸ್ ಸರಕಾರದ ಜತೆ ಮಾಡಿಕೊಂಡಿದೆ. ಮೂವತ್ತಾರು ರಫೇಲ್ ವಿಮಾನವನ್ನು ಖರೀದಿಸುವ ಒಪ್ಪಂದ ಸೆಪ್ಟೆಂಬರ್ 23, 2016ಕ್ಕೆ ಮಾಡಿಕೊಳ್ಳಲಾಗಿದೆ. ಸೆಪ್ಟೆಂಬರ್, 2019ಕ್ಕೆ ವಿಮಾನಗಳನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾಗಿ, 2022ರ ಏಪ್ರಿಲ್ ಹೊತ್ತಿಗೆ ಪೂರ್ಣಗೊಳ್ಳುತ್ತದೆ.

ಒಪ್ಪಂದದಲ್ಲಿ ಆರಂಭದ ಸರಕಾಗಿ ಶಸ್ತ್ರಾಸ್ತ್ರಗಳು, ನಿರ್ವಹಣೆಗೆ ಸಹಕಾರ (ಪರ್ಫಾರ್ಮೆನ್ಸ್ ಬೇಸ್ಡ್ ಲಾಜಿಸ್ಟಿಕಲ್), ಸಿಮಲ್ಟರ್ಸ್ ಮತ್ತು ಸಂಬಂಧಪಟ್ಟ ಸಲಕರಣೆಗಳು ಒಳಗೊಂಡಿವೆ. ಶೇ ಐವತ್ತರಷ್ಟನ್ನು ಫ್ರೆಂಚ್ ಕೈಗಾರಿಕಾ ಪೂರೈಕೆದಾರರು ಪೂರೈಸುವಂತೆ ಒಪ್ಪಂದ ಒಳಗೊಂಡಿದೆ.

ರಫೇಲ್ ಬಹಳ ಶಕ್ತಿಶಾಲಿ ಫೈಟರ್ ವಿಮಾನ. ದೂರದ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಇರುವಂಥದ್ದು. ಪ್ರಭಾವಿ ಹಾಗೂ ಸೂಕ್ಷ್ಮವಾಗಿ ಗುರಿಯ ಮೇಲೆ ಪ್ರಹಾರ ಮಾಡುವಂಥ ಸಾಮರ್ಥ್ಯ ಹೊಂದಿದೆ.

ಅಗ್ನಿ-V
* ಪರೀಕ್ಷಾರ್ಥ ವಿಮಾನ 26ನೇ ಡಿಸೆಂಬರ್ 2016

* ಈ ಪರೀಕ್ಷೆ ಮೂಲಕ ಭಾರತದ ದೇಶಿ ನಿರ್ಮಿತ ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸುತ್ತದೆ.

ಸರ್ಜಿಕಲ್ ಸ್ಟ್ರೈಕ್:
ಭಾರತದ ಗಡಿ ರಕ್ಷಣೆ ನಿಟ್ಟಿನಲ್ಲಿ ಸೆಪ್ಟೆಂಬರ್ 29, 2016ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಂದರೆ ದೇಶದ ಗಡಿ ದಾಟಿ ಭಾರತೀಯ ಸೇನೆಯು ಸರ್ಜಿಕಲ್ ನಡೆಸಿ ಉಗ್ರರನ್ನು ಸದೆ ಬಡಿದಿತ್ತು.

ಭಯೋತ್ಪಾದನೆ ವಿರುದ್ಧ ಸರ್ಜಿಕಲ್ ಸ್ಟ್ರೈಕ್
* ಸೆಪ್ಟೆಂಬರ್ 18, 2016ರಂದು ಭಯೋತ್ಪಾದಕರು ಉರಿಯ ಸೇನಾ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದರು. ಆಗ ಭಾರತದ ಒಬ್ಬ ಸೈನಿಕ ಹುತಾತ್ಮರಾಗಿದ್ದರು. ಅದಕ್ಕೆ ಪ್ರತಿಯಾಗಿ:

* ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಭಯೋತ್ಪಾದಕರ ಹಲವು ನೆಲೆಗಳನ್ನು ಧ್ವಂಸಗೊಳಿಸಿ, ಭಾರತದೊಳಗೆ ನುಸುಳುವ ಪ್ರಯತ್ನದಲ್ಲಿದ್ದ ಭಯೋತ್ಪಾದಕರ ಪ್ರಯತ್ನಕ್ಕೆ ತಡೆಯೊಡ್ಡಲಾಯಿತು.

* ಈ ದಾಳಿಯಲ್ಲಿ ಭಯೋತ್ಪಾದಕರಿಗೆ ಹಾಗೂ ಅವರನ್ನು ಬೆಂಬಲಿಸುತ್ತಿದ್ದವರಿಗೆ ಭಾರೀ ಹಾನಿಯಾಯಿತು.

* ಭಯೋತ್ಪಾದಕರ ನೆಲೆಗಳನ್ನು ನಾಶ ಮಾಡುವ ಮೂಲಕ ಭಾರತೀಯ ಸೈನಿಕರು ಭಾರೀ ಹೊಡೆತ ನೀಡಿದರು.

* ಅಂತರರಾಷ್ಟ್ರೀಯ ಸಮುದಾಯವು ಭಾರತದ ಪರವಾಗಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿತು.

English summary
One Rank One Pension was a huge issue and one of the biggest challenges for the Narendra Modi led NDA government at the Centre which completed four years in office. It was an issue concerning lakhs of ex-servicemen who guarded the nation without fear or favour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X