ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಪ್ರವಾಹಕ್ಕೆ ಕಣ್ಣೀರಾಗಿ, ಮಾನವೀಯತೆ ಮೆರೆದ ಮುದ್ದು ಪುಟಾಣಿ

|
Google Oneindia Kannada News

ಕೋಲ್ಕತ್ತಾ, ಆಗಸ್ಟ್ 23: ನಾಲ್ಕು ವರ್ಷದ ಪುಣಾಣಿ ಅಪರಿಜಿತ್ ಸಹಾ ಗೆ ಒಂದು ಸಿಂತೆಸೈಜರ್((ಒಂದು ಬಗೆಯ ಇಲೆಕ್ಟ್ರಾನಿಕ್ ಉಪಕರಣ) ಖರೀದಿಸಬೇಕು ಅನ್ನೋ ಆಸೆ. ಅದಕ್ಕಾಗಿ ಆಕೆ ತನಗೆ ಜನ್ಮದಿನದಂದು ಉಡುಗೊರೆಯಾಗಿ ಬಂದ ಒಂದೊಂದು ರೂಪಾಯಿಯನ್ನು ಕೂಡಿಟ್ಟುಕೊಂಡಿದ್ದಳು.

ಆದರೆ ಈಗ ತಾನು ಮುಚ್ಚಟೆಯಿಂದ ಕಾಪಿಟ್ಟುಕೊಂಡಿದ್ದ ಈ ಹಣದಲ್ಲಿ ಒಂದು ಪೈಸೆಯನ್ನೂ ಉಳಿಸಿಕೊಳ್ಳದೆ ಎಲ್ಲವನ್ನೂ ಕೇರಳ ಪ್ರವಾಹ ಸಂತ್ರಸ್ಥ ನಿಧಿಗೆ ದಾನ ಮಾಡುವ ಮೂಲಕ ಮುದ್ದು ಪುಟಾಣಿ ಮಾನವೀಯತೆ ಮೆರೆದಿದ್ದಾಳೆ.

ಪರಿಹಾರನಿಧಿಗೆ 1ಎಕರೆ ಜಮೀನನ್ನೇ ಬರೆದುಕೊಟ್ಟ ರೈತನ ಮಕ್ಕಳು!ಪರಿಹಾರನಿಧಿಗೆ 1ಎಕರೆ ಜಮೀನನ್ನೇ ಬರೆದುಕೊಟ್ಟ ರೈತನ ಮಕ್ಕಳು!

ತಾನು ಕೂಡಿಟ್ಟಿದ್ದ 14800 ರೂ.ಗಳನ್ನು ಪಶ್ಚಿಮ ಬಂಗಾಳದ ಸಿಪಿಐಎಂ ಮುಖಂಡರಾದ ಸುರ್ಜ್ಯಾ ಮಿಶ್ರಾ ಮತ್ತು ಬಿಮನ್ ಬೋಸ್ ಅವರಿಗೆ ಹಸ್ತಾಂತರಿಸಿದ ಈ ಬಾಲಕಿ, ಅದನ್ನು ಕೇರಳ ಪ್ರವಾಹ ಸಂತ್ರಸ್ತರಿಗೆ ನೀಡುವಂತೆ ಹೇಳಿದ್ದಾಳೆ!

4 year old girl from west Bengal donates 14,000 Rupees for Kerala flood relief

ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ...ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ...

ಈ ಮುಗ್ಧ ಹುಡುಗಿಯ ಮಾನವೀಯತೆಗೆ ನಾಯಕರು ಸಲಾಂ ಎಂದಿದ್ದಾರೆ. ತಾನು ಇಷ್ಟಪಟ್ಟ ವಸ್ತುವನ್ನು ಖರೀದಿಸುವುದಕ್ಕಿಂತ ಹೆಚ್ಚಾಗಿ ಈ ಹಣ ಈಗ ಅಗತ್ಯವಿರುವುದು ಕೇರಳದ ನೆರೆ ಸಂತ್ರಸ್ತರಿಗೆ ಎಂಬುದನ್ನು ಅರ್ಥಮಾಡಿಕೊಂಡ ಈ ಪುಟ್ಟ ಬಾಲಕಿ ಎಂಥ ಆದರ್ಶ ಅಲ್ಲವೇ?

English summary
4 year old Aparajita Saha wanted to buy synthesizer. All her relatives gifted her cash on her birthday. Today she donated her 14800 for Kerala Flood Relief.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X